ಟೆಕ್ ಸ್ಟಾರ್ಟ್ಅಪ್ (Tech Startup) ಅನ್ನೋದು ನಿರಂತರವಾದ ಬದಲಾವಣೆಯೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದೆ. ತಂತ್ರಜ್ಞಾನದ (Technology) ಕಾರಣದಿಂದಾಗಿ ಇಲ್ಲಿ ಎಲ್ಲವೂ ಅಪ್‌ಡೇಟ್ ಆಗುತ್ತಿರುತ್ತದೆ. ಆದ್ದರಿಂದ ಇಲ್ಲಿ ಜಾಬ್ ರೋಲ್ಸ್ ( Job Roles) ಕೂಡ ಸಾರ್ವಕಾಲಿಕ ಬದಲಾಗುತ್ತವೆ.
ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಬೇಡಿಕೆಯಲ್ಲಿರುವ ಕೆಲವು ಉದ್ಯೋಗಗಳಿವೆ. ಅವುಗಳ ಬಗ್ಗೆ ಕಟ್‌ಶಾರ್ಟ್‌ನ ಸಿಒಒ ವಿಕಾಶ್ ಚಂದ್ರ ಅವರು ಮಾಹಿತಿ ನೀಡಿದ್ದಾರೆ. ಆ ಪ್ರಕಾರ ಟೆಕ್ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚು ಬೇಡಿಕೆಯಿರುವ ಐದು ಜಾಬ್‌ರೋಲ್ಸ್ ಹೀಗಿವೆ.
1. ಸಾಫ್ಟ್‌ವೇರ್ ಇಂಜಿನಿಯರ್: ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸರಿಯಾದ ಪ್ರೋಗ್ರಾಮಿಂಗ್ ಭಾಷೆಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ಆರ್ಕಿಟೆಕ್ಚರ್‌ಗಳನ್ನು ಬಳಸಿಕೊಂಡು ಸಾಫ್ಟ್‌ವೇರ್ ಅನ್ನು ರಚಿಸುತ್ತಾರೆ.
ಸಾಫ್ಟ್‌ವೇರ್ ಎಂಜಿನಿಯರ್‌ಗಳು ಯಾವುದೇ ಟೆಕ್ ಸ್ಟಾರ್ಟ್‌ಅಪ್‌ನ ಬೆನ್ನೆಲುಬು ಅಂತಲೇ ಪರಿಗಣಿಸಲಾಗುತ್ತದೆ. ಕಂಪನಿಯು ಉತ್ಪಾದಿಸುವ ಸಾಫ್ಟ್‌ವೇರ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಅವರು ಜವಾಬ್ದಾರರಾಗಿರುತ್ತಾರೆ. ಸಾಫ್ಟ್‌ವೇರ್ ಎಂಜಿನಿಯರ್‌ಗಳು ಕಂಪನಿಯ ಯಶಸ್ಸಿಗೆ ನಿರ್ಣಾಯಕರಾಗಿರುತ್ತಾರೆ. ಆದ್ದರಿಂದ ಯಾವಾಗಲೂ ಈ ಕೆಲಸಕ್ಕೆ ಹೆಚ್ಚಿನ ಬೇಡಿಕೆಯಿದೆ.
2. ಪ್ರಾಡಕ್ಟ್ ಮ್ಯಾನೇಜರ್ : ಉತ್ಪನ್ನ ನಿರ್ವಾಹಕ ಅಥವಾ ಪ್ರಾಡಕ್ಟ್ ಮ್ಯಾಜೇನರ್ ಆದವರು ಹೊಸ ಉತ್ಪನ್ನಗಳ ಅಭಿವೃದ್ಧಿಯನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಉತ್ಪನ್ನವು ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅವರು ಸಾಫ್ಟ್‌ವೇರ್ ಎಂಜಿನಿಯರ್‌ಗಳು, ವಿನ್ಯಾಸಕರು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಕೆಲಸ ಮಾಡುತ್ತಾರೆ. ಸ್ಟಾರ್ಟ್‌ಅಪ್‌ನ ಯಶಸ್ಸಿಗೆ ನಿರ್ಣಾಯಕರಾಗಿರುವುದರಿಂದ ಈ ಪ್ರಾಡಕ್ಟ್ ಮ್ಯಾನೇಜರ್‌ಗಳಿಗೆ ಹೆಚ್ಚು ಬೇಡಿಕೆಯಿದೆ.
3. ಯುಕ್ಸ್ ಅಥವಾ ಯುಐ ಡಿಸೈನರ್: ಉತ್ಪನ್ನಗಳಿಗಾಗಿ ಬಳಕೆದಾರ ಇಂಟರ್ಫೇಸ್ (UI) ಮತ್ತು ಬಳಕೆದಾರ ಅನುಭವ (UX)ವನ್ನು ರಚಿಸಲು UX/UI ವಿನ್ಯಾಸಕರು ಜವಾಬ್ದಾರರಾಗಿರುತ್ತಾರೆ.
ಉತ್ಪನ್ನವು ಬಳಕೆದಾರ ಸ್ನೇಹಿಯಾಗಿದೆ ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅವರು ಉತ್ಪನ್ನ ನಿರ್ವಾಹಕರು ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಉತ್ಪನ್ನಗಳ ಯಶಸ್ಸಿಗೆ ಇವರು ಅತ್ಯಗತ್ಯವಾದ್ದರಿಂದ UX/UI ವಿನ್ಯಾಸಕಕರಿಗೆ ಬೇಡಿಕೆ ಇರುತ್ತದೆ.
4. ಡೇಟಾ ಸೈಂಟಿಸ್ಟ್ : ಡೇಟಾ ಸೈಂಟಿಸ್ಟ್ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು, ಡೇಟಾವನ್ನು ವಿಶ್ಲೇಷಿಸಲು ಮತ್ತು ವ್ಯಾಖ್ಯಾನಿಸಲು ಜವಾಬ್ದಾರರಾಗಿರುತ್ತಾರೆ.
ಉತ್ಪನ್ನಗಳ ಕುರಿತಾಗಿ ಗ್ರಾಹಕರ ಅಭಿಪ್ರಾಯಗಳು ಹಾಗೂ ಆ ಕುರಿತಾದ ಮಾದರಿಗಳನ್ನು ಗುರುತಿಸಲು ಡೇಟಾ ಸೈಂಟಿಸ್ಟ್ ಆದವರು ಉತ್ಪನ್ನ ನಿರ್ವಾಹಕರು ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಡೇಟಾ-ಚಾಲಿತ ನಿರ್ಧಾರಗಳನ್ನು ಮಾಡಲು ಕಂಪನಿಗಳಿಗೆ ಸಹಾಯ ಮಾಡುತ್ತಾರಾದ್ದರಿಂದ ಡೇಟಾ ಸೈಂಟಿಸ್ಟ್ ಜಾಬ್ ಯಾವಾಗಲೂ ಬೇಡಿಕೆಯಲ್ಲಿದೆ.
5. ಸೇಲ್ಸ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್: ಸಂಭಾವ್ಯ ಗ್ರಾಹಕರಿಗೆ ಕಂಪನಿಯ ಉತ್ಪನ್ನಗಳನ್ನು ಪ್ರಚಾರ ಮಾಡಲು ಸೇಲ್ಸ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ಜವಾಬ್ದಾರರಾಗಿರುತ್ತಾರೆ.
ಕಂಪನಿಯು ತನ್ನ ಗ್ರಾಹಕರನ್ನು ತಲುಪಲು ಸಹಾಯ ಮಾಡುವ ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸಲು ಅವರು ಪ್ರಾಡಕ್ಟ್ ಮ್ಯಾಜೇನರ್ ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಅಂದಹಾಗೆ ಅವರು ಮಾರುಕಟ್ಟೆ ಜಾಲವನ್ನು ವಿಸ್ತರಿಸಲು ಸಹಾಯ ಮಾಡುತ್ತಾರೆ. ಆದ್ದರಿಂದ ಸೇಲ್ಸ್ ಮತ್ತು ಮಾರ್ಕೆಟಿಂಗ್ ಮ್ಯಾನೇಜರ್ ರೋಲ್ ಯಾವಾಗಲೂ ಬೇಡಿಕೆಯಲ್ಲಿರುತ್ತದೆ.
ಇದನ್ನೂ ಓದಿ: Career Tips: ದೊಡ್ಡ ಸಂಬಳದ ಈ ಉದ್ಯೋಗಗಳಿಗೆ ಡಿಗ್ರಿ ಓದಿರಬೇಕಾದ ಅಗತ್ಯವೇ ಇಲ್ಲ; ಭರ್ಜರಿ ಅವಕಾಶ
ಒಟ್ಟಾರೆ, ಈ ಐದು ಉದ್ಯೋಗಗಳು ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿವೆ. ಒಂದು ಕಂಪನಿಯು ಯಶಸ್ವಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡುವ ಪ್ರತಿಭಾವಂತ ವ್ಯಕ್ತಿಗಳ ತಂಡವನ್ನು ಹೊಂದಿರಬೇಕು. ಆಗ ಮಾತ್ರ ಕಂಪನಿ ತಂತ್ರಜ್ಞಾನ ಯುಗದಲ್ಲಿ ಯಶಸ್ವಿಯಾಗಿ ಸ್ಪರ್ಧೆ ನೀಡಲು ಸಾಧ್ಯ. ನೀವು ಟೆಕ್ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರೆ ಈ ಉದ್ಯೋಗಗಳಲ್ಲಿ ಒಂದನ್ನು ಪರಿಗಣಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ