• ಹೋಂ
  • »
  • ನ್ಯೂಸ್
  • »
  • Jobs
  • »
  • UPSC Prelims Exam ಮೇ 28ರಂದು ನಡೆಯಲಿದ್ದು, ಜಸ್ಟ್ 60 ದಿನಗಳಲ್ಲಿ ಹೀಗೆ ತಯಾರಿ ನಡೆಸಿದ್ರೂ ಪಾಸ್ ಆಗಬಹುದು

UPSC Prelims Exam ಮೇ 28ರಂದು ನಡೆಯಲಿದ್ದು, ಜಸ್ಟ್ 60 ದಿನಗಳಲ್ಲಿ ಹೀಗೆ ತಯಾರಿ ನಡೆಸಿದ್ರೂ ಪಾಸ್ ಆಗಬಹುದು

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕೆಲವರು UPSC ಪರೀಕ್ಷೆಗಾಗಿ ವರ್ಷಗಳಿಂದ ತಪಸ್ಸಿನಂತೆ ಕುಳಿತು ಓದುತ್ತಿದ್ದಾರೆ. ಆದರೆ UPSC ಪರೀಕ್ಷೆಗೆ ಸರಿಯಾಗಿ ಸಿದ್ಧತೆ ನಡೆಸಿಲ್ಲ, ಕಾಲ ಮಿಂಚಿಹೋಗಿದೆ ಅಂತಾ ಚಿಂತಿಸುತ್ತಿದ್ದರೆ, ಪರಿಹಾರ ಇಲ್ಲಿದೆ. ಮನಸ್ಸಿನಲ್ಲಿ ಸಾಧಿಸುವ ಛಲ ಇದ್ದರೆ ಈಗಲೂ ಸಹ UPSC ಪರೀಕ್ಷೆಗೆ ನೀವೂ ತಯಾರಿ ನಡೆಸಬಹುದು.

ಮುಂದೆ ಓದಿ ...
  • Share this:

ಈ ವರ್ಷದ ಯುಪಿಎಸ್‌ ಪರೀಕ್ಷೆಯ (UPSC Exam) ದಿನಾಂಕ ಘೋಷಣೆ ಆಗಿದೆ. ಈಗಾಗ್ಲೇ ಸಿದ್ಧತೆ ನಡೆಸಿಕೊಳ್ಳುತ್ತಿರುವವರು (UPSC Preparation) ಓದಿನ ಕಡೆ ಮತ್ತಷ್ಟು ಗಮನ ಹರಿಸುತ್ತಿದ್ದಾರೆ. ಈ ವರ್ಷ, UPSC ಪ್ರಿಲಿಮ್ಸ್ ಪರೀಕ್ಷೆ ಮೇ 28, 2023 ರಂದು ಮತ್ತು ಮುಖ್ಯ ಪರೀಕ್ಷೆಯು ಸೆಪ್ಟೆಂಬರ್ 15, 2023 ರಂದು ನಡೆಯಲಿದೆ. ಇನ್ನೇನು ಎರಡು ತಿಂಗಳಲ್ಲಿ ಪ್ರತಿ ವರ್ಷ ನಡೆಯುವ ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್‌ಸಿ ಪರೀಕ್ಷೆ ನಡೆಯುತ್ತಿದೆ.


ಕೆಲವರು UPSC ಪರೀಕ್ಷೆಗಾಗಿ ವರ್ಷಗಳಿಂದ ತಪಸ್ಸಿನಂತೆ ಕುಳಿತು ಓದುತ್ತಿದ್ದಾರೆ. ಆದರೆ UPSC ಪರೀಕ್ಷೆಗೆ ಸರಿಯಾಗಿ ಸಿದ್ಧತೆ ನಡೆಸಿಲ್ಲ, ಕಾಲ ಮಿಂಚಿಹೋಗಿದೆ ಅಂತಾ ಚಿಂತಿಸುತ್ತಿದ್ದರೆ, ಪರಿಹಾರ ಇಲ್ಲಿದೆ. ಮನಸ್ಸಿನಲ್ಲಿ ಸಾಧಿಸುವ ಛಲ ಇದ್ದರೆ ಈಗಲೂ ಸಹ ಈ UPSC ಪರೀಕ್ಷೆಗೆ ನೀವೂ ತಯಾರಿ ನಡೆಸಬಹುದು.


ಕಡಿಮೆ ಸಮಯದಲ್ಲಿ ತಯಾರಿ.. ಅಸಾಧ್ಯವಲ್ಲ ಇದು ಸವಾಲು


ಹೌದು ಇನ್ನುಳಿದ 60 ದಿನಗಳಲ್ಲಿ ಕೂಡ ನೀವು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬಹುದು. ಅಭ್ಯರ್ಥಿಗಳಿಗೆ ಈ ಸಮಯ ಸವಾಲೇನೋ ಸರಿ ಆದರೆ ಅಸಾಧ್ಯ ಅಂತೂ ಖಂಡಿತ ಅಲ್ಲ. ಏಕೆಂದರೆ ಇದಕ್ಕೂ ಕಡಿಮೆ ಸಮಯದಲ್ಲಿ ತಯಾರಿ ನಡೆಸಿ ಪರೀಕ್ಷೆ ಪಾಸ್‌ ಮಾಡಿದವರು ಸಾಕಷ್ಟು ಮಂದಿ ಇದ್ದಾರೆ.


ಹಾಗಾದರೆ 60 ದಿನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸುವುದು ಹೇಗೆ? ಸಿದ್ಧತೆ ಹೇಗಿರಬೇಕು? ಹೇಗೆಲ್ಲಾ ಅಧ್ಯಯನ ಮಾಡಬೇಕು ಎಂಬುದರ ಕುರಿತು ಕೆಲ ಟಿಪ್ಸ್‌ಗಳು ಹೀಗಿವೆ ನೋಡಿ.


60 ದಿನಗಳಲ್ಲಿ UPSC 2023 ಪರೀಕ್ಷೆಗೆ ತಯಾರಿ ನಡೆಸಲು ಸಲಹೆಗಳು


1. UPSC ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಳ್ಳಿ: ಮೊದಲಿಗೆ ಪರೀಕ್ಷೆ ಹೇಗೆ ನಡೆಯುತ್ತದೆ, ಹಂತಗಳೇನು, ಯಾವ ವಿಷಯಗಳ ಮೇಲೆ ಕೇಂದ್ರೀಕರಿಸಬೇಕು ಎಂದು ಅರ್ಥೈಸಿಕೊಳ್ಳುವ ಮೂಲಕ ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಳ್ಳಿ. ನಂತರ ಮುಖ್ಯವಾಗಿ ಸಮಯವನ್ನು ಹೇಗೆ ವಿಭಜಿಸಬೇಕು ಎಂಬುದನ್ನು ಆಲೋಚಿಸಿ ತಯಾರಿಗೆ ಕುಳಿತುಕೊಳ್ಳಿ.


IAS Exam


2. ಸ್ಟಡಿ ಪ್ಲಾನರ್: UPSC ಪರೀಕ್ಷೆ ಅಂದರೆ ಸಿಕ್ಕಿದೆಲ್ಲಾ ಓದುವುದು ಎಂದಲ್ಲ, ಈ ಪರೀಕ್ಷೆ ಸಹ ಒಂದಿಷ್ಟು ವಸ್ತು ವಿಷಯಗಳನ್ನು ಒಳಗೊಂಡಿರುತ್ತದೆ.


ಆದ್ದರಿಂದ ಈ ಅಂಶದ ಮೇಲೆ ಯಾವೆಲ್ಲಾ ವಿಷಯವನ್ನು ಓದಬೇಕು ಎಂಬುದ ಕುರಿತು ಒಂದು ಸ್ಟಡಿ ಪ್ಲಾನರ್‌ ತಯಾರಿಸಿಕೊಳ್ಳಿ. ಜೊತೆಗೆ ಯಾವ ವಿಷಯಕ್ಕೆ ಎಷ್ಟು ಸಮಯ ನೀಡಬೇಕು ಎಂಬುದರ ಬಗ್ಗೆಯೂ ಲೆಕ್ಕಾಚಾರ ಹಾಕಿಕೊಳ್ಳಿ.
.
3. NCERT ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ: UPSC ಪರೀಕ್ಷೆಯ ತಯಾರಿಗೆ NCERT ಪಠ್ಯಪುಸ್ತಕಗಳು ಅಡಿಪಾಯ ಎನ್ನಬಹುದು. ಹೀಗಾಗಿ 6 ರಿಂದ 12 ನೇ ತರಗತಿಗಳ ಎಲ್ಲಾ NCERT ಪುಸ್ತಕಗಳನ್ನು ನೀವು ಪರಿಷ್ಕರಿಸಬೇಕು. ಇವು ನಿಮಗೆ ಅಧ್ಯನ ಸಾಮಾಗ್ರಿಯನ್ನು ಸುಲಭವಾಗಿ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ.


4. ಹಿಂದಿನ ವರ್ಷಗಳ ಪತ್ರಿಕೆಗಳನ್ನು ಅಭ್ಯಾಸ ಮಾಡಿ: ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯ ಮಾದರಿ, ಕೇಳಿದ ಪ್ರಶ್ನೆಗಳ ಪ್ರಕಾರಗಳು ಮತ್ತು ಯಾವ ವಿಷಯಕ್ಕೆ ಒತ್ತು ನೀಡಲಾಗಿದೆ ಎಂಬಿತ್ಯಾದಿ ವಿಷಯಗಳು ತಿಳಿಯುತ್ತವೆ. ಇದು ಕಡಿಮೆ ಸಮಯದಲ್ಲಿ ನಿಮಗೆ ಹೆಚ್ಚಿನ ರೀತಿಯಲ್ಲಿ ಅಧ್ಯಯನ ಮಾಡಲು ಸಹಾಯವಾಗುತ್ತದೆ.


Expert advice on ias exam preparation period
ಪ್ರಾತಿನಿಧಿಕ ಚಿತ್ರ


5. ಪ್ರಚಲಿತ ವಿದ್ಯಮಾನಗಳು: ದಿನಪತ್ರಿಕೆಗಳು, ನಿಯತಕಾಲಿಕೆಗಳು, ಮಾರ್ಗದರ್ಶಿಗಳನ್ನು ಓದುವ ಮೂಲಕ ಮತ್ತು ಆನ್‌ಲೈನ್ ಮೂಲಗಳನ್ನು ಬಳಸುವ ಮೂಲಕ ಎಲ್ಲಾ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಂಡಿರಿ.


ಕರೆಂಟ್‌ ಅಫೇರ್‌ ವಿಷಯದಲ್ಲಿ ಹೆಚ್ಚಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳು, ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಮೇಲೆ ಕೇಂದ್ರೀಕರಿಸಿ.


6. ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಿ : ನೇರವಾಗಿ ಯುಪಿಎಸ್‌ಸಿ ಪರೀಕ್ಷೆಗೆ ಹೋಗಿ ಕುಳಿತುಕೊಳ್ಳುವ ಮೊದಲು ಕೆಲ ಅಣುಕು ಪರೀಕ್ಷೆಗಳನ್ನು ತೆಗೆದುಕೊಳ್ಳಿ.


ಇದು ನಿಮ್ಮ ಅಭ್ಯಾಸ ಯಾವ ಹಂತದಲ್ಲಿದೆ, ಎಲ್ಲಿ ನೀವು ಇನ್ನೂ ಓದಬೇಕು, ಯಾವ ವಿಷಯಕ್ಕೆ ಒತ್ತು ನೀಡಬೇಕು ಅಂತಾ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿಸಿಕೊಡುವುದರ ಜೊತೆಗೆ ಸಮಯ ನಿರ್ವಹಣೆಯನ್ನು ಸಹ ಕಲಿಸಿ ಕೊಡುತ್ತದೆ.


7. ಪ್ರಬಂಧ ಬರವಣಿಗೆಯ ಮೇಲೆ ಕೇಂದ್ರೀಕರಿಸಿ: UPSC 2023 ಪರೀಕ್ಷೆಯು 250 ಅಂಕಗಳನ್ನು ಹೊಂದಿರುವ ಪ್ರಬಂಧವನ್ನು ಒಳಗೊಂಡಿರುತ್ತದೆ.


ನಿಮ್ಮ ಬರವಣಿಗೆಯ ಕೌಶಲ್ಯವನ್ನು ಸುಧಾರಿಸಲು ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಸಾಧ್ಯತೆಗಳನ್ನು ಹೆಚ್ಚಿಸಲು ವಿವಿಧ ವಿಷಯಗಳ ಮೇಲೆ ಪ್ರಬಂಧ ಬರೆಯುವುದನ್ನು ಅಭ್ಯಾಸ ಮಾಡಿ.




8. ಮಾರ್ಗದರ್ಶನ ಪಡೆಯಿರಿ: ಪರೀಕ್ಷೆ, ವಿಷಯ ಹೀಗೆ ಇದರ ಮೇಲೆ ಯಾವುದೇ ಅನುಮಾನವಿದ್ದರೂ ತಜ್ಞರಿಂದ ಮಾರ್ಗದರ್ಶನ ಪಡೆಯಿರಿ. ಅಗತ್ಯವಿದ್ದರೆ ಕೋಚಿಂಗ್ ಆನ್‌ಲೈನ್ ಕೋರ್ಸ್‌ಗಳಿಗೆ ಸೇರಿಕೊಳ್ಳಿ.


9. ಪೋಕಸ್ಡ್‌ ಆಗಿರಿ : ಸರಿಯಾದ ಯೋಜನೆ ಜೊತೆ ಅಭ್ಯರ್ಥಿಗಳು ಪೋಕಸ್ಡ್‌ ಆಗಿದ್ದರೆ ಕಬ್ಬಿಣದ ಕಡಲೆ ಎನ್ನುವ ಪರೀಕ್ಷೆಯನ್ನು ಕಡಿಮೆ ಸಮಯದಲ್ಲೂ ಕೂಡ ಜಯಿಸಬಹುದು. ಹೀಗಾಗಿ ಪ್ರತಿವಿಷವನ್ನು ಚೆನ್ನಾಗಿ ಗಮನಕೊಟ್ಟು ಅರ್ಥೈಸಿಕೊಳ್ಳಿ. ಹೀಗೆ ಸರಿಯಾದ ಅರ್ಥೈಸುವಿಕೆ ಹೆಚ್ಚು ಕಾಲ ನೆನಪಿನಲ್ಲಿರುತ್ತದೆ.

top videos


    10. ಆತ್ಮವಿಶ್ವಾಸ ಇರಲಿ ಈ ಮೇಲಿನ ಎಲ್ಲವನ್ನೂ ಸರಿಯಾಗಿ ಮಾಡುವಂತಹ ಏಕಾಗ್ರತೆ,ಆತ್ಮವಿಶ್ವಾಸವನ್ನು ಮೊದಲಿಗೆ ರೂಢಿಸಿಕೊಳ್ಳಿ.‌ ಓದುವುದನ್ನು ಶಿಸ್ತಿನಿಂದ, ಏಕಾಗ್ರೆತೆಯಿಂದ, ಶ್ರಮವಹಿಸಿ ನಡೆಸಿ.

    First published: