• ಹೋಂ
  • »
  • ನ್ಯೂಸ್
  • »
  • Jobs
  • »
  • Career Options: ಆನ್​ಲೈನ್​ ಮೂಲಕವೇ ಎಂಟ್ರಟೈನ್ ಮಾಡುವ ಪ್ರತಿಭೆ ನಿಮ್ಮಲ್ಲಿದ್ದರೆ, 5 ಆಯ್ಕೆಗಳು ಇಲ್ಲಿದೆ ನೋಡಿ

Career Options: ಆನ್​ಲೈನ್​ ಮೂಲಕವೇ ಎಂಟ್ರಟೈನ್ ಮಾಡುವ ಪ್ರತಿಭೆ ನಿಮ್ಮಲ್ಲಿದ್ದರೆ, 5 ಆಯ್ಕೆಗಳು ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮನೋರಂಜನಾ ಉದ್ಯಮದಲ್ಲಿ ಅನೇಕ ರೀತಿಯ ವೃತ್ತಿಜೀವನದ ಆಯ್ಕೆಗಳಿವೆ. ಅತ್ಯಂತ ಜನಪ್ರಿಯವಾದವುಗಳು ಎಂದರೆ ವಿಡಿಯೋ ಗೇಮ್ ವಿನ್ಯಾಸಕರು, ವೆಬ್ ಡೆವಲಪರ್‌ಗಳು, ಗ್ರಾಫಿಕ್ ಡಿಸೈನರ್ ಗಳು, ಅನಿಮೇಟರ್ ಗಳು, ಬರಹಗಾರರು, ಸಂಪಾದಕರು, ಸಂಗೀತಗಾರರು ಎನ್ನಬಹುದು.

  • Share this:

ಈಗಂತೂ ಈ ತಂತ್ರಜ್ಞಾನವು (Technology) ಪ್ರತಿದಿನ ಹಂತ ಹಂತವಾಗಿ ಬೆಳೆಯುತ್ತಲೇ ಹೋಗುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೇಗೆ ತಂತ್ರಜ್ಞಾನವು ದಿನೇ ದಿನೇ ಬೆಳೆಯುತ್ತಾ ಹೋಗುತ್ತಿದೆಯೋ, ಹಾಗೆಯೇ ಮನೋರಂಜನಾ ಉದ್ಯಮವು ( Entertainment Industry) ಸಹ ಪ್ರಪಂಚದಾದ್ಯಂತದ ವೀಕ್ಷಕರನ್ನು ತೊಡಗಿಸಿಕೊಳ್ಳುವ ಮತ್ತು ರಂಜಿಸುವ ಸಲುವಾಗಿ ಮನರಂಜನಾ ವಿಷಯವನ್ನು ರಚಿಸಲು ಸಹಾಯ ಮಾಡುವ ಪ್ರತಿಭಾವಂತ ವೃತ್ತಿಪರರನ್ನು (Professional) ಹೆಚ್ಚು ಹೆಚ್ಚು ಹುಡುಕುತ್ತಿದೆ.


ಮನೋರಂಜನಾ ಉದ್ಯಮದಲ್ಲಿ ಅನೇಕ ರೀತಿಯ ವೃತ್ತಿಜೀವನದ ಆಯ್ಕೆಗಳಿವೆ ಅಂತ ಹೇಳಬಹುದು. ಈ ಉದ್ಯಮದಲ್ಲಿ ನಿಮಗೆ ಸರಿ ಹೊಂದುವಂತಹ ಅನೇಕ ವೃತ್ತಿಜೀವನದ ಆಯ್ಕೆಗಳಿದ್ದು, ಅವುಗಳಲ್ಲಿ ಅತ್ಯಂತ ಜನಪ್ರಿಯವಾದವುಗಳು ಎಂದರೆ  ವಿಡಿಯೋ ಗೇಮ್ ವಿನ್ಯಾಸಕರು, ವೆಬ್ ಡೆವಲಪರ್‌ಗಳು, ಗ್ರಾಫಿಕ್ ಡಿಸೈನರ್ ಗಳು, ಅನಿಮೇಟರ್ ಗಳು, ಬರಹಗಾರರು, ಸಂಪಾದಕರು, ಸಂಗೀತಗಾರರು ಎನ್ನಬಹುದು.


ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು, ಡಿಜಿಟಲ್ ಮಾಧ್ಯಮ ಮತ್ತು ತಂತ್ರಜ್ಞಾನದ ಬಗ್ಗೆ ಅಪಾರವಾದ ತಿಳುವಳಿಕೆಯನ್ನು ಹೊಂದಿರುವುದು ಮುಖ್ಯವಾಗುತ್ತದೆ ಮತ್ತು ಇದರ ಜೊತೆಗೆ ಮನರಂಜನಾ ವಿಷಯವನ್ನು ಆಕರ್ಷಕವಾಗಿ ರಚಿಸುವಾಗ ಸಣ್ಣ ಸಣ್ಣ ವಿವರಗಳ ಮೇಲೆ ಗಮನವಿಡುವುದು ಸಹ ತುಂಬಾನೇ ಮುಖ್ಯವಾಗುತ್ತದೆ. ಅಡೋಬ್ ಕ್ರಿಯೇಟಿವ್ ಸೂಟ್ ನಂತಹ ಜನಪ್ರಿಯ ಸಾಫ್ಟ್‌ವೇರ್ ಅನುಭವ ಮತ್ತು ಎಚ್‌ಟಿಎಮ್ಎಲ್ ಕೋಡಿಂಗ್ ಜ್ಞಾನವನ್ನು ಹೊಂದಲು ಸಹ ಇದು ಸಹಾಯಕವಾಗಿದೆ.


1) ವಿಡಿಯೋ ಗೇಮ್ ಡಿಸೈನರ್


ವಿಡಿಯೋ ಗೇಮ್ ಡಿಸೈನರ್ ಆಗಿ ಆನ್ಲೈನ್ ಮನರಂಜನಾ ಉದ್ಯಮದಲ್ಲಿ ವೃತ್ತಿಜೀವನವನ್ನು ಶುರು ಮಾಡಲು ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯಗಳು ಬೇಕಾಗುತ್ತವೆ. ನೀವು ಲಭ್ಯವಿರುವ ವಿವಿಧ ರೀತಿಯ ವಿಡಿಯೋ ಗೇಮ್ ಡಿಸೈನರ್ ಉದ್ಯೋಗಗಳನ್ನು ಹುಡುಕಬೇಕು ಮತ್ತು ನಿಮ್ಮ ಆಸಕ್ತಿಗಳು ಮತ್ತು ಕೌಶಲ್ಯಗಳಿಗೆ ಯಾವುದು ಹೆಚ್ಚು ಸೂಕ್ತವಾಗಿದೆ ಎಂದು ಅರ್ಥ ಮಾಡಿಕೊಂಡು ನಿರ್ಧರಿಸಬೇಕು.


ಯುನಿಟಿ ಅಥವಾ ಅನ್ರಿಯಲ್ ಎಂಜಿನ್ ನಂತಹ ವಿಡಿಯೋ ಗೇಮ್ ಗಳನ್ನು ರಚಿಸಲು ಬಳಸುವ ಸಾಫ್ಟ್‌ವೇರ್ ನೊಂದಿಗೆ ನೀವು ಪರಿಚಿತರಾಗಿರಬೇಕು. ನಿಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಮತ್ತು ನೀವು ಈ ಕೆಲಸಕ್ಕೆ ಏಕೆ ಫಿಟ್ ಅಂತ ತೋರಿಸುವುದಕ್ಕೆ, ನೀವು ಈಗಾಗಲೇ ಮಾಡಿರುವಂತಹ ಡಿಸೈನ್ ಗಳಿರುವ ನಿಮ್ಮ ಕೆಲಸದ ಪೋರ್ಟ್‌ಫೋಲಿಯೋವನ್ನು ನಿರ್ಮಿಸುವುದು ಮುಖ್ಯವಾಗುತ್ತದೆ.




ಈ ರೀತಿಯ ವೃತ್ತಿಜೀವನವನ್ನು ಶುರು ಮಾಡುವಾಗ ನಿಮಗಿರಬೇಕಾದ ನೆಟ್ವರ್ಕಿಂಗ್ ತುಂಬಾನೇ ಮುಖ್ಯವಾಗುತ್ತದೆ. ಗೇಮಿಂಗ್ ಸಮಾವೇಶಗಳಿಗೆ ಹಾಜರಾಗುವುದು ಅಥವಾ ಆನ್ಲೈನ್ ಫೋರಮ್ ಗಳಿಗೆ ಸೇರುವುದು ಕ್ಷೇತ್ರದ ಇತರ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಅಂತಿಮವಾಗಿ, ಉದ್ಯಮದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಅಪ್ಡೇಟ್ ಆಗುವುದು ನಿರಂತರವಾಗಿ ಬೆಳೆಯುತ್ತಿರುವ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿರಲು ನಿಮಗೆ ಸಹಾಯ ಮಾಡುತ್ತದೆ.


2) ವೆಬ್ ಡೆವಲಪರ್


ವೆಬ್ ಡೆವಲಪರ್ ಆಗಲು ನೀವು ತಾಂತ್ರಿಕ ಮತ್ತು ಸೃಜನಶೀಲ ಕೌಶಲ್ಯಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರಬೇಕು. ನೀವು ಎಚ್‌ಟಿಎಂಎಲ್, ಸಿಎಸ್ಎಸ್, ಜಾವಾ ಸ್ಕ್ರಿಪ್ಟ್ ಮತ್ತು ಪಿಎಚ್‌ಪಿ ಅಂತಹ ಕೋಡಿಂಗ್ ಭಾಷೆಗಳನ್ನು ಕಲಿತಿರಬೇಕು. ವರ್ಡ್ಪ್ರೆಸ್ ಅಥವಾ ದೃಪಾಲ್ ನಂತಹ ವಿಷಯ ನಿರ್ವಹಣಾ ವ್ಯವಸ್ಥೆಗಳನ್ನು ಹೇಗೆ ಬಳಸುವುದು ಎಂದು ನಿಮಗೆ ತಿಳಿದಿರಬೇಕು. ಅಡೋಬ್ ಫೋಟೋಶಾಪ್ ಮತ್ತು ಇಲಸ್ಟ್ರೇಟರ್ ನಂತಹ ಗ್ರಾಫಿಕ್ ವಿನ್ಯಾಸ ಸಾಫ್ಟ್‌ವೇರ್ ಗಳನ್ನು ಸಹ ಕಲಿಯುವುದು ತುಂಬಾನೇ ಮುಖ್ಯವಾಗುತ್ತದೆ.


ಅಡೋಬ್ ಪ್ರೀಮಿಯರ್ ಪ್ರೊ ಅಥವಾ ಫೈನಲ್ ಕಟ್ ಪ್ರೋ ನಂತಹ ವೀಡಿಯೋ ಎಡಿಟಿಂಗ್ ಸಾಫ್ಟ್‌ವೇರ್ ಅನುಭವವನ್ನು ಹೊಂದಿರುವುದು ನಿಮ್ಮ ಪ್ರೇಕ್ಷಕರಿಗೆ ಆಕರ್ಷಕ ವಿಷಯವನ್ನು ರಚಿಸಲು ಪ್ರಯೋಜನಕಾರಿಯಾಗಿದೆ.


3) ಗ್ರಾಫಿಕ್ ಆರ್ಟಿಸ್ಟ್


ಗ್ರಾಫಿಕ್ ಕಲಾವಿದನಾಗಿ, ನೀವು ಸಣ್ಣ ಸಣ್ಣ ವಿವರಗಳ ಮೇಲೆ ಸಹ ಕಣ್ಣಿಡಬೇಕು, ಸೃಜನಶೀಲರಾಗಿರಬೇಕು ಮತ್ತು ಅತ್ಯುತ್ತಮ ತಾಂತ್ರಿಕ ಕೌಶಲ್ಯಗಳನ್ನು ಹೊಂದಿರಬೇಕು. ಗ್ರಾಫಿಕ್ ವಿನ್ಯಾಸ ಮತ್ತು ಅನಿಮೇಷನ್ ಸಾಫ್ಟ್‌ವೇರ್ ನ ಇತ್ತೀಚಿನ ಪ್ರವೃತ್ತಿಗಳು ಮತ್ತು ಉದ್ಯಮದಲ್ಲಿ ಬಳಸಬಹುದಾದ ಯಾವುದೇ ಹೊಸ ತಂತ್ರಜ್ಞಾನಗಳೊಂದಿಗೆ ನವೀಕೃತವಾಗಿರುವುದು ಅವಶ್ಯಕ.


ಪ್ರಾತಿನಿಧಿಕ ಚಿತ್ರ


ಯೋಜನೆಗಳಲ್ಲಿ ಇತರ ವೃತ್ತಿಪರರೊಂದಿಗೆ ಪರಿಣಾಮಕಾರಿಯಾಗಿ ಸಹಕರಿಸಲು ನೀವು ಬಲವಾದ ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುವಾಗ ನೆಟ್ವರ್ಕಿಂಗ್ ಸಹ ಮುಖ್ಯವಾಗಿದೆ. ನಿಮ್ಮ ವೃತ್ತಿಗೆ ಸಂಬಂಧಿಸಿದ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ಮರೆಯಬೇಡಿ, ವೃತ್ತಿಪರ ಸಂಸ್ಥೆಗಳಿಗೆ ಸೇರಿಕೊಳ್ಳಿ ಮತ್ತು ಈಗಾಗಲೇ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಜನರೊಂದಿಗೆ ಸಂಬಂಧಗಳನ್ನು ಬೆಳೆಸಿಕೊಳ್ಳಿ.


4) ಬರಹಗಾರರು


ಬರಹಗಾರರಾಗಿ ಆನ್ಲೈನ್ ಮನರಂಜನಾ ಉದ್ಯಮದಲ್ಲಿ ವೃತ್ತಿಜೀವನವನ್ನು ಶುರು ಮಾಡಲು ನೀವು ಆಸಕ್ತಿ ಹೊಂದಿದ್ದರೆ, ನಿಮ್ಮ ಬರವಣಿಗೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಕೆಲಸದ ಪೋರ್ಟ್‌ಫೋಲಿಯೊವನ್ನು ನಿರ್ಮಿಸಿಕೊಳ್ಳುವುದು ಅತ್ಯಗತ್ಯ.


ಆನ್ಲೈನ್  ಮನೋರಂಜನಾ ಉದ್ಯಮದಲ್ಲಿ ಜನಪ್ರಿಯವಾಗಿರುವ ವಿವಿಧ ರೀತಿಯ ವಿಷಯವನ್ನು ಸಹ ನೀವು ಸಂಶೋಧಿಸಬೇಕು ಮತ್ತು ಈ ರೀತಿಯ ವಿಷಯವನ್ನು ಪ್ರಕಟಿಸುವ ಪ್ಲಾಟ್ಫಾರ್ಮ್ ಗಳೊಂದಿಗೆ ನಿಮ್ಮನ್ನು ಪರಿಚಯಿಸಿಕೊಳ್ಳಬೇಕು. ಉದ್ಯಮದಲ್ಲಿ ಕೆಲಸ ಮಾಡುವ ಇತರ ಬರಹಗಾರರು ಮತ್ತು ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸುವುದು ಆನ್ಲೈನ್ ಮನರಂಜನಾ ಬರಹಗಾರರಾಗಿ ಯಶಸ್ವಿಯಾಗಲು ಏನು ಬೇಕು ಎಂಬುದರ ಬಗ್ಗೆ ಒಳನೋಟವನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.




5) ಸಂಗೀತಗಾರರು


ನೀವು ಸಂಗೀತಗಾರರಾಗಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು, ಮೊದಲು ನೀವು ಸಂಗೀತ ಉದ್ಯಮಕ್ಕೆ ಹೇಗೆ ಪ್ರವೇಶಿಸಬೇಕು ಎಂಬುದನ್ನು ಪರಿಶೀಲಿಸಲು ಪ್ರಾರಂಭಿಸಬೇಕು ಮತ್ತು ನಂತರ ಸಂಗೀತ ಸಿದ್ಧಾಂತ, ಸಂಯೋಜನೆ, ಉತ್ಪಾದನಾ ತಂತ್ರಗಳು ಮತ್ತು ಡಿಜಿಟಲ್ ಆಡಿಯೊ ವರ್ಕ್ ಸ್ಟೇಷನ್ ನಂತಹ ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಎಲ್ಲಾ ಅಗತ್ಯ ಕೌಶಲ್ಯಗಳನ್ನು ಕಲಿಯಲು ಸಮಯ ಮತ್ತು ಶಕ್ತಿಯನ್ನು ಹೂಡಿಕೆ ಮಾಡಲು ನೀವು ಸಿದ್ಧರಿರಬೇಕು.


ನಿಮ್ಮ ಸಂಗೀತಕ್ಕೆ ಗಮನ ಸೆಳೆಯುವ ಮತ್ತು ಪ್ರೇಕ್ಷಕರನ್ನು ನಿರ್ಮಿಸುವ ಆಕರ್ಷಕ ವಿಷಯವನ್ನು ನೀವು ರಚಿಸಬೇಕು. ಸ್ಪಾಟಿಫೈ ಅಥವಾ ಆಪಲ್ ಮ್ಯೂಸಿಕ್ ನಂತಹ ವಿವಿಧ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳೊಂದಿಗೆ ನಿಮ್ಮನ್ನು ಪರಿಚಿತಗೊಳಿಸಿಕೊಳ್ಳಿ. ಅಲ್ಲದೆ, ಆನ್ಲೈನ್ ಮನರಂಜನಾ ಉದ್ಯಮದಲ್ಲಿನ ಪ್ರವೃತ್ತಿಗಳ ಬಗ್ಗೆ ಅಪ್ಡೇಟ್ ಆಗಿರಲು ಮರೆಯಬೇಡಿ ಇದರಿಂದ ನೀವು ಸ್ಪರ್ಧೆಯಲ್ಲಿ ಉಳಿಯಬಹುದು.

First published: