ನಾವು ಉದ್ಯೋಗವನ್ನು ಹುಡುಕಿಕೊಂಡು (Job Search) ಸಂದರ್ಶನಕ್ಕೆ (Job Interview) ಅಂತ ಹೋದಾಗ ಅಲ್ಲಿ ಸಂದರ್ಶಕರು ನಮಗೆ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು (Interview Questions) ಕೇಳುತ್ತಾರೆ. ಸಾಮಾನ್ಯವಾಗಿ ನಮ್ಮ ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೂ ಸಹ ಕೆಲವೊಂದು ಸಾಮಾನ್ಯವಾಗಿ ಕೇಳುವ ಕೆಲವೊಂದಿಷ್ಟು ಪ್ರಶ್ನೆಗಳಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಈ ರೀತಿಯ ಸಾಮಾನ್ಯವಾದ ಪ್ರಶ್ನೆಗಳನ್ನು ಸಂದರ್ಶಕರು ಏಕೆ ಕೇಳುತ್ತಾರೆ ಅಂತ ನಮಗೆಲ್ಲಾ ಅನ್ನಿಸಿರುತ್ತದೆ. ಈ ಪ್ರಶ್ನೆಗಳನ್ನು ಕೇಳಿದ ಸಂದರ್ಶಕರ ಹಿಂದಿನ ಉದ್ದೇಶವೇನು ಅಂತ ನಮಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಹಾಗಾದರೆ ಈ ಸಾಮಾನ್ಯ ಪ್ರಶ್ನೆಗಳ ಹಿಂದೆ ಏನಿದೆ? ಮಾನವ ಸಂಪನ್ಮೂಲ ತಜ್ಞರು ಎಂದರೆ ಎಚ್ ಆರ್ ಅಧಿಕಾರಿಗಳು ತೆರೆಮರೆಯ ಹಿಂದಿನ ತಾರ್ಕಿಕತೆಯನ್ನು ಇಲ್ಲಿ ಬಹಿರಂಗಪಡಿಸಿದ್ದಾರೆ ನೋಡಿ.
1) ನೀವು ನಮ್ಮಲ್ಲಿ ಕೆಲಸ ಮಾಡಲು ಏಕೆ ಆಸಕ್ತಿ ಹೊಂದಿದ್ದೀರಿ?
ಉದ್ಯೋಗ ಸಂದರ್ಶನಕ್ಕೆ ಬರುವ ಮುಂಚೆ ಕಂಪನಿಯ ಬಗ್ಗೆ ಎಷ್ಟರ ಮಟ್ಟಿಗೆ ತಿಳಿದುಕೊಂಡು ಬಂದಿದ್ದೀರಿ ಅಂತ ಪರೀಕ್ಷೆ ಮಾಡುವುದಕ್ಕೆ ಸಂದರ್ಶಕರು ಈ ಪ್ರಶ್ನೆಯನ್ನು ಕೇಳುತ್ತಾರೆ.
ಈ ಕಂಪನಿಯಲ್ಲಿ ಕೆಲಸ ಮಾಡುವುದಕ್ಕೆ ನೀವು ಏಕೆ ಆಸಕ್ತಿಯನ್ನು ಹೊಂದಿದ್ದೀರಿ ಒಂದು ಕಾರಣ ನೀಡಿ ಅಂತ ಕೇಳುತ್ತಾರೆ. ಆಗ ನೀವು ಕೆಲಸವನ್ನು ಹುಡುಕುತ್ತಿದ್ದೇನೆ ಅಂತ ಹೇಳುವುದಕ್ಕಿಂತಲೂ ಹೆಚ್ಚಿನದನ್ನು ಅವರು ನಿರೀಕ್ಷಿಸುತ್ತಾರೆ. ಇಂತಹ ಪ್ರಶ್ನೆ ನಿಮ್ಮ ಪ್ರಯತ್ನ, ಹೂಡಿಕೆ ಮತ್ತು ಸಮಗ್ರತೆಯ ಸೂಚನೆಯಾಗಿದೆ, ಇದು ಕೆಲಸದ ಕಾರ್ಯಕ್ಷಮತೆಗೂ ಸಹ ಕೊಡುಗೆ ನೀಡುತ್ತದೆ.
2) ನಿಮ್ಮ ಬಗ್ಗೆ ಹೇಳಿ ಅಂತ ಕೇಳುತ್ತಾರೆ..
ಇದು ಒಂದು ಕ್ಲಿಷ್ಟಕರ ಪ್ರಶ್ನೆಯಾಗಿದೆ, ಏಕೆಂದರೆ ಪ್ರತಿಯೊಬ್ಬ ಸಂದರ್ಶನಕಾರನು ವೈಯಕ್ತಿಕ, ವೃತ್ತಿಪರ ಅಥವಾ ಎರಡರ ಬಗ್ಗೆ ಮಾತನಾಡಬೇಕೇ ಎಂದು ಆಯ್ಕೆ ಮಾಡುತ್ತಾನೆ.
ಇದನ್ನೂ ಓದಿ: Interview Tips-14: ಮೊದಲ ಬಾರಿಗೆ ಉದ್ಯೋಗ ಸಂದರ್ಶನ ಎದುರಿಸುವವರು 5 ವಿಷಯಗಳನ್ನು ಪಾಲಿಸಿದರೆ ಸಾಕು
ಹೆಚ್ಚಿನ ಸಂದರ್ಶಕರು ವೈಯಕ್ತಿಕ ಮತ್ತು ವೃತ್ತಿಪರರನ್ನು ಸಂಯೋಜಿಸುವ ಉತ್ತರವನ್ನು ನಿರೀಕ್ಷಿಸುತ್ತಾರೆ. ಉತ್ತರವು ಸಂದರ್ಶಕನಿಗೆ ಅಭ್ಯರ್ಥಿಯನ್ನು ಸ್ವಲ್ಪ ತಿಳಿದುಕೊಳ್ಳಲು ಮತ್ತು ಅವರು ತಮ್ಮನ್ನು ಹೇಗೆ ವ್ಯಾಖ್ಯಾನಿಸಿಕೊಳ್ಳುತ್ತಾರೆ ಎಂಬುದನ್ನು ನೋಡಲು ಅನುವು ಮಾಡಿಕೊಡುತ್ತದೆ.
3) ನಿಮ್ಮ ಸಾಮರ್ಥ್ಯಗಳು ಯಾವುವು?
ಇಲ್ಲಿ, ಸಂದರ್ಶಕರು ನಿಮ್ಮ ವೃತ್ತಿಪರ ಸಾಮರ್ಥ್ಯಗಳು ಯಾವುವು ಅಂತ ತಿಳಿದುಕೊಳ್ಳಲು ಈ ಪ್ರಶ್ನೆಯನ್ನು ಕೇಳುತ್ತಾರೆ ಮತ್ತು ಕೆಲಸದ ಪಾತ್ರಕ್ಕೆ ನಿಮ್ಮ ಸಾಮರ್ಥ್ಯಗಳು ಎಷ್ಟರ ಮಟ್ಟಿಗೆ ಸರಿ ಹೊಂದುತ್ತವೆ ಅಂತ ನೋಡುತ್ತಾರೆ. ಆದ್ದರಿಂದ ಉತ್ತಮ ಉತ್ತರವು ಎರಡೂ ಕಡೆಯಿಂದ ಅನುಕೂಲಗಳನ್ನು ಸಂಯೋಜಿಸುತ್ತದೆ. ನಿಮ್ಮ ವೃತ್ತಿಪರ ಅನುಭವದಿಂದ ನಿಜವಾದ ಉದಾಹರಣೆಗಳನ್ನು ನೀಡಲು ಯಾವಾಗಲೂ ಶಿಫಾರಸ್ಸು ಮಾಡಲಾಗುತ್ತದೆ.
4) ನಿಮ್ಮ ದೌರ್ಬಲ್ಯಗಳು ಯಾವುವು?
ವಾಸ್ತವವಾಗಿ, ಇತ್ತೀಚಿನ ವರ್ಷಗಳಲ್ಲಿ, "ದೌರ್ಬಲ್ಯಗಳು" ಎಂಬ ಪದವನ್ನು ಕಡಿಮೆ ಬಾರಿ ಬಳಸಲಾಗುತ್ತದೆ ಮತ್ತು ಕೆಲವು ಜನರನ್ನು ಅವರ ಹಿಂದಿನ ಕೆಲಸದಲ್ಲಿನ ಸವಾಲುಗಳ ಬಗ್ಗೆ ಕೇಳಲಾಗುತ್ತದೆ. ಉತ್ತರದ ಮೂಲಕ, ಸಂದರ್ಶನಕಾರನ ದೌರ್ಬಲ್ಯಗಳು ಪ್ರತಿಬಿಂಬಿತವಾಗುತ್ತವೆ. ಕಂಪನಿಯು ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ ಎಂದು ಸಂದರ್ಶಕರು ತಿಳಿಯಲು ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ.
ಕೆಲಸದ ಸಂದರ್ಭದಲ್ಲಿ ಎದುರಾಗುವ ಸವಾಲುಗಳನ್ನು ನೀವು ಹೇಗೆ ಯಶಸ್ವಿಯಾಗಿ ನಿಭಾಯಿಸಿದ್ದೀರಿ ಎಂಬುದಕ್ಕೆ ಉದಾಹರಣೆಗಳನ್ನು ನೀಡುವುದು ಇಲ್ಲಿ ತುಂಬಾನೇ ಸಹಾಯ ಮಾಡಬಹುದು.
5) ನಿಮ್ಮ ಮ್ಯಾನೇಜರ್ ನಿಮ್ಮ ಬಗ್ಗೆ ಏನು ಹೇಳುತ್ತಾರೆ?
ಇದು ಸಂದರ್ಶನಕಾರನ ವೈಯಕ್ತಿಕ ಗ್ರಹಿಕೆ ಮತ್ತು ಸ್ವಯಂ-ಅರಿವನ್ನು ಪರಿಶೀಲಿಸುವ ಮತ್ತೊಂದು ಪ್ರಶ್ನೆಯಾಗಿದೆ. ಅವರು ಯಾವ ರೀತಿಯ ಉದ್ಯೋಗಿ ಎಂದು ತಿಳಿಯುವ ಒಂದು ಮಾರ್ಗವಾಗಿದೆ. ಬೇರೆ ಬೇರೆ ರೀತಿಯ ವ್ಯವಸ್ಥಾಪಕರೊಂದಿಗೆ ಹೇಗೆ ವ್ಯವಹರಿಸಬೇಕೆಂದು ನಿಮಗೆ ತಿಳಿದಿದೆಯೇ ಅಂತ ಪರೀಕ್ಷಿಸಲು ಹೀಗೆ ಕೇಳುತ್ತಾರೆ.
6) ನಿಮ್ಮಿಂದ ಕೆಲಸದಲ್ಲಿ ತಪ್ಪಾದರೆ ಏನು ಮಾಡುತ್ತೀರಿ?
ಪ್ರತಿಯೊಬ್ಬರೂ ಕೆಲಸದಲ್ಲಿ ಒಮ್ಮೆಯಾದರೂ ಚಿಕ್ಕಪುಟ್ಟ ತಪ್ಪುಗಳನ್ನು ಮಾಡಿಯೇ ಮಾಡುತ್ತಾರೆ. ಅಭ್ಯರ್ಥಿಯು ತಪ್ಪನ್ನು ಹೇಗೆ ನಿಭಾಯಿಸುತ್ತಾನೆ ಎಂಬುವುದು ಪ್ರಶ್ನೆಯಾಗಿರುತ್ತದೆ.
ಈ ಪ್ರಶ್ನೆಯಲ್ಲಿ, ಸಂದರ್ಶನಕಾರನು ವಿಮರ್ಶೆಯನ್ನು ಸ್ವೀಕರಿಸುವ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಬಯಸುತ್ತಾನೆ ಮತ್ತು ನಕಾರಾತ್ಮಕ ಟೀಕೆಯನ್ನು ನೀವು ಹೇಗೆ ಎದುರಿಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಬಯಸುತ್ತಾರೆ.
7) ಮುಂದಿನ 5 ವರ್ಷಗಳಲ್ಲಿ ನಿಮ್ಮನ್ನು ನೀವು ಎಲ್ಲಿ ನೋಡುತ್ತೀರಿ?
ನೀವು ಈಗ ಸಿಗುವ ಕೆಲಸದಲ್ಲಿಯೇ ಮುಂದುವರೆಯಲು ನೋಡುತ್ತೀರಾ ಅಥವಾ ಅದರ ಮೂಲಕ ಅಭಿವೃದ್ಧಿ ಹೊಂದಲು ಮತ್ತು ಬೆಳೆಯಲು ಆಸಕ್ತಿ ಹೊಂದಿದ್ದೀರಾ ಎಂದು ಕಂಡು ಹಿಡಿಯುವ ಸಂದರ್ಶಕನ ವಿಧಾನ ಇದಾಗಿದೆ.
ಸಂಸ್ಥೆಯೊಳಗೆ ಮತ್ತು ಸಾಮಾನ್ಯವಾಗಿ ಮುಂದಿನ ಐದು ವರ್ಷಗಳಲ್ಲಿ ನೀವು ನಿಮ್ಮನ್ನು ಬೇರೆಡೆ ನೋಡುತ್ತೀರಿ ಎಂದು ಹೇಳುವ ಉತ್ತರ ತಪ್ಪೆಂದು ಅರ್ಥವಲ್ಲ. ಉತ್ತರವು ವೃತ್ತಿಪರವಾಗಿ ಅಭಿವೃದ್ಧಿ ಹೊಂದುವ ಬಯಕೆಯನ್ನು ಸೂಚಿಸುವವರೆಗೆ ಉತ್ತರವು ಒಳ್ಳೆಯದೇ ಆಗಿರುತ್ತದೆ.
8) ನಿಮ್ಮ ಪ್ರಸ್ತುತ ಕೆಲಸವನ್ನು ನೀವು ಏಕೆ ಬಿಡುತ್ತಿದ್ದೀರಿ?
ಪ್ರತಿಯೊಂದು ಸಂಸ್ಥೆಯು ಸ್ಥಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಆಸಕ್ತಿ ಹೊಂದಿರುತ್ತದೆ. (ಅದು ಮೂರು ವರ್ಷಗಳ ತನಕ ಒಂದೇ ಕಡೆ ಕೆಲಸ ಮಾಡಿರಬೇಕು ಅಂತ ಅರ್ಥೈಸುತ್ತದೆ, ಇತ್ತೀಚಿನ ದಿನಗಳಲ್ಲಿ ಎರಡು ವರ್ಷಗಳನ್ನು ಸಹ ಸಮಂಜಸವಾದ ಸಮಯವೆಂದು ಪರಿಗಣಿಸಲಾಗುತ್ತದೆ) ಉದ್ಯೋಗ ಹುಡುಕಾಟದ ಹಿಂದೆ ಉದ್ದೇಶ ಏನಿದೆ ಎಂಬುದನ್ನು ಸಂದರ್ಶಕರು ಅರ್ಥಮಾಡಿಕೊಳ್ಳಲು ಬಯಸುತ್ತಾರೆ.
ಅಭ್ಯರ್ಥಿಯು ತನ್ನ ರೆಸ್ಯೂಮ್ ನಲ್ಲಿ ತುಂಬಾನೇ ಕೆಲಸಗಳನ್ನು ಬದಲಾಯಿಸಿದ್ದರೆ, ಸಂದರ್ಶಕರು ಅವುಗಳ ಹಿಂದಿನ ಅರ್ಥವನ್ನು ಕಂಡು ಹಿಡಿಯಲು ಬಯಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ