Canara Bank: ಕೆನರಾ ಬ್ಯಾಂಕ್​ನಲ್ಲಿದೆ ಮ್ಯಾನೇಜರ್​ ಹುದ್ದೆ; ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು ಮತ್ತು ಮುಂಬಯಿನಲ್ಲಿ ಈ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ

 ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್

  • Share this:

    ಕೆನರಾ ಬ್ಯಾಂಕ್​ ಸೆಕ್ಯುರಿಟೀಸ್​ ಲಿಮಿಟೆಡ್​ನಲ್ಲಿ (Canara Bank Securities Limited) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡೆಪ್ಯುಟಿ ಮ್ಯಾನೇಜರ್ (Deputy Manger), ಅಸಿಸ್ಟೆಂಟ್ ಮ್ಯಾನೇಜರ್ (Assistant Manger) ಸೇರಿದಂತೆ ಒಟ್ಟು 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಮತ್ತು ಮುಂಬಯಿನಲ್ಲಿ ಈ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯನ್ನು ಆಫ್​ಲೈನ್​ ಮೂಲಕ ಮಾಡಬೇಕಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 5 ಆಗಿದೆ.


    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.


    ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್
    ಹುದ್ದೆಯ ಹೆಸರು: ಉಪ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು
    ಹುದ್ದೆಗಳ ಸಂಖ್ಯೆ: 14
    ಉದ್ಯೋಗ ಸ್ಥಳ: ಬೆಂಗಳೂರು - ಮುಂಬೈ
    ವೇತನ: 21200-37000ರೂ ಪ್ರತಿ ತಿಂಗಳು

















































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನವಯೋಮಿತಿ
    ಉಪ ವ್ಯವಸ್ಥಾಪಕರು1 ಎಲ್​ಎಲ್​ಬಿ ಅಥವಾ ಎಲ್​ಎಲ್​ಎಂ ಪದವಿ31800-37000 ರೂ ಮಾಸಿಕಕನಿಷ್ಟ 22- ಗರಿಷ್ಟ 30 ವರ್ಷ
    ಸಹಾಯಕ ವ್ಯವಸ್ಥಾಪಕ3ಪದವಿ, ಸ್ನಾತಕೋತ್ತರ ಪದವಿ21200-26000 ರೂ ಮಾಸಿಕಕನಿಷ್ಟ 22- ಗರಿಷ್ಟ 30 ವರ್ಷ
    ಕಿರಿಯ ಅಧಿಕಾರಿ8ಪದವಿ29000-34000ರೂ ಮಾಸಿಕಕನಿಷ್ಟ 22- ಗರಿಷ್ಟ 30 ವರ್ಷ
    ಸಹಾಯಕ ಮ್ಯಾನೇಜರ್ - IT ಡೇಟಾಬೇಸ್ ನಿರ್ವಾಹಕರು1ಬಿಇ ಅಥವಾ ಬಇಟೆಕ್​ ಪದವಿ21200-26000 ರೂ ಮಾಸಿಕಕನಿಷ್ಟ 20- ಗರಿಷ್ಟ 28 ವರ್ಷ
    ಸಹಾಯಕ ಮ್ಯಾನೇಜರ್ - ಬ್ಯಾಕ್ ಆಫೀಸ್1ಪದವಿ21200-26000 ರೂ ಮಾಸಿಕಕನಿಷ್ಟ 20- ಗರಿಷ್ಟ 28 ವರ್ಷ


    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪ.ಜಾ, ಪ. ಪಂ ಅಭ್ಯರ್ಥಿಗಳು: 05 ವರ್ಷಗಳು


    ಇದನ್ನು ಓದಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಅರ್ಜಿ ಸಲ್ಲಿಕೆ: ಆಫ್​ಲೈನ್​


    ಆಯ್ಕೆ ಪ್ರಕ್ರಿಯೆ
    ಶಾರ್ಟ್​ ಲಿಸ್ಟ್​​ ಮತ್ತು ಸಂದರ್ಶನ


    ಪ್ರಮುಖ ದಿನಾಂಕಗಳು:
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24 ಆಗಸ್ಟ್​​​ 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಸೆಪ್ಟೆಂಬರ್​ 2022


    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: canmoney.in


    ಅರ್ಜಿ ಸಲ್ಲಿಕೆ ವಿಳಾಸ:


    ಜನರಲ್ ಮ್ಯಾನೇಜರ್, ಮಾನವ ಸಂಪನ್ಮೂಲ ಇಲಾಖೆ, ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್, 7 ನೇ ಮಹಡಿ, ಮೇಕರ್ ಚೇಂಬರ್ III ನಾರಿಮನ್ ಪಾಯಿಂಟ್, ಮುಂಬೈ - 400021


    ಇದನ್ನು ಓದಿ: ಐಟಿಐ, ಡಿಪ್ಲೊಮಾ ಆದವರಿಗೆ ಬಿಇಎಲ್​ನಲ್ಲಿದೆ ಕೆಲಸದ ಅವಕಾಶ; ಇಲ್ಲಿದೆ ಉದ್ಯೋಗ ಮಾಹಿತಿ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ


    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.


    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ


    - ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ ಮಾಹಿತಿ ಭರ್ತಿ ಮಾಡಿ.


    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ವಿಳಾಸಕ್ಕೆ ನಿಗದಿತ ದಿನಾಂಕಕ್ಕೂ ಮುನ್ನ ಸಲ್ಲಿಸುವಂತೆ ಸ್ಪೀಡ್​ ಅಥವಾ ರಿಜಿಸ್ಟರ್​ ಪೋಸ್ಟ್​ ಮಾಡಿ.

    Published by:Seema R
    First published: