• ಹೋಂ
  • »
  • ನ್ಯೂಸ್
  • »
  • Jobs
  • »
  • Job Search: ಎಷ್ಟೇ ಪ್ರಯತ್ನಿಸಿದ್ರೂ ಬಯಸಿದ ಉದ್ಯೋಗ ಸಿಗದಿದ್ದಾಗ ಪಾಸಿಟಿವ್ ಆಗಿ ಇರಲು 10 ಟಿಪ್ಸ್

Job Search: ಎಷ್ಟೇ ಪ್ರಯತ್ನಿಸಿದ್ರೂ ಬಯಸಿದ ಉದ್ಯೋಗ ಸಿಗದಿದ್ದಾಗ ಪಾಸಿಟಿವ್ ಆಗಿ ಇರಲು 10 ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯೋಗ ಹುಡುಕಾಟದಲ್ಲಿ ಉಂಟಾಗುವ ಆತಂಕವನ್ನು ಕಡಿಮೆ ಮಾಡಲು ಇರುವ 10 ಮಾರ್ಗಗಳು ಯಾವುವು ಅಂತಾ ನೋಡೋಣ.

  • Share this:

ಸ್ಪರ್ಧಾತ್ಮಕ ಜಗತ್ತು, ಉದ್ಯೋಗ ವಜಾಗೊಳಿಸುವಿಕೆ ಇವೆಲ್ಲದರ ನಡುವೆ ಒಂದು ಸಮರ್ಥವಾದ ಉದ್ಯೋಗ ಹುಡುಕೋದು (Job Search) ಸುಲಭದ ಮಾತಲ್ಲ. ಅದಕ್ಕೆ ತಾಳ್ಮೆ, ಶ್ರಮ, ನಮ್ಮ ಕೌಶಲ್ಯ (Skills) ಎಲ್ಲವೂ ಬೇಕಾಗುತ್ತದೆ.  ಉದ್ಯೋಗ ಹುಡುಕಿ ಹುಡುಕಿ ಬೇಸತ್ತು ಹೋಗಿರುವ ಅದೆಷ್ಟೋ ಉದಾಹರಣೆಗಳಿವೆ. ವಿದ್ಯಾರ್ಹತೆಗೆ ತಕ್ಕ, ಪದವಿಗೆ ತಕ್ಕ ಉದ್ಯೋಗ ಸಿಗದೇ ರೋಸಿ ಹೋಗಿ ಕೈಗೆ ಸಿಕ್ಕ ಕೆಲಸ ಮಾಡುತ್ತಿರುವ ಅನೇಕ ಅಭ್ಯರ್ಥಿಗಳಿದ್ದಾರೆ (Job Seekers).


ಕೆಲಸದ ಹುಡುಕಾಟ ಸಮಯದಲ್ಲಿ ಸೋತಾಗ ಆತಂಕ, ಒತ್ತಡ, ನಿರಾಶೆಯಂತಹ ಮನೋಭಾವಗಳಿಗೆ ಒಳಗಾಗುವುದು ಸಹಜವಾದರೂ, ಅವುಗಳನ್ನು ನಿಯಂತ್ರಿಸುವ ಮನಸ್ಸು ಉದ್ಯೋಗಾಂಕ್ಷಿಗಳಲ್ಲಿ ಇರಬೇಕು. ಹಾಗಾದರೆ ಉದ್ಯೋಗ ಹುಡುಕಾಟದಲ್ಲಿ ಉಂಟಾಗುವ ಆತಂಕವನ್ನು ಕಡಿಮೆ ಮಾಡಲು ಇರುವ 10 ಮಾರ್ಗಗಳು ಯಾವುವು ಅಂತಾ ನೋಡೋಣ.


1. ಬೆಂಬಲವನ್ನು ಹುಡುಕಿ


ಉದ್ಯೋಗ ಹುಡುಕಾಟದ ಆತಂಕವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ನಿಮ್ಮ ಬೆಂಬಲ ವ್ಯವಸ್ಥೆಯಲ್ಲಿ ಸೌಕರ್ಯವನ್ನು ಕಂಡುಹಿಡಿಯುವುದು. ಈ ಪರಿಸ್ಥಿತಿಯಲ್ಲಿ ಕುಟುಂಬದವರಾಗಲಿ, ಸ್ನೇಹಿತರಾಗಿರಲಿ ಅವರ ಬೆಂಬಲ ಪಡೆದುಕೊಳ್ಳಿ. ಪಾಸಿಟಿವ್‌ನೆಸ್‌ ತುಂಬುವವರನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ಸೋಲು-ಗೆಲುವು, ಹತಾಶೆಯಲ್ಲಿ ನಮ್ಮನ್ನು ಬೆಂಬಲಿಸುವ ಉತ್ತಮ ಜನರಿದ್ದರೆ ಒತ್ತಡ, ಆತಂಕದಿಂದ ನಾವು ದೂರ ಉಳಿಯಬಹುದು.




2. ನೀವು ಆರ್ಥಿಕವಾಗಿ ಎಲ್ಲಿ ನಿಂತಿದ್ದೀರಿ ಎಂದು ತಿಳಿಯಿರಿ


ಉದ್ಯೋಗ ಹುಡುಕಾಟದ ಆತಂಕವನ್ನು ನಿವಾರಿಸಲು ಇನ್ನೊಂದು ಮಾರ್ಗವೆಂದರೆ ನಿಮ್ಮ ಹಣಕಾಸುಗಳನ್ನು ತಕ್ಷಣವೇ ಕ್ರಮಗೊಳಿಸುವುದು. ನಿಮ್ಮ ಆರ್ಥಿಕ ಸ್ಥಿತಿ ಹೇಗಿದೆ ಅಂತಾ ಪರಿಶೀಲಿಸಿ. ಇದು ನಿಮಗೆ ಉದ್ಯೋಗವನ್ನು ಹೇಗೆ ಹುಡಕಬೇಕು ಮತ್ತು ಸರಿಯಾದ ಮಾರ್ಗವನ್ನು ತೋರಿಸುತ್ತದೆ.


3. ವೇಳಾಪಟ್ಟಿಯನ್ನು ನಿರ್ವಹಿಸಿ


ಯಾವುದೇ ಸರಿಯಾದ ಯೋಜಿತ ಕ್ರಮವಿಲ್ಲದಿದ್ದರೆ ಉದ್ಯೋಗ ಹುಡುಕಾಟ ಕಷ್ಟವಾಗಬಹುದು ಮತ್ತು ಇದರಿಂದ ಆತಂಕ ಒತ್ತಡ ಕೂಡ ಹೆಚ್ಚಾಗುತ್ತದೆ. ಹೀಗಾಗಿ ಉದ್ಯೋಗ ಹುಡುಕಾಟವನ್ನು ಕ್ರಮಬದ್ಧವಾಗಿ ಯೋಜಿಸಿ.


ನೀವು ಪ್ರತಿದಿನ ಏನು ಮಾಡಬೇಕು, ಕೆಲಸ ಹೇಗೆ ಮಾಡಬೇಕು ಹೀಗೆ ಎಲ್ಲದರ ಬಗ್ಗೆ ಟೈಂ ಟೇಬಲ್‌ ಮಾಡಿಕೊಳ್ಳಿ. ಇದು ನಿಮಗೆ ಒಂದೇ ಬಾರಿ ಒತ್ತಡವನ್ನು ಒಡ್ಡುವುದಿಲ್ಲ ಬದಲಿಗೆ ನಿರಾಳತೆಯನ್ನು ನೀಡುತ್ತದೆ.


4. ನಿಮ್ಮ ಕೆಲಸದ ಹುಡುಕಾಟವನ್ನು ಕೇಂದ್ರೀಕರಿಸಿ


ಸುಮ್ಮನೇ ಕಂಡಕಂಡ ಕೆಲಸಗಳಿಗೆ ಅರ್ಜಿ ಹಾಕೋದು, ರೆಸ್ಯೂಮ್‌ ಕಳಿಸೋದನ್ನು ಬಿಟ್ಟು ಬಿಡಿ. ನಿಮ್ಮ ಪದವಿಗೆ, ನಿಮಗೆ ಸೂಕ್ತ ಯಾವುದು ಆ ಉದ್ಯೋಗದತ್ತ ಹುಡುಕಾಟವನ್ನು ಕೇಂದ್ರೀಕರಿಸಿ. ಇದು ನಿಮ್ಮ ಆತಂಕವನ್ನು ನಿಯಂತ್ರಿಸುವ ಪ್ರಮುಖ ಮಾರ್ಗವಾಗಿದೆ.


5. ಅವಲೋಕನ ಮಾಡಿ


ಉದ್ಯೋಗ ಹುಡುಕಾಟವು ನಾವು ನಿರೀಕ್ಷಿಸುವುದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ನಿಧಾನವಾಗಿ ಯೋಚಿಸಿ. ನಿಮ್ಮಿಂದ ಎಲ್ಲಿ ತಪ್ಪಾಗುತ್ತಿದೆ, ನೀವು ಏನು ಮಾಡಬಹುದು ಎಂಬುದರ ಬಗ್ಗೆ ಅವಲೋಕಿಸಿ.


ಪ್ರಾತಿನಿಧಿಕ ಚಿತ್ರ


6. ವಾಸ್ತವಿಕ ಗುರಿಗಳನ್ನು ಹೊಂದಿಸಿ


ನಿಮ್ಮ ವಿಶಾಲ ಗುರಿಯು ಕೆಲಸವನ್ನು ಭದ್ರಪಡಿಸುವುದು, ನೀವು ಅದನ್ನು ನಿರ್ವಹಿಸಬಹುದಾದ ಭಾಗಗಳಾಗಿ ವಿಭಜಿಸಬೇಕು. ಉದಾಹರಣೆಗೆ ವಾರಕ್ಕೆ 15 ರೆಸ್ಯೂಮ್‌ಗಳನ್ನು ಕಳುಹಿಸುವುದು, ದಿನಕ್ಕೆ ಐದು ನೆಟ್‌ವರ್ಕಿಂಗ್ ಸಂಭಾಷಣೆಗಳನ್ನು ಮಾಡುವುದು ಮತ್ತು 10-12 ಕಂಪನಿಗಳ ಗುರಿ ಪಟ್ಟಿಯನ್ನು ರಚಿಸುವುದು ಹೀಗೆ ಗುರಿ, ಸರಿಯಾದ ಪ್ಲ್ಯಾನ್‌ ಕೆಲಸ ಹುಡುಕಾಟ ಸಮಯದಲ್ಲಿರಲಿ.


7. ಹೊಸ ಕೌಶಲ್ಯಗಳನ್ನು ಕಲಿಯಿರಿ


ಕೆಲಸದ ಹುಡುಕಾಟದ ಸಮಯದಲ್ಲಿ ಹೊಸ ಹೊಸ ಕೌಶಲ್ಯಗಳನ್ನು ಕಲಿಯಿರಿ. ಇದು ಉದ್ಯೋಗ ಹುಡುಕಾಟದ ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಜೊತೆಗೆ ನಿಮ್ಮ ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ. ಹೆಚ್ಚುವರಿಯಾಗಿ, ಹೊಸ ಕೌಶಲ್ಯಗಳನ್ನು ಕಲಿಯುವುದು ನಿಮ್ಮನ್ನು ಮತ್ತಷ್ಟು ಪ್ರೇರೇಪಿಸುತ್ತದೆ.


8. ನಿರಾಕರಣೆಯನ್ನು ಸ್ವೀಕರಿಸಿ


ಕೆಲಸ ಹುಡುಕುವ ವೇಳೆ ಕಂಪನಿಗಳು ನಿಮ್ಮನ್ನು ಅರ್ಹರಲ್ಲ ಎಂದು ನಿರಾಕರಿಸಬಹುದು. ಈ ನಿರಾಕರಣೆಯನ್ನು ಸಹ ನೀವು ಸ್ವೀಕರಿಸಬೇಕು. ಸೋಲೆ ಗೆಲುವಿನ ಮೆಟ್ಟಿಲು ಎನ್ನುವಂತೆ ಇಂತಹ ನಿರಾಕರಣೆಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಮುಂದೆ ಮತ್ತೆ ಪ್ರಯತ್ನ ಮಾಡಬೇಕು.


ಇದನ್ನೂ ಓದಿ: Data Science ಕೋರ್ಸ್ ಕಲಿಯಲು ಎಷ್ಟು ಲಕ್ಷ ಹಣ ಬೇಕಾಗುತ್ತದೆ? ಟ್ರೈನಿಂಗ್ ಸೆಂಟರ್​ಗಳ ಮಾಹಿತಿಯೂ ಇಲ್ಲಿದೆ


9. ನಡುವೆ ಬ್ರೇಕ್‌ ಇರಲಿ


ದಿನವೀಡಿ ಉದ್ಯೋಗ ಹುಡುಕಾಟ ಅಂತಾ ಕುಳಿತುಕೊಂಡರೆ ಸಹಜವಾಗಿ ಬೇಸರ, ಹತಾ಼ಶೆ ಎದುರಾಗಬಹುದು. ಹೀಗಾಗಿ ನಡುವಿನಲ್ಲಿ ವಿಶ್ರಾಂತಿ ಸಹ ಪಡೆಯಿರಿ. ಇದು ಹೆಚ್ಚಿದ ಉದ್ಯೋಗ ಹುಡುಕಾಟದ ಆತಂಕವನ್ನು ಕಡಿಮೆ ಮಾಡಲು ಸಹಕಾರಿ. ವಿರಾಮ ಸಮಯದಲ್ಲಿ ವ್ಯಾಯಾಮ, ಧ್ಯಾನ ಸ್ನೇಹಿತರ ಭೇಟಿ ಮಾಡುವುದು ಒತ್ತಡವನ್ನು ನಿವಾರಿಸಲು ಆರೋಗ್ಯಕರ ಮಾರ್ಗಗಳಾಗಿವೆ.


10. ನಿಮ್ಮ ಕೆಲಸಕ್ಕಿಂತ ನೀವು ಹೆಚ್ಚು ಎಂದು ನೆನಪಿಡಿ


ಕೆಲಸ ಜೀವನಕ್ಕೆ ಒಂದು ಭಾಗ ಮಾತ್ರ, ಇದು ನಿಮ್ಮ ಆರೋಗ್ಯ, ಪ್ರಾಣಕ್ಕಿಂತ ಹೆಚ್ಚಲ್ಲ. ನಿಮ್ಮ ಸ್ವ-ಮೌಲ್ಯವನ್ನು ಹೆಚ್ಚಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ವೃತ್ತಿಗೆ ಸಂಬಂಧಿಸದ ಆಸಕ್ತಿಗಳು ಮತ್ತು ಹವ್ಯಾಸಗಳನ್ನು ಮುಂದುವರಿಸುವುದು.


ಅಂತಿಮವಾಗಿ, ಖಿನ್ನತೆ ಅಥವಾ ಹತಾಶತೆಯ ಭಾವನೆಗಳು ನಿಮ್ಮ ದೈನಂದಿನ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಪ್ರಾರಂಭಿಸಿದರೆ, ಸಲಹೆಗಾರ ಅಥವಾ ಚಿಕಿತ್ಸೆಯ ಸಹಾಯವನ್ನು ಪಡೆದುಕೊಳ್ಳಿ.

top videos
    First published: