ಪ್ರತಿಯೊಬ್ಬರೂ ವೃತ್ತಿಯಲ್ಲಿ ಅಭಿವೃದ್ಧಿ ಕಾಣಲು ಬಯಸುತ್ತಾರೆ. ಆಗಾಗ ವೇತನದಲ್ಲಿ ಹೈಕ್ ನೀಡುತ್ತಿದ್ದರೆ ಅಥವಾ ಪ್ರಮೋಷನ್ ನೀಡುತ್ತಿದ್ದರೆ ನಿಮಗೂ ಕೆಲಸ ಮಾಡಲು ಉತ್ಸಾಹ ಇರುತ್ತದೆ. ಅಷ್ಟಕ್ಕೂ ಪ್ರಮೋಷನ್ ಅನ್ನೋದು ನಮ್ಮ ಅಭಿವೃದ್ಧಿಯನ್ನು ಗುರುತಿಸುವಂಥ ಒಂದು ಮಾರ್ಗವಾಗಿದೆ. ಆದರೆ ಪ್ರಮೋಷನ್ ಪಡೆಯಲು ಇಡೀ ವರ್ಷ ಕೆಲಸ ಮಾಡಬೇಕು ಅನ್ನೋದು ಅಷ್ಟೇ ನಿಜ.
ಕೆಲವೊಮ್ಮೆ ವೃತ್ತಿಯಲ್ಲಿ ಕೆಲವೊಬ್ಬರಿಗೆ ಬೇಗ ಬೇಗನೇ ಇಂಥ ಬಡ್ತಿಗಳು ದೊರೆಯುತ್ತವೆ. ಆದರೆ ಕೆಲವೊಬ್ಬರು ಚೆನ್ನಾಗಿ ಕೆಲಸ ಮಾಡಿದರೂ ಅದೆಷ್ಟೋ ವರ್ಷ ಇದ್ದ ಸ್ಥಾನದಲ್ಲಿಯೇ ಇರುತ್ತಾರೆ. ಹಾಗಾಗಿ ಬಡ್ತಿ ಪಡೆಯಲು ಕೆಲವೊಮ್ಮೆ ಬರೀ ಕೆಲಸ ಮಾಡುವುದು ಮಾತ್ರವಲ್ಲ… ಕೆಲವೊಂದು ಟ್ರಿಕ್ಸ್ ಗಳನ್ನೂ ಅನುಸರಿಸಬೇಕಾಗುತ್ತದೆ.
ಇದನ್ನೂ ಓದಿ: King Charles ಪಟ್ಟಾಭಿಷೇಕದಲ್ಲಿ ಭಾಗಿಯಾದ ಬೆಂಗಳೂರಿನ ವೈದ್ಯರ ಅನುಭವ ಹೀಗಿದೆ
ಹೌದು.... ಬಡ್ತಿಯನ್ನು ನೀಡುವಾಗ, ಒಬ್ಬ ಉದ್ಯೋಗಿಯನ್ನು ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ನಿರ್ಣಯಿಸಲಾಗುತ್ತದೆ. ಜೊತೆಗೆ ಅವರ ಒಟ್ಟಾರೆ ಅಸ್ತಿತ್ವವೂ ಸಹ ಪರಿಗಣಿಸಲ್ಪಡುತ್ತದೆ ಅನ್ನೋದೂ ಅಷ್ಟೇ ನಿಜ. ಹಾಗಿದ್ದರೆ ವೃತ್ತಿ ಜೀವನದಲ್ಲಿ ಎತ್ತರಕ್ಕೇರಲು ಅನುಕೂಲವಾಗುವಂಥ ಆ ಟ್ರಿಕ್ಸ್ ಗಳು ಯಾವುವು ಅನ್ನೋದನ್ನು ನೋಡೋಣ.
1. ವ್ಯಕ್ತಿಯ ವರ್ತನೆ: ಉದ್ಯೋಗದಲ್ಲಿರುವಾಗ, ವ್ಯಕ್ತಿಯ ವರ್ತನೆಯು ಹೆಚ್ಚು ಮುಖ್ಯವೆನಿಸುತ್ತದೆ. ಹೀಗಾಗಿ, ನಿಮ್ಮ ಟೀಂ ಮತ್ತು ಆಫೀಸ್‌ನಲ್ಲಿ ಇತರ ಸಹೋದ್ಯೋಗಿಗಳೊಂದಿಗೆ ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಕೆಲಸದಲ್ಲಿ ಸಕಾರಾತ್ಮಕ ಮನೋಭಾವವನ್ನು ಹೊಂದಿರುವುದರಿಂದ ಬಡ್ತಿ ಪಡೆಯಲು ಹೆಚ್ಚು ಅನುಕೂಲಕರವಾಗಿರುತ್ತದೆ.
2. ಕೆಲಸದಲ್ಲಿ ಗುರಿಗಳನ್ನು ಸೆಟ್ ಮಾಡಿ : ಯಾವಾಗಲೂ ನಿಮ್ಮ ವೃತ್ತಿಜೀವನದ ಗುರಿಗಳನ್ನು ಹೊಂದಿಸುವುದು ಬಹಳ ಮುಖ್ಯ. ಪ್ರತಿಯೊಬ್ಬರ ಅಲ್ಪಾವಧಿ ಮತ್ತು ದೀರ್ಘಾವಧಿ ಗುರಿಗಳು ಸ್ಪಷ್ಟವಾಗಿರಬೇಕು.
ಹೀಗೆ ಗುರಿಗಳನ್ನು ಸೆಟ್ ಮಾಡುವುದದರಿಂದ ಕೆಲಸ ಮಾಡಲು ಸುಲಭವಾಗುತ್ತದೆ. ಕಾಲಕಾಲಕ್ಕೆ ನಮ್ಮ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ನಮಗೆ ಸಹಾಯ ಮಾಡುತ್ತದೆ.
3. ಆಫೀಸ್‌ನಲ್ಲಿ ಕಲಿಯಬೇಕಾದ ವಿಷಯಗಳು: ಕಚೇರಿಯಲ್ಲಿ ಕೆಲಸ ಮಾಡುವಾಗ, ಪ್ರತಿಯೊಬ್ಬ ಉದ್ಯೋಗಿ ಹೊಸ ಕೌಶಲ್ಯಗಳನ್ನು ಕಲಿಯುವತ್ತ ಹೆಚ್ಚು ಗಮನ ಹರಿಸಬೇಕು. ಕಚೇರಿಯಲ್ಲಿ ಕಲಿತ ಈ ಕೌಶಲ್ಯಗಳು ಇವು ಬಡ್ತಿಯ ಜೊತೆಗೆ ನಂತರ ನಿಮ್ಮ ಜೀವನದಲ್ಲಿಯೂ ನಿಮಗೆ ಸಹಾಯಕ್ಕೆ ಬರಬಹುದು.
4. ಸಂವಹನ ಕೌಶಲ್ಯಗಳು ಮುಖ್ಯ: ಸಂವಹನ ಕೌಶಲ್ಯಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಉತ್ತಮ ಸಂವಹನ ಕೌಶಲ್ಯಗಳು ನಿಮ್ಮ ವೃತ್ತಿ ಜೀವನವನ್ನು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ಆದ್ದರಿಂದ ಕಚೇರಿಯಲ್ಲಿ ಕೆಲಸ ಮಾಡುವಾಗ, ಎಲ್ಲರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಿ. ನಿಮ್ಮ ಆಲೋಚನೆಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿ. ಅದೇ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಅವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
ಇದನ್ನೂ ಓದಿ: Narendra Modi: 396 ಲೋಕಸಭಾ ಕ್ಷೇತ್ರಗಳು, 51 ಸಮಾವೇಶ! 1 ತಿಂಗಳಲ್ಲಿ 1 ಲಕ್ಷ ಮನೆಗೆ ಮೋದಿ ಸಂದೇಶ ತಲುಪಿಸಲು ಬಿಜೆಪಿ ನಿರ್ಧಾರ
5. ಪ್ರತಿಕ್ರಿಯೆಗಳನ್ನು ಪಡೆಯಿರಿ : ಪ್ರತಿಕ್ರಿಯೆಗಳು ಒಬ್ಬರ ಕಾರ್ಯಕ್ಷಮತೆಯ ಮೌಲ್ಯಮಾಪನವಾಗಿದೆ. ಒಬ್ಬ ವ್ಯಕ್ತಿಯು ತನ್ನ ದೌರ್ಬಲ್ಯಗಳ ಮೇಲೆ ಕೇಂದ್ರೀಕರಿಸಲು ಇಂಥ ಪ್ರತಿಕ್ರಿಯೆಗಳು ಸಹಾಯ ಮಾಡುತ್ತದೆ.
ಹೀಗಾಗಿ, ನಿಮ್ಮ ಕಾರ್ಯಕ್ಷಮತೆಯನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಸಹೋದ್ಯೋಗಿಗಳ ಪ್ರತಿಕ್ರಿಯೆಯನ್ನು ಕೇಳುವುದು ಬಹಳ ಮುಖ್ಯ.
6. ನೀವು ಕಂಪನಿಗೆ ಮುಖ್ಯ ಎಂಬಂಥ ಕೆಲಸ ಮಾಡಿ: ನೀವು ಕಂಪನಿಯಲ್ಲಿ ಕೆಲಸ ಮಾಡುವಾಗ, ನಿಮ್ಮ ಮೇಲಧಿಕಾರಿಗಳ ನಂಬಿಕೆಯನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ.
ನಿಮ್ಮ ಕಂಪನಿಗೆ ನೀವು ಮೌಲ್ಯವನ್ನು ಸೇರಿಸುವ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ನೀವು ಕಂಪನಿಗೆ ಆಸ್ತಿಯಂತೆ ಕೆಲಸ ಮಾಡುವುದರಿಂದ ನೀವು ಆದಷ್ಟು ಬೇಗ ಬಡ್ತಿ ಪಡೆಯಲು ಸಹಾಯವಾಗುತ್ತದೆ.
ಒಟ್ಟಾರೆ… ಮೇಲೆ ಹೇಳಿದಂಥ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದರ ಮೂಲಕ ನೀವು ವೃತ್ತಿಯಲ್ಲಿ ಆದಷ್ಟು ಬೇಗ ಅಭಿವೃದ್ಧಿ ಕಾಣಬಹುದು. ಕೆಲಸದ ಜೊತೆಗೆಯಲ್ಲಿ ಇಂಥ ಕೌಶಲ್ಯಗಳು, ತಂತ್ರಗಳು ನಿಮ್ಮ ಗುರಿಯನ್ನು ತಲುಪುವಲ್ಲಿ ಸಹಾಯ ಮಾಡುತ್ತವೆ. ಆದ್ದರಿಂದ ಇನ್ಮುಂದೆ ಇಂಥ ಎಲ್ಲ ತಂತ್ರಗಳ ಬಗ್ಗೆಯೂ ಗಮನ ಹರಿಸುವುದನ್ನು ಮರೆಯಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ