• ಹೋಂ
  • »
  • ನ್ಯೂಸ್
  • »
  • Jobs
  • »
  • Women in Technology: ಟೆಕ್ ಉದ್ಯಮದಲ್ಲಿ ಮಹಿಳಾ ಉದ್ಯೋಗಿಗಳು ಯಶಸ್ವಿಯಾಗಲು 7 ಟಿಪ್ಸ್ ಇಲ್ಲಿವೆ

Women in Technology: ಟೆಕ್ ಉದ್ಯಮದಲ್ಲಿ ಮಹಿಳಾ ಉದ್ಯೋಗಿಗಳು ಯಶಸ್ವಿಯಾಗಲು 7 ಟಿಪ್ಸ್ ಇಲ್ಲಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಟೆಕ್ ಉದ್ಯಮದಲ್ಲಿ ಮಹಿಳೆಯರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಕಷ್ಟು ಶ್ರಮಿಸಬೇಕಿದೆ. ಸರಿಯಾದ ಮಾರ್ಗದರ್ಶನ ಮತ್ತು ಅಗತ್ಯ ಬೆಂಬಲ ದೊರಕಿದರೆ ಖಂಡಿತಾ ಯಶಸ್ಸು ಕಟ್ಟಿಟ್ಟ ಬುತ್ತಿ.

  • Share this:

ತಂತ್ರಜ್ಞಾನ (Technology) ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳ (Woman Employee) ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ಉದ್ಯೋಗವಕಾಶಗಳು, ಪ್ರಪಂಚವನ್ನೇ ಗೆಲ್ಲುವ ಭರವಸೆ ನೀಡುವ ಸಂಬಳ (Salary)  ಅವರನ್ನು ಟೆಕ್​ ಕ್ಷೇತ್ರಕ್ಕೆ ಎಳೆದು ತರುತ್ತಿದೆ. ಆದರೆ ಇಂದಿಗೂ ಪರುಷ ಪ್ರಧಾನವಾಗಿರುವ ಟೆಕ್ ಉದ್ಯಮದಲ್ಲಿ ಮಹಿಳೆಯರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಕಷ್ಟು ಶ್ರಮಿಸಬೇಕಿದೆ. ಸರಿಯಾದ ಮಾರ್ಗದರ್ಶನ ಮತ್ತು ಅಗತ್ಯ ಬೆಂಬಲ ದೊರಕಿದರೆ ಖಂಡಿತಾ ಯಶಸ್ಸು ಕಟ್ಟಿಟ್ಟ ಬುತ್ತಿ.


ಈ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ಬದುಕನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ನೆರವಾಗುವ ಕೆಲವು ಅಂಶಗಳು ಇಲ್ಲಿವೆ.


1) ವಿಭಿನ್ನ ಜವಾಬ್ದಾರಿ ನಿರ್ವಹಿಸಲು ಮುಂದೆ ಬನ್ನಿ


ಟೆಕ್ ಉದ್ಯಮ ನಿರಂತರ ಚಲನಶೀಲವಾಗಿದೆ. ನಿಮಗೆ ದೊರಕುವ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ನಿಧಾನವಾಗಿ ಯೋಚಿಸಿ. ನಿಮ್ಮ ಅನುಭವ ಮತ್ತು ಕುಶಲತೆಯ ಆಧಾರದ ಮೇಲೆ ನಿರ್ಧರಿಸಿ. ನಿಮ್ಮ ಕೌಶಲ್ಯಗಳನ್ನು ಕಾಲಕಾಲಕ್ಕೆ ತಕ್ಕಂತೆ ವೃದ್ಧಿಸಿಕೊಳ್ಳಿ. ಇದಕ್ಕಾಗಿ ಸೂಕ್ತ ತರಬೇತಿ ಪಡೆಯಿರಿ. ಕಾರ್ಯಾಗಾರಗಳಲ್ಲಿ ಭಾಗವಹಿಸಿ. ಇದು ನಿಮ್ಮನ್ನು ಎಲ್ಲರಿಗಿಂತ ವಿಭಿನ್ನವಾಗಿಡುತ್ತದೆ.


2) ತಂಡದ ಮುಂದಾಳತ್ವ ವಹಿಸಿರಿ


ನಿಮ್ಮ ತಂಡಕ್ಕೆ ಅಗತ್ಯವಿರುವ ಮಾರ್ಗದರ್ಶನ ನೀಡಿ. ನಿಮ್ಮ ತಂಡವನ್ನು ನಿರ್ವಹಿಸುವುದನ್ನು ಕಲಿತುಕೊಳ್ಳಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಲೀಡರ್​ಶಿಪ್​ ಟ್ರೈನಿಂಗ್ ಪಡೆದುಕೊಳ್ಳಿ. ವೈಯಕ್ತಿಕ ಅಥವಾ ವೃತ್ತಿಪರ ವಿಷಯಗಳಲ್ಲಿ ಅವಕಾಶ ಒದಗಿದಾಗ ನಾಯಕತ್ವ ವಹಿಸಿಕೊಳ್ಳಿ. ನಿಮ್ಮ ಭಾವನಾತ್ಮಕ ಐಕ್ಯೂ ವೃದ್ಧಿಸಿಕೊಳ್ಳಿ. ಸೃಜನಶೀಲ ಚಿಂತನೆಯೊಂದಿಗೆ ಲಾಜಿಕಲ್ ಥಿಂಕಿಂಗ್ ಬೆಳೆಸಿಕೊಳ್ಳಿ.


ಪ್ರಾತಿನಿಧಿಕ ಚಿತ್ರ


3) ಸೂಕ್ತ ಮಾರ್ಗದರ್ಶಕರನ್ನು ಹುಡುಕಿ


ಟೆಕ್​ ಪ್ರಪಂಚದಲ್ಲಿ ಪ್ರತಿನಿತ್ಯ ಕಠಿಣ ಸವಾಲುಗಳು ಎದುರಾಗುತ್ತಲೇ ಇರುತ್ತದೆ. ಈ ನಿಟ್ಟಿನಲ್ಲಿ ನಮಗೆ ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳುವುದು, ಕೆಲಸ ನಿರ್ವಹಿಸುವುದನ್ನು ಕಲಿತುಕೊಳ್ಳುವ ಅವಶ್ಯಕತೆ ಇರುತ್ತದೆ.


ಈ ಹಿನ್ನೆಲೆಯಲ್ಲಿ ನೀವು ಒಬ್ಬ ಸೂಕ್ತ ಮಾರ್ಗದರ್ಶಕರನ್ನು ಹುಡುಕಿಕೊಳ್ಳಬೇಕು. ನಿಮ್ಮ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿರುವ ಅನುಭವಿ ಮಾರ್ಗದರ್ಶಕರು ನಿಮ್ಮನ್ನು ಸೋಲಲು ಎಂದಿಗೂ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ನಿಮ್ಮ ಮಾರ್ಗದರ್ಶಕರು ಸದಾ ಅಪ್​ಡೇಟ್​ ಆಗಿರಲೇಬೇಕು. ಸರಿಯಾದ ಮಾರ್ಗದರ್ಶನ ಸಿಕ್ಕರೇ ಎಂಥ ಸಮಸ್ಯೆ ಬೇಕಾದರೂ ಸುಲಭದಲ್ಲಿ ಗೆಲ್ಲಬಹುದು. ‘


4) ತಾಂತ್ರಿಕ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಿ


ಯಾವುದೇ ಕ್ಷೇತ್ರವಾಗಿರಲಿ ಕಲಿಕೆ ನಿರಂತರ. ಅದರಲ್ಲೂ ಈ ಟೆಕ್​ ಯುಗದಲ್ಲಿ ಪ್ರತಿನಿತ್ಯ ಹೊಸ ಅನ್ವೇಷಣೆಗಳು, ಹೊಸದಾಗಿ ಯೋಚಿಸುವವರು, ನವೀನ ರೀತಿಯಲ್ಲಿ ಕೆಲಸ ನಿರ್ವಹಿಸುವವರು ಬರುತ್ತಲೇ ಇರುತ್ತಾರೆ. ಈ ಎಲ್ಲಾ ಸ್ಪರ್ಧೆಗಳನ್ನು ಸಮರ್ಥವಾಗಿ ಎದುರಿಸಬೇಕು. ಜೊತೆಗೆ ನಿಮ್ಮ ವೃತ್ತಿ ಬದುಕಿಗೆ ಸಂಬಂಧಿಸಿದ ಎಲ್ಲಾ ರೀತಿಯ ತಾಂತ್ರಿಕ ಕೌಶಲ್ಯವನ್ನೂ ಅಭಿವೃದ್ದಿಪಡಿಸಿಕೊಳ್ಳುವುದು ಉತ್ತಮ.
ಆದ್ದರಿಂದ ಆನ್​ಲೈನ್​ ಕೋರ್ಸ್​ಗಳನ್ನು ತೆಗೆದುಕೊಳ್ಳಿ. ಸೆಮಿನಾರ್​ಗಳಲ್ಲಿ ಭಾಗವಹಿಸಿ, ಉದ್ಯಮಕ್ಕೆ ಸಂಬಂಧಿಸಿದ ಸುದ್ದಿಗಳ ಬಗ್ಗೆ ತಿಳಿದುಕೊಳ್ಳಿ. ಈ ನಿಟ್ಟಿನಲ್ಲಿ ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನಿಮ್ಮ ದೌರ್ಬಲ್ಯವನ್ನು ಮೆಟ್ಟಿನಿಂತು ಸಾಮರ್ಥ್ಯವನ್ನು ಹೊಳೆಯುವಂತೆ ಮಾಡಿ.


5) ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನವಿರಲಿ


ವೃತ್ತಿ ಚೆನ್ನಾಗಿದ್ದರೆ ಬದುಕು ಕೂಡ ಹಸನಾಗಿರುತ್ತದೆ. ಅದೇ ರೀತಿ ಜೀವನ ಸೊಗಸಾಗಿದ್ದರೆ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ. ಟೆಕ್​ ಕೆಲಸವು ಸಾಕಷ್ಟು ಮಾಸಿಕ ಶ್ರಮ ಬೇಡುತ್ತದೆ. ಬಹಳ ಹೊತ್ತು ಒಂದೆಡೆ ಕುಳಿತು ಕೆಲಸ ಮಾಡಬೇಕಾಗುತ್ತದೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಎರಡರಲ್ಲೂ ಸಮತೋಲನ ಸಾಧಿಸಿ. ನಿಮ್ಮಿಷ್ಟದ ಹವ್ಯಾಸ ರೂಪಿಸಿಕೊಳ್ಳಿ. ಪ್ರವಾಸ ಕೈಗೊಳ್ಳಿ, ಕುಟುಂಬದ ಜೊತೆಗೆ ಸಮಯ ಕಳೆಯಿರಿ.


6) ಸವಾಲುಗಳನ್ನು ಬೇಧಿಸಿ


ಸವಾಲುಗಳು ಮನುಷ್ಯನ ಬುದ್ಧಿ ಮತ್ತು ಯೋಚನಾ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಸಮಸ್ಯೆಗಳನ್ನು ಬೇಧಿಸಿದಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದ್ದರಿಂದ ವೃತ್ತಿಯಲ್ಲಿ ಯಾವುದೇ ಸವಾಲು ಬಂದರೂ ಅದನ್ನು ಸಮರ್ಥವಾಗಿ ನಿಭಾಯಿಸಿ. ಅಂಕಿ ಅಂಶಗಳನ್ನು ಜೋಡಿಸಿಕೊಂಡು ಪರಿಹಾರವನ್ನು ಕಂಡುಕೊಳ್ಳಿ.


ಇದನ್ನೂ ಓದಿ: Working Woman: ಉದ್ಯೋಗಕ್ಕಾಗಿ ತಾಯ್ತನವನ್ನು ಮುಂದೂಡುವುದು ಎಷ್ಟು ಸರಿ, ತಜ್ಞರು ಏನಂತಾರೆ?


7) ಸಮಾನ ಮನಸ್ಕರೊಟ್ಟಿಗೆ ನೆಟ್​ವರ್ಕ್​ ಇರಲಿ


ಹೊಸ ಜನರ ಭೇಟಿಯಿಂದ ನಿಮ್ಮ ಶಕ್ತಿ ದೌರ್ಬಲ್ಯಗಳು ನಿಮಗೆ ಅರಿವಿಗೆ ಬರುತ್ತವೆ. ಜಗತ್ತಿನ ಆಗು ಹೋಗುಗಳ ಪರಿಚಯ ನಿಮಗೆ ಚೆನ್ನಾಗಿ ಆಗುತ್ತದೆ. ಸಮಾನ ಮನಸ್ಕರ ಜೊತೆಗೆ ನೆಟ್​ವರ್ಕ್​ ಬೆಳೆಸಿಕೊಂಡಾಗ ನಿಮ್ಮಸಾಧ್ಯತೆಗಳು ದೊಡ್ಡದಾಗುತ್ತದೆ. ಅದರಲ್ಲೂ ಅವರ ಅನುಭವಗಳು, ಸ್ಟ್ರಾಟರ್ಜಿಗಳು, ಗೆಲುವಿನ ಸೂತ್ರಗಳನ್ನು ತಿಳಿದುಕೊಳ್ಳುವ ಮೂಲಕ ನಿಮ್ಮ ಕೌಶಲ್ಯವು ಬೆಳೆಯುತ್ತದೆ.

First published: