• Home
  • »
  • News
  • »
  • jobs
  • »
  • Career Tips: 6 ತಿಂಗಳುಗಳ ಈ ಕೋರ್ಸ್ ಮಾಡಿದ್ರೆ, ಜಾಬ್ ಆಫರ್​ಗಳ ಸುರಿಮಳೆಯೇ ಆಗುತ್ತೆ

Career Tips: 6 ತಿಂಗಳುಗಳ ಈ ಕೋರ್ಸ್ ಮಾಡಿದ್ರೆ, ಜಾಬ್ ಆಫರ್​ಗಳ ಸುರಿಮಳೆಯೇ ಆಗುತ್ತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇನ್ಮುಂದೆ ಮೃದು ಕೌಶಲ್ಯಗಳು ಇಲ್ಲದಿದ್ದರೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಮುನ್ನಡೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ವೃತ್ತಿಜೀವನಕ್ಕಾಗಿ ಶ್ರಮಿಸುವುದು ಅವಶ್ಯಕ.

  • Share this:

2023ರಲ್ಲಿ ಒಳ್ಳೆಯ ಕರಿಯರ್​ ರೂಪಿಸಿಕೊಳ್ಳಬೇಕು (Career Building) ಅಂತಿದ್ದರೆ, ಜಸ್ಟ್​ 6 ತಿಂಗಳು ಶ್ರಮ ಹಾಕಿದರೆ ಸಾಕು. ಜನವರಿಯಿಂದ ಜೂನ್​ ವರೆಗೂ ಈ ಕೋರ್ಸ್​ಗಳನ್ನು (Soft Skills Courses) ಮಾಡಿದ್ರೆ ಮುಂದೆ ನಿಮಗೆ ಜಾಬ್​ ಆಫರ್​ (Job Offer) ನೀಡಲು ಕಂಪನಿಗಳು ಸಾಲುಗಟ್ಟಿ ನಿಲ್ಲುತ್ತವೆ. 2023ರಲ್ಲಿ ಸಾಫ್ಟ್​​ ಸ್ಕಿಲ್ಸ್​​ಗೆ ಎಲ್ಲಿಲ್ಲದ ಡಿಮ್ಯಾಂಡ್​ ಇರುವುದೇ ಇದಕ್ಕೆ ಕಾರಣ.


ಇನ್ಮುಂದೆ ಮೃದು ಕೌಶಲ್ಯಗಳು ಇಲ್ಲದಿದ್ದರೆ,  ವೃತ್ತಿಜೀವನದಲ್ಲಿ ನೀವು ಮುನ್ನಡೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ ವೃತ್ತಿಜೀವನಕ್ಕಾಗಿ ಶ್ರಮಿಸುವುದು ಅವಶ್ಯಕ (Career Advice). ಕೇವಲ ಆರು ತಿಂಗಳಲ್ಲಿ ಮುಗಿಸಬಹುದಾದ ಕೋರ್ಸ್​ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದೇವೆ.


1) ಡೇಟಾ ಸೈನ್ಸ್ ಕೋರ್ಸ್


ಎಲ್ಲಾ ಉದ್ಯಮಗಳನ್ನು ಆಳುವ ಅಸ್ತ್ರವೇ ಡೇಟಾ. ಟಾಪ್ ಟೆಕ್ ಕಂಪನಿಗಳಿಂದ ಹಿಡಿದು ಸ್ಟಾರ್ಟ್‌ಅಪ್‌ಗಳವರೆಗೆ, ಪ್ರತಿಯೊಬ್ಬರೂ ಇಂದು ತಮ್ಮ ವ್ಯಾಪಾರ ಕಾರ್ಯಾಚರಣೆಗಳನ್ನು ಅತ್ಯುತ್ತಮವಾಗಿಸಲು ಡೇಟಾವನ್ನು ಅವಲಂಬಿಸಿದ್ದಾರೆ. ಡೇಟಾ ಸೈನ್ಸ್ ಕೋರ್ಸ್ ಮಾಡುವುದು ನಿಮಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತೆ.ಹೆಚ್ಚಿನ ಸಂಬಳದ ಕೆಲಸ ಹುಡುಕುತ್ತಿರುವವರಿಗೆ ಈ ಕೋರ್ಸ್​​ ಮಾಡುವುದು ಸಹಾಯ ಮಾಡುತ್ತದೆ.




2) ಡಿಜಿಟಲ್ ಮಾರ್ಕೆಟಿಂಗ್


ಇತ್ತೀಚಿನ ದಿನಗಳಲ್ಲಿ ಶಾಪಿಂಗ್‌ನಿಂದ ಹಿಡಿದು ವ್ಯಾಪಾರ ನಡೆಸುವವರೆಗೆ ಎಲ್ಲವೂ ಡಿಜಿಟಲ್‌ ಮಯವಾಗಿದೆ. ಕಂಪನಿಗಳಿಗೆ ಈಗ ಆನ್‌ಲೈನ್ ಪ್ರಚಾರಗಳಿಗೆ ಹೆಚ್ಚು ಒತ್ತು ನೀಡುತ್ತಿವೆ. ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿನ ಕೋರ್ಸ್ ನಿಮ್ಮನ್ನು ಬೇಡಿಕೆಯ ಉದ್ಯೋಗಿಯನ್ನಾಗಿ ಮಾಡುತ್ತೆ.


ಇದನ್ನೂ ಓದಿ:Interview Tips-11: ಸಂದರ್ಶನದಲ್ಲಿ ಕೇಳುವ 7 ಅತ್ಯಂತ ಕಠಿಣ ಪ್ರಶ್ನೆಗಳಿವು, ಮೊದಲೇ ತಯಾರಾಗಿರಿ


ಕಂಪನಿಗಳಿಗೆ ಹೊಸ ಡಿಜಿಟಲ್ ಜಗತ್ತನ್ನು ಪ್ರವೇಶಿಸಲು ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌ ಒಂದೊಳ್ಳೆ ಹಾದಿಯಾಗಿದೆ. ಈ ಕೋರ್ಸ್​ ಕಟೆಂಟ್​ ನಿರ್ವಹಣೆ, ಮಾರ್ಕೆಟಿಂಗ್ ಅನಾಲಿಟಿಕ್ಸ್, ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಮತ್ತು ಪಾವತಿಸಿದ ಜಾಹೀರಾತುಗಳನ್ನು ಒಳಗೊಂಡಿದೆ. ಒಮ್ಮೆ ನೀವು ಈ ಕೌಶಲ್ಯದಲ್ಲಿ ಪ್ರಭುತ್ವ ಸಾಧಿಸಿದರೆ ಜಾಗತಿಕ ಬ್ರ್ಯಾಂಡ್‌ಗಳೊಂದಿಗೆ ಸಂಪರ್ಕ ಸಾಧಿಸಬಹುದು.


3) ಗ್ರಾಫಿಕ್ ಡಿಸೈನ್​


ಸಾವಿರ ಪದಗಳಲ್ಲಿ ಹೇಳುವ ವಿಷಯವನ್ನು ಒಂದು ಫೋಟೋ ಹೇಳುತ್ತೆ ಎಂಬ ಮಾತು ಇಂದಿಗೂ ಪ್ರಸ್ತುತ. ಆ ನಿಟ್ಟಿನಲ್ಲಿ ನೀವು ಗ್ರಾಫಿಕ್ ಡಿಸೈನಿಂಗ್ ಕೋರ್ಸ್‌ನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಕಲಾತ್ಮಕ ಪ್ರತಿಭೆ ಮತ್ತು ಗ್ರಾಫಿಕ್ ವಿನ್ಯಾಸದ ಹಿನ್ನೆಲೆ ಹೊಂದಿರುವ ಜನರಿಗೆ ಹೆಚ್ಚಿನ ಬೇಡಿಕೆ ಇದೆ.




ಈ ಕೋರ್ಸ್​ ಮೂಲಕ ನೀವು ಡ್ರಾಯಿಂಗ್, ಮೋಷನ್ ಡಿಸೈನಿಂಗ್ ಅನ್ನು ಕಲಿಯಬಹುದು. ಗ್ರಾಫಿಕ್ ಡಿಸೈನಿಂಗ್ ಕೋರ್ಸ್‌ನೊಂದಿಗೆ ಸ್ವತಂತ್ರ ವೃತ್ತಿಜೀವನವನ್ನು ನಿರ್ಮಿಸಬಹುದು. ದೊಡ್ಡ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಬಹುದು.


4) ಸಾಫ್ಟ್​ ಸ್ಕಿಲ್​​ ಟ್ರೈನಿಂಗ್​ ಕೋರ್ಸ್


ಉದ್ಯೋಗಿಗಳು ತಮ್ಮ ಪದವಿಯನ್ನಷ್ಟೇ ನೆಚ್ಚಿಕೊಳ್ಳದೆ, ಕಾಲ ಬದಲಾದಂತೆ ಹೊಸ ಹೊಸ ಕೌಶಲ್ಯಗಳನ್ನು ಕಲಿಯಲೇಬೇಕು. ಆ ಮೂಲಕ ಉದ್ಯೋಗಿಯಾಗಿ ಅಪ್​ ಡೇಟ್​ ಆಗುತ್ತಲೇ ಇರಬೇಕು.  ಸಾಫ್ಟ್ ಸ್ಕಿಲ್ಸ್ ಕೋರ್ಸ್ ನಿಮ್ಮ ವೃತ್ತಿಪರ ಮಿತಿಗಳನ್ನು ಮತ್ತಷ್ಟು ಬಲಪಡಿಸುತ್ತದೆ. ವೃತ್ತಿಜೀವನದಲ್ಲಿ ಬದಲಾವಣೆಯನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ.

Published by:Kavya V
First published: