Canara Bank Recruitment: ಕೆನರಾ ಬ್ಯಾಂಕ್​ನಲ್ಲಿದೆ ಉದ್ಯೋಗಾವಕಾಶ; ಬೆಂಗಳೂರಿನಲ್ಲಿ ಕೆಲಸ

ಮೂರು ವರ್ಷಗಳ ಒಪ್ಪಂದದ ಮೇರೆಗೆ ಈ ಹುದ್ದೆ ಆಯ್ಕೆ ನಡೆಯಲಿದೆ. ಅಗತ್ಯವಿದಲ್ಲಿ ಒಂದು ವರ್ಷ ಹುದ್ದೆ ವಿಸ್ತರಣೆ ನಡೆಯಲಿದೆ

ವಿವಿಧ ಹುದ್ದೆಗೆ ಅರ್ಜಿ ಹಾಕಿ

ವಿವಿಧ ಹುದ್ದೆಗೆ ಅರ್ಜಿ ಹಾಕಿ

  • Share this:
    ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ (Canara Bank)​ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮ್ಯಾನೇಜಿಂಗ್​ ಟ್ರಸ್ಟಿ (Managing Trustee) ಹುದ್ದೆಗೆ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯನ್ನು ಇಮೇಲ್​ ಮೂಲಕ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 23 ಆಗಿದೆ.

    ಮೂರು ವರ್ಷಗಳ ಒಪ್ಪಂದದ ಮೇರೆಗೆ ಈ ಹುದ್ದೆ ಆಯ್ಕೆ ನಡೆಯಲಿದೆ. ಅಗತ್ಯವಿದಲ್ಲಿ ಒಂದು ವರ್ಷ ಹುದ್ದೆ ವಿಸ್ತರಣೆ ನಡೆಯಲಿದೆ. ಈಗಾಗಲೇ ಕೆನರಾ ಬ್ಯಾಂಕ್​ನಲ್ಲಿ​ ಸೇವೆ ನಿರ್ವಹಿಸಿದ ನಿವೃತ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಗ್ರಾಮೀಣ ಬ್ಯಾಂಕಿಂಗ್​ನಲ್ಲಿ ಅನುಭವ ಹೊಂದಿರಬೆಕು ಜೊತೆಗೆ ಫೈನಾನ್ಸ್​ ವಿಷಯದ ಬಗ್ಗೆ ಅಗತ್ಯ ಅರಿವು ಹೊಂದಿರಬೇಕು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.



























    ಹುದ್ದೆ ಮಾಹಿತಿಹುದ್ದೆ ವಿವರ
    ಬ್ಯಾಂಕ್ ಹೆಸರುಕೆನರಾ ಬ್ಯಾಂಕ್
    ಹುದ್ದೆಮ್ಯಾನೇಜಿಂಗ್ ಟ್ರಸ್ಟಿ
    ಹುದ್ದೆ1
    ಉದ್ಯೋಗ ಸ್ಥಳಬೆಂಗಳೂರು
    ವೇತನ60000 ರೂ. ಪ್ರತಿ ತಿಂಗಳು

    ಶೈಕ್ಷಣಿಕ ಅರ್ಹತೆ: ಕೆನರಾ ಬ್ಯಾಂಕ್ ನೇಮಕಾತಿ ನಿಯಮಗಳ ಪ್ರಕಾರ ಅರ್ಹತೆ ಹೊಂದಿದ್ದು, ಈಗಾಗಲೇ ಕೆನರಾ ಬ್ಯಾಂಕ್​ನಲ್ಲಿ ಸೇವೆ ಸಲ್ಲಿಸಿರಬೇಕು.

    ವಯಸ್ಸಿನ ಮಿತಿ: ಕೆನರಾ ಬ್ಯಾಂಕ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 62 ವರ್ಷಗಳು.

    ಇದನ್ನು ಓದಿ: ಪೊಲೀಸ್​ ಹುದ್ದೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಅವಕಾಶ; ಬೇಗ ಅರ್ಜಿ ಸಲ್ಲಿಸಿ

    ವಯೋಮಿತಿ ಸಡಿಲಿಕೆ:
    ಕೆನರಾ ಬ್ಯಾಂಕ್ ನಿಯಮಗಳ ಪ್ರಕಾರ

    ಆಯ್ಕೆ ಪ್ರಕ್ರಿಯೆ
    ಅಭ್ಯರ್ಥಿಗಳ ಶಾರ್ಟ್​ಲಿಸ್ಟ್​ ಮಾಡಿ ಸಂದರ್ಶನ ನಡೆಸಲಾಗುವುದು.

    ಅರ್ಜಿ ಸಲ್ಲಿಕೆ: ಇಮೇಲ್​ ಮುಖಾಂತರ
    ಇಮೇಲ್​ ವಿಳಾಸ: cfat.bangalore@gmail.com

    ಪ್ರಮುಖ ದಿನಾಂಕಗಳು:
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 08 ಜುಲೈ 2022
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 23 ಜುಲೈ-2022

    ಇದನ್ನು ಓದಿ: ಅಜೀಂ ಪ್ರೇಮ್​ಜೀ ಫೌಂಡೇಶನ್​ನಲ್ಲಿದೆ ಉದ್ಯೋಗ; ಪದವಿ ಆದವರಿಗೆ ಅವಕಾಶ

    ಅರ್ಜಿ ಸಲ್ಲಿಕೆ ವಿಧಾನ

    -ನೇಮಕಾತಿ ಅಧಿಸೂಚನೆ ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    -ವೆಬ್​​ಸೈಟ್​​ನಲ್ಲಿ ಲಭ್ಯವರಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಭರ್ತಿ ಮಾಡಿ ನಿಗದಿತ ದಿನಾಂಕದೊಳಗೆ ಮೇಲ್ಕಂಡ ಇಮೇಲ್​  ವಿಳಾಸಕ್ಕೆ ಕಳುಹಿಸಬೇಕು.

    -ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.
    Published by:Seema R
    First published: