ಯಾವುದೇ ಉದ್ಯೋಗದಲ್ಲಿಯಾದರೂ (Job) ಉದ್ಯೋಗಿಗೆ (Employee) ವಯಸ್ಸಾಗ್ತಾ (Age) ಹೋದಂಗೆಲ್ಲಾ ಅವರಿಗೆ ಸ್ವಲ್ಪ ಅವಕಾಶಗಳು (Opportunity) ಕಡಿಮೆ ಆಗುತ್ತಾ ಹೋಗುತ್ತವೆ ಅಂತ ಬಹುತೇಕರು ಹೇಳುತ್ತಾರೆ. ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಬಿಡಿ, ಏಕೆಂದರೆ ಕೆಲವರು ತಮ್ಮ ವಯಸ್ಸಿಗೆ ತಕ್ಕಂತೆ ಪ್ರಮೋಷನ್ (Job Promotion) ಮೇಲೆ ಪ್ರಮೋಷನ್ ಪಡೆಯುತ್ತಾ ಮುಂದೆ ಹೋಗ್ತಾ ಇರ್ತಾರೆ ಅಂತ ಹೇಳಬಹುದು. ಸಂಶೋಧನೆಯ ಪ್ರಕಾರ, ಯುವ, ಅನನುಭವಿ ವ್ಯಕ್ತಿಗಳು ಮತ್ತು ವಯಸ್ಸಾದ ಉದ್ಯೋಗಿಗಳಿಗೆ ಹೊಸ ಉದ್ಯೋಗವನ್ನು ಪಡೆಯುವುದು ಸ್ವಲ್ಪ ಹೆಚ್ಚು ಕಷ್ಟ.
ಉದ್ಯೋಗದಾತರು ಮತ್ತು ನೇಮಕಾತಿದಾರರು ವಯಸ್ಸಾದವರು ಮತ್ತು ಅನನುಭವಿ ಅಂತೆಲ್ಲಾ ತಾರತಮ್ಯ ಮಾಡುವ ಉದ್ದೇಶವನ್ನು ಹೊಂದಿಲ್ಲವಾದರೂ, ಅವರು ಆಕಸ್ಮಿಕವಾಗಿ ಪಡೆಯುವ ಅರ್ಜಿಗಳನ್ನು ಶಾರ್ಟ್ ಲಿಸ್ಟ್ ಮಾಡಲು ಈ ತಂತ್ರಗಳನ್ನು ಬಳಸುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಆದಾಗ್ಯೂ, ಉದ್ಯೋಗಾಕಾಂಕ್ಷಿಯಾಗಿ ನೀವು ಉದ್ಯೋಗ ಪೋರ್ಟಲ್ ಮೂಲಕ ಖಾಲಿ ಇರುವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದಾಗ ಕೆಲವು ವಿಷಯಗಳನ್ನು ನಿಮ್ಮ ಗಮನದಲ್ಲಿಟ್ಟುಕೊಳ್ಳುವುದು ತುಂಬಾನೇ ಅವಶ್ಯಕವಾಗುತ್ತದೆ. ಈ ಅಂಶಗಳನ್ನು ನೀವು ಪಾಲಿಸಿದರೆ, ಉದ್ಯೋಗದಾತರು ಮತ್ತು ನೇಮಕಾತಿದಾರರಿಂದ ಸಂಭಾವ್ಯ ವಯಸ್ಸಿನ ಪಕ್ಷಪಾತವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಅಂತ ಹೇಳಬಹುದು.
1. ನಿಮ್ಮ ಸಂಪರ್ಕ ವಿವರಗಳನ್ನು ನವೀಕರಿಸಿ
ನಿಮ್ಮ ವೃತ್ತಿಪರ ಇ-ಮೇಲ್ ವಿಳಾಸವನ್ನು ಬಳಸುವುದರಿಂದ ನೀವು ಡಿಜಿಟಲ್ ಪ್ರವೀಣರಾಗಿದ್ದೀರಿ ಎಂದು ನೇಮಕಾತಿ ಮೇಲ್ವಿಚಾರಕರನ್ನು ಅರ್ಥ ಮಾಡಿಸಬಹುದು. ಹೆಚ್ಚುವರಿಯಾಗಿ, ನಿಮ್ಮ ಇ-ಮೇಲ್ ವಿಳಾಸದಲ್ಲಿ ನಿಮ್ಮ ಹೆಸರನ್ನು ಒದಗಿಸಿ.
ನಿಮ್ಮ ಮನೆಯ ಫೋನ್ ಸಂಖ್ಯೆಯನ್ನು ನಿಮ್ಮ ಸಿವಿಯಲ್ಲಿ ಹಾಕುವ ಬದಲು, ನಿಮ್ಮ ಮೊಬೈಲ್ ಫೋನ್ ಸಂಖ್ಯೆಯನ್ನು ನೀಡಿ. ನಿಮ್ಮ ಸೆಲ್ ಫೋನ್ ಸಂಖ್ಯೆಯು ನೀವು ಪ್ರಯಾಣದಲ್ಲಿರುವಾಗ ನಿಮ್ಮನ್ನು ಸಂಪರ್ಕಿಸಲು ನೇಮಕಾತಿ ವ್ಯವಸ್ಥಾಪಕರಿಗೆ ಅನುವು ಮಾಡಿಕೊಡುತ್ತದೆ. ಇದಲ್ಲದೆ, ನಿಮ್ಮ ವಾಯ್ಸ್ ಮೇಲ್ ಸಂದೇಶ ಸರಿಯಾಗಿ ಕೆಲಸ ಮಾಡುತ್ತಿದೆ ಅಂತ ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: Toxic Coworkers: ಆಫೀಸ್ನಲ್ಲಿ ಈ 4 ರೀತಿಯ ಸಹೋದ್ಯೋಗಿಗಳಿಂದ ದೂರು ಇರುವುದೇ ಉತ್ತಮ
2. ನಿರ್ವಹಿಸಿದ ಕರ್ತವ್ಯಗಳ ಬದಲು ಸಾಧನೆಗಳ ಬಗ್ಗೆ ಸಿವಿಯಲ್ಲಿ ಬರೆಯಿರಿ
ಹೊಸ ಉದ್ಯೋಗಿಗಳನ್ನು ನೇಮಕ ಮಾಡುವಾಗ, ಇತ್ತೀಚಿನ ಅನುಭವ ಹೊಂದಿರುವ ವ್ಯಕ್ತಿಗಳನ್ನು ಹೆಚ್ಚಾಗಿ ಬಯಸುತ್ತಾರೆ. ಸರಳವಾದ ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಈಗಿನ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರದಿರುವ ವರ್ಷಗಳ ಹಿಂದೆ ನೀವು ಎಂಟ್ರಿ ಲೆವೆಲ್ ಉದ್ಯೋಗಿಯಾಗಿ ಮಾಡಿದ ಕೆಲಸದ ಬಗ್ಗೆ ಉದ್ಯೋಗದಾತರು ಆಸಕ್ತಿ ಹೊಂದಿರುವುದಿಲ್ಲ.
ಯಾವುದೇ ಸಂಬಂಧಿತ ಅನುಭವವನ್ನು ಹೈಲೈಟ್ ಮಾಡುವ ಬದಲು, ನಿಮ್ಮ ಇತ್ತೀಚಿನ ಸಂಬಂಧಿತ ಅನುಭವಕ್ಕೆ ಒತ್ತು ನೀಡಿ. ನಿಮ್ಮ ವೃತ್ತಿಜೀವನದಲ್ಲಿ ನೀವು ಹೆಚ್ಚು ಕಾಲ ಮುಂದುವರಿದಂತೆ, ನಿಮ್ಮ ಮೊದಲ ಕೆಲಸಗಳು ಕಡಿಮೆ ಪ್ರಸ್ತುತವಾಗುವುದರಿಂದ, ಕಳೆದ 10 ರಿಂದ 15 ವರ್ಷಗಳಲ್ಲಿ ಹೊಂದಿರುವ ಉದ್ಯೋಗದ ಮೇಲೆ ಗಮನ ಹರಿಸುವುದು ಸೂಕ್ತ.
ಉದ್ಯೋಗದಾತರು ನಿಮ್ಮ ಹಿಂದಿನ ಕೆಲಸದ ಅನುಭವದಲ್ಲಿ ಆಸಕ್ತಿ ಹೊಂದಿರುವುದಕ್ಕಿಂತ ಹೆಚ್ಚಾಗಿ ಆ ಕೆಲಸದಲ್ಲಿ ನೀವು ಮಾಡಿರುವ ಸಾಧನೆಗಳನ್ನು ನೋಡಲು ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದ, ನಿಮ್ಮ ಹಿಂದಿನ ಕರ್ತವ್ಯಗಳನ್ನು ವಿವರಿಸುವುದರ ಜೊತೆಗೆ, ಈ ಪ್ರತಿಯೊಂದು ಸ್ಥಾನಗಳಿಗೆ ಸಂಬಂಧಿಸಿದಂತೆ ನಿಮ್ಮ ಯಶಸ್ಸನ್ನು ವಿವರಿಸುವ ಬುಲೆಟ್ ಪಾಯಿಂಟ್ ಗಳ ಪಟ್ಟಿಯನ್ನು ಸಹ ನೀವು ನಿಮ್ಮ ಸಿವಿಯಲ್ಲಿ ಒದಗಿಸಬಹುದು.
3. ನಿಮ್ಮ ಕೌಶಲ್ಯಗಳನ್ನು ಅಪ್ಡೇಟ್ ಮಾಡಿಕೊಂಡು ಪ್ರಸ್ತುತವಾಗಿರಿ
ವಯಸ್ಸಿನ ತಾರತಮ್ಯವನ್ನು ಎದುರಿಸುವಲ್ಲಿ ವಯಸ್ಸಾದ ಉದ್ಯೋಗ ಅರ್ಜಿದಾರರು ಎದುರಿಸುತ್ತಿರುವ ದೊಡ್ಡ ಅಡೆತಡೆಗಳಲ್ಲಿ ಇದು ಒಂದಾಗಿದೆ. ನಿಮ್ಮ ಪರಿಣತಿ ಮತ್ತು ಕೌಶಲ್ಯಗಳ ಹೊರತಾಗಿಯೂ, ನೇಮಕಾತಿದಾರರು ನಿಮ್ಮನ್ನು ಗೊಂದಲದಲ್ಲಿ ಸಿಲುಕಿಕೊಳ್ಳುವಂತೆ ಮತ್ತು ಬದಲಾಗಲು ಇಷ್ಟಪಡದಿರುವಂತೆ ನೋಡಬಹುದು.
ನಿರಂತರ ವೃತ್ತಿಪರ ಬೆಳವಣಿಗೆ ಅಥವಾ ತರಬೇತಿಯ ಮೂಲಕ, ವಿಶೇಷವಾಗಿ ತಂತ್ರಜ್ಞಾನದಲ್ಲಿ, ನಮ್ಯತೆ ಮತ್ತು ಅನುಭವದೊಂದಿಗೆ ಬೆರೆಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ನೀವು ವಯಸ್ಸಿನ ತಾರತಮ್ಯವನ್ನು ಎದುರಿಸಲು ಸಾಧ್ಯವಾಗುತ್ತದೆ.
ಈ ಸಲಹೆಗಳು ನಿಮಗೆ ಉದ್ಯೋಗ ಹುಡುಕುವಲ್ಲಿ ಸಹಾಯ ಮಾಡಬಹುದು..
ಈ ಮೇಲೆ ನೀಡಲಾದ ಸಲಹೆಗಳು ನಿಮ್ಮ ಸಿವಿಯನ್ನು ವಯಸ್ಸಿನ ತಾರತಮ್ಯದಿಂದ ರಕ್ಷಿಸಬಹುದು ಮತ್ತು ನೀವು ಬಯಸುವ ಮತ್ತು ಅರ್ಹವಾದ ಆನ್ಲೈನ್ ಉದ್ಯೋಗ ಪೋರ್ಟಲ್ ಮೂಲಕ ವೃತ್ತಿಪರ ಅವಕಾಶಗಳಿಗೆ ಹೆಚ್ಚಿನ ಪ್ರವೇಶವನ್ನು ಒದಗಿಸುತ್ತದೆ.
ನಿಮ್ಮ ವಯಸ್ಸಿನ ಜೊತೆಗೆ, ನಿಮ್ಮ ಸಿವಿಯಿಂದ ಹೆಚ್ಚುವರಿ ಮತ್ತು ಅನಗತ್ಯ ವೈಯಕ್ತಿಕ ವಿವರಗಳನ್ನು ನೀವು ಹೊರಗಿಡಬೇಕು, ನಿಮ್ಮ ರೆಸ್ಯೂಮ್ ಅನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಲು ನೇಮಕಾತಿ ವ್ಯವಸ್ಥಾಪಕರಿಗೆ ಅವಕಾಶ ನೀಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ