ಕೆಲವರಿಗೆ ತಾವು ಮಾಡುವ ಕೆಲಸ (Job) ಒಳ್ಳೆಯ ಸಂಬಳ (Salary) ತಂದು ಕೊಟ್ಟರೆ ಸಾಕು ಅಂತ ಆಲೋಚನೆ ಮಾಡಿದರೆ, ಇನ್ನೂ ಕೆಲವು ಜನರು ತಾವು ಮಾಡುವ ಕೆಲಸ ತಮಗೆ ತೃಪ್ತಿ ನೀಡಬೇಕು. ಅದು ಒಂದೇ ರೀತಿಯದ್ದಾಗಿರದೆ ತಮ್ಮ ಸೃಜನಶೀಲ ಪ್ರತಿಭೆಯನ್ನು (Talent) ತೋರಿಸಲು ಅವಕಾಶವಿರಬೇಕು ಅಂತ ಆಲೋಚನೆ ಇರುತ್ತದೆ. ಹೌದು.. ಕೆಲಸ ಒಂದೇ ರೀತಿಯದ್ದಾಗಿದ್ದು, ಅದರಲ್ಲಿ ಯಾವುದೇ ರೀತಿಯ ಹೊಸ ಆಲೋಚನೆಗಳನ್ನು ಮತ್ತು ಸೃಜನಶೀಲವಾಗಿ ಯೋಚನೆ ಮಾಡಲು ಅವಕಾಶವಿರದಿದ್ದರೆ, ಅನೇಕರಿಗೆ ಆ ಕೆಲಸ ಕೆಲವು ವರ್ಷಗಳ ನಂತರ ಬೋರ್ ಆಗುವುದಂತೂ ಗ್ಯಾರೆಂಟಿ ಅಂತ ಹೇಳಬಹುದು.
ತಮ್ಮ ಕ್ರಿಯೆಟಿವಿಟಿಯನ್ನು ತೋರಿಸಿಕೊಳ್ಳಬೇಕು ಅಂತ ಅಂದುಕೊಳ್ಳುವವರಿಗೆ ಅನೇಕ ರೀತಿಯ ವೃತ್ತಿ ಆಯ್ಕೆಗಳಿವೆ. ಇಲ್ಲಿ ನಾವು ಈ ಸೃಜನಶೀಲ ಪ್ರತಿಭೆ ಇರುವ ಜನರಿಗಾಗಿ ಐದು ಇಂಟರೆಸ್ಟಿಂಗ್ ಆದ ಆಫ್-ಬೀಟ್ ವೃತ್ತಿ ಆಯ್ಕೆಗಳ ಬಗ್ಗೆ ತಿಳಿಸಿದ್ದೇವೆ.
1. ಫುಡ್ ಸ್ಟೈಲಿಸ್ಟ್
ಫುಡ್ ಸ್ಟೈಲಿಸ್ಟ್ ಆಗಲು, ನಿಮ್ಮಲ್ಲಿ ಒಬ್ಬ ಶಿಲ್ಪಿ ಯೋಚನೆ ಮಾಡುವ ಶೈಲಿ ಇರಬೇಕು, ಒಳ್ಳೆಯ ಬಾಣಸಿಗರಾಗಿರಬೇಕು ಮತ್ತು ಒಳ್ಳೆ ಎಂಜಿನಿಯರ್ ತರಹ ಡಿಸೈನ್ ಮಾಡಬೇಕು. ದೃಶ್ಯ ಕಲೆಗಳು ಮತ್ತು ವಿವರಗಳಿಗೆ ಗಮನ ನೀಡುವ ಸಾಮರ್ಥ್ಯವನ್ನು ಹೊಂದಿರುವ ಜನರಿಗೆ ಇದು ಅತ್ಯುತ್ತಮವಾದ ವೃತ್ತಿಜೀವನದ ಆಯ್ಕೆಯಾಗಿದೆ.
ನಿಮಗೆ ಅಡುಗೆ ಮಾಡುವುದರಲ್ಲಿ ಮತ್ತು ಅದನ್ನು ಸುಂದರವಾಗಿ ಕಾಣುವಂತೆ ಡಿಸೈನ್ ಮಾಡಲು ಆಸಕ್ತಿ ಇದ್ದರೆ, ಇದು ನಿಮಗೆ ಹೇಳಿ ಮಾಡಿಸಿದ ಕೆಲಸ ಅಂತ ಹೇಳಬಹುದು. ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಪಾಕಶಾಲೆಯ ಕಲೆಗಳಲ್ಲಿ ಕೋರ್ಸ್ ಅನ್ನು ಮಾಡಿರಬೇಕು.
2. ಮದುವೆಯಲ್ಲಿ ಡ್ಯಾನ್ಸ್ ಹೇಳಿಕೊಡುವ ಕೊರಿಯೋಗ್ರಾಫರ್
ನಮ್ಮಲ್ಲಿ ಮದುವೆಗಳು ಡ್ಯಾನ್ಸ್, ಸಂಗೀತ ಮತ್ತು ಒಳ್ಳೆಯ ಊಟ ಇರದೆ ಅಪೂರ್ಣ ಅಂತಾನೆ ಹೇಳಲಾಗುತ್ತದೆ. ಮದುವೆ ಸಮಾರಂಭದಲ್ಲಿ ನವ ದಂಪತಿಗಳು ಈಗಂತೂ ಚೆನ್ನಾಗಿ ಡ್ಯಾನ್ಸ್ ಮಾಡಲು ಹಣ ನೀಡಿ ಒಬ್ಬ ಒಳ್ಳೆಯ ಕೊರಿಯೋಗ್ರಾಫರ್ ಅನ್ನು ನಿಯೋಜಿಸಿಕೊಳ್ಳುತ್ತಾರೆ.
ಮದುವೆ ಮನೆಯಲ್ಲಿ ದಂಪತಿಗಳು ಡ್ಯಾನ್ಸ್ ಮಾಡುವುದನ್ನು ನೋಡುವುದೇ ಒಂದು ಕಣ್ಣಿಗೆ ಹಬ್ಬವಿದ್ದಂತೆ. ಇದರಲ್ಲಿ ಹೆಚ್ಚು ಮೋಜಿನ ವಿಷಯವೆಂದರೆ ಅವರಿಗೆ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ಹೇಳಿಕೊಡುವುದು.
ಸಹಜವಾಗಿಯೇ ಎಲ್ಲಾ ದಂಪತಿಗಳಿಗೆ ಡ್ಯಾನ್ಸ್ ಮಾಡುವುದು ಗೊತ್ತಿರುವುದಿಲ್ಲ, ಆದ್ದರಿಂದ ಡ್ಯಾನ್ಸ್ ನಲ್ಲಿ ಉತ್ತಮ ತರಬೇತಿ ಪಡೆದ ಕೊರಿಯೋಗ್ರಾಫರ್ ಅವರಿಂದ ಡ್ಯಾನ್ಸ್ ಕಲಿಯುತ್ತಾರೆ. ಇದು ಅನೇಕರು ಆನಂದಿಸುವ ವೃತ್ತಿಯಾಗಿದೆ. ಇದು ನಿಮಗೆ ಒಳ್ಳೆಯ ಹಣವನ್ನು ಸಹ ನೀಡುತ್ತದೆ.
3. ಫೋಲೆ ಆರ್ಟಿಸ್ಟ್
ಈ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಅಥವಾ ಜಾಹೀರಾತುಗಳಲ್ಲಿ ಹಿನ್ನೆಲೆ ಶಬ್ದಗಳಾದ ಹೆಜ್ಜೆಗುರುತುಗಳ ಶಬ್ದಗಳು, ಕತ್ತಿಯನ್ನು ಹೊದಿಕೆಯಿಂದ ಎಳೆಯುವುದು, ಅಥವಾ ಗಾಳಿಯು ಹಾದು ಹೋಗುವಾಗ ಒಂದು ರೀತಿಯ ಶಬ್ದವನ್ನು ನೀವು ಗಮನಿಸಿರಬಹುದು. ಈ ಹಿನ್ನೆಲೆ ಧ್ವನಿಗಳನ್ನು ಫೋಲೆ ಕಲಾವಿದರು ರಚಿಸುತ್ತಾರೆ.
ಇದನ್ನೂ ಓದಿ: Wedding Planner Career: ವೆಡ್ಡಿಂಗ್ ಪ್ಲ್ಯಾನರ್ ಆಗುವುದು ಹೇಗೆ; ಲಕ್ಷ ಲಕ್ಷ ಆದಾಯ ಗಳಿಸುವ ವೃತ್ತಿ ಇದು
ಈ ಕ್ಷೇತ್ರವನ್ನು ಪ್ರವೇಶಿಸುವುದು ಅಷ್ಟೊಂದು ಸುಲಭವಲ್ಲ, ನೀವು ಇದನ್ನು ಕಲಿತುಕೊಳ್ಳಬೇಕೆಂದರೆ ಜನಪ್ರಿಯವಾದ ಫೋಲೆ ಕಲಾವಿದರ ಜೊತೆ ಕೆಲಸ ಮಾಡುವುದು ಸೂಕ್ತ.
4. ಭೂದೃಶ್ಯ ವಾಸ್ತುಶಿಲ್ಪಿ
ಉದ್ಯಾನಗಳು, ಆಟದ ಮೈದಾನಗಳು ಮತ್ತು ಇತರ ಹೊರಾಂಗಣ ಸ್ಥಳಗಳನ್ನು ವಿನ್ಯಾಸಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ವಾಸ್ತುಶಿಲ್ಪಿಗಳು ಇವರಾಗಿರುತ್ತಾರೆ. ಚಿಕ್ಕ ಪುಟ್ಟ ಕಂಪನಿಗಳು, ಸರ್ಕಾರದ ಕಛೇರಿಗಳಲ್ಲಿ, ಖಾಸಗಿ ಮನೆಗಳಲ್ಲಿ ಮತ್ತು ಮನರಂಜನಾ ಒದಗಿಸುವ ಸ್ಥಳಗಳಲ್ಲಿ ಇವರ ಪರಿಣತಿಗಾಗಿ ಇವರನ್ನು ನೇಮಿಸಿಕೊಳ್ಳುತ್ತಾರೆ.
ಭೂದೃಶ್ಯ ವಾಸ್ತುಶಿಲ್ಪಿಯಾಗಿ, ನೀವು ಗ್ರಾಹಕರನ್ನು ಭೇಟಿ ಮಾಡಬೇಕಾಗುತ್ತದೆ ಮತ್ತು ಸೈಟ್ ಯೋಜನೆಗಳು ಮತ್ತು ವೆಚ್ಚದ ಅಂದಾಜುಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಈ ಕ್ಷೇತ್ರವನ್ನು ಪ್ರವೇಶಿಸಲು, ನೀವು ಭೂದೃಶ್ಯ ವಾಸ್ತುಶಿಲ್ಪದಲ್ಲಿ ಬ್ಯಾಚುಲರ್ ಪದವಿ ಸಹ ಪಡೆಯಬೇಕಾಗುತ್ತದೆ.
5. ಮೇಕಪ್ ಕಲಾವಿದ
ಅತ್ಯಂತ ಸೃಜನಶೀಲ ಮೇಕಪ್ ನೋಟವನ್ನು ಹೊಂದಿರುವ ಕಲಾವಿದರನ್ನು ಒಳಗೊಂಡ ಇನ್‌ಸ್ಟಾಗ್ರಾಮ್ ರೀಲ್ ಗಳನ್ನು ನೀವು ನೋಡಿರಬಹುದು. ಈ ಮೇಕಪ್ ಕಲಾವಿದರು ಎಲ್ಲಾ ಮೇಕಪ್ ಮಾಡುತ್ತಾರೆ.
ಅವರು ನಟರನ್ನು ಹೇಗೆ ಬೇಕೋ ಹಾಗೆ ಮೇಕಪ್ ಮಾಡಿ ಸ್ಕ್ರೀನ್ ಮೇಲೆ ತೋರಿಸಬಹುದು. ಇಷ್ಟೇ ಅಲ್ಲದೆ ಇವರು ಈ ಮದುವೆಗಳಲ್ಲಿ ವಧು ಮತ್ತು ವರರಿಗೂ ಸಹ ಮೇಕಪ್ ಮಾಡಿ ಹಣ ಗಳಿಸಬಹುದು.
ಚಲನಚಿತ್ರ ಮತ್ತು ಟಿವಿ ಶೋ ತಯಾರಕರು ಈ ಕಲಾವಿದರನ್ನು ನೇಮಿಸಿಕೊಳ್ಳುತ್ತಾರೆ. ಇಲ್ಲದೆ ಹೋದರೆ ಇವರು ತಮ್ಮದೇ ಆದ ಸ್ವಂತ ಸ್ಟುಡಿಯೋವನ್ನು ಸಹ ತೆರೆಯಬಹುದು. ಇದಕ್ಕೆ ಯಾವುದೇ ಪದವಿಯ ಅಗತ್ಯವಿಲ್ಲದಿದ್ದರೂ, ಕಲೆಯ ಅಭಿರುಚಿ ಮತ್ತು ಕಲಾ ಪ್ರತಿಭೆ ನಿಮ್ಮಲ್ಲಿ ಇರಲೇಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ