• ಹೋಂ
  • »
  • ನ್ಯೂಸ್
  • »
  • Jobs
  • »
  • Career Development: ಐಐಟಿ ಒದಗಿಸುತ್ತಿರುವ 4 ಆನ್​ಲೈನ್​ ಕೋರ್ಸ್​ಗಳನ್ನು ಮಿಸ್ ಮಾಡಿಕೊಳ್ಳಬೇಡಿ; ಪೂರ್ತಿ ಮಾಹಿತಿ ಇಲ್ಲಿದೆ

Career Development: ಐಐಟಿ ಒದಗಿಸುತ್ತಿರುವ 4 ಆನ್​ಲೈನ್​ ಕೋರ್ಸ್​ಗಳನ್ನು ಮಿಸ್ ಮಾಡಿಕೊಳ್ಳಬೇಡಿ; ಪೂರ್ತಿ ಮಾಹಿತಿ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ವೃತ್ತಿ ವಿಕಸನಕ್ಕೆ ಅಗತ್ಯವಾಗಿರುವ ಕೆಲವೊಂದು ಕೋರ್ಸ್‌ಗಳನ್ನು ಐಐಟಿ ಬಾಂಬೆ ಪ್ರಸ್ತುತಪಡಿಸುತ್ತಿದ್ದು,  ಆ ಕೋರ್ಸ್‌ಗಳು ಯಾವುವು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

  • Share this:

ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಹಾಗೂ ಸಂಶೋಧನೆಯ ಹಂತವನ್ನು ಸುಧಾರಿಸುವ ನಿಟ್ಟಿನಲ್ಲಿ ಐಐಟಿ (IIT) ಬಾಂಬೆ ಸಂಬಂಧಿತ ವಿಶ್ವವಿದ್ಯಾಲಯಗಳು (University)  ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನೆಲೆಯಲ್ಲಿ ಪಾಲುದಾರಿಕೆಯನ್ನು ಮಾಡಿಕೊಂಡಿದೆ.


ವೃತ್ತಿ ವಿಕಸನಕ್ಕೆ ಅಗತ್ಯವಾಗಿರುವ ಕೆಲವೊಂದು ಕೋರ್ಸ್‌ಗಳನ್ನು ಐಐಟಿ ಬಾಂಬೆ ಪ್ರಸ್ತುತಪಡಿಸುತ್ತಿದ್ದು,  ಆ ಕೋರ್ಸ್‌ಗಳು ಯಾವುವು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.


ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಸರ್ಟಿಫಿಕೇಶನ್ ಕೋರ್ಸ್‌ಗಳು


ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಅಪ್ಲೈಡ್ ಅನಾಲಿಟಿಕ್ಸ್‌ನಲ್ಲಿ ಸರ್ಟಿಫೈಡ್ ಪ್ರೊಗ್ರಾಮ್ ಅನ್ನು ಐಐಟಿ ಬಾಂಬೆ ಒದಗಿಸುತ್ತಿದ್ದು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ಅರಿತುಕೊಳ್ಳುವುದು, ಪರಿಕರಗಳು, ತಂತ್ರಜ್ಞಾನಗಳ ಬಗ್ಗೆ ತಿಳುವಳಿಕೆ, ಮೆತಾಡಾಲಿಜಿ, ನುರಿತ ಕಲಿಕಾ ವಾತಾವರಣದ ಮೂಲಕ ಆಳವಾದ ಜ್ಞಾನ ಸಂಪಾದನೆಯನ್ನು ವಿದ್ಯಾರ್ಥಿಗಳು ಮಾಡಬಹುದಾಗಿದೆ.
ಮಾರ್ಕೆಟಿಂಗ್, ಸೇಲ್ಸ್, ಬ್ಯುಸಿನೆಸ್ ಹಾಗೂ ಎಂಟರ್‌ಪ್ರೀನರ್‌ಗಳು ಮಾರುಕಟ್ಟೆ ಷೇರುಗಳನ್ನು ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಹೆಚ್ಚಿಸಿಕೊಳ್ಳಬಹುದಾಗಿದ್ದು ವ್ಯವಹಾರ ವೃದ್ಧಿಗೂ ಡಿಜಿಟಲ್ ಮಾರುಕಟ್ಟೆ ನೆರವನ್ನು ನೀಡಲಿದೆ.


ಡಿಸೈನ್ ಥಿಂಕಿಂಗ್‌ನಲ್ಲಿ ಸರ್ಟಿಫಿಕೇಟ್ ಪ್ರೊಗ್ರಾಮ್


ಸರಕುಗಳು, ಸೇವೆ, ಕಾರ್ಯಾಚರಣೆಯೊಂದಿಗೆ ಡಿಸೈನ್ ಥಿಂಕಿಂಗ್ ಅಂಶಗಳನ್ನು ಸೇರಿಸಿಕೊಂಡಲ್ಲಿ ವ್ಯವಹಾರವನ್ನು ಇನ್ನಷ್ಟು ವೃದ್ಧಿಸಿಕೊಳ್ಳಬಹುದಾಗಿದೆ. ಗ್ರಾಹಕರ ಬೇಕು ಬೇಡಗಳನ್ನು ಅರಿತುಕೊಂಡು ಮುಂದುವರಿಯಲು ಡಿಸೈನ್ ಥಿಂಕಿಂಗ್ ನೆರವನ್ನು ನೀಡಲಿದೆ.


ಐಐಟಿ ಬಾಂಬೆ ಆಫರ್ ಮಾಡುತ್ತಿರುವ ಡಿಸೈನ್ ಥಿಂಕಿಂಗ್ ಕೋರ್ಸ್ ಮೂಲಕ ಬ್ಯುಸಿನೆಸ್‌ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಅಂತೆಯೇ ನವೀನ ಮಾದರಿಯ ಯೋಜನೆಗಳನ್ನು ಬ್ಯುಸಿನೆಸ್‌ನಲ್ಲಿ ಅಳವಡಿಸಿಕೊಳ್ಳಲು ಡಿಸೈನ್ ಥಿಂಕಿಂಗ್ ನೆರವನ್ನು ನೀಡಲಿದೆ.


ಮೆಶೀನ್ ಲರ್ನಿಂಗ್ ಹಾಗೂ ಪೈಥಾನ್‌ನೊಂದಿಗೆ ಎಐ ಸರ್ಟಿಫಿಕೇಟ್ ಪ್ರೊಗ್ರಾಮ್


ಐಐಟಿ ಬಾಂಬೆ ಆಧುನಿಕ ತಂತ್ರ್ಞಾನ ಕ್ಷೇತ್ರಕ್ಕೆ ಅನುಸಾರವಾಗಿ ಹೊಸ ಹೊಸ ಕೋರ್ಸ್‌ಗಳನ್ನು ಪರಿಚಯಿಸುತ್ತಿದ್ದು ಅದರಲ್ಲಿ ಮೆಶೀನ್ ಲರ್ನಿಂಗ್ ಹಾಗೂ ಪೈಥಾನ್‌ನೊಂದಿಗೆ ಎಐ ಸರ್ಟಿಫಿಕೇಟ್ ಕೋರ್ಸ್ ಕೂಡ ಒಂದಾಗಿದೆ.


ಇದು ಆರು ತಿಂಗಳ ಕೋರ್ಸ್ ಆಗಿದ್ದು ಅಟೊಮೇಶನ್, ಡಿಸೀಶನ್ ಮೇಕಿಂಗ್ ಕ್ಷೇತ್ರದಲ್ಲಿ ಮೆಶೀನ್ ಲರ್ನಿಂಗ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ವೃತ್ತಿನಿರತ ಮಾರ್ಗದರ್ಶಕರೇ ಕೋರ್ಸ್‌ಗಳಲ್ಲಿ ಭಾಗವಹಿಸುವವರಿಗೆ ಈ ಕ್ಷೇತ್ರಗಳ ಬಗ್ಗೆ ನುರಿತ ಜ್ಞಾನವನ್ನು ಉಣಬಡಿಸಲಿದ್ದಾರೆ.


Short Term Courses After 12th That Can Land You A Job


ಎಕ್ಸಿಕ್ಯೂಟಿವ್ ಎಮ್‌ಬಿಎ ಕೋರ್ಸ್


ಐಐಟಿ ಬಾಂಬೆ ಒದಗಿಸುತ್ತಿರುವ ಎಕ್ಸಿಕ್ಯೂಟಿವ್ ಎಮ್‌ಬಿಎ ಕೋರ್ಸ್ ಅತ್ಯಂತ ಉಪಯುಕ್ತ ಕೋರ್ಸ್ ಎಂದೆನಿಸಿದ್ದು ಕಂಪನಿ ಆರಂಭಿಸುತ್ತಿರುವವರಿಗೆ ಕೂಡ ಸೂಕ್ತ ಮಾರ್ಗದರ್ಶಿ ಎಂದೆನಿಸಿದೆ.


ವೃತ್ತಿ ಸುಧಾರಣೆಗೂ ಈ ಕೋರ್ಸ್ ನೆರವಾಗಲಿದೆ. ಬ್ಯುಸಿನೆಸ್ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಐಐಟಿ ಬಾಂಬೆ ಒದಗಿಸುತ್ತಿರುವ ಈ ಕೋರ್ಸ್‌ಗಳು ನೆರವನ್ನು ನೀಡಲಿದ್ದು ಸ್ವಂತ ಬ್ಯುಸಿನೆಸ್ ಮಾಡುವವರಿಗೆ ಉತ್ತಮ ಮಾರ್ಗದರ್ಶನ ನೀಡಲಿದೆ. ಈ ಕೋರ್ಸ್‌ಗಳು ಒದಗಿಸುತ್ತಿರುವ ಸಂಬಂಧಿತ ಪ್ರಾಜೆಕ್ಟ್‌ಗಳ ಮೂಲಕ ನೈಜ ಜಗತ್ತಿನ ಸಮಸ್ಯೆಗಳನ್ನು ಪತ್ತೆಹಚ್ಚಿ ಪರಿಹಾರವನ್ನು ನೀಡಬಹುದಾಗಿದೆ.


ನುರಿತ ತರಬೇತಿ ಪಡೆದ ಅನುಭವಸ್ಥ ತರಬೇತಿದಾರರು ಈ ಕೋರ್ಸ್‌ಗಳನ್ನು ನಡೆಸುತ್ತಿದ್ದು ಕೋರ್ಸ್‌ಗಳಲ್ಲಿ ಭಾಗವಹಿಸುವ ಉದ್ಯೋಗಾಂಕ್ಷಿ, ಅಭ್ಯರ್ಥಿಗಳು ವೃತ್ತಿ ಬೆಳವಣಿಗೆಗೆ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.


ಇದನ್ನೂ ಓದಿ: Job Hunt: ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ಉದ್ಯೋಗಗಳನ್ನು ಹುಡುಕಲು ಈ 5 ಸೈಟ್​ಗಳು ಬೆಸ್ಟ್


ಮಾಸೀವ್ ಓಪನ್ ಆನ್‌ಲೈನ್ ಕೋರ್ಸ್‌ಗಳು


ಬೇರೆ ಬೇರೆ ಶಿಕ್ಷಣ, ವೃತ್ತಿ ಹಿನ್ನಲೆಗಳಿಂದ ಬಂದಿರುವವರಿಗೆ ಐಐಟಿ ಬಾಂಬೆ ಆನ್‌ಲೈನ್ ಲರ್ನಿಂಗ್ ಪ್ರೊಗ್ರಾಮ್ ಅನ್ನು ರಚಿಸಿದ್ದು ಭಾರತೀಯ ವಿದ್ಯಾರ್ಥಿಗಳಿಗೆ ನವ ಯುಗದ ತಂತ್ರಜ್ಞಾನಗಳೊಂದಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಸಾಧಿಸುವರಿಗೆ ಹೇಳಿಮಾಡಿಸಿರುವ ಕೋರ್ಸ್ ಎಂದೆನಿಸಿದೆ. ಐಐಟಿ ಬಾಂಬೆ ಆನ್‌ಲೈನ್ ವೇದಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಬಗೆಯ ಕಲಿಕೆಯುವಿಕೆಯನ್ನು ಒದಗಿಸುತ್ತಿದೆ.


ಐಐಟಿ ಬಾಂಬೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಗೂಗಲ್‌ನಂತಹ ದೈತ್ಯ ಕಂಪನಿಗಳಲ್ಲಿ ಉದ್ಯೋಗವಕಾಶದ ಆಫರ್‌ಗಳು ಹೆಚ್ಚು ದೊರೆಯುತ್ತವೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಸೈನ್ಸ್ ಐಐಟಿ ಬಾಂಬೆಯ ಹೆಚ್ಚು ಪ್ರಸಿದ್ಧ ವಿಭಾಗಗಳು ಎಂದೆನಿಸಿವೆ. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಟಾಪ್ ಐಐಟಿ ಎಂಬ ಹೆಗ್ಗಳಿಕೆಯನ್ನು ಐಐಟಿ ಬಾಂಬೆ ಪಡೆದುಕೊಂಡಿದೆ.

First published: