• Home
 • »
 • News
 • »
 • jobs
 • »
 • Career Tips: ಕಷ್ಟಪಟ್ಟು ಕೆಲಸ ಮಾಡಬೇಕಿಲ್ಲ, ಸ್ಮಾರ್ಟ್ ಆಗಿ ಮಾಡಿದ್ರೆ ಸಾಕು: ಈ 3 ಸೂತ್ರ ಪಾಲಿಸಿ

Career Tips: ಕಷ್ಟಪಟ್ಟು ಕೆಲಸ ಮಾಡಬೇಕಿಲ್ಲ, ಸ್ಮಾರ್ಟ್ ಆಗಿ ಮಾಡಿದ್ರೆ ಸಾಕು: ಈ 3 ಸೂತ್ರ ಪಾಲಿಸಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಿಮ್ಮಲ್ಲಿರುವ ಕ್ರಿಯಾಶೀಲತೆ, ಸೃಜನಶೀಲತೆ ಹಾಗೂ ಚಾಣಾಕ್ಷ ಬುದ್ಧಿಯನ್ನು ಸಮರ್ಪಕವಾಗಿ ಸಂಯೋಜಿಸಿ ಕೆಲಸ ಮಾಡಿದಾಗ ನಿಮಗೆ ಯಶಸ್ಸು ಸುಲಭವಾಗಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

 • Share this:

  ಇಂದಿನ ಒತ್ತಡದ ಜೀವನದಲ್ಲಿ (Stressful Life) ಅದೆಷ್ಟೋ ಜನರು ನಿತ್ಯ ತಮ್ಮ ಸಾಮರ್ಥ್ಯಾನುಸಾರ ಕೆಲಸ ಮಾಡಿದರೂ ದಿನದ ಕೊನೆಯಲ್ಲಿ ಏನೋ ಒಂದು ರೀತಿಯ ಅಸಮಾಧಾನ (Dissatisfaction) , ಅತೃಪ್ತತೆಯನ್ನು ಅನುಭವಿಸುತ್ತಿರುತ್ತಾರೆ. ಇದು ಡಿಜಿಟಲ್ ಯುಗ. ಇಲ್ಲಿ ಎಲ್ಲವೂ ಫಾಸ್ಟ್ ಫಾಸ್ಟ್... ಉಪಹಾರ, ಅಲ್ಪ ವಿರಾಮ, ಊಟದಿಂದ ಹಿಡಿದು ಕೆಲಸಗಳನ್ನೂ ಸಹ ಹಲವು ಜನರು ಫಾಸ್ಟ್ ಫಾಸ್ಟ್ ಆಗಿ ಮಾಡುತ್ತಿರುತ್ತಾರೆ. ಆದಾಗ್ಯೂ ಅವರಲ್ಲಿ ಬಹುತೇಕರು ತಮ್ಮ ಸಾಮರ್ಥ್ಯಾನುಸಾರ ಅಥವಾ ಸಾಮರ್ಥ್ಯ ಮೀರಿ ಕೆಲಸ ಮಾಡಿದರೂ ಕೊನೆಯಲ್ಲಿ ಕೆಲಸ (JOB) ಮಾಡಿದ ಪರಿಪೂರ್ಣತೆಯ ಭಾವವನ್ನಾಗಲಿ ಅಥವಾ ತೃಪ್ತಿಯನ್ನಾಗಲಿ ಪಡುವುದಿಲ್ಲ.


  ಹೀಗಾದಾಗ, ಅವರಿಗೆ ತಮ್ಮ ಮೇಲೆ ತಮಗೆ ಒಂದು ರೀತಿಯ ಜಿಗುಪ್ಸಾ ಭಾವನೆ ಉಂಟಾಗುವ ಸಾಧ್ಯತೆ ಇರುತ್ತದೆ. ಆಗ ಸಾಮಾನ್ಯವಾಗಿ ಈ ವಾಕ್ಯಗಳನ್ನು ಹೇಳುತ್ತಾರೆ.


  * ನಾನು ಗಂಟೆಗಟ್ಟಲೆ ಪ್ರಯತ್ನಿಸಿದರೂ ನನಗೆ ಬೇಕಾದ  ಫಲಿತಾಂಶಸಿಗುವುದೇ ಇಲ್ಲ!


  * ಇತರೆ ಎಲ್ಲರೂ ಸರಳವಾಗಿ ಗಳಿಸುವುದನ್ನು ಪಡೆಯಲು ನಾನು ಎಷ್ಟು ಕಷ್ಟಪಡುತ್ತೇನೆ, ನಾನು ಇಷ್ಟು ಕಳಪೆ ಮಟ್ಟದ ಪ್ರದರ್ಶನ ಏಕೆ ನೀಡುತ್ತಿರುವೆ?


  * ನಾನು ಕೆಲಸ ಮಾಡಲು ಪ್ರಾರಂಭಿಸಿದ ತಕ್ಷಣವೇ ನನ್ನಲ್ಲಿರುವ ಎಲ್ಲ ಸ್ಫೂರ್ತಿ ಅಳಿದುಹೋಗುತ್ತದೆ.. ಹೀಗಾದರೆ ನಾನೆಂದಿಗೂ ಉತ್ತಮ ಪ್ರದರ್ಶನ ನೀಡಲಾರೆ.


  ಹೀಗೆ ನಿಮ್ಮಲ್ಲೂ ಈ ರೀತಿಯ ಅನೇಕ ಗೊಂದಲಗಳು, ಪ್ರಶ್ನೆಗಳು ಮೂಡಿರಬೇಕಲ್ಲವೆ. ಈ ರೀತಿಯ ಸಂದರ್ಭ ಎದುರಿಸಿದಾಗ ಜನರು ಇನ್ನಷ್ಟು ಶ್ರಮಪಡಲು ಪ್ರಾರಂಭಿಸಿ ತಮ್ಮನ್ನು ತಾವು ಸಾಕಷ್ಟು ಒತ್ತಡಕ್ಕೆ ಸಿಲುಕಿಸಿಕೊಳ್ಳುತ್ತಾರೆ. ಆದರೆ, ಇದಕ್ಕೆ ಸರಳ ಪರಿಹಾರವೆಂದರೆ ಅಪಾರ ಶ್ರಮಪಟ್ಟು ಕೆಲಸ ಮಾಡುವ ಬದಲು ಚಾಣಾಕ್ಷತೆ ಅಥವಾ ಚತುರತೆಯಿಂದ ಕೆಲಸ ಮಾಡುವುದೇ ಉತ್ತರವಾಗಿದೆ.


  a research says teenage mind getting old earlier
  ಸಾಂಕೇತಿಕ ಚಿತ್ರ


  ಸ್ಮಾರ್ಟ್​ ಆಗಿ ಕೆಲಸ ಮಾಡಿ


  ನಿಮ್ಮಲ್ಲಿರುವ ಕ್ರಿಯಾಶೀಲತೆ, ಸೃಜನಶೀಲತೆ ಹಾಗೂ ಚಾಣಾಕ್ಷ ಬುದ್ಧಿಯನ್ನು ಸಮರ್ಪಕವಾಗಿ ಸಂಯೋಜಿಸಿ ಕೆಲಸ ಮಾಡಿದಾಗ ನಿಮಗೆ ಯಶಸ್ಸು ಸುಲಭವಾಗಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕೆಳಗೆ ನೀಡಿದ ಮೂರು ಬದಲಾವಣೆಗಳನ್ನು ನಿಮ್ಮಲ್ಲೇ ನೀವು ಮಾಡಿಕೊಳ್ಳುವುದರ ಮೂಲಕ ನೀವು ಹೆಚ್ಚು ಉತ್ಪನ್ನಶೀಲತೆಯ ಬುದ್ಧಿಯನ್ನು ವೃದ್ಧಿ ಮಾಡಿಕೊಳ್ಳಬಹುದಾಗಿದೆ.


  1. ನಿಮ್ಮ ಕಂಪ್ಯೂಟರ್ ಸೇರಿದಂತೆ ನೀವು ಕೂರುವ ಸ್ಥಳದ ವಾತಾವರಣವನ್ನು ಮೊದಲು ನಿಮಗೆ ಆರಾಮದಾಯಕವಾಗಿರುವಂತೆ ಮಾಡಿಕೊಳ್ಳಿ.


  ಇತ್ತೀಚೆಗೆ ನಡೆಸಲಾದ ಒಂದು ಅಧ್ಯಯನದ ಪ್ರಕಾರ ಕೂರುವ ಸ್ಥಳದ ಆರಾಮದಾಯಕತೆಯು ಕೆಲಸದಲ್ಲಿ ಉತ್ಸುಕತೆಯನ್ನು, ಗಮನವನ್ನು ಕೇಂದ್ರೀಕರಿಸಲು ಉದ್ಯೋಗಿಗಳಿಗೆ ನೆರವಾಗುತ್ತದೆ ಎಂದು ಕಂಡುಕೊಂಡಿದೆ.


  ಹಾಗಾಗಿ ಮೊದಲು ನಿಮಗೆ ನಿಮ್ಮ ಕೂರುವ ಸ್ಥಳ ಕಿರಿಕಿರಿ ಉಂಟು ಮಾಡುವಂತಿದ್ದರೆ ಮೊದಲು ಅದನ್ನು ನಿವಾರಿಸಿಕೊಳ್ಳಿ. ನಿಮಗೆ ಆರಾಮದಾಯಕವಾಗಿರುವಂತಹ ಸೆಟಪ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಏಕಾಗ್ರತೆಯಲ್ಲಿ ಅಡಚಣೆ ಉಂಟಾಗುವುದಿಲ್ಲ ಎಂದು ಪರಿಣಿತರು ಹೇಳುತ್ತಾರೆ.


  Career Tips how to choose right career as far your dreams
  ಸಾಂದರ್ಭಿಕ ಚಿತ್ರ


  2. ನಿಮ್ಮ ಇಂಪೋಸ್ಟರ್ ಸಿಂಡ್ರೋಮ್ ಅನ್ನು ನಿಮಗಾಗಿ ಕೆಲಸ ಮಾಡುವಂತೆ ಬಳಸಿಕೊಳ್ಳಿ :


  ಕೆಲವರಿಗೆ ತಾವು ಎಷ್ಟೇ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದರೂ ಇತರರಿಗಿಂತ ತಮ್ಮ ಪ್ರದರ್ಶನ ಕಡಿಮೆ ಮಟ್ಟದಲ್ಲಿದೆ ಎಂಬ ಅಸಮಾಧಾನ ಇರುತ್ತದೆ. ಈ ರೀತಿಯ ಧೋರಣೆ ಉಳ್ಳವರನ್ನು ಸಾಮಾನ್ಯವಾಗಿ ಇಂಪೋಸ್ಟರ್ ಸಿಂಡ್ರೋಮ್ ನಿಂದ ಬಳಲುತ್ತಿರುವವರು ಎನ್ನಲಾಗುತ್ತದೆ ಹಾಗೂ 2021ರ ಸಮೀಕ್ಷೆಯು, ಶೇ. 65 ರಷ್ಟು ಜಾಗತಿಕ ಉದ್ಯೋಗ ಶಕ್ತಿಯು ಇದರಿಂದ ಪ್ರಭಾವಿತವಾಗಿದೆ ಎಂದು ತಿಳಿಸಿದೆ.


  ಈ ರೀತಿಯ ನಂಬಿಕೆ ನಿಮ್ಮಲ್ಲೂ ಇದ್ದರೆ, ಅದು ನಿಮ್ಮ ನೈಜ ಕೆಲಸದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದಾಗಿದೆ ಎನ್ನಲಾಗುತ್ತದೆ. ಆದರೆ ಈ ಸಿಂಡ್ರೋಮ್ ಅನ್ನು ನಿಮ್ಮ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಂಡರೆ ಹೇಗೆ? ಹೌದು, ಈ ರೀತಿಯ ಸಿಂಡ್ರೋಮ್ ಉಳ್ಳವರು ಹೆಚ್ಚಿನದನ್ನು ಕಲಿಯಲು ಅಥವಾ ತಿಳಿಯಲೆಂದು ಇತರರೊಂದಿಗೆ ಸಾಕಷ್ಟು ಬೆರೆಯುತ್ತಾರೆ.


  ಇದರಿಂದ ಕೆಲಸದ ಸ್ಥಳದಲ್ಲಿ ಅತಿ ಹತ್ತಿರದ ಸಹವರ್ತಿ ಒಡನಾಟ ಹೊಂದುವಂತಾಗುತ್ತದೆ. ಈ ಮೂಲಕ ಈ ಬಾಂಧವ್ಯವನ್ನು ಬೆಳೆಸಿಕೊಂಡು ಇತರರಿಂದ ಇನ್ನಷ್ಟು ಕೌಶಲ್ಯಗಳನ್ನು ಕಲಿಯಬಹುದು ಹಾಗೂ ಅದರಿಂದ ವೃತ್ತಿಯಲ್ಲಿ ಇನ್ನಷ್ಟು ಏರಬಹುದು.


  3. ಕೆಲಸದ ವಾತಾವರಣದ ಬಗ್ಗೆ ಗಮನವಿರಲಿ


  ಅಮೆರಿಕದ ಸರ್ಜನ್ ವೈದ್ಯರೊಬ್ಬರು ತಿಳಿಸಿರುವಂತೆ ಕೆಲಸದ ವಾತಾವರಣವು ಕೆಲಸದ ಸಾಮರ್ಥ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹಾಗಾಗಿ ವಿಷಕಾರಿ ಎನ್ನುವಂತಹ ವಾತಾವರಣದಿಂದ ದೂರವಿರಿ ಎಂದು ಶಿಫಾರಸ್ಸು ಮಾಡಲಾಗಿದೆ. ಇಲ್ಲಿ ವಿಷಕಾರಿ ವಾತಾವರಣವೆಂದರೆ ಅಕ್ಷರಶಃ ವಿಷ ತುಂಬಿರುವ ವಾತಾವರಣ ಅಂತಲ್ಲ. ಬದಲಾಗಿ ನಿಮ್ಮ ಕೆಲಸದ ಸನ್ನಿವೇಶ ಅಥವಾ ವಾತಾವರಣ ಈ ಕೆಳಗಿನ ಲಕ್ಷಣಗಳನ್ನು ಹೊಂದಿದ್ದರೆ ಅದನ್ನು ವಿಷಕಾರಿ ಅಥವಾ ಅಹಿತಕಾರಿ ವಾತಾವರಣ ಎನ್ನಬಹುದಾಗಿದೆ.


  1) ದೀರ್ಘಾವಧಿಯ ಕೆಲಸಗಳು
  2) ಸೀಮಿತವಾದ ಸ್ವಾತಂತ್ರ್ಯ
  3) ಕಡಿಮೆ ವೇತನ
  ಒಮ್ಮೊಮ್ಮೆ ಈ ಮೇಲೆ ವಿವರಿಸಿದಂತಹ ಕೆಲಸದ ವಾತಾವರಣ ಇದ್ದಾಗ ನಿಮ್ಮ ಕೆಲಸದ ಸಾಮರ್ಥ್ಯ ತನ್ನಿಂದ ತಾನಾಗಿಯೇ ಕುಂಠಿತವಾಗಬಹುದು. ಈ ರೀತಿಯ ಅಂಶಗಳು ನಿಮ್ಮಲ್ಲಿ ಒತ್ತಡವನ್ನು ಉಂಟು ಮಾಡುತ್ತದೆ, ನಿಮ್ಮ ಪ್ರದರ್ಶನಾ ಸಮಾರ್ಥ್ಯ ಕುಗ್ಗುವಂತೆ ಮಾಡುತ್ತದೆ, ಎಷ್ಟೇ ಕಷ್ಟಪಟ್ಟರೂ ಗುರಿಯನ್ನು ತಲುಪದಂತೆ ಮಾಡುತ್ತದೆ. ಹಾಗಾಗಿ ಈ ವಿಷಕಾರಿ ಚಕ್ರದಿಂದ ಹೊರಬರುವುದು ಬಹಳ ಮಹತ್ವವಾಗುತ್ತದೆ.
  ಇಂತಹ ಸಂದರ್ಭದಲ್ಲಿ ನಿಮ್ಮ ಬಳಿ ಇರುವ ಕೌಶಲ್ಯದಾನುಸಾರವಷ್ಟೆ ಕೆಲಸ ಮಾಡುವುದು, ಆರೋಗ್ಯದೆಡೆ ಗಮನಹರಿಸುವುದು, ಪರ್ಯಾಯ ಕೆಲಸಗಳನ್ನು ಶೋಧಿಸುವುದು ನೀವು ಮಾಡಬಹುದಾದ ಕೆಲ ಉಪಯುಕ್ತ ಅಂಶಗಳಾಗಿರುತ್ತವೆ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು