ಯುಪಿಎಸ್ಸಿ (UPSC) ಪಾಸಾಗೋದಂದ್ರೆ ಸುಲಭದ ಮಾತಲ್ಲ. ಅದಕ್ಕೆ ಶ್ರಮನೂ ಅಷ್ಟೇ ಇರಬೇಕಾಗುತ್ತದೆ. ಆದರೆ ಇಲ್ಲೊಬ್ಬರು ಅನಾಥಾಶ್ರಮದಲ್ಲೇ ಬೆಳೆದು ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪಾಸಾಗಿದ್ದಾರೆ ನೋಡಿ. ತಂದೆಯ ಅಕಾಲಿಕ ಮರಣದ ನಂತರ ಬಾಲ್ಯದಿಂದಲೇ ಅನಾಥಾಲಯದಲ್ಲಿ ಬೆಳೆದ ಇವರು ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಎಕ್ಸಾಂನಲ್ಲಿ 478ನೇ ರ್ಯಾಂಕ್ (Rank) ಗಳಿಸಿದ್ದಾರೆ.
ಹೌದು ಕೋಲಾರ ಜಿಲ್ಲೆಯ ಮುಳಬಾಗಿಲಿನ ಶ್ರೀಲಕ್ಷ್ಮಿ ವೆಂಕಟೇಶ್ವರ ಆರ್ಫನ್ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅನಾಥಾಶ್ರಮದಲ್ಲಿರುವ ಮನೋಜ್ ಕುಮಾರ್ ಎಂಬುವವರು ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಎಕ್ಸಾಂನಲ್ಲಿ ಈ ಸಾಧನೆ ಮಾಡಿದ್ದಾರೆ.
ಅನಾಥ ಆಶ್ರಮದಲ್ಲಿ ಬೆಳೆದ ಮನೋಜ್ ಕುಮಾರ್
ಹೌದು, ಮನೋಜ್ ಕುಮಾರ್ ಅವರ ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರು. ಆದರೆ ಕಾರಣಾಂತರಗಳಿಂದ ತಂದೆಯ ಅಕಾಲಿಕ ಮರಣದಿಂದ ಮನೋಜ್ ಅವರು ಅನಾಥ ಆಶ್ರಮ ಸೇರಬೇಕಾಯಿತು. ಇದಕ್ಕಾಗಿ ಮನೋಜ್ ಕುಮಾರ್ ಬಾಲ್ಯದಿಂದಲೇ ಅನಾಥ ಆಶ್ರಮದಲ್ಲೇ ಬೆಳೆದು, ಅಲ್ಲಿದ್ದ ಇತರ ಅನಾಥ ಮಕ್ಕಳ ಜೊತೆ ಆಟವಾಡಿಕೊಂಡು ಟ್ರಸ್ಟ್ನ ಹೆಮ್ಮೆಯ ಹುಡುಗ ಎಂದೆನಿಸಿಕೊಂಡಿದ್ದಾರೆ. ಇನ್ನು ಮನೋಜ್ ಅವರಿಗೆ ಟ್ರಸ್ಟ್ನ ಸಂಸ್ಥಾಪಕಿ ಚಿನ್ಮಯಿ ಅವರೇ ಸಾಧನೆಗೆ ಸ್ಪೂರ್ತಿ ಮತ್ತು ಆಸರೆಯಂತೆ.
ಇದನ್ನೂ ಓದಿ: Chikkamagaluru: 90 ಮಕ್ಕಳು ಓದುತ್ತಿರುವ ಈ ಸರ್ಕಾರಿ ಶಾಲೆಗೆ ಟಾರ್ಪಲ್ ಗೋಡೆ
ಮನೋಜ್ ಅವರ ವಿದ್ಯಾಭ್ಯಾಸ
ಯುಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡ ಮತ್ತು ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ವಿಷಯವನ್ನು ಆಯ್ಕೆ ಮಾಡಿಕೊಂಡ ಮನೋಜ್ ಕುಮಾರ್ ಅವರು ಮುಳಬಾಗಿಲು ನಗರದಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿ, ನಂತರ ಪಿಯುಸಿಯಲ್ಲಿ ಸೈನ್ಸ್ ಆಯ್ಕೆ ಮಾಡಿ ಕೋಲಾರದಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಅದಾದ ಬಳಿಕ ಡಿಗ್ರಿಯಲ್ಲಿ ಬಿಸಿಎ ಪದವಿಯನ್ನು ಆಯ್ಕೆ ಮಾಡಿಕೊಂಡು ಬೆಂಗಳೂರಿನಲ್ಲಿ ಪೂರೈಸಿದರು. ಅದೇ ರೀತಿ ಹೈದರಾಬಾದ್ನ ಲಾ ಎಕ್ಸಲೆನ್ಸ್ ತರಬೇಷತಿ ಪಡೆದು, ಮುಳಬಾಗಿಲಿನ ನಗರಸಭೆಯಲ್ಲಿ ತಾಂತ್ರಿಕ ಅಪರೇಟರ್ ಉದ್ಯೋಗ ಪಡೆದುಕೊಂಡರು.
ಸಾಧನೆಯ ಬಗ್ಗೆ ಮನೋಜ್ ಹೇಳಿದ್ದೇನು?
ಇನ್ನು ಈ ಬಗ್ಗೆ ಮನೋಜ್ ಕುಮಾರ್ ಅವರು ‘ಮುಳಬಾಗಿಲು ನಗರಸಭೆಯಲ್ಲಿ ತಾಂತ್ರಿಕ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೆ. ಕೋವಿಡ್ ಸಮಯದಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯಬೇಕೆಂದು ನಿರ್ಧರಿಸಿದೆ. ನನ್ನ ಕನಸು ಐಎಎಸ್ ಅಧಿಕಾರಿಯಾಗಬೇಕೆಂಬುದು. ಆದ್ದರಿಂದ ಯುಪಿಎಸ್ಸಿ ಪರೀಕ್ಷೆಯ ತಯಾರಿಗಾಗಿ ಕೋಚಿಂಗ್ ಸೆಂಟರ್ಗೂ ಸೇರಿದೆ. ಆದರೆ ಈಗ ಬಂದಿರುವಂತಹ ರ‍್ಯಾಂಕ್ ಕಡಿಮೆಯಾಗಿದೆ. ಆದ್ದರಿಂದ ಮತ್ತೆ ಯುಪಿಎಸ್ಸಿ ಪರೀಕ್ಷೆ ಬರೆದು ರ‍್ಯಾಂಕ್ ಸುಧಾರಿಸಿಕೊಳ್ಳುತ್ತೇನೆ‘ ಎಂದು ಪ್ರಜಾವಾಣಿಗೆ ತಿಳಿಸಿದ್ದಾರೆ.
ಸಾಧನೆಗೆ ಚಿನ್ಮಯಿ ಅವರೇ ಸ್ಪೂರ್ತಿಯಂತೆ
ಇನ್ನು ಮನೋಜ್ ಅವರು ಮುಳಬಾಗಿಲಿನ ಶ್ರೀಲಕ್ಷ್ಮಿ ವೆಂಕಟೇಶ್ವರ ಆರ್ಫನ್ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅನಾಥಾಶ್ರಮದಲ್ಲಿದ್ದರು. ಹಾಗಾಗಿ ಇಲ್ಲಿನ ಸಂಸ್ಥಾಪಕಿ ಚಿನ್ಮಯಿ ಅವರೇ ಇವರಿಗೆ ಸ್ಪೂರ್ತಿಯಂತೆ. ಇನ್ನು ಈ ಸಂದರ್ಭದಲ್ಲಿ ನಾನು ಓದಲು ಅವರೇ ಸಹಕಾರ ನೀಡಿದ್ದಾರೆ. ಹಾಗೆಯೇ ಯುಪಿಎಸ್ಸಿ ಪರೀಕ್ಷೆ ಬರೆಯಲು ಇವರೇ ಪ್ರೇರಣೆ ತುಂಬಿದವರು ಎಂದಿದ್ದಾರೆ.
ಯುಪಿಎಸ್ಸಿ ಪರೀಕ್ಷೆ ಬಗ್ಗೆ ಏನಂದ್ರು?
‘ಯುಪಿಎಸ್ಸಿ ಪರೀಕ್ಷೆ ಬರೆಯಲು ಬಹಳ ಕಷ್ಟ ಎಂದು ಹೆಚ್ಚಿನವರು ಹೇಳುತ್ತಾರೆ. ಆದ್ರೆ ಶ್ರಮಹಾಕಿ ಓದಿದ್ರೆ ಯಾವುದೂ ಕಷ್ಟವಲ್ಲ, ಆಸಕ್ತಿವಹಿಸಿ ಶೇ.100ರಷ್ಟು ಶ್ರಮ ಹಾಕಿದ್ರೆ ಯುಪಿಎಸ್ಸಿ ಪರೀಕ್ಷೆ ಸುಲಭದಲ್ಲಿ ಪಾಸ್ ಮಾಡಬಹುದು‘ ಎಂದು ಹೇಳುತ್ತಾರೆ ಮನೋಜ್.
ಸಂಸ್ಥಾಪಕಿ ಚಿನ್ಮಯಿ ಅವರ ಮನೋಜ್ ಬಗ್ಗೆ ಅಭಿಪ್ರಾಯ
‘ಮನೋಜ್ ಯಾವುದೇ ಕಾರಣಕ್ಕೂ ಅನಾಥನಲ್ಲ. ಅವನನ್ನು ನಾನೇ ಸ್ವತಃ ದತ್ತು ತೆಗೆದುಕೊಂಡಿದ್ದೇನೆ. ಆತನನ್ನು ನನ್ನ ಸ್ವಂತ ಮಗನೆಂದೇ ಭಾವಿಸಿದ್ದೇನೆ. ಮನೋಜ್ನ ಈ ಸಾಧನೆಯಿಂದ ನಾನಂತೂ ಬಹಳಷ್ಟು ಸಂತೋಷಗೊಂಡಿದ್ದೇನೆ‘ ಎಂದುಚಿನ್ಮಯಿ ಹೇಳುತ್ತಾರೆ.
ಶ್ರೀಲಕ್ಷ್ಮಿ ವೆಂಕಟೇಶ್ವರ ಆರ್ಫನ್ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್
2010ರಲ್ಲಿ ಪ್ರಾರಂಭವಾದ ಈ ಟ್ರಸ್ಟ್ ಇದುವರೆಗೆ ಸುಮಾರು 500ರಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ, ಅನಾಥ ಮಕ್ಕಳಿಗೆ, ಡಿಪ್ಲೊಮೊ, ಬಿ.ಕಾಂ, ಎಸ್ಎಸ್ಎಲ್ಸಿ, ಸ್ನಾತ್ತಕೋತ್ತರ ಪದವಿಗಳಲ್ಲಿ ಶಿಕ್ಷಣ ಒದಗಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ