• ಹೋಂ
 • »
 • ನ್ಯೂಸ್
 • »
 • Jobs
 • »
 • Career Tips: ಮಧ್ಯವಯಸ್ಸಿನಲ್ಲಿ ವೃತ್ತಿ ಬದಲಾಯಿಸುತ್ತಿದ್ದರೆ ಈ 5 ಉದ್ಯೋಗಗಳ ಆಯ್ಕೆ ಬೆಸ್ಟ್

Career Tips: ಮಧ್ಯವಯಸ್ಸಿನಲ್ಲಿ ವೃತ್ತಿ ಬದಲಾಯಿಸುತ್ತಿದ್ದರೆ ಈ 5 ಉದ್ಯೋಗಗಳ ಆಯ್ಕೆ ಬೆಸ್ಟ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಡುವಯಸ್ಸಿನಲ್ಲಿ ನೀವು ಉದ್ಯೋಗಕ್ಕೆ ಮರುಸೇರ್ಪಡೆ ಆಗಲು ಬಯಸುವುದಾದರೆ ಹಲವಾರು ವೃತ್ತಿ ಆಯ್ಕೆಗಳಿವೆ. ನಿಮ್ಮ ವಯಸ್ಸು 40 ಅಥವಾ 60 ರ ಆಸುಪಾಸಿನಲ್ಲಿರಲಿ ನಿಮ್ಮ ವಯಸ್ಸಿಗೆ ತಕ್ಕಂತಹ ಉದ್ಯೋಗವನ್ನು ಪಡೆಯಬಹುದಾಗಿದೆ.

 • Share this:

ಜೀವನದಲ್ಲಿ ಹಲವಾರು ಪರಿಸ್ಥಿತಿಗಳಲ್ಲಿ ಉದ್ಯೋಗ (Job) ತ್ಯಜಿಸುವುದೋ ಅಥವಾ ಕೆಲವು ಸಮಯಗಳ ನಂತರ ವೃತ್ತಿ ಪುನರಾರಂಭ (Career Restart) ಮಾಡಬೇಕಾದ ಪರಿಸ್ಥಿತಿ ಬಂದೊದಗುತ್ತದೆ. ಹೆರಿಗೆ, ಮಕ್ಕಳ ಲಾಲನೆ ಪಾಲನೆ, ಅನಾರೋಗ್ಯ, ಹೀಗೆ ಮಹಿಳೆಯರು ಹಾಗೂ ಪುರುಷರು ಕೆಲವೊಂದು ಕಾರಣಗಳಿಂದ ಉದ್ಯೋಗಗಳಿಂದ  ಕೊಂಚ ಕಾಲ ಬ್ರೇಕ್ ತೆಗೆದುಕೊಳ್ಳುತ್ತಾರೆ. ಪುನಃ ವೃತ್ತಿ ಆರಂಭಿಸಬೇಕು ಎಂಬ ಸಂದರ್ಭದಲ್ಲಿ ತಮಗೆ ಹಿಂದಿನಂತೆಯೇ ಉತ್ತಮ ಸಂಬಳದ ಉದ್ಯೋಗ (Well Paid Jobs) ದೊರೆಯಬಹುದೇ ಎಂಬ ಯೋಚನೆ ಬರುತ್ತದೆ.


ಅದೂ ಅಲ್ಲದೆ ನಡುವಯಸ್ಸಿನಲ್ಲಿ ನೀವು ಉದ್ಯೋಗಕ್ಕೆ ಮರುಸೇರ್ಪಡೆ ಆಗಲು ಬಯಸುವುದಾದರೆ ಹಲವಾರು ವೃತ್ತಿ ಆಯ್ಕೆಗಳಿವೆ. ನಿಮ್ಮ ವಯಸ್ಸು 40 ಅಥವಾ 60 ರ ಆಸುಪಾಸಿನಲ್ಲಿರಲಿ ನಿಮ್ಮ ವಯಸ್ಸಿಗೆ ತಕ್ಕಂತಹ ಉದ್ಯೋಗವನ್ನು ಪಡೆಯಬಹುದಾಗಿದೆ. ಹಾಗಿದ್ದಾಗ ಏನು ಮಾಡಬಹುದು? ಯಾವ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಬಹುದು? ಎಂಬ ಸಲಹೆಗಳಿಗಾಗಿ ಈ ಲೇಖನ ನೆರವಾಗಲಿದೆ.


1) ಎಸ್‌ಇಓ ಪರಿಣಿತ


ಕಳೆದ ಕೆಲವು ವರ್ಷಗಳಲ್ಲಿ, ಸರ್ಚ್ ಎಂಜಿನ್ ಆಪ್ಟಿಮೈಸೇಶನ್ (ಎಸ್‌ಇಒ) ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಹೆಚ್ಚು ಬೇಡಿಕೆಯ ಕೌಶಲ್ಯವಾಗಿದೆ. ನಿಮ್ಮಲ್ಲಿರುವ ಕೌಶಲ್ಯ ಹಾಗೂ ಪರಿಣಿತಿಯನ್ನು ಅನುಸರಿಸಿ ಎಸ್‌ಇಒ ತರಬೇತುದಾರ, ಎಸ್‌ಇಒ ಮ್ಯಾನೇಜರ್, ಎಸ್‌ಇಒ ಸಲಹೆಗಾರ, ಎಸ್‌ಇಒ ವಿಶ್ಲೇಷಕ, ಎಸ್‌ಇಒ ತಂತ್ರಜ್ಞ ಮತ್ತು ಎಸ್‌ಇಒ ನಿರ್ದೇಶಕರಂತಹ ಬೇರೆ ಬೇರೆ ಪ್ರೊಫೈಲ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದು.


ಎಸ್‌ಇಓ ತರಬೇತುದಾರರು, ವ್ಯವಸ್ಥಾಪಕರು, ಸಲಹೆಗಾರರು ಮತ್ತು ತಂತ್ರಜ್ಞರು ವರ್ಷಕ್ಕೆ ರೂ 7,00,000 ವರೆಗೆ ಗಳಿಸಬಹುದಾಗಿದೆ. ನಿರ್ದೇಶಕರು ಅಂತೆಯೇ ಉನ್ನತ ಹುದ್ದೆಯಲ್ಲಿರುವವರು ರೂ. 9,00,000-18,00,000 ವರೆಗೆ ಸಂಪಾದಿಸಬಹುದು.


ಪ್ರಾತಿನಿಧಿಕ ಚಿತ್ರ


2) ಎಚ್‌ಆರ್ ನೇಮಕಾತಿದಾರರು


ಉದ್ಯೋಗಕ್ಕೆ ಅರ್ಹರಾದ ಅಭ್ಯರ್ಥಿಗಳ ನೇಮಕ ಹಾಗೂ ಎಚ್‌ಆರ್ ಸಂಬಂಧಿತ ಉದ್ಯೋಗಗಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. ಇದು ಕೂಡ ಉತ್ತಮ ಸಂಬಳವಿರುವ ಉದ್ಯೋಗವಾಗಿದ್ದು ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು.


ಹುದ್ದೆಗೆ ಬೇಕಾದ ಕೌಶಲ್ಯಗಳೆಂದರೆ ಇದಕ್ಕಾಗಿ ಸಂವಹನ, ತಂಡ ನಿರ್ಮಾಣ, ಸಮಸ್ಯೆ-ಪರಿಹರಿಸುವ ಮತ್ತು ಜನರ ಕೌಶಲ್ಯ ನಿರ್ಮಾಣಗಳನ್ನು ಮಾಡಬಹುದಾಗಿದೆ.


ಹೆಚ್ಚುವರಿಯಾಗಿ, ಈ ಹುದ್ದೆಗೆ ನಿಮ್ಮನ್ನು ಹೆಚ್ಚು ಸೂಕ್ತವಾಗಿಸಲು ನೀವು ಅಲ್ಪಾವಧಿಯ ತರಬೇತಿಯನ್ನು ತೆಗೆದುಕೊಳ್ಳಬಹುದು. ಮೆಟ್ರೋಪಾಲಿಟನ್ ನಗರಗಳಲ್ಲಿ ಮಾನವ ಸಂಪನ್ಮೂಲ ನೇಮಕಾತಿಗೆ ಸಾಮಾನ್ಯ ವೇತನವು ತಿಂಗಳಿಗೆ ರೂ 44,000-65,000 ವಾಗಿದೆ.


3) ಶಿಕ್ಷಕರು


ಆಸಕ್ತ ವ್ಯಕ್ತಿಗಳಿಗೆ ಶಿಕ್ಷಣ ನೀಡಲು ನಿಮ್ಮ ಕೌಶಲ್ಯ ಮತ್ತು ಜ್ಞಾನವನ್ನು ನೀವು ಬಳಸಬಹುದಾದ ಮತ್ತೊಂದು ಕ್ಷೇತ್ರವೆಂದರೆ ಶಿಕ್ಷಕ ಹುದ್ದೆಯಾಗಿದೆ. ಸಾರ್ವಜನಿಕ ಶಾಲೆ, ಖಾಸಗಿ ಶಾಲೆ ಮತ್ತು ಆನ್‌ಲೈನ್ ಬೋಧನೆ ಮೊದಲಾದ ಆಯ್ಕೆಗಳನ್ನು ಆರಿಸಿಕೊಳ್ಳಬಹುದು.
ನೀವು ಸಾರ್ವಜನಿಕ ಅಥವಾ ಖಾಸಗಿ ಶಾಲೆಗಳಲ್ಲಿ ನಿರ್ದಿಷ್ಟ ವಿಷಯವನ್ನು ಕಲಿಸಬಹುದು. ಬೈಜೂಸ್, ಅನ್ಅಕಾಡೆಮಿ, ವೇದಾಂತು, ಕೋರ್ಸ್‌ಸೇರಾ ಹಾಗೂ ಯುಡೆಮಿ ಮೊದಲಾದ ಆನ್‌ಲೈನ್ ಶಿಕ್ಷಣ ವೇದಿಕೆಗಳಲ್ಲಿ ಕೆಲಸ ಮಾಡಬಹುದು.


4) ಸಲಹೆಗಾರರು (ಕನ್ಸಲ್ಟೆಂಟ್‌)


ಯಾವುದೇ ಮಧ್ಯ ವಯಸ್ಸಿನ ವೃತ್ತಿ-ಬದಲಾವಣೆಯಲ್ಲಿ ಚಿಂತಕರಿಗೆ, ಸಲಹೆಗಾರರ ಪಾತ್ರವು ಹೆಚ್ಚು ಹೊಂದಿಕೊಳ್ಳುವ ಮತ್ತು ಲಾಭದಾಯಕವೆಂದು ತೋರುತ್ತದೆ. ಕನ್ಸಲ್ಟೆಂಟ್‌ನ ಕೆಲಸ, ಹೆಸರೇ ಸೂಚಿಸುವಂತೆ, ಪ್ರಶ್ನೆಯಲ್ಲಿರುವ ವ್ಯಾಪಾರ ಸಂಸ್ಥೆಯ ವಿವಿಧ ವಿಷಯಗಳಲ್ಲಿ ಪರಿಣಿತ ಸಲಹೆಯನ್ನು ನೀಡುವುದಾಗಿದೆ.


ಕೆಲಸ ಮಾಡುವ ಉತ್ತಮ ಭಾಗವೆಂದರೆ ನೀವು ಏಕಕಾಲದಲ್ಲಿ ವಿವಿಧ ಮೂಲಗಳಿಂದ ಅದಾಯಗಳಿಸುವ ಯೋಜನೆಗಳನ್ನು ಮಾಡುವುದಾಗಿದೆ. ಅವುಗಳು ಒಂದೇ ರೀತಿಯ ವ್ಯಾಪಾರ ಆಸಕ್ತಿಗಳನ್ನು ಹೊಂದಬೇಕೆಂದೇನಿಲ್ಲ.


ಇದನ್ನೂ ಓದಿ: UPSC Success Story: ಯಾವುದೇ ಕೋಚಿಂಗ್ ಪಡೆಯದೇ ಮೊದಲ ಪ್ರಯತ್ನದಲ್ಲೇ IAS ಆದ ದಿವ್ಯಾ ಮಿತ್ತಲ್


5) ಸಣ್ಣ ಬ್ಯುಸಿನೆಸ್ ಮಾಲೀಕರು


ನಿಮ್ಮದೇ ಸಣ್ಣ ಬ್ಯುಸಿನೆಸ್ ಆರಂಭಿಸಲು ಬಯಸುವುದಾದರೆ ನೀವು ನಿಮ್ಮ ಮಧ್ಯ ವಯಸ್ಸಿನಲ್ಲಿ ಕೂಡ ಆರಂಭಿಸಬಹುದು. ಉದ್ಯಮಕ್ಕೆ ಖಾಸಗಿ ಹೂಡಿಕೆದಾರರು ಹಣಕಾಸು ಸಂಸ್ಥೆಗಳ ನೆರವನ್ನು ಪಡೆಯಬಹುದು. ಅಲ್ಲದೆ ಸರಕಾರದಿಂದ ಸಬ್ಸಿಡಿಗಳ ಸಹಾಯವನ್ನು ಪಡೆದು ಸಣ್ಣ ಬ್ಯುಸಿನೆಸ್ ಆರಂಭಿಸಬಹುದು.

top videos


  ಮಧ್ಯಮ ವಯಸ್ಸಿನಲ್ಲಿ ವೃತ್ತಿ ಆರಂಭಿಸಲು ನಿಮಗೆ ಬೇಕಾದಷ್ಟು ಅವಕಾಶಗಳಿವೆ ಆದರೆ ಅದನ್ನು ಪಡೆಯಲು ಸೂಕ್ತ ಕೌಶಲ್ಯ ಹಾಗೂ ಪರಿಣಿತಿಯನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.

  First published: