Capgemini Hiring: ಬೆಂಗಳೂರಿನ ಕ್ಯಾಪ್​ಜೆಮಿನಿ ಕಂಪನಿಯಲ್ಲಿ ನೇಮಕಾತಿ; ಬಿಇ ಆದವರಿಗೆ ಅವಕಾಶ

ಬೆಂಗಳೂರು ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಸಾಫ್ಟ್​​ವೇರ್​​ ಇಂಜಿನಿಯರಿಂಗ್​​​ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
     ಬಹುರಾಷ್ಟ್ರೀಯ ಕಂಪನಿಯಾಗಿರುವ ಫ್ರಾನ್ಸ್​ ಮೂಲದ ಕ್ಯಾಪ್​ಜೆಮಿನಿ (Capgemini)  ಪ್ರಸಕ್ತ ಸಾಲಿನ ನೇಮಕಾತಿಗೆ ಚಾಲನೆ ನೀಡಿದೆ. ಬೆಂಗಳೂರು ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಸಾಫ್ಟ್​​ವೇರ್​​ ಇಂಜಿನಿಯರಿಂಗ್​​​ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಡಿಸೈನ್​ ಇಂಜಿನಿಯರ್ (Design Engineer)​ ಹುದ್ದೆಗಳ ಭರ್ತಿಗೆ ಸಂಸ್ಥೆ ಮುಂದಾಗಿದ್ದು, ತಾಂತ್ರಿಕ ಶಿಕ್ಷಣ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.

    ಸಂಸ್ಥೆಯ ಸೇವಾ ವಲಯದಲ್ಲಿ ಈ ಹುದ್ದೆ ನೇಮಕಾತಿ ನಡೆಯಲಿದೆ. ಈಗಾಗಲೇ ಡಿಸೈನ್​ ಇಂಜಿನಿಯರಿಂಗ್​ನಲ್ಲಿ ಹುದ್ದೆ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಆಯ್ಕೆ, ನೇಮಕಾತಿ ಮತ್ತು ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಕೆಳಗಿನಂತಿದೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಸಂಸ್ಥೆಕ್ಯಾಪ್​ಜೆಮಿನಿ
    ಹುದ್ದೆ ಹೆಸರುಡಿಸೈನ್​ ಇಂಜಿನಿಯರ್
    ಒಟ್ಟು ಹುದ್ದೆನಿಗದಿ ಪಡಿಸಿಲ್ಲ
    ಕಾರ್ಯ ನಿರ್ವಹಣೆ ಸ್ಥಳಬೆಂಗಳೂರು
    ವೇತನವಾರ್ಷಿಕ 6 ಲಕ್ಷಕ್ಕೂ ರೂ ಗೂ ಅಧಿಕ

    ಶೈಕ್ಷಣಿಕ ಅರ್ಹತೆ: ನೇಮಕಾತಿ ಅನುಸಾರ ಅಭ್ಯರ್ಥಿಯು ಅಧಿಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿಇ, ಬಿಟೆಕ್​, ಎಂಇ ಅಥವಾ ಎಂಎಟೆಕ್​, ಬಿಸಿಎ, ಎಂಸಿಎ ಪದವಿಯನ್ನು ಪಡೆದಿರಬೇಕು.

    ಇದನ್ನು ಓದಿ: ಫ್ರೆಶರ್ಸ್​ಗೆ ಎಚ್​ಪಿಯಲ್ಲಿದೆ ಉದ್ಯೋಗ; ಯಾವುದೇ ವಿಷಯದಲ್ಲಿ ಡಿಗ್ರಿ ಆಗಿದ್ರೂ ಅರ್ಜಿ ಸಲ್ಲಿಸಿ

    ಅನುಭವ: ಈ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈಗಾಗಲೇ ಸಂಬಂಧಿಸಿದ ಕ್ಷೆತ್ರದಲ್ಲಿ ಸೇವಾ ಅನುಭವ ಹೊಂದಿರಬೇಕು.

    ಅರ್ಜಿ ಸಲ್ಲಿಕೆ: ಆನ್​ಲೈನ್​

    ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಹುದ್ದೆಯ ಜವಾಬ್ದಾರಿ:
    ಈ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು Soc PNR ಆಕ್ಟಿವಿಟೀಸ್​, Soc ಟೈಮಿಂಗ್ ಕ್ಲೋಶರ್​ ಮತ್ತು Soc ಫಿಸಿಕಲ್​ ವೆರಿಫಿಕೆಷನ್​ ಬಗ್ಗೆ ಅರಿವು ಹೊಂದಿರುವುದು ಅವಶ್ಯವಾಗಿದೆ.
    Soc ಸಿಂಥಸಿಸ್​, Soc ಐಆರ್​ ಡ್ರಾಪ್​, SOC Lec, SOC CLP ಜ್ಞಾನ ಹೊಂದಿರಬೇಕು.

    ಪ್ರಮುಖ ದಿನಾಂಕ
    ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: ಜುಲೈ 27, 2022

    ಪ್ರಮುಖ ಲಿಂಕ್
    ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್​ ಮಾಡಿ
    ಅಧಿಕೃತ ವೆಬ್​ ಸೈಟ್​​: capgemini.com

    ಇದನ್ನು ಓದಿ: ವಿಪ್ರೋದಲ್ಲಿ ಬಿಎಸ್ಸಿ, ಬಿಸಿಎ ಆದವರಿಗೆ ಅವಕಾಶ; ಇಲ್ಲಿದೆ ಸಂಪೂರ್ಣ ಮಾಹಿತಿ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ

    - ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

    ಅರ್ಜಿ ಸಲ್ಲಿಸುವವರು ಈ ಲಿಂಕ್ ಕ್ಲಿಕ್​ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು.
    Published by:Seema R
    First published: