• ಹೋಂ
  • »
  • ನ್ಯೂಸ್
  • »
  • Jobs
  • »
  • Career Security: ನಿಮ್ಮ ವೃತ್ತಿ ಅಪಾಯದಲ್ಲಿದೆ ಎಂದು ತಿಳಿದ ಕೂಡಲೇ ಏನು ಮಾಡಬೇಕೆಂದು ತಿಳಿಯಿರಿ

Career Security: ನಿಮ್ಮ ವೃತ್ತಿ ಅಪಾಯದಲ್ಲಿದೆ ಎಂದು ತಿಳಿದ ಕೂಡಲೇ ಏನು ಮಾಡಬೇಕೆಂದು ತಿಳಿಯಿರಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಿಮ್ಮ ವೃತ್ತಿಗೆ ಅಪಾಯವಿದೆ ಎಂಬುದು ಅರಿವಾದೊಡನೆ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ವೃತ್ತಿ ಬದಲಾವಣೆಯಾಗಿದೆ.

  • Share this:

ವೃತ್ತಿ ಜೀವನದಲ್ಲಿ (Career) ವೃತ್ತಿ ಭದ್ರತೆ ಎಂಬುದು ಹೆಚ್ಚು ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಉದ್ಯೋಗಗಳು ನಷ್ಟ (Layoffs) ಹೊಂದುತ್ತಿರುವುದು ಅಧಿಕವಾಗಿರುವುದರಿಂದ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಉದ್ಯೋಗಿಯೂ (Employee) ಕಾಳಜಿ ಹಾಗೂ ಜಾಗರೂಕತೆ ವಹಿಸಬೇಕು.


ನಿಮ್ಮ ವೃತ್ತಿಗೆ ಅಪಾಯವಿದೆ ಎಂಬುದು ಅರಿವಾದೊಡನೆ ನೀವು ಮಾಡಬೇಕಾದ್ದ ಮೊದಲ ಕೆಲಸವೆಂದರೆ ವೃತ್ತಿ ಬದಲಾವಣೆಯಾಗಿದೆ. ಉನ್ನತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಇನ್ನಷ್ಟು ಸುಧಾರಿತ ವೃತ್ತಿ ರಂಗವನ್ನು ಆಯ್ದುಕೊಳ್ಳುವುದು ಇಲ್ಲವೇ ಉತ್ತಮ ಸಂಸ್ಥೆಯನ್ನು ಅರಸುವುದು ಮೊದಲಾದ ನಿರ್ಧಾರಗಳನ್ನು ಉದ್ಯೋಗಿ ತೆಗೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಉದ್ಯೋಗಿ ವೃತ್ತಿ ಭದ್ರತೆಯನ್ನು ಹೇಗೆ ಮಾಡಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ


1) ನಿರ್ಧಾರ ತೆಗೆದುಕೊಳ್ಳುವ ಮೊದಲು ಮಾಹಿತಿ ಸಂಗ್ರಹಣೆ


ಈ ಮೊದಲೇ ತಿಳಿಸಿದಂತೆ ನೀವು ಇನ್ನೊಂದು ಸಂಸ್ಥೆ ಅಥವಾ ಇನ್ನೊಂದು ಉದ್ಯೋಗಕ್ಕೆ ಬದಲಾಯಿಸುವವರಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ. ನೀವು ಯಾವ ಸಂಸ್ಥೆಗೆ ಸೇರಲು ಬಯಸಿದ್ದೀರಿ ನಿಮ್ಮ ಮುಂದಿನ ಗುರಿ ಏನು ಎಂಬ ಅಂಶಗಳನ್ನು ನಿರ್ಧರಿಸಿಕೊಳ್ಳಿ.
2) ನೀವು ತಲುಪಬೇಕಾದ ಗುರಿಗಳೇನು ಎಂಬುದನ್ನು ಮನದಟ್ಟು ಮಾಡಿಕೊಳ್ಳುವುದು


ನೀವು ಮಾಡುತ್ತಿರುವ ಉದ್ಯೋಗದಲ್ಲಿ ಅಪಾಯವಿದೆ ಅಥವಾ ವೃತ್ತಿ ಭದ್ರತೆ ಇಲ್ಲ ಎಂದಾದರೆ ಅಂತಹ ಉದ್ಯೋಗವನ್ನು ಬದಲಾಯಿಸಿಕೊಳ್ಳುವುದು ಉತ್ತಮ ಸಲಹೆಯಾಗಿದೆ. ಮಾಹಿತಿ ಸಂಗ್ರಹಣೆಯ ನಂತರ ವೃತ್ತಿಗೆ ಬೇಕಾದ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಿ. ನೈಪುಣ್ಯಗಳನ್ನು ಅರಿತುಕೊಳ್ಳಿ


ನೀವು ತಲುಪಬೇಕಾದ ಗುರಿಯನ್ನು ನಿಶ್ಚಯಿಸಿಕೊಳ್ಳಿ. ಮಾನದಂಡಗಳಿಗೆ ಅನುಸಾರವಾಗಿ ಗುರಿಯನ್ನು ಪೂರೈಸಿಕೊಳ್ಳಿ. ಸಂಬಳದ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಪ್ರಸ್ತುತ ಸಂಸ್ಥೆ ಹಾಗೂ ಇನ್ನು ಹೋಗಲು ನಿರ್ಧರಿಸಿರುವ ಸಂಸ್ಥೆ ನೀಡುತ್ತಿರುವ ಪ್ಯಾಕೇಜ್‌ನ ತುಲನೆ ಮಾಡಿ.


ನೀವು ಹೋಗುತ್ತಿರುವ ಸಂಸ್ಥೆಯಲ್ಲಿ ನಿಮ್ಮ ವೃತ್ತಿಗೆ ಬೆಳವಣಿಗೆ ಇದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ವೃತ್ತಿ ಬೆಳವಣಿಗೆಯನ್ನು ಇನ್ನಷ್ಟು ಹೆಚ್ಚಿಸಲು ಏನು ಮಾಡಬಹುದು ಎಂಬ ಅಂಶಗಳತ್ತ ಹೆಚ್ಚು ಗಮನ ಹಾಗೂ ಆದ್ಯತೆ ನೀಡಿ.


ಸಂಬಳ, ವೃತ್ತಿ ಭದ್ರತೆ, ಅಭಿವೃದ್ಧಿ, ಹೊಸ ವಿಷಯಗಳನ್ನು ಕಲಿಯುವ ಅವಕಾಶ, ಕೆಲಸಮಾಡುವ ಆರೋಗ್ಯಕರ ವಾತಾವರಣ, ಕೆಲಸ ಹೀಗೆ ಪ್ರತಿಯೊಂದು ಅಂಶಗಳಿಗೂ ಪ್ರಧಾನ್ಯತೆ ನೀಡುವ ಮೂಲಕ ವೃತ್ತಿ ಬದಲಾವಣೆ ಮಾಡಿ.


3) ಗುರಿ ಸಾಧಿಸಲು ಸಹಾಯಕವಾಗಿರುವ ಆಯ್ಕೆಗಳನ್ನು ರಚಿಸಿಕೊಳ್ಳಿ


ವೃತ್ತಿ ಬದಲಾವಣೆ ಎಂಬುದು ನಿಮಗೆ ಅನುಭವ ಇರುವ ಹಾಗೂ ಕೌಶಲ್ಯ ಇರುವ ಉದ್ಯೋಗಗಳನ್ನೇ ಆಯ್ದುಕೊಳ್ಳುವುದು ಎಂದಲ್ಲ. ಬೇರೆ ಬೇರೆ ವೃತ್ತಿಗಳನ್ನು ಆಯ್ಕೆಮಾಡುವ ಮೂಲಕ ವೃತ್ತಿ ಸುಧಾರಣೆ ಮಾಡಿಕೊಳ್ಳಬಹುದು ಅಂತೆಯೇ ಉದ್ಯೋಗ ರಂಗದಲ್ಲಿ ಹೊಸದನ್ನು ಕಲಿಯುವ ಅವಕಾಶ ಸಾಧಿಸಿಕೊಳ್ಳಬಹುದಾಗಿದೆ.‘


ಇದನ್ನೂ ಓದಿ: Success Story: ರೈತನ ಮಗಳಿಗೆ 65 ಲಕ್ಷ ಸಂಬಳದ ಪ್ಯಾಕೇಜ್; ಪ್ರತಿಭಾವಂತೆ ರಮ್ಯಾಗೆ ಬಂಪರ್ ಆಫರ್


ನೀವು ಉದ್ಯೋಗ ಬದಲಾವಣೆ ಮಾಡುವ ಮುನ್ನ ಯಾವ ಕ್ಷೇತ್ರಕ್ಕೆ ಹೋಗಬೇಕು ಎಂಬುದನ್ನು ನಿರ್ಧರಿಸಿ. ಪ್ರಸ್ತುತ ಉದ್ಯೋಗದಲ್ಲಿ ಮುಂದುವರಿಯುವುದು, ಬೇರೆ ಸಂಸ್ಥೆಯಲ್ಲಿ ಇದೇ ಉದ್ಯೋಗವನ್ನು ಮುಂದುವರಿಸುವುದು, ಬೇರೆಯೇ ಕೌಶಲ್ಯಗಳನ್ನು ಕಲಿತುಕೊಂಡು ಹೊಸ ಉದ್ಯೋಗವನ್ನರಸುವುದು ಹೀಗೆ ಬೇರೆ ಬೇರೆ ಆಯ್ಕೆಗಳನ್ನು ಮುಂದಿಟ್ಟುಕೊಳ್ಳಿ.


4) ಆಯ್ಕೆಮಾಡಿರುವ ಅಂಶಗಳನ್ನು ಅನುಸರಿಸಿ 


ಬೇರೆ ಬೇರೆ ಆಯ್ಕೆಗಳನ್ನು ಮುಂದಿಟ್ಟುಕೊಂಡ ನಂತರ ಅದನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಎಂಬುದನ್ನು ಯೋಜಿಸಿಕೊಳ್ಳಿ. ಯಾವ ಉದ್ಯೋಗದಲ್ಲಿ ಹೆಚ್ಚು ಸಂಬಳ ಹಾಗೂ ವೃತ್ತಿ ಭದ್ರತೆ ಇದೆ ಎಂಬುದನ್ನು ಅರಿತುಕೊಳ್ಳಿ.


ವೃತ್ತಿಯಲ್ಲಿ ಸುಧಾರಣೆ ಅವಶ್ಯಕವಾಗಿರುವುದರಿಂದ ಮುಂದಿನ ಭವಿಷ್ಯಕ್ಕೆ ಈ ಬದಲಾವಣೆ ಹೇಗೆ ಸಹಕಾರಿ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಆದಷ್ಟು ಸಂಬಂಧಿತ ಕ್ಷೇತ್ರದಲ್ಲಿ ಸಂಪರ್ಕಗಳನ್ನು ರಚಿಸಿಕೊಳ್ಳಿ. ಹೊಸಬರ ಪರಿಚಯ ಮಾಡಿಕೊಳ್ಳಿ ಅವರಿಂದ ಕೌಶಲ್ಯಗಳನ್ನು ಕಲಿತುಕೊಳ್ಳಿ


5) ನಿರ್ಧಾರವನ್ನು ಅಳವಡಿಸಿಕೊಂಡ ನಂತರ ಮೌಲ್ಯಮಾಪನ ಮಾಡಿ


ಆಯ್ಕೆಮಾಡಿದ ನಿರ್ಧಾರಗಳನ್ನು ಅಳವಡಿಸಿಕೊಂಡ ನಂತರ ಅದರ ಪರಿಣಾಮವೇನು ಎಂಬುದನ್ನು ಅರಿತುಕೊಳ್ಳಿ. ವೃತ್ತಿಜೀವನದಲ್ಲಿ ಮುಂದುವರಿಯಲು ಈ ಆಯ್ಕೆಗಳು ಸಹಕಾರಿಯೇ ಎಂಬುದನ್ನು ತಿಳಿದುಕೊಳ್ಳಿ. ಮುಂದಿನ ಭವಿಷ್ಯದ ಉದ್ಯೋಗಕ್ಕೆ ನೆರವಾಗುವ ರೀತಿಯಲ್ಲಿ 4 ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ತರಬೇತಿ ಪಡೆದುಕೊಳ್ಳಿ.

top videos
    First published: