• ಹೋಂ
 • »
 • ನ್ಯೂಸ್
 • »
 • Jobs
 • »
 • Career Success: ಉದ್ಯೋಗಿಗಳು ಈ 6 ಸಿಂಪಲ್ ಬದಲಾವಣೆಗಳನ್ನು ಮಾಡಿಕೊಂಡರೆ ಅದ್ಭುತಗಳೇ ಸಂಭವಿಸುತ್ತೆ

Career Success: ಉದ್ಯೋಗಿಗಳು ಈ 6 ಸಿಂಪಲ್ ಬದಲಾವಣೆಗಳನ್ನು ಮಾಡಿಕೊಂಡರೆ ಅದ್ಭುತಗಳೇ ಸಂಭವಿಸುತ್ತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಿಮ್ಮ ಕೆಲಸವನ್ನು ಹಿರಿಯ ಅಧಿಕಾರಿಗಳು ಗುರುತಿಸಿ ನಿಮಗೆ ಕೆಲಸದಲ್ಲಿ ಬೇಗನೆ ಬಡ್ತಿಗಳು ಸಿಗಬೇಕು ಅಂದರೆ ನೀವು ಈ ಕೆಳಗಿನ ಕೆಲವು ಸುಲಭವಾದ ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು.

 • Share this:

ಎಲ್ಲರೂ ತಾವು ಮಾಡುವ ಕೆಲಸಗಳನ್ನು ಮತ್ತು ತಮಗೆ ನೀಡಿರುವ ಜವಾಬ್ದಾರಿಗಳನ್ನು (Responsibilities) ಸರಿಯಾಗಿ ಅಚ್ಚುಕಟ್ಟಾಗಿ ಮಾಡಿ ಮುಗಿಸಿ, ಆಫೀಸಿನಲ್ಲಿ ಅಥವಾ ಕಂಪನಿಯಲ್ಲಿ ಎಲ್ಲರ ಬಾಯಲ್ಲಿ ಮೆಚ್ಚುಗೆಯ ಮಾತುಗಳನ್ನು ಕೇಳಬೇಕು ಅಂತ ಅಂದುಕೊಳ್ಳುವವರೆ. ಆದರೆ ಎಷ್ಟು ಜನಕ್ಕೆ ತಾವು ಮಾಡಿರುವ ಒಳ್ಳೆಯ ಕೆಲಸವನ್ನು ಆಫೀಸಿನಲ್ಲಿರುವ (Office) ಹಿರಿಯ ಅಧಿಕಾರಿಗಳು (Boss) ಗುರುತಿಸಿ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ ಹೇಳಿ?


ಎಲ್ಲಾ ಉದ್ಯೋಗಿಗಳು ತಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಇಷ್ಟಪಡುವವರೇ ಆಗಿರುತ್ತಾರೆ. ಆದರೆ ಎಷ್ಟೋ ಜನರಿಗೆ ಕೆಲಸ ಮಾಡುವುದು ಗೊತ್ತಿರುತ್ತದೆ, ಆದರೆ ಆಫೀಸಿನಲ್ಲಿ ನಾಲ್ಕು ಜನರ ಜೊತೆಯಲ್ಲಿ ಹೇಗೆ ವರ್ತಿಸಬೇಕು ಅಂತ ತಿಳಿದಿರುವುದಿಲ್ಲ.


ಇನ್ನೂ ಕೆಲವರಿಗೆ ಕೆಲಸ ಮಾಡುವುದು ಗೊತ್ತಿರದೆ ಇದ್ದರೂ ಸಹ ಮಾಡಿರುವ ಕಡಿಮೆ ಕೆಲಸವನ್ನು ಹೇಗೆ ದೊಡ್ಡದಾಗಿ ಹೇಳಿಕೊಳ್ಳಬೇಕು ಮತ್ತು ಹಿರಿಯ ಅಧಿಕಾರಿಗಳ ಜೊತೆ ಹೇಗೆ ವರ್ತಿಸಬೇಕು ಅನ್ನೋದು ತುಂಬಾನೇ ಚೆನ್ನಾಗಿ ತಿಳಿದಿರುತ್ತದೆ.


ಹೀಗಾದಾಗ ಅವರ ಒಳ್ಳೆಯ ಕೆಲಸವನ್ನು ಮಾಡಿದ ಉದ್ಯೋಗಿಯ ವರ್ತನೆ ಕೆಲವೊಮ್ಮೆ ಅವರ ಕೆಲಸವನ್ನು ಮರೆ ಮಾಚುತ್ತದೆ. ಹೀಗೆ ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದಲ್ಲದೆ, ನಾಲ್ಕು ಜನರ ಮಧ್ಯೆ ನಮ್ಮ ವರ್ತನೆ ಹೇಗಿರಬೇಕು ಅಂತ ಸಹ ನಾವು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.


ಆದರೆ ನಿಮ್ಮ ಕೆಲಸವನ್ನು ಹಿರಿಯ ಅಧಿಕಾರಿಗಳು ಗುರುತಿಸಿ ನಿಮಗೆ ಕೆಲಸದಲ್ಲಿ ಬೇಗನೆ ಬಡ್ತಿಗಳು ಸಿಗಬೇಕು ಅಂದರೆ ನೀವು ಈ ಕೆಳಗಿನ ಕೆಲವು ಸುಲಭವಾದ ಸಲಹೆಗಳನ್ನು ಅನುಸರಿಸುವುದು ಒಳ್ಳೆಯದು.


1. ಕೆಲಸದಲ್ಲಿದ್ದಾಗ ನಿಮ್ಮ ವರ್ತನೆ ಚೆನ್ನಾಗಿರಬೇಕು


ನೀವು ಕೆಲಸದಲ್ಲಿದ್ದಾಗ, ನಿಮ್ಮ ಮನೋಭಾವವು ಹೆಚ್ಚು ಮುಖ್ಯವಾಗಿರುತ್ತದೆ. ಹೀಗಾಗಿ, ನಿಮ್ಮ ತಂಡ ಮತ್ತು ಕಚೇರಿಯಲ್ಲಿನ ಇತರ ಸಹೋದ್ಯೋಗಿಗಳೊಂದಿಗೆ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕೆಲಸದಲ್ಲಿ ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರುವ ಉದ್ಯೋಗಿಗಳು ಬಡ್ತಿ ಪಡೆಯಲು ಹೆಚ್ಚು ಅನುಕೂಲಕರವಾಗಿರುತ್ತಾರೆ.
2. ಕೆಲಸ ಮಾಡಲು ಗುರಿಗಳನ್ನು ಇರಿಸಿಕೊಳ್ಳಿರಿ


ನೀವು ಎಲ್ಲಿಯಾದರೂ ಕೆಲಸ ಮಾಡುವಾಗ ನಿಮ್ಮ ವೃತ್ತಿಜೀವನದ ಗುರಿಗಳನ್ನು ನಿಗದಿಪಡಿಸುವುದು ತುಂಬಾನೇ ಮುಖ್ಯವಾಗುತ್ತವೆ. ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬರ ಅಲ್ಪಾವಧಿ ಮತ್ತು ದೀರ್ಘಾವಧಿಯ ಗುರಿಗಳನ್ನು ಸರಿಯಾಗಿ ತಿಳಿಸಬೇಕು.


ಗುರಿಗಳನ್ನು ರೂಪಿಸುವುದರಿಂದ ಕೆಲಸ ಮಾಡುವುದು ತುಂಬಾನೇ ಸುಲಭವಾಗುತ್ತದೆ ಮತ್ತು ಕಾಲಕಾಲಕ್ಕೆ ನಮ್ಮ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ.


3. ಕಚೇರಿಯಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಬೇಕು


ಕಚೇರಿಯಲ್ಲಿ ಕೆಲಸ ಮಾಡುವಾಗ, ಪ್ರತಿಯೊಬ್ಬ ಉದ್ಯೋಗಿಯು ಹೊಸ ಕೌಶಲ್ಯಗಳನ್ನು ಕಲಿಯುವಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಗಮನ ಹರಿಸಬೇಕು. ಕಚೇರಿಯಲ್ಲಿ ಕಲಿತ ಈ ಕೌಶಲ್ಯಗಳು ನಿಮ್ಮ ಜೀವನದುದ್ದಕ್ಕೂ ನಿಮಗೆ ಸಹಾಯ ಮಾಡುತ್ತದೆ.


4. ಸಂವಹನ ಕೌಶಲ್ಯಗಳು ಬಹಳ ಮುಖ್ಯವಾಗುತ್ತವೆ


ಸಂವಹನ ಕೌಶಲ್ಯಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಉತ್ತಮ ಸಂವಹನ ಕೌಶಲ್ಯಗಳು ಜೀವನದಲ್ಲಿ ನಿಮ್ಮ ವೃತ್ತಿಜೀವನವನ್ನು ವೇಗವಾಗಿ ಬೆಳೆಸಲು ಸಹಾಯ ಮಾಡುತ್ತದೆ.


ಕಚೇರಿಯಲ್ಲಿ ಕೆಲಸ ಮಾಡುವಾಗ, ಎಲ್ಲರೊಂದಿಗೂ ಸಂವಹನ ನಡೆಸಲು ಪ್ರಯತ್ನಿಸಿ. ನಿಮ್ಮ ಆಲೋಚನೆಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿ ಮತ್ತು ಅದೇ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಅವರ ಆಲೋಚನೆಗಳನ್ನು ಸಹ ನೀವು ಪಡೆದುಕೊಳ್ಳಲು ಪ್ರಯತ್ನಿಸಿ.


ಇದನ್ನೂ ಓದಿ: Career Tips: ಕಂಪನಿ ನಿಮಗೆ ಯಾವ ಆಧಾರದ ಮೇಲೆ ಪ್ರೊಮೋಷನ್, ಸ್ಯಾಲರಿ ಹೈಕ್ ನೀಡುತ್ತೆ ಗೊತ್ತೇ?


5. ಹಿರಿಯ ಅಧಿಕಾರಿಗಳಿಂದ ಪ್ರತಿಕ್ರಿಯೆಗಳನ್ನು ಕೇಳಿ


ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುವುದು ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದು ಒಬ್ಬ ಉದ್ಯೋಗಿಯ ದುರ್ಬಲ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಹೀಗಾಗಿ, ನಿಮ್ಮ ಕಾರ್ಯಕ್ಷಮತೆಯ ಮೇಲೆ ಇನ್ನೂ ಉತ್ತಮವಾಗಿ ಕೆಲಸ ಮಾಡಲು ಪ್ರತಿಕ್ರಿಯೆಯನ್ನು ಕೇಳುವುದು ತುಂಬಾನೇ ಮುಖ್ಯವಾಗಿರುತ್ತದೆ.


6. ಕಂಪನಿಯಲ್ಲಿ ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಿ

top videos


  ನೀವು ಕಂಪನಿಯಲ್ಲಿ ಕೆಲಸ ಮಾಡುವಾಗ, ನಿಮ್ಮ ಹಿರಿಯರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಕಂಪನಿಗೆ ಮೌಲ್ಯವನ್ನು ಸೇರಿಸುವ ರೀತಿಯಲ್ಲಿ ಕೆಲಸ ಮಾಡುವುದು ಉತ್ತಮ. ಕಂಪನಿಗೆ ಆಸ್ತಿಯಾಗಿರುವುದು ನಿಮಗೆ ಬಡ್ತಿ ಪಡೆಯುವುದನ್ನು ಇನ್ನಷ್ಟು ಸುಲಭಗೊಳಿಸುತ್ತದೆ.

  First published: