• ಹೋಂ
  • »
  • ನ್ಯೂಸ್
  • »
  • Jobs
  • »
  • Photography: ಫೋಟೋಗ್ರಫಿ ಕ್ಷೇತ್ರದಲ್ಲಿ ವೃತ್ತಿ ಜೀವನ ಸ್ಟಾರ್ಟ್​ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್​

Photography: ಫೋಟೋಗ್ರಫಿ ಕ್ಷೇತ್ರದಲ್ಲಿ ವೃತ್ತಿ ಜೀವನ ಸ್ಟಾರ್ಟ್​ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫೋಟೋಗ್ರಫಿ ಬೇಡಿಕೆಯ ಕ್ಷೇತ್ರವಾಗಿದ್ದು, ಇಲ್ಲಿ ಪರಿಣಿತಿಗಿಂತ ಕ್ರಿಯಾತ್ಮಕತೆ ಹೆಚ್ಚು ಮುಖ್ಯವಾಗಿರುತ್ತದೆ. ಒಬ್ಬ ಅನುಭವಿ ಫೋಟೋಗ್ರಾಫರ್ ಹೇಗಿರಬೇಕು ಎಂಬುದನ್ನು ಬಹಳ ಮುಖ್ಯ ವಿಚಾರ. 

  • Trending Desk
  • 3-MIN READ
  • Last Updated :
  • Share this:

    ಸಾಮಾನ್ಯವಾಗಿ ವೃತ್ತಿ (Career) ಆಯ್ಕೆ ಮಾಡುವಾಗ ಪ್ರತಿಯೊಬ್ಬರೂ ತಮ್ಮ ಇಚ್ಛೆಯ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಾರೆ. ಇಂಜಿನಿಯರ್, ಮೆಡಿಕಲ್, ಶಿಕ್ಷಣ, ಲಲಿತ ಕಲೆಗಳು ಹೀಗೆ ಪ್ರತಿಯೊಬ್ಬರ ಇಚ್ಛೆ ಹಾಗೂ ಉದ್ದೇಶಕ್ಕೆ ಅನುಗುಣವಾದ ಕ್ಷೇತ್ರಗಳಲ್ಲಿ ಉದ್ಯೋಗವನ್ನು (Job) ಗಿಟ್ಟಿಸಿಕೊಳ್ಳಬಹುದಾಗಿದೆ. ಫೋಟೋಗ್ರಫಿ ಕ್ಷೇತ್ರದಲ್ಲಿ ಉತ್ತಮ ವೇತನ ಹಾಗೂ ಒಳ್ಳೆಯ ಉದ್ಯೋಗಾರ್ಹತೆ (Education Qualification) ಹೊಂದಬೇಕು ಎಂಬುವುದು ನಿಮ್ಮ ಆಸೆಯಾಗಿದ್ದರೆ ಅದನ್ನು ಹೇಗೆ ಸಾಧಿಸಬಹುದು ಎಂಬುವುದನ್ನು ತಿಳಿದುಕೊಳ್ಳೋಣ.


    ಫೋಟೋಗ್ರಫಿ (Photography)ಕ್ಷೇತ್ರ ಎಂಬುದು ಬೇಡಿಕೆಯ ಕ್ಷೇತ್ರವಾಗಿದ್ದು, ಇಲ್ಲಿ ಪರಿಣಿತಿಗಿಂತ ಕ್ರಿಯಾತ್ಮಕತೆ ಹೆಚ್ಚು ಮುಖ್ಯವಾಗಿರುತ್ತದೆ. ಒಬ್ಬ ಅನುಭವಿ ಫೋಟೋಗ್ರಾಫರ್ ಹೇಗಿರಬೇಕು ಎಂಬುದನ್ನು ಬಹಳ ಮುಖ್ಯ ವಿಚಾರ.


    ಇದನ್ನೂ ಓದಿ: Photography: ಚಲಿಸುತ್ತಿರುವ ರೈಲಿನಿಂದ ಸೆರೆಯಾದವು ಮ್ಯಾಜಿಕಲ್ ಫೋಟೋಗಳು; ಮಿಸ್​ ಮಾಡದೇ ನೋಡಿ

    ಹಣ ಖರ್ಚುಮಾಡುವ ಮೊದಲು ಯೋಚನೆ ಮಾಡಿ


    ಫೋಟೋಗ್ರಫಿ ಪರಿಕರಗಳಿಗೆ ಹಣ ಖರ್ಚುಮಾಡುವ ಮುನ್ನ ಯೋಚಿಸಲೇಬೇಕು. ಈ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿದ ನಂತರ ಕಡಿಮೆ ಖರ್ಚಿನಲ್ಲಿ ಕೂಡ ಯಶಸ್ಸು ಹೇಗೆ ಸಾಧಿಸಬಹುದು ಎಂಬುದು ನಿಮಗೆ ಮನದಟ್ಟಾಗಿರುತ್ತದೆ. ವೃತ್ತಿಜೀವನವನ್ನು ಇನ್ನಷ್ಟು ನವೀಕರಿಸುವುದು ಎಂದರೆ ಹೊಸ ಹೊಸ ಕೌಶಲ್ಯಗಳನ್ನು ಕಲಿತುಕೊಳ್ಳಿ ಹಾಗೂ ಇನ್ನಿತರ ಫೋಟೋಗ್ರಫಿ ತರಬೇತುದಾರರ ಸಂಪರ್ಕದಲ್ಲಿರಿಸಿ. ನಿಮ್ಮ ಕರಕುಶಲ ಮತ್ತು ನಿಮ್ಮ ಅನನ್ಯ ಕಲಾತ್ಮಕತೆಯನ್ನು ಅಭಿವೃದ್ಧಿಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಿ.


    ನಿಮ್ಮ ಬಳಿ ಇರುವ ಕ್ಯಾಮೆರಾದಲ್ಲೇ ಆಕರ್ಷಕ ಫೋಟೋಗಳನ್ನು ತೆಗೆಯಿರಿ. ಫೋಟೋಗ್ರಫಿಯಲ್ಲಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ.


    ಲಾಭರಹಿತ ವ್ಯವಹಾರವನ್ನು ಲಾಭಕರವಾಗಿ ಪರಿಗಣಿಸುವುದು


    ಛಾಯಾಗ್ರಹಣ ಕ್ಷೇತ್ರ ವಿನೋದಮಯವಾದುದು. ಇದಕ್ಕೆ ಹೆಚ್ಚಿನ ಕಲಾತ್ಮಕತೆ ಹಾಗೂ ಪ್ರತಿಭೆ ಬೇಕು ಎಂದೇನಿಲ್ಲ. ಕೆಲವೊಂದು ಟೆಕ್ನಿಕ್‌ಗಳನ್ನು ಅರಿತುಕೊಂಡರೆ ಸಾಕು. ದುಡ್ಡುಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಕ್ಷೇತ್ರದಲ್ಲಿ ಸಾಧಿಸಬೇಕು ಎನ್ನುವುದು ತಪ್ಪು ಕಲ್ಪನೆಯಾಗಿದೆ. ಖ್ಯಾತಿಯೊಂದಿಗೆ ಗಳಿಕೆ ಕೂಡ ಬರುತ್ತದೆ ಎಂಬ ಸಿದ್ಧಾಂತವನ್ನಿಟ್ಟುಕೊಂಡು ಮುಂದುವರಿಯಿರಿ.


    ಸಮಯ ಹಾಗೂ ಉತ್ಪನ್ನದ ಮೌಲ್ಯಮಾಪನ


    ನೀವು ವೃತ್ತಿಪರ ಛಾಯಾಗ್ರಾಹಕರಾಗಿ ವೃತ್ತಿಜೀವನವನ್ನು ನಿರ್ಮಿಸದ ಹೊರತು, ಯಶಸ್ಸು ನಿಮ್ಮನ್ನರಸಿಕೊಂಡು ಬರುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ನಿಮ್ಮ ಸಮಯ ಮತ್ತು ನಿಮ್ಮ ಉತ್ಪನ್ನವನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡುವುದು ಕೂಡ ಛಾಯಾಗ್ರಹಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಉತ್ತಮ ಮಾರ್ಗವಾಗಿದೆ.


    ವೃತ್ತಿಯಲ್ಲಿ ಹೆಸರು ಗಳಿಕೆ ಸಂಪಾದಿಸಬೇಕು ಎಂದಾದಲ್ಲಿ ಕೆಲವೊಂದು ಸುಧಾರಣೆಗಳನ್ನು ಮಾಡಬೇಕಾಗುತ್ತದೆ. ವೃತ್ತಿಪರರ ಮಾರ್ಗದರ್ಶನಗಳನ್ನು ಅನುಕರಿಸಿ ಅವರ ಸಲಹೆಗಳನ್ನು ಪಾಲಿಸಿ ಈ ಸಮಯದಲ್ಲಿ ನಿಮ್ಮಲ್ಲಿರುವ ಕ್ರಿಯಾತ್ಮಕತೆಯನ್ನು ಮರೆಯದಿರಿ. ನಿಮ್ಮೊಳಗಿರುವ ಪ್ರತಿಭೆಗೆ ಅವಕಾಶ ನೀಡಿ ಹಾಗೂ ಮುಂದುವರಿಯಿರಿ.


    ವೃತ್ತಿಪರ ಛಾಯಾಗ್ರಾಹಕರನ್ನು ಅನುಸರಿಸುವುದು


    ಇಂದು ಸಾಮಾಜಿಕ ತಾಣಗಳು ಮಾರುಕಟ್ಟೆಯನ್ನಾಳುತ್ತಿರುವ ಐಕಾನ್‌ಗಳು ಎಂದೆನಿಸಿವೆ. ಛಾಯಾಗ್ರಹ ಕ್ಷೇತ್ರದಲ್ಲಿ ಈ ತಾಣಗಳ ಬಳಕೆಯನ್ನು ನೀವು ಚೆನ್ನಾಗಿ ಮಾಡಿಕೊಳ್ಳಬಹುದು. ನಿಮ್ಮದೇ ಫೋಟೋಗ್ರಫಿ ಪೇಜ್ ತೆರೆಯುವುದು, ಅದರಲ್ಲಿ ಫೋಟೋಗಳನ್ನು ಶೇರ್ ಮಾಡುವುದು ಹೀಗೆ ನಿಮ್ಮ ನೆಚ್ಚಿನ ಕಲೆಯನ್ನು ಪ್ರಚಾರಪಡಿಸಬಹುದು. ನೀವು ಕಷ್ಟಪಟ್ಟು ಅಧ್ಯಯನ ಮಾಡಿದರೆ, ನೀವು ಕೆಲವು ಹಂತದಲ್ಲಿ ಅವರ ತಾಂತ್ರಿಕ ವಿಧಾನವನ್ನು ಅನುಕರಿಸಲು ಸಾಧ್ಯವಾಗುತ್ತದೆ.


    ಇದನ್ನೂ ಓದಿ: Photography Course: ಎಷ್ಟೊಂದು ರೀತಿಯ ಫೋಟೋಗ್ರಫಿ ಕೋರ್ಸ್​ ಇದೆ ಗೊತ್ತಾ? ಇಲ್ಲಿದೆ ಮಾಹಿತಿ

    ನಮ್ಮೊಳಗಿನ ಪ್ರತಿಭೆ ನಮ್ಮ ಬಂಡವಾಳವಾಗಿರಬೇಕು. ಫೋಟೋಗ್ರಫಿ ಕ್ಷೇತ್ರದಲ್ಲಿ ಕ್ರಿಯಾತ್ಮಕತೆಗೆ ಮನ್ನಣೆ ಹೆಚ್ಚು ಹಾಗಾಗಿ ಆದಷ್ಟು ಕ್ರಿಯಾತ್ಮಕ ಅಂಶಗಳನ್ನು ಫೋಟೋಗ್ರಫಿಯಲ್ಲಿ ಅರಿತುಕೊಳ್ಳಿ. ಜೀವನದ ಅನುಭವವನ್ನು ಕ್ಯಾಮೆರಾದಲ್ಲಿ ಮೂಡಿಸಿ. ಜನಜೀನಕ್ಕೆ ಹತ್ತಿರವಿರುವ ಅಂಶಗಳನ್ನೇ ಕ್ಯಾಮೆರಾದಲ್ಲಿ ಬರುವಂತೆ ಮಾಡಿ.




    ಕ್ರಿಯಾತ್ಮಕತೆ ಬಂಡವಾಳವಾಗಿರಲಿ


    ಇತರರನ್ನು ಮಾದರಿಯಾಗಿಟ್ಟುಕೊಂಡು ಅವರನ್ನೇ ಅನುಕರಿಸುವ ಬದಲಿಗೆ ನಿರಂತರ ಅಭಿವೃದ್ಧಿಪಡಿಸುವ ಕೆಲವೊಂದು ಅಂಶಗಳಿಗೆ ಮಾನ್ಯತೆ ನೀಡಿ. ನಿಮ್ಮಲ್ಲಿರುವ ಪ್ರತಿಭೆಗೆ ಮಾನ್ಯತೆ ನೀಡಿ. ಬಜೆಟ್‌ಗೆ ಸೂಕ್ತವಾಗಿರುವಂತೆ ಫೋಟೋಗ್ರಫ್ ಪರಿಕರಗಳನ್ನು ಖರೀದಿಸಿ. ವೃತ್ತಿಪರರ ಸಂಪರ್ಕವನ್ನಿರಿಸಿಕೊಳ್ಳುವುದು ವೃತ್ತಿಯಲ್ಲಿ ಮುನ್ನಡೆಗೆ ಸಹಕಾರಿಯಾಗಿದೆ. ಕೆಲವೊಂದು ದೊಡ್ಡ ದೊಡ್ಡ ಸಮಾರಂಭಗಳ ಪ್ರಾಜೆಕ್ಟ್‌ಗಳು ಇದರಿಂದ ನಿಮಗೆ ದೊರೆಯಬಹುದು ಹಾಗೂ ನೀವು ಇದರಿಂದ ಇನ್ನಷ್ಟು ಕಲಿತುಕೊಳ್ಳಬಹುದಾಗಿದೆ.

    Published by:Precilla Olivia Dias
    First published: