ನಮ್ಮ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್ ಸಿ ಪರೀಕ್ಷೆಯೂ (UPSC Exam) ಒಂದು. ಇದರ ಯಶಸ್ವಿಯಾಗುವುದು ಸಮಾನ್ಯದ ಮಾತಲ್ಲ. IAS, IPS ಆಗಬೇಕೆಂದು ಕನಸು ಕಾಣುವ ಲಕ್ಷಾಂತರ ಅಭ್ಯರ್ಥಿಗಳು ಪ್ರತಿ ವರ್ಷವೂ ಯುಪಿಎಸ್ ಸಿ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಆದರೆ ಕೆಲವೇ ಕೆಲವು ಅಭ್ಯರ್ಥಿಗಳು ಮಾತ್ರ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುತ್ತಾರೆ, ಉಳಿದವರು ಮತ್ತೆ ಪ್ರಶ್ನಿಸುತ್ತಾರೆ. ಮಹಳಷ್ಟು ಮಂದಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗುವುದಿಲ್ಲ. 3-4 ಬಾರಿ, ವರ್ಷಗಟ್ಟಲೆ ಪ್ರಯತ್ನಿಸಿದವರೂ (UPSC Exam Preparation) ಇದ್ದಾರೆ.
ಯುಪಿಎಸ್ ಸಿ ಪರೀಕ್ಷೆಗೆ ಪ್ರಯತ್ನಿಸಲು ಸಹ ಮಿತಿಗಳಿವೆ. ವಯೋಮಿತಿ ಒಳಗೆ ನೀವು ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು. ಜೊತೆಗೆ ಇಂತಿಷ್ಟು ಪ್ರಯತ್ನಗಳನ್ನು ಮಾತ್ರ ಪಡೆದುಕೊಳ್ಳಬಹುದು ಎಂಬ ನಿಯಮವೂ ಇದೆ. ಬಹಳಷ್ಟು ಮಂದಿ ಇದರಿಂದ ಅವಕಾಶ ವಂಚಿತರಾಗುತ್ತಾರೆ. ಯುಪಿಎಸ್ ಸಿ ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಹಂತಗಳನ್ನು ಯಶಸ್ವಿಯಾಗಿ ದಾಟುವುದು ನಿಜಕ್ಕೂ ಕಷ್ಟ. ಬಹಳಷ್ಟು ಅಭ್ಯರ್ಥಿಗಳು ಸಂದರ್ಶನದ ಹಂತದಲ್ಲಿ ಅವಕಾಶವನ್ನು ಕಳೆದುಕೊಳ್ಳುತ್ತಾರೆ.
ಯುಪಿಎಸ್ ಸಿ ಪರೀಕ್ಷೆಯಲ್ಲಿ ವಿಫಲರಾದರೂ ಅಭ್ಯರ್ಥಿ ನಡೆಸಿದ ತಯಾರಿ, ಗಳಿಸಿದ ಅಪಾಯ ಜ್ಞಾನ ವ್ಯರ್ಥವಾಗಬಾರದು. ಅದು ಪ್ರತಿಯೊಬ್ಬ ಅಭ್ಯರ್ಥಿಯ ಆಸ್ತಿಯಾಗಬೇಕು. ಜ್ಞಾನಕ್ಕಿಂತ ಆಸ್ತಿ ಇಲ್ಲ ಎಂದು ಸುಮ್ಮನೆ ಹೇಳುವುದಿಲ್ಲ. ಹಾಗಾಗಿ ದೊಡ್ಡ ಸರ್ಕಾರಿ ಅಧಿಕಾರಿಯಾಗದಿದ್ದರೂ, ಗಳಿಸಿದ ಜ್ಞಾನದೊಂದಿಗೆ ಒಂದೊಳ್ಳೆ ವೃತ್ತಿ ಜೀವನವನ್ನು ಕಟ್ಟಿಕೊಳ್ಳಬಹುದು. ವಿಫಲವಾದವರು ಮಾತ್ರವಲ್ಲ ಮತ್ತೆ ಪರೀಕ್ಷೆಗೆ ಪ್ರಯತ್ನಿಸುತ್ತಿರುವವರು ಕೂಡ ಈ ಉದ್ಯೋಗಗಳನ್ನು ಮಾಡಬಹುದು.
ಇದನ್ನೂ ಓದಿ: UPSC Exam: ಐಎಎಸ್, ಐಪಿಎಸ್ ಅಧಿಕಾರಿಯಾಗಲು ಈ ಅರ್ಹತೆಗಳಿರಬೇಕು: ಪರೀಕ್ಷೆಯ ನಿಖರ ಮಾಹಿತಿ ಇಲ್ಲಿದೆ
UPSC ಅಭ್ಯರ್ಥಿಗಳು ಈ ಪರ್ಯಾಯ ವೃತ್ತಿಗಳನ್ನು ಆಯ್ಕೆ ಮಾಡಬಹುದು
1) ಯುಪಿಎಸ್ ಸಿ ಪರೀಕ್ಷೆಗಳಿಗೆ ತಯಾರಿ ನಡೆಸಿದವರಿಗೆ ಅದಕ್ಕಿಂತ ಕಡಿಮೆ ಮಟ್ಟದ ಸರ್ಕಾರಿ ಉದ್ಯೋಗದ ಪರೀಕ್ಷೆಗಳು ಸುಲಭ ಎನಿಸಬಹುದು. ಇವುಗಳಿಗೆ ನೀವು ಪ್ರಯತ್ನಿಸಿ ಸರ್ಕಾರಿ ಕೆಲಸ ಪಡೆಯಬಹುದು.
2) ನೀವು ಯುಪಿಎಸ್ ಸಿ ಪರೀಕ್ಷಾ ತರಬೇತಿ ಕೇಂದ್ರವನ್ನು ತೆರೆಯಬಹುದು. ನಿಮ್ಮ ಕನಸನ್ನು ಬೇರೆಯವರ ಮೂಲಕವೂ ಸಾಧಿಸಬಹುದು. ನಿಮ್ಮ ಜ್ಞಾನವನ್ನು ಹಂಚಿಕೊಳ್ಳಬಹುದು. ಟ್ರೈನಿಂಗ್ ಸೆಂಟರ್ ನಿಂದ ಒಳ್ಳೆಯ ಆದಾಯವನ್ನೂ ಗಳಿಸಬಹುದು.
3) ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಆಧಾರದ ಮೇಲೆ ಖಾಸಗಿ ಕಂಪನಿಗಳು ಉದ್ಯೋಗ ನೀಡುತ್ತವೆ. UPSC ಸಂದರ್ಶನವನ್ನು ತಲುಪುವುದು ಸಹ ಉತ್ತಮ ಸಾಮರ್ಥ್ಯದ ವಿಷಯವಾಗಿದೆ . ಅಂತಹ ಅಭ್ಯರ್ಥಿಗಳಿಗೆ ಮಣೆ ಹಾಕುವ ಸಾಕಷ್ಟು ಕಂಪನಿಗಳಿವೆ.
4) ಶಾಲಾ-ಕಾಲೇಜು ಮಕ್ಕಳಿಗೆ ಟ್ಯೂಷನ್ ಗಳನ್ನು ನೀಡಬಹುದು. ಆನ್ ಲೈನ್ ಮೂಲಕವೂ ಶಿಕ್ಷಣವನ್ನು ನೀಡಬಹುದು. ಬೋರ್ಡ್ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳನ್ನು ಟ್ರೈನ್ ಮಾಡಬಹುದು.
5) ಐಚ್ಛಿಕ ವಿಷಯದ ಮೇಲೆ ಕೆಲಸ ಮಾಡಬಹುದು. UPSC ಅಭ್ಯರ್ಥಿಯು ತನ್ನ ಐಚ್ಛಿಕ ವಿಷಯದ ಬಗ್ಗೆ ಸಾಕಷ್ಟು ಜ್ಞಾನವನ್ನು ಪಡೆದಿರುತ್ತಾರೆ. ಅಭ್ಯರ್ಥಿಯು ತನ್ನ ಐಚ್ಛಿಕ ವಿಷಯದಲ್ಲಿ ವಿಷಯ ರಚನೆ ಮತ್ತು ಟಿಪ್ಪಣಿಗಳನ್ನು ಮಾಡುವ ಕೆಲಸ ಮಾಡಬಹುದು. ಇಷ್ಟೇ ಅಲ್ಲ, ಅಭ್ಯರ್ಥಿಯು ಟೆಸ್ಟ್ ಸರಣಿಯಲ್ಲೂ ಕೆಲಸ ಮಾಡಬಹುದು.
6) ನಿಮ್ಮ ಯುಪಿಎಸ್ ಸಿ ತಯಾರಿ ವಿಷಯವನ್ನು ಪುಸ್ತಕ ರೂಪದಲ್ಲಿ ಹೊರ ತರಬಹುದು. ನಿಮ್ಮ ಐಚ್ಛಿಕ ವಿಷಯದಲ್ಲಿ Phd ಮಾಡಬಹುದು.
ಯಾವುದೋ ಒಂದು ಪರೀಕ್ಷೆಯ ಯಶಸ್ಸು ನಿಮ್ಮ ಜೀವನದ ಯಶಸ್ಸನ್ನು ನಿರ್ಧರಿಸುವುದಿಲ್ಲ ಎಂಬುವುದನ್ನು ನೆನಪಿನಲ್ಲಿಡಿ. ನಿಮ್ಮ ಪರಿಶ್ರಮದ ಬಗ್ಗೆ ಹೆಮ್ಮೆ ಇರಲಿ. ಯಶಸ್ಸಿಗೆ ಒಂದೇ ದಾರಿಯಲ್ಲ, ಹಲವು ದಾರಿಗಳಿವೆ. ಜೀವನ ಯಶಸ್ವಿಯಾಗುವು ಮುಖ್ಉ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ