ಸಾಮಾನ್ಯವಾಗಿ ನಾವು ಈ ವಿದ್ಯಾರ್ಥಿ ( Student) ಐಐಟಿಯಲ್ಲಿ, ಐಐಎಂ ನಲ್ಲಿ (IIT-IIM) ಓದಿ ಈಗ ಇಂತಹ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ (Job Offer) . ಅವರಿಗೆ ವರ್ಷಕ್ಕೆ ಸಿಗುವ ಸಂಬಳ ಅರ್ಧ ಕೋಟಿಯಷ್ಟಿದೆ ಅಂತೆಲ್ಲಾ ಹೇಳುವುದನ್ನು ಕೇಳಿರುತ್ತೇವೆ ಮತ್ತು ಎಷ್ಟೋ ಬಾರಿ ಟಿವಿ ನ್ಯೂಸ್ ಗಳಲ್ಲಿ ನೋಡಿರುತ್ತೇವೆ ಕೂಡ.
ಇವರ ಇಂತಹ ದೊಡ್ಡ ಮೊತ್ತದ ಸಂಬಳದ ಬಗ್ಗೆ ಕೇಳಿ ಜನರು ಆಶ್ಚರ್ಯ ಸಹ ಪಟ್ಟಿದ್ದಿರುತ್ತದೆ. ಆದರೆ ಇಂತಹ ದೂಡ್ಡ ದೊಡ್ಡ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಅಲ್ಲಿರುವ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ತಮ್ಮ ಕಾಲೇಜಿಗೆ ಬಂದಿರುವ ಕಂಪನಿಗಳಿಗೆ ಇಂಟರ್ವ್ಯೂ ನೀಡಿ ಕ್ಯಾಂಪಸ್ ಸಲೆಕ್ಷನ್ ನಲ್ಲಿಯೇ ಕೆಲಸ ಗಿಟ್ಟಿಸಿಕೊಳ್ಳುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲವು ವಿದ್ಯಾರ್ಥಿಗಳು ಸಾಮಾನ್ಯ ಕಾಲೇಜಿನಲ್ಲಿ ಓದಿ ಇಂತಹ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡಿರುವುದು ಸಹ ಇರುತ್ತದೆ.
ಆದರೆ ದೊಡ್ಡ ಶೈಕ್ಷಣಿಕ ಸಂಸ್ಥೆಗಳಲ್ಲಿ ಓದದೆ, ಸಾಮಾನ್ಯವಾಗಿರುವ ಒಂದು ಕಾಲೇಜಿನಲ್ಲಿ ಓದಿಕೊಂಡು ಇಂತಹ ದೊಡ್ಡ ಕಂಪನಿಗಳಲ್ಲಿ ಕೆಲಸ ಗಿಟ್ಟಿಸುವ ಉದಾಹರಣೆಗಳು ತುಂಬಾನೇ ಅಪರೂಪ. ಅಂತಹ ಉದಾಹರಣೆಗಳು ನೋಡಲು ಸಿಗುವುದು ತುಂಬಾನೇ ಕಡಿಮೆ. ಇಲ್ಲಿ ಅಂತಹದೇ ಒಂದು ಉದಾಹರಣೆ ಇದೆ ನೋಡಿ.
ದಾಖಲೆ ಸಾಂಬಳದ ಪ್ಯಾಕೇಜ್ ಪಡೆದ ಎನ್ಐಟಿ ಪಾಟ್ನಾ ವಿದ್ಯಾರ್ಥಿನಿ
ಈ ಹಿಂದೆ 2022 ರಲ್ಲಿ, ಎನ್ಐಟಿ ಪಾಟ್ನಾ ಒಂದು ಬಾರಿ ತುಂಬಾನೇ ಸುದ್ದಿಯಲ್ಲಿತ್ತು, ಅದಕ್ಕೆ ಕಾರಣ ಎಂದರೆ ಅದು ಆ ವರ್ಷ ಕಾಲೇಜಿನಲ್ಲಿ ನಡೆದ ನೇಮಕಾತಿಗಳಲ್ಲಿ 1.6 ಕೋಟಿ ರೂಪಾಯಿಗಳ ಅತ್ಯಧಿಕ ಪ್ಯಾಕೇಜ್ ಅನ್ನು ದಾಖಲಿಸಿತ್ತು.
ಹೌದು.. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ನ ಅಂತಿಮ ವರ್ಷದ ವಿದ್ಯಾರ್ಥಿನಿ ಅದಿತಿ ತಿವಾರಿ ಈ ದಾಖಲೆಯನ್ನು ಮಾಡಿದ್ದಾರೆ. ಅದಿತಿ ತಿವಾರಿ ಅವರ ತಂದೆ ಟಾಟಾ ಸ್ಟೀಲ್ ಕಂಪನಿಯಲ್ಲಿ ಒಬ್ಬ ಸಾಧಾರಣ ಉದ್ಯೋಗಿಯಾಗಿದ್ದು, ತಾಯಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಐಐಟಿ ಮತ್ತು ಐಐಎಂಗಳ ವಿದ್ಯಾರ್ಥಿಗಳಿಗೆ ಸಹ ಈ ಪ್ಯಾಕೇಜ್ ನೀಡದ ಕಾರಣ 1.6 ಕೋಟಿ ರೂಪಾಯಿಗಳ ಪ್ಯಾಕೇಜ್ ಐತಿಹಾಸಿಕವಾಗಿದೆ. ಆಕೆಯನ್ನು ಫೇಸ್‌ಬುಕ್ ಫ್ರಂಟ್ ಎಂಡ್ ಎಂಜಿನಿಯರ್ ಆಗಿ ನೇಮಕ ಮಾಡಿಕೊಂಡಿತ್ತು.
ಈ ಹಿಂದೆ ದಾಖಲೆ ಅತ್ಯಧಿಕವಾದ ಪ್ಯಾಕೇಜ್ ಎಂದರೆ ಅದು 50-60 ಲಕ್ಷವಾಗಿತ್ತು..
ಎನ್ಐಟಿ ಪಾಟ್ನಾ 2022 ರಲ್ಲಿ 110 ಪ್ರತಿಶತದಷ್ಟು ಒಟ್ಟಾರೆ ಉದ್ಯೋಗಾವಕಾಶಗಳೊಂದಿಗೆ ದಾಖಲೆಯನ್ನು ನಿರ್ಮಿಸಿತ್ತು. ಅದಿತಿ ತಿವಾರಿ ಅವರ ದಾಖಲೆಯ ಪ್ಯಾಕೇಜ್ ಗೂ ಮೊದಲು ಎನ್ಐಟಿ ಪಾಟ್ನಾದ ವಿದ್ಯಾರ್ಥಿಯೊಬ್ಬ ಪಡೆದ ಅತ್ಯಧಿಕ ಪ್ಯಾಕೇಜ್ ಎಂದರೆ ಅದು 50-60 ಲಕ್ಷ ರೂ. ಆಗಿತ್ತು.
ಗಮನಾರ್ಹವಾಗಿ, ಕೋವಿಡ್ -19 ಸಾಂಕ್ರಾಮಿಕ ರೋಗವು ಕ್ಯಾಂಪಸ್ ಪ್ಲೇಸ್ಮೆಂಟ್ ಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಎರಡು ವರ್ಷಗಳಿಂದ ಕ್ಯಾಂಪಸ್ ನೇಮಕಾತಿಗಳ ಪ್ರಕ್ರಿಯೆಯು ಸಾಂಕ್ರಾಮಿಕ ರೋಗದಿಂದ ಗಮನಾರ್ಹವಾಗಿ ಪರಿಣಾಮ ಬೀರಿದೆ ಅಂತೆಲ್ಲಾ ಹೇಳಲಾಗುತ್ತಿದೆ.
ಇದನ್ನೂ ಓದಿ: WEF Survey: ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ 10 ಕೌಶಲ್ಯಗಳು ಇವೇ ನೋಡಿ
ಏತನ್ಮಧ್ಯೆ, ಐಐಎಂ ವಿದ್ಯಾರ್ಥಿನಿ ಅವನಿ ಮಲ್ಹೋತ್ರಾ ಕೂಡ ಇತ್ತೀಚೆಗೆ ಮೈಕ್ರೋಸಾಫ್ಟ್ ನಿಂದ 64.61 ಲಕ್ಷ ರೂಪಾಯಿಗಳ ಪ್ಯಾಕೇಜ್ ನೊಂದಿಗೆ ನೇಮಕಗೊಂಡಿದ್ದರಿಂದ ಸುದ್ದಿಯಲ್ಲಿದ್ದರು.
ಐಐಎಂ ಸಂಬಲ್ಪುರ್ ತನ್ನ ಟ್ವಿಟ್ಟರ್ ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿತ್ತು ಮತ್ತು "ಈ ವರ್ಷ ಪಡೆದ ಅತ್ಯಧಿಕ ಸಂಬಳ" ಎಂದು ಸಹ ಅದಕ್ಕೆ ಶೀರ್ಷಿಕೆಯನ್ನು ಬರೆದಿತ್ತು. ಈ ಸಂಸ್ಥೆಯ ಪ್ರಕಾರ, ಈ ಪ್ಲೇಸ್ಮೆಂಟ್ ಕೊಡುಗೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 146.7 ರಷ್ಟು ಹೆಚ್ಚಳವಾಗಿತ್ತು.
ಜೈಪುರ ಮೂಲದ ಮಲ್ಹೋತ್ರಾ ಆರು ಸುತ್ತಿನ ಸಂದರ್ಶನಗಳನ್ನು ಪೂರ್ಣಗೊಳಿಸಿದ ನಂತರ ಕೆಲಸವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ