ಎಷ್ಟೋ ಜನರಿಗೆ ‘ಹೋಗ್ರಪ್ಪಾ ಒಳ್ಳೆಯ ಕೋಚಿಂಗ್ ಕ್ಲಾಸ್ (Coaching Classes) ಗಳಿಗೆ ಹೋಗಿ ತರಬೇತಿ ಪಡೆದು, ಯುಪಿಎಸ್‌ಸಿ ಪರೀಕ್ಷೆಗಳನ್ನು (Exam) ಬರೆದು ಪಾಸಾಗಿ ದೊಡ್ಡ ಐಎಎಸ್ ಅಧಿಕಾರಿ ಆಗಿ’ ಅಂತ ಮನೇಲಿ(Home) ಎಷ್ಟೇ ಹೇಳಿದರೂ, ಆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಕಿಂಚಿತ್ತೂ ಒಲವು ತೋರಿಸುವುದಿಲ್ಲ. ಅದೇ ಇನ್ನೂ ಕೆಲವರಿಗೆ ಹೀಗೆ ಮಾಡು, ಈ ಪರೀಕ್ಷೆ ಬರೆದು ದೊಡ್ಡ ಹುದ್ದೆಯನ್ನು (Post) ಪಡೆಯಿರಿ ಅಂತ ಹೇಳೊದೆ ಬೇಕಾಗಿಲ್ಲ ನೋಡಿ. ಅವರೇ ಸ್ವತಃ ತಾವೇ ಭವಿಷ್ಯದಲ್ಲಿ ಏನು ಮಾಡಿದರೆ ಒಳ್ಳೆಯದು ಅಂತ ಅರ್ಥ ಮಾಡಿಕೊಂಡು ಜೀವನದಲ್ಲಿ (Life) ಹೆಜ್ಜೆ ಇಡುತ್ತಾರೆ.
ಹೌದು ಇದೇ ರೀತಿ ಅನೇಕ ಸೌಲಭ್ಯಗಳಿದ್ದರೂ ಸಹ ಎಷ್ಟೋ ಜನರಿಗೆ ಈ ಪರೀಕ್ಷೆಗಳನ್ನು ಪಾಸ್ ಮಾಡಲು ಆಗಿರುವುದಿಲ್ಲ. ಇನ್ನೂ ಕೆಲವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಉತ್ತಮ ರ್ಯಾಂಕ್ ಗಳಿಸುವುದರ ಮೂಲಕ ಪಾಸ್ ಮಾಡಿರುತ್ತಾರೆ ಅಂತ ಹೇಳಬಹುದು. ಈ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶ ಹೊರ ಬಿದ್ದಾಗ ನಮಗೆ ಅನೇಕ ರೀತಿಯ ಸ್ಪೂರ್ತಿದಾಯಕ ಕಥೆಗಳು ನಮ್ಮ ಮುಂದೆ ಬರುತ್ತವೆ.
ಪ್ರತಿ ಬಾರಿ ಈ ಪರೀಕ್ಷೆಗಳ ಫಲಿತಾಂಶ ಹೊರ ಬಿದ್ದಾಗಲೂ ಸಹ ಎಷ್ಟೋ ಜನರು ಕಡು ಬಡತನದಲ್ಲಿಯೇ ಈ ಪರೀಕ್ಷೆಗೆ ಓದಿ ಒಳ್ಳೆಯ ರ್ಯಾಂಕ್ ಪಡೆದು ದೊಡ್ಡ ಸಾಧನೆ ಮಾಡಿರುತ್ತಾರೆ.
21ನೇ ವರ್ಷ ವಯಸ್ಸಿನಲ್ಲಿಯೇ ಯುಪಿಎಸ್‌ಸಿ ಪರೀಕ್ಷೆಯನ್ನ್ ಪಾಸ್ ಮಾಡಿದ್ರಂತೆ..
ಇಲ್ಲಿಯೂ ಸಹ ನಾವು ಒಬ್ಬ ಯುಪಿಎಸ್‌ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿಯೇ ಪಾಸ್ ಮಾಡಿದ 21 ವರ್ಷದ ಯುವಕನ ಬಗ್ಗೆ ನಿಮಗೆ ಹೇಳಲು ಹೊರಟಿದ್ದೇವೆ ನೋಡಿ. ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಅನ್ಸಾರ್ ಶೇಖ್ ಅಂತಹ ಅಸಾಧಾರಣ ಅಭ್ಯರ್ಥಿಗಳಲ್ಲಿ ಒಬ್ಬರು. ಅವರು ಕೇವಲ 21 ವರ್ಷ ವಯಸ್ಸಿನಲ್ಲಿ ಯುಪಿಎಸ್‌ಸಿ ಸಿಎಸ್ಇ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಇದನ್ನೂ ಓದಿ: UPSC Success Story: ಜರ್ಮನಿಯಲ್ಲಿನ ಕೆಲಸ ಬಿಟ್ಟು ಬಂದು IPS ಆದ ಚೆಲುವೆ; ಇವರ ಪತಿ IAS ಅಧಿಕಾರಿ
ಮಹಾರಾಷ್ಟ್ರದ ಜಾಲ್ನಾ ಗ್ರಾಮದ ನಿವಾಸಿ ಈ ಅನ್ಸಾರ್ ಶೇಖ್. ಅವರ ತಂದೆ ಒಬ್ಬ ಆಟೋ ರಿಕ್ಷಾ ಚಾಲಕರಾಗಿದ್ದಾರೆ ಮತ್ತು ಅವರು ಮೂರು ಬಾರಿ ವಿವಾಹವಾಗಿದ್ದಾರೆ. ಈ ಅನ್ಸಾರ್ ಶೇಖ್ ಅವರ ಎರಡನೇ ಹೆಂಡತಿಯ ಮಗ. ಅಷ್ಟೇ ಅಲ್ಲದೆ ಶೇಖ್ ಅವರ ತಂದೆ ಮದ್ಯವ್ಯಸನಿ ಸಹ ಆಗಿದ್ದರಂತೆ ಮತ್ತು ಅನ್ಸಾರ್ ಅವರು ಮತ್ತು ಅವರ ಒಡಹುಟ್ಟಿದವರು ಎಂದಿಗೂ ಮನೆಯಲ್ಲಿ ಕುಳಿತುಕೊಂಡು ಓದಲು ಒಂದು ಸೂಕ್ತವಾದ ವಾತಾವರಣವನ್ನು ಸಹ ಹೊಂದಿರಲಿಲ್ಲವಂತೆ.
ಓದಿನಲ್ಲಿ ತುಂಬಾನೇ ಪ್ರತಿಭಾವಂತ ಈ ಅನ್ಸಾರ್
ಅನ್ಸಾರ್ ಶೈಕ್ಷಣಿಕವಾಗಿ ತುಂಬಾನೇ ಪ್ರತಿಭಾವಂತನಾಗಿದ್ದ ಮತ್ತು ಇದಕ್ಕೆ ಸಾಕ್ಷಿ ಎಂಬಂತೆ 12ನೇ ತರಗತಿಯಲ್ಲಿ ಶೇಕಡಾ 91 ರಷ್ಟು ಅಂಕಗಳನ್ನು ಗಳಿಸಿದ್ದು ಮತ್ತು ಪದವಿಯಲ್ಲಿ 73 ಪ್ರತಿಶತದಷ್ಟು ಅಂಕಗಳನ್ನು ಪಡೆದಿದ್ದರು. ಅವರು ಪುಣೆಯ ಫರ್ಗುಸನ್ ಕಾಲೇಜಿನಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ಈ ಪರೀಕ್ಷೆಗೆ ಅನ್ಸಾರ್ ಶೇಖ್ ಅವರು ಒಂದು ವರ್ಷ ಕೋಚಿಂಗ್ ತೆಗೆದುಕೊಂಡರಂತೆ ಮತ್ತು ಇದರ ನಂತರ ಮೂರು ವರ್ಷಗಳ ಕಾಲ ಕಷ್ಟಪಟ್ಟು ತಯಾರಿ ನಡೆಸಿದರಂತೆ. ಇದೆಲ್ಲದರ ಫಲ ಎಂಬಂತೆ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಒಳ್ಳೆಯ ಅಂಕಗಳೊಂದಿಗೆ ಪಾಸ್ ಮಾಡಿದ್ದಾರೆ.
ಅನ್ಸಾರ್ ಶೇಖ್ ಈ ಪರೀಕ್ಷೆಯಲ್ಲಿ 361ನೇ ರ್ಯಾಂಕ್ ಪಡೆಯುವ ಮೂಲಕ ದೇಶದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೂರು ವರ್ಷಗಳ ಕಾಲ ಪರೀಕ್ಷೆಯ ತಯಾರಿಯ ಸಮಯದಲ್ಲಿ ಅವರು ಪ್ರತಿದಿನ ಸುಮಾರು 12 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ