• ಹೋಂ
 • »
 • ನ್ಯೂಸ್
 • »
 • Jobs
 • »
 • Exam Preparation Tips: ಶೀಘ್ರವೇ ನಡೆಯಲಿದೆ UPSC CMS ಪರೀಕ್ಷೆ; ಅಭ್ಯರ್ಥಿಗಳು ತಿಳಿಯಬೇಕಾದ 7 ಸಲಹೆಗಳಿವು

Exam Preparation Tips: ಶೀಘ್ರವೇ ನಡೆಯಲಿದೆ UPSC CMS ಪರೀಕ್ಷೆ; ಅಭ್ಯರ್ಥಿಗಳು ತಿಳಿಯಬೇಕಾದ 7 ಸಲಹೆಗಳಿವು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಯುಪಿಎಸ್‌ಸಿ ಸಿಎಂಎಸ್‌ ಪರೀಕ್ಷೆಗೆ ತಯಾರಿ ನಡೆಸುವಾಗ ಈ 7 ಅಂಶಗಳ ಬಗ್ಗೆ ಗಮನ ಹರಿಸುವುದು ಮುಖ್ಯ.

 • Share this:

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಕಂಬೈನ್ಡ್‌ ಮೆಡಿಕಲ್‌ ಸವೀಸಸ್‌ (CMS) ಪರೀಕ್ಷೆಯು ಭಾರತದಲ್ಲಿ ನಡೆಸಲಾಗುವ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ (Competitive Exams) ಒಂದು. ಹಾಗಾಗಿ ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳಿಗೆ ವೈದ್ಯಾಧಿಕಾರಿಗಳಾಗಿ ಆಯ್ಕೆಯಾಗುವ ಕನಸಿನೊಂದಿಗೆ ಪ್ರತಿ ವರ್ಷ ಸಾವಿರಾರು ಆಕಾಂಕ್ಷಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ.


ಅಂದಹಾಗೆ ಯುಪಿಎಸ್‌ಸಿ ಸಿಎಮ್‌ಎಸ್ ಪರೀಕ್ಷೆ ಪಾಸು ಮಾಡುವುದು ಕಷ್ಟ ಅನ್ನೋದೇನೋ ನಿಜ. ಆದರೆ ಅಸಾಧ್ಯವಲ್ಲ. ಅದಕ್ಕಾಗಿ ತಯಾರಾಗಲು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಯ ಅಗತ್ಯವಿರುತ್ತದೆ. ಆದ್ದರಿಂದ, ಅಭ್ಯರ್ಥಿಗಳು ಯುಪಿಎಸ್‌ಸಿ ಸಿಎಂಎಸ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಕಷ್ಟು ಸ್ಮಾರ್ಟ್ ಕೆಲಸವನ್ನು ಅಳವಡಿಸಿಕೊಳ್ಳಬೇಕು.


ನಾಗರಿಕ ಸೇವಾ ಪರೀಕ್ಷೆಯ ಆಕಾಂಕ್ಷಿಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುವ ಸಂಸ್ಥೆಯಾದ ಶ್ರೀರಾಮ್ಸ್ ಐಎಎಸ್‌ನ ನಿರ್ದೇಶಕರಾದ ಶ್ರೀರಾಮ ಶ್ರೀರಂಗಂ ಅವರು ಈ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಅವರ ಪ್ರಕಾರ ಯುಪಿಎಸ್‌ಸಿ ಸಿಎಂಎಸ್‌ ಪರೀಕ್ಷೆಗೆ ತಯಾರಿ ನಡೆಸುವಾಗ ಈ 7 ಅಂಶಗಳ ಬಗ್ಗೆ ಗಮನ ಹರಿಸುವುದು ಮುಖ್ಯ.


1. ಪರೀಕ್ಷೆಯ ಮಾದರಿ ಮತ್ತು ಪಠ್ಯಕ್ರಮಕ್ಕೆ ಪರಿಚಿತರಾಗಿರಿ: ಯುಪಿಎಸ್‌ಸಿ ಸಿಎಂಎಸ್‌ ಪರೀಕ್ಷೆಗೆ ತಯಾರಿ ಮಾಡುವ ಮೊದಲ ಪ್ರಮುಖ ಹಂತವೆಂದರೆ ಪರೀಕ್ಷೆಯ ಮಾದರಿ ಮತ್ತು ಪಠ್ಯಕ್ರಮಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ನೀವು ಪರಿಚಿತರಾಗಿರುವುದು.
ಪಠ್ಯಕ್ರಮವನ್ನು ವಿವರವಾಗಿ ಅರ್ಥಮಾಡಿಕೊಳ್ಳುವುದು ಮತ್ತು ಅದರಲ್ಲಿನ ಎಲ್ಲಾ ವಿಷಯಗಳನ್ನು ಒಳಗೊಂಡಿರುವ ಅಧ್ಯಯನ ಯೋಜನೆಯನ್ನು ರಚಿಸುವುದು ಸಹ ಅತ್ಯಗತ್ಯ.


2. ಸರಿಯಾದ ಅಧ್ಯಯನ ವೇಳಾಪಟ್ಟಿ: ಯಾವುದೇ ಪರೀಕ್ಷೆಯಲ್ಲಿ ಪಾಸಾಗಲು ಹಾಗೂ ಉತ್ತಮ ಅಂಕ ಪಡೆಯಲು ಸರಿಯಾದ ಅಧ್ಯಯನ ವೇಳಾಪಟ್ಟಿ ಪ್ರಮುಖವಾಗಿದೆ. ಈ ಅಭ್ಯಾಸವು ಎಲ್ಲಾ ವಿಷಯಗಳನ್ನು ತ್ವರಿತವಾಗಿ ಕವರ್ ಮಾಡಲು ಮತ್ತು ಗಮನ ಕೇಂದ್ರೀಕರಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಆದ್ಯತೆಯ ವೇಳಾಪಟ್ಟಿಗೆ ನೀವು ಅಂಟಿಕೊಂಡು ಅದರಂತೆ ನಡೆದರೆ ನಿಮ್ಮ ಯಶಸ್ಸಿಗೆ ಅದು ಸಹಾಯ ಮಾಡುತ್ತದೆ.


3. ಅಣಕು ಪರೀಕ್ಷೆಗಳು: ಪರೀಕ್ಷೆಗೆ ತಯಾರಾಗಲು ಸೂಕ್ತ ಮಾರ್ಗವೆಂದರೆ ಅಣಕು ಪರೀಕ್ಷೆಗಳನ್ನು ಅಭ್ಯಾಸ ಮಾಡುವುದು. ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದರಿಂದ ಪರೀಕ್ಷೆಯ ನಮೂನೆ ಮತ್ತು ಕೇಳಲಾದ ಪ್ರಶ್ನೆಗಳೊಂದಿಗೆ ನೀವೇ ಪರಿಚಿತರಾಗಲು ಸಹಾಯವಾಗುತ್ತದೆ. ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಮತ್ತು ನಿಮಗೆ ಗೊತ್ತಿಲ್ಲದ ವಿಷಯಗಳ ಬಗ್ಗೆ ಫೋಕಸ್‌ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.


ಯುಪಿಎಸ್​ಸಿ


4. ಸೂಕ್ತವಾದ ಅಧ್ಯಯನ ಸಾಮಗ್ರಿಗಳ ಆಯ್ಕೆ: ಯುಪಿಎಸ್‌ಸಿ ಸಿಎಂಎಸ್‌ ಪರೀಕ್ಷೆಗೆ ಸೂಕ್ತವಾದ ಅಧ್ಯಯನ ಸಾಮಗ್ರಿಗಳು ಮತ್ತು ಪುಸ್ತಕಗಳು ಮುಖ್ಯವಾಗಿವೆ. ಇವು ಪೂರ್ವಸಿದ್ಧತಾ ಹಂತಗಳಲ್ಲಿ ಅಭ್ಯರ್ಥಿಗಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುತ್ತವೆ.


ಆದ್ದರಿಂದ, ತಜ್ಞರು ಶಿಫಾರಸು ಮಾಡಿದ ಗುಣಮಟ್ಟದ ಪುಸ್ತಕಗಳನ್ನು ಕೊಂಡುಕೊಳ್ಳಿ. ಸರಿಯಾದ ಆನ್‌ಲೈನ್‌ ಮಾಹಿತಿಗಳನ್ನು ಪಡೆದುಕೊಳ್ಳಿ. ಅಲ್ಲದೆ, ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡಲು ಮರೆಯದಿರಿ.


5. ಸಮಯ ನಿರ್ವಹಣೆ : ಸಮಯವನ್ನು ನಿರ್ವಹಿಸುವುದು ಪರೀಕ್ಷೆಯ ತಯಾರಿಯ ಪ್ರಮುಖ ಅಂಶವಾಗಿದೆ. ಅಭ್ಯರ್ಥಿಗಳು ಅಧ್ಯಯನ ಮತ್ತು ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುವ ನಡುವೆ ತಮ್ಮ ಸಮಯವನ್ನು ಸರಿದೂಗಿಸಬೇಕು. ಪ್ರತಿ ವಿಷಯಕ್ಕೆ ಸಾಕಷ್ಟು ಸಮಯವನ್ನು ನಿಗದಿಪಡಿಸುವುದು ಮತ್ತು ಸಾಧ್ಯವಾದಷ್ಟು ಪ್ರಶ್ನೆಗಳನ್ನು ಅಭ್ಯಾಸ ಮಾಡುವುದು ಮುಖ್ಯ.


6. ನಿಮ್ಮನ್ನು ನೀವು  ಅಪ್​ ಡೇಟ್​ ಮಾಡಿಕೊಳ್ಳಿ: ಯುಪಿಎಸ್‌ಸಿ ಸಿಎಂಎಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಇತ್ತೀಚಿನ ಸುದ್ದಿ ಮತ್ತು ಬೆಳವಣಿಗೆಗಳೊಂದಿಗೆ ನವೀಕೃತವಾಗಿರುವುದು ಬಹಳ ಮುಖ್ಯ. ಆದ್ದರಿಂದ, ಪ್ರಸ್ತುತ ಸುದ್ದಿಗಳನ್ನು ತಿಳಿಯಲು ಪ್ರತಿದಿನ ಉತ್ತಮ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಓದುವುದು ಒಳ್ಳೆಯ ಅಭ್ಯಾಸ.


ಇದನ್ನೂ ಓದಿ: Success Story: ನೋಡಲು ಮಾಡ್ರನ್ ಬ್ಯೂಟಿ, UPSC ಪರೀಕ್ಷೆಯಲ್ಲಿ 11ನೇ Rank ಗಳಿಸಿದ ಜಾಣೆ


7. ನಿಯಮಿತ ವಿರಾಮ: ದೀರ್ಘ ಕಾಲ ಅಧ್ಯಯನ ಮಾಡುವುದರಿಂದ ನಿಮಗೆ ಆಯಾಸ ಎನಿಸಬಹುದು. ಆದ್ದರಿಂದ ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಿ. ಪರೀಕ್ಷೆಗೆ ತಯಾರಿ ಮಾಡುವಾಗ ಸರಿಯಾದ ಆಹಾರ ಮತ್ತು ವ್ಯಾಯಾಮದ ಮೂಲಕ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ವಿರಾಮಗಳನ್ನು ತೆಗೆದುಕೊಳ್ಳುವುದು ನಿಮಗೆ ವಿಶ್ರಾಂತಿ ಮತ್ತು ಒತ್ತಡವನ್ನು ನಿವಾರಿಸಿ, ಏಕಾಗ್ರತೆಯಿಂದಿರಲು ಸಹಾಯ ಮಾಡುತ್ತದೆ.

top videos


  ಒಟ್ಟಾರೆ, ಯುಪಿಎಸ್‌ಸಿ ಸಿಎಂಎಸ್‌ ಪರೀಕ್ಷೆಯ ತಯಾರಿಯಲ್ಲಿ ಆಕಾಂಕ್ಷಿಗಳಿಗೆ ಉಪಯುಕ್ತ ಸಲಹೆಗಳಿವು. ಈ ಪರಿಣಿತ ಸಲಹೆಗಳು ಮತ್ತು ತಂತ್ರಗಳನ್ನು ಅನುಸರಿಸುವ ಮೂಲಕ, ನೀವು ಎಲ್ಲಾ ಪಠ್ಯಕ್ರಮದ ವಿಷಯಗಳನ್ನು ಸಮಯಕ್ಕೆ ಕವರ್ ಮಾಡಬಹುದು. ಜೊತೆಗೆ ನಿಮ್ಮ ಪರಿಶ್ರಮ ಹಾಗೂ ಬುದ್ಧಿವಂತಿಕೆಯೊಂದಿಗೆ ನೀವು ಪರೀಕ್ಷೆಯನ್ನು ಸುಲಭವಾಗಿ ಪಾಸು ಮಾಡಬಹುದು.

  First published: