• Home
  • »
  • News
  • »
  • jobs
  • »
  • Typing Speed: ಉದ್ಯೋಗಿಗಳೇ, ಟೈಪಿಂಗ್ ಕಿರಿಕಿರಿ ಎನಿಸುತ್ತಿದ್ದರೆ ಈ 5 ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

Typing Speed: ಉದ್ಯೋಗಿಗಳೇ, ಟೈಪಿಂಗ್ ಕಿರಿಕಿರಿ ಎನಿಸುತ್ತಿದ್ದರೆ ಈ 5 ಸಿಂಪಲ್ ಟ್ರಿಕ್ಸ್ ಬಳಸಿ ಸಾಕು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನೌಕರರು ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಟೈಪಿಂಗ್ ಕೌಶಲ್ಯಗಳ ಅಗತ್ಯವಿದೆ. ಹಾಗಾಗಿ ಟೈಪಿಂಗ್ ವೇಗವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ ನೋಡಿ.

  • Share this:

    ನಮಗೆ ತಿಳಿದಿರುವಂತೆ, ಈಗಿನ ಬಹುತೇಕ ಕೆಲಸಗಳು ಎಲ್ಲವೂ ಕಂಪ್ಯೂಟರ್ ನಲ್ಲಿಯೇ (Computer) ನಡೆಯುತ್ತವೆ. ಹಾಗಾಗಿ ಮೊದಲಿನಂತೆ ಹಾಳೆಯ ಮೇಲೆ ಅಥವಾ ನೋಟ್ ಬುಕ್ ನಲ್ಲಿ ಪೆನ್ ನಿಂದ ಬರೆಯೋ ಕೆಲಸಗಳು ತೀರಾ ಕಡಿಮೆ ಯಾಗಿವೆ ಅಂತ ಹೇಳಬಹುದು. ಎಲ್ಲವೂ ಕಂಪ್ಯೂಟರ್ ನಲ್ಲಿಯೇ ಮಾಡುವಂತಹ ಕೆಲಸಗಳಾಗಿದ್ದು, ಇದನ್ನು ಮಾಡಲು ಉದ್ಯೋಗಿಗಳಿಗೆ ಟೈಪಿಂಗ್ (Typing) ಗೊತ್ತಿರುವುದು ತುಂಬಾನೇ ಅವಶ್ಯಕವಾಗಿದೆ ಅಂತ ಹೇಳಬಹುದು.


    ಈ ಸ್ಪರ್ಧಾತ್ಮಕ ಯುಗದಲ್ಲಿ, ಒಬ್ಬ ವ್ಯಕ್ತಿಯು ಉತ್ತಮವಾದ ಟೈಪಿಂಗ್  ಕೌಶಲ್ಯಗಳನ್ನು ಹೊಂದಿರುವುದು ತುಂಬಾನೇ ಮುಖ್ಯವಾಗುತ್ತದೆ. ಆದಾಗ್ಯೂ, ಹೆಚ್ಚಿನ ಜನರು ಮತ್ತು ಸಂಸ್ಥೆಗಳು ಕೆಲಸವನ್ನು ಪೂರ್ಣಗೊಳಿಸಲು ಇನ್ನೂ ಹಸ್ತಚಾಲಿತ ಟೈಪಿಂಗ್ ಅನ್ನು ಬಳಸುತ್ತವೆ. ನೀವು ಸರ್ಕಾರಿ ಪರೀಕ್ಷೆ ಆಕಾಂಕ್ಷಿಯಾಗಿದ್ದರೆ, ಟೈಪಿಂಗ್ ವೇಗವು ನೀವು ಹೊಂದಿರಬೇಕಾದ ನಿರ್ಣಾಯಕ ಕೌಶಲ್ಯವಾಗುತ್ತದೆ.


    ಹೆಚ್ಚಿನ ಸ್ಪರ್ಧಾತ್ಮಕ ಪರೀಕ್ಷೆಗಳು ಟೈಪಿಂಗ್ ವೇಗವನ್ನು ಒಳಗೊಂಡಿರುವುದರಿಂದ ಮತ್ತು ಸರ್ಕಾರಿ ನೌಕರರು ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಟೈಪಿಂಗ್ ಕೌಶಲ್ಯಗಳ ಅಗತ್ಯವಿದೆ. ಹಾಗಾದರೆ ಟೈಪಿಂಗ್ ವೇಗವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಅಂತ ಅನೇಕರು ಕೇಳುವುದುಂಟು. ಟೈಪಿಂಗ್ ವೇಗವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ ನೋಡಿ.




    • ಹೀಗೆ ಮಾಡಿದರೆ ನಿಮ್ಮ ಟೈಪಿಂಗ್ ವೇಗವು ಹೆಚ್ಚುತ್ತದೆ


    ಯಾವುದೇ ವ್ಯಕ್ತಿಯು ಟೈಪ್ ಮಾಡಲು ಪ್ರಾರಂಭಿಸಿದ ದಿನವೇ ತುಂಬಾನೇ ವೇಗವನ್ನು ಪಡೆಯಲು ಸಾಧ್ಯವಿಲ್ಲ. ವೇಗವನ್ನು ಹೆಚ್ಚಿಸಿಕೊಳ್ಳಲು ವ್ಯಕ್ತಿಯು ಅಭ್ಯಾಸ ಮಾಡಬೇಕು ಮತ್ತು ನಿರಂತರವಾಗಿ ಕಠಿಣ ಪರಿಶ್ರಮ ಮಾಡಬೇಕಾಗುತ್ತದೆ. ನಿಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುವ ಕೆಲವು ಅಗತ್ಯ ಸಲಹೆಗಳನ್ನು ನಾವು ಇಲ್ಲಿ ನೀಡಿದ್ದೇವೆ ನೋಡಿ.


    ನಿಮ್ಮ ಬೆರಳುಗಳನ್ನು ಸರಿಯಾಗಿ ಕೀ ಗಳ ಮೇಲೆ ಇರಿಸಿ


    ನೀವು ಶಾಲೆಗೆ ಹೋಗಲು ಶುರು ಮಾಡಿದಾಗ ಕಲಿಯುವ ಮೊದಲ ವಿಷಯವೆಂದರೆ ಅದು ವರ್ಣಮಾಲೆಗಳು ಅಂತ ಹೇಳಬಹುದು. ಯಾವುದೇ ರೀತಿಯ ಒಂದು ಪದವನ್ನು ಓದಲು ಮತ್ತು ಅರ್ಥ ಮಾಡಿಕೊಳ್ಳಲು ವರ್ಣಮಾಲೆಗಳನ್ನು ಕಲಿಯುವುದು ತುಂಬಾನೇ ಮುಖ್ಯವಾಗಿದೆ.


    ಅಂತೆಯೇ, ನೀವು ಮೊದಲು ಟೈಪ್ ಮಾಡಲು ಪ್ರಾರಂಭಿಸಿದಾಗ, ನಿಮ್ಮ ಬೆರಳುಗಳನ್ನು ಕೀಲಿಮಣೆಯ ಮೇಲೆ ಇರಿಸಲು ಸರಿಯಾದ ತಂತ್ರಗಳನ್ನು ನೀವು ತಿಳಿದುಕೊಳ್ಳಬೇಕು.


    ಯಾವುದೇ ಬೆರಳಿನಿಂದ ಯಾದೃಚ್ಛಿಕವಾಗಿ ಕೀಲಿಗಳನ್ನು ಒತ್ತಲು ಪ್ರಾರಂಭಿಸಬೇಡಿ. ನಿಮ್ಮ ಎಡಗೈಯ ಪಿಂಕಿ ಬೆರಳನ್ನು (ಕಿರುಬೆರಳು) "A" ಕೀಲಿಯ ಮೇಲೆ ಇರಿಸಿ ಮತ್ತು ಎರಡೂ ಕೈಗಳ ಎಲ್ಲಾ ಬೆರಳುಗಳನ್ನು ಒಂದೇ ಸಾಲಿನಲ್ಲಿ ಜೋಡಿಸಿ. ನಿಮ್ಮ ಹೆಬ್ಬೆರಳುಗಳನ್ನು ಯಾವುದೇ ಕೀಲಿಯ ಮೇಲೆ ಇಡಬೇಡಿ ಮತ್ತು ಎರಡೂ ಕೈಗಳ ಬೆರಳುಗಳ ನಡುವೆ "G" ಮತ್ತು "H" ಕೀಲಿಗಳನ್ನು ಮಧ್ಯೆ ಹಾಗೆಯೇ ಬಿಡಿ.


    ಇದನ್ನೂ ಓದಿ: Workplace Rules: ರಾಜಕೀಯ, ಡಿವೋರ್ಸ್ ಸೇರಿದಂತೆ ಈ ವಿಷಯಗಳ ಬಗ್ಗೆ ಆಫೀಸ್​ನಲ್ಲಿ ಮಾತನಾಡಲೇ ಬೇಡಿ


    ಸ್ಪೇಸ್ ಕೀಲಿಗಾಗಿ ನಿಮ್ಮ ಹೆಬ್ಬೆರಳನ್ನು ಬಳಸಿ. ಶಿಫ್ಟ್, ಆಲ್ಟ್ ಮತ್ತು ಎಂಟರ್ ಒತ್ತಲು ನೀವು ನಿಮ್ಮ ಪಿಂಕಿ ಬೆರಳುಗಳನ್ನು ಬಳಸಬಹುದು. QWERTY ಕೀ ಪ್ಲೇಸ್ ಮೆಂಟ್ ಅನ್ನು ಭಾರತದ ಹೆಚ್ಚಿನ ಕೀಲಿಮಣೆಗಳಲ್ಲಿ ಕಾಣಬಹುದು ಮತ್ತು ಈ ಫಿಂಗರ್ ಪೊಸಿಷನಿಂಗ್ ಅದಕ್ಕೆ ಮಾತ್ರ ಅನ್ವಯಿಸುತ್ತದೆ.


    ಉತ್ತಮ ಭಂಗಿಯನ್ನು ಹೊಂದಿರಿ


    ನಿಮ್ಮನ್ನು ಸಕ್ರಿಯವಾಗಿರಿಸಲು ಮತ್ತು ಯಾವುದೇ ದೈಹಿಕ ಸಮಸ್ಯೆಗಳನ್ನು ತಪ್ಪಿಸಲು ಉತ್ತಮ ಭಂಗಿಯು ಮುಖ್ಯವಾಗಿದೆ. ಹಾಸಿಗೆ ಅಥವಾ ಮಂಚದ ಮೇಲೆ ಮಲಗಿಕೊಂಡು ಟೈಪ್ ಮಾಡಬೇಡಿ.




    ಯಾವಾಗಲೂ ನಿಮ್ಮ ಟೇಬಲ್ ಮತ್ತು ಡೆಸ್ಕ್ ಮೇಲೆ ಕುಳಿತುಕೊಂಡು ಕೆಲಸ ಮಾಡಲು ಪ್ರಯತ್ನಿಸಿ. ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳುವುದು ಬೆರಳುಗಳನ್ನು ಉತ್ತಮವಾಗಿ ಇರಿಸಲು ನಿಮಗೆ ಸಹಾಯ ಮಾಡುತ್ತದೆ. ಸ್ಕ್ರೀನ್ ನಿಮ್ಮಿಂದ ಕನಿಷ್ಠ 15 ಇಂಚುಗಳಷ್ಟು ದೂರದಲ್ಲಿರಲಿ ಮತ್ತು ಯಾವಾಗಲೂ ನಿಮ್ಮ ಬೆನ್ನನ್ನು ನೇರವಾಗಿರಿಸಿಕೊಳ್ಳಿ.


    ಕೀಲಿಮಣೆಯನ್ನು ನೋಡಬೇಡಿ


    ಅನೇಕ ಜನರು ಟೈಪ್ ಮಾಡುವಾಗ ಪದೇ ಪದೇ ಕೀಬೋರ್ಡ್ ಅನ್ನು ನೋಡುತ್ತಲೇ ಇರುತ್ತಾರೆ, ಆದರೆ ಅದು ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ ಅಂತ ಅವರಿಗೆ ಗೊತ್ತಿಲ್ಲ.


    ಟೈಪ್ ಮಾಡುವಾಗ ನೀವು ಸ್ಕ್ರೀನ್ ಅನ್ನು ನೋಡುತ್ತೀರಿ, ಇದು ನಿಮ್ಮ ಕಾಗುಣಿತ ದೋಷಗಳು ಅಥವಾ ಯಾವುದೇ ತಪ್ಪುಗಳನ್ನು ತಕ್ಷಣವೇ ನೋಡಲು ಮತ್ತು ಅವುಗಳನ್ನು ಸರಿ ಮಾಡಲು ಸಹಾಯ ಮಾಡುತ್ತದೆ.


    ಆರಂಭದಲ್ಲಿ ಇದು ಸ್ವಲ್ಪ ಕಷ್ಟಕರವೆಂದು ತೋರುತ್ತದೆ, ಆದರೆ ಸಮಯದೊಂದಿಗೆ ನಿಮಗೆ ಇದು ಅಭ್ಯಾಸವಾಗಿ ಬಿಡುತ್ತದೆ. ನೀವು ಕೀಲಿಮಣೆಯನ್ನು ನೋಡಿದಾಗ ನೀವು ಕೀಲಿಗಳಿಗಾಗಿ ಹುಡುಕುತ್ತೀರಿ ಮತ್ತು ನಂತರ ಅವುಗಳನ್ನು ಒತ್ತುತ್ತೀರಿ. ಸ್ಕ್ರೀನ್ ನೋಡುವುದು ಕೀ ಗಳ ಸ್ಥಳವನ್ನು ನೆನಪಿಟ್ಟುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.


    ಪ್ರತಿದಿನ ಇದನ್ನು ಅಭ್ಯಾಸ ಮಾಡಿ


    ನೀವು ಸಾಕಷ್ಟು ಅಭ್ಯಾಸ ಮಾಡದಿದ್ದರೆ, ಪ್ರತಿಯೊಂದು ಕೆಲಸವೂ ನಿಮಗೆ ಕಷ್ಟಕರವಾಗಿಯೇ ತೋರುತ್ತದೆ. ನಿಯಮಿತ ಅಭ್ಯಾಸವಿಲ್ಲದೆ, ನೀವು ಎಂದಿಗೂ ವೇಗವನ್ನು ಪಡೆಯಲು ಸಾಧ್ಯವಾಗುವುದಿಲ್ಲ.




    ಕನಿಷ್ಠ ಒಂದು ಪ್ಯಾರಾ ಈ ರೀತಿಯಾಗಿ ಪ್ರತಿದಿನ ಅಭ್ಯಾಸ ಮಾಡಿ. ಸುಲಭ ಪದಗಳಿಂದ ನಿಧಾನವಾಗಿ ಪ್ರಾರಂಭಿಸಿ ನಂತರ ಕಠಿಣ ಮತ್ತು ದೀರ್ಘ ಪ್ಯಾರಾಗ್ರಾಫ್ ಗಳೊಂದಿಗೆ ಅಭ್ಯಾಸ ಮಾಡಿ. ನೀವು ಪ್ರತಿದಿನ ಟೈಪ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡರೆ, ನಿಮ್ಮ ಟೈಪಿಂಗ್ ವೇಗ ಹೆಚ್ಚುತ್ತದೆ.


    ಟೈಪಿಂಗ್ ವೇಗ ಎಷ್ಟಿದೆ ಅಂತ ನೋಡಲು ಸಾಫ್ಟ್‌ವೇರ್ ಬಳಸಿ


    ನೀವು ಪ್ರತಿದಿನ ಟೈಪ್ ಮಾಡಲು ಪ್ರಾರಂಭಿಸಿದಾಗ, ನಿಮ್ಮ ಟೈಪಿಂಗ್ ವೇಗದಲ್ಲಿನ ಬೆಳವಣಿಗೆಯನ್ನು ಗುರುತಿಸಲು ನಿಮಗೆ ಸಾಧ್ಯವಾಗದಿರಬಹುದು. ನಿಮ್ಮ ಟೈಪಿಂಗ್ ವೇಗ ಮತ್ತು ನಿಮ್ಮ ವಿಷಯದ ನಿಖರತೆಯನ್ನು ವಿಶ್ಲೇಷಿಸಲು ನಿಮಗೆ ಸಹಾಯ ಮಾಡುವ ಹೆಚ್ಚಿನ ಉಚಿತ ಸಾಫ್ಟ್‌ವೇರ್ ಆನ್ಲೈನ್ ನಲ್ಲಿ ಲಭ್ಯವಿದೆ.


    ಅಂತಹ ಸಾಫ್ಟ್‌ವೇರ್ ಬಳಸಿ ಏಕೆಂದರೆ ಅವು ನಿಮ್ಮ ಕಾರ್ಯಕ್ಷಮತೆಯ ರಿಪೋರ್ಟ್ ಕಾರ್ಡ್ ಅನ್ನು ನಿಮಗೆ ನೀಡುತ್ತವೆ ಮತ್ತು ನಿಮ್ಮ ತಪ್ಪುಗಳನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.


    ನಿಖರತೆಯ ಮೇಲೆ ಗಮನ ಹರಿಸಿ


    ಟೈಪಿಂಗ್ ವೇಗದಷ್ಟೇ, ನಿಖರತೆಯೂ ಸಹ ತುಂಬಾನೇ ಮುಖ್ಯವಾಗುತ್ತದೆ. ನೀವು ಕಡಿಮೆ ಸಮಯದಲ್ಲಿ ಅನೇಕ ತಪ್ಪುಗಳಿರುವ ಪಠ್ಯವನ್ನು ಟೈಪ್ ಮಾಡಿದರೆ ಅದು ಸಮಯ ವ್ಯರ್ಥ ಅಂತ ಹೇಳಬಹುದು.




    ಟೈಪ್ ಮಾಡುವಾಗ ಕನಿಷ್ಠ ತಪ್ಪುಗಳನ್ನು ಮಾಡಲು ಪ್ರಯತ್ನಿಸಿ ಮತ್ತು ತಪ್ಪುಗಳ ಮಾದರಿಯನ್ನು ಗುರುತಿಸಲು ಪ್ರಯತ್ನಿಸಿ. ನೀವು ಮತ್ತೆ ಮತ್ತೆ ನಿರ್ದಿಷ್ಟವಾದ ವರ್ಣಮಾಲೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ, ನಂತರ ಆ ನಿರ್ದಿಷ್ಟ ಪದ ಅಥವಾ ವರ್ಣಮಾಲೆಯನ್ನು ಟೈಪ್ ಮಾಡುವಾಗ ಹೆಚ್ಚು ಗಮನ ಹರಿಸಿ.


    • ಟೈಪಿಂಗ್ ವೇಗವನ್ನು ಹೆಚ್ಚಿಸಲು ವ್ಯಾಯಾಮಗಳು


    ಟೈಪಿಂಗ್ ವೇಗವನ್ನು ಹೆಚ್ಚಿಸಲು ನೀವು ಪ್ರತಿದಿನ ಮಾಡಬಹುದಾದ ವಿವಿಧ ವ್ಯಾಯಾಮಗಳಿವೆ. ನಿಮ್ಮ ಟೈಪಿಂಗ್ ಕೌಶಲ್ಯಗಳನ್ನು ಹೆಚ್ಚಿಸಲು ಕೆಲವು ಪರಿಣಾಮಕಾರಿ ವ್ಯಾಯಾಮಗಳನ್ನು ಇಲ್ಲಿ ತಿಳಿಯಿರಿ.


    ನಿಮ್ಮ ಕೈಗಳನ್ನು ಕವರ್ ಮಾಡಿಕೊಳ್ಳಿ


    ನಾವು ಮೊದಲೇ ಹೇಳಿದಂತೆ, ನಿಮ್ಮ ವೇಗವನ್ನು ಹೆಚ್ಚಿಸಲು ಟೈಪ್ ಮಾಡುವಾಗ ಸ್ಕ್ರೀನ್ ನೋಡುವುದು ಬಹಳ ಮುಖ್ಯ. ನೀವು ಬಯಸದಿದ್ದರೂ, ನಿಮ್ಮ ಕಣ್ಣುಗಳು ಆರಂಭದಲ್ಲಿ ಕೀಲಿಮಣೆಯನ್ನು ನೋಡುತ್ತವೆ. ಇದನ್ನು ತಪ್ಪಿಸಲು, ನಿಮ್ಮ ಕೈಗಳನ್ನು ಕೀಲಿಮಣೆಯ ಮೇಲೆ ಇರಿಸಿ ಮತ್ತು ಅದನ್ನು ಯಾವುದೇ ಬಟ್ಟೆಯ ತುಂಡಿನಿಂದ ಸರಿಯಾಗಿ ಕವರ್ ಮಾಡಿಕೊಳ್ಳಿರಿ.


    ನೀವು ಯಾವುದೇ ಕೀಲಿಗಳನ್ನು ಮತ್ತು ನಿಮ್ಮ ಕೈಯನ್ನು ನೋಡಲು ಸಾಧ್ಯವಾಗದಂತೆ ಸರಿಯಾಗಿ ಕವರ್ ಮಾಡಿ. ಇದು ಆರಂಭದಲ್ಲಿ ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ.


    ಈ ಪಠ್ಯವನ್ನು ನೀವು ಆರಂಭದಲ್ಲಿ ಅಭ್ಯಾಸ ಮಾಡಿ


    ನೀವು ಆರಂಭಿಕರಾಗಿದ್ದರೆ ಮತ್ತು ಈಗಷ್ಟೇ ಟೈಪ್ ಮಾಡಲು ಪ್ರಾರಂಭಿಸಿದರೆ. "ದಿ ಕ್ವಿಕ್ ಬ್ರೌನ್ ಫಾಕ್ಸ್ ಜಂಪ್ಸ್ ಓವರ್ ಎ ಲೇಝಿ ಡಾಗ್” ಎಂಬ ಲೈನ್ ಅನ್ನು ದಿನಕ್ಕೆ ಕನಿಷ್ಠ 50 ಬಾರಿ ಬರೆಯಬೇಕು.




    ಈ ಲೈನ್ ಎಲ್ಲಾ 26 ಅಕ್ಷರಗಳನ್ನು ಹೊಂದಿದೆ, ಇದು ನೀವು ಎಲ್ಲಾ ಕೀಲಿಗಳನ್ನು ಗುರುತಿಸುವಂತೆ ಮಾಡುತ್ತದೆ. ಪ್ರತಿ ಬೆರಳಿನ ಮೇಲಿನ ಕೀಲಿಗಳನ್ನು ಗುರುತಿಸಲು ನಿಮಗೆ ಸಾಧ್ಯವಾಗುತ್ತದೆ. ಒಂದೇ ಲೈನ್ ಅನ್ನು ಅನೇಕ ಬಾರಿ ಟೈಪ್ ಮಾಡುವುದು ಬೇಸರ ತರಿಸಬಹುದು, ಆದರೆ ಇದು ಖಂಡಿತವಾಗಿಯೂ ನಿಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸುತ್ತದೆ.


    ಟೈಮರ್ ಹೊಂದಿಸಿಕೊಳ್ಳಿ


    ವಾರಕ್ಕೊಮ್ಮೆ ಸೀಮಿತ ಸಮಯದಲ್ಲಿ ಪ್ಯಾಸೇಜ್ ಅನ್ನು ಟೈಪ್ ಮಾಡಲು ಪ್ರಯತ್ನಿಸಿ. ಸೀಮಿತ ಸಮಯದಲ್ಲಿ ಟೈಪ್ ಮಾಡುವುದರಿಂದ ನಿಮ್ಮ ವೇಗ ಮತ್ತು ಒತ್ತಡದಲ್ಲಿ ನೀವು ಮಾಡುವ ತಪ್ಪುಗಳ ಬಗ್ಗೆ ನಿಮಗೆ ಕಲ್ಪನೆ ಸಿಗುತ್ತದೆ.


    ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಯು ಒಂದು ನಿರ್ದಿಷ್ಟ ಅವಧಿಯನ್ನು ಹೊಂದಿರುತ್ತದೆ, ಅದರಲ್ಲಿ ನೀವು ನೀಡಿದ ಬರಹದ ತುಣುಕನ್ನು ಟೈಪ್ ಮಾಡಬೇಕಾಗುತ್ತದೆ. ಸಮಯದ ಒತ್ತಡದಿಂದಾಗಿ ಅನೇಕ ಅಭ್ಯರ್ಥಿಗಳು ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ಪ್ರತಿಯೊಂದು ತಪ್ಪಾದ ಕಾಗುಣಿತಕ್ಕೆ ನೆಗೆಟಿವ್ ಅಂಕಗಳು ಇರುತ್ತವೆ.

    Published by:Kavya V
    First published: