• Home
  • »
  • News
  • »
  • jobs
  • »
  • C-DOT Recruitment 2022: ಸೈಂಟಿಸ್ಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ 2.18 ಲಕ್ಷ

C-DOT Recruitment 2022: ಸೈಂಟಿಸ್ಟ್​ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ 2.18 ಲಕ್ಷ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಿ-ಡಾಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಟೆಕ್, ಎಂಟೆಕ್, ಸ್ನಾತಕೋತ್ತರ ಪದವಿ, ಪಿಎಚ್​.ಡಿ ಪೂರ್ಣಗೊಳಿಸಿರಬೇಕು.

  • News18 Kannada
  • Last Updated :
  • Bangalore [Bangalore], India
  • Share this:

    C-DOT Recruitment 2022:  ಸೆಂಟರ್ ಫಾರ್ ಡೆವಲಪ್​ಮೆಂಟ್ ಆಫ್ ಟೆಲಿಮ್ಯಾಟಿಕ್ಸ್​ (Center for Development Of Telematics) ಖಾಲಿ ಇರುವ 10 ಸೈಂಟಿಸ್ಟ್​-ಜಿ (Scientist-G) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಹಾಗೂ ನವದೆಹಲಿಯಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 27, 2022ಕ್ಕೆ ಮುನ್ನ ಈ ಹುದ್ದೆಗಳಿಗೆ ಅರ್ಜಿ(Apply) ಸಲ್ಲಿಸಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಸೆಂಟರ್ ಫಾರ್ ಡೆವಲಪ್​ಮೆಂಟ್ ಆಫ್ ಟೆಲಿಮ್ಯಾಟಿಕ್ಸ್​
    ಹುದ್ದೆಯ ಹೆಸರುಸೈಂಟಿಸ್ಟ್​-ಜಿ
    ಒಟ್ಟು ಹುದ್ದೆ10
    ವಿದ್ಯಾರ್ಹತೆಬಿ.ಟೆಕ್, ಎಂ.ಟೆಕ್
    ಸ್ಥಳಬೆಂಗಳೂರು, ನವದೆಹಲಿ
    ವೇತನಮಾಸಿಕ ₹ 144200-218200
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ28/10/2022
    ಅರ್ಜಿ ಸಲ್ಲಿಸಲು ಕಡೇ ದಿನ27/11/2022


    ಅರ್ಹತಾ ಮಾನದಂಡಗಳೇನು?


    ವಿದ್ಯಾರ್ಹತೆ:
    ಸಿ-ಡಾಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಟೆಕ್, ಎಂಟೆಕ್, ಸ್ನಾತಕೋತ್ತರ ಪದವಿ, ಪಿಎಚ್​.ಡಿ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ:Sahitya Akademi: ತಿಂಗಳಿಗೆ 1.77 ಲಕ್ಷ ಸಂಬಳ; Sub Editor, ಸ್ಟೆನೋಗ್ರಾಫರ್ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ


    ವಯೋಮಿತಿ:
    ಸೆಂಟರ್ ಫಾರ್ ಡೆವಲಪ್​ಮೆಂಟ್ ಆಫ್​ ಟೆಲಿಮ್ಯಾಟಿಕ್ಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 27, 2022ಕ್ಕೆ 55 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಸೆಂಟರ್ ಫಾರ್ ಡೆವಲಪ್​ಮೆಂಟ್ ಆಫ್​ ಟೆಲಿಮ್ಯಾಟಿಕ್ಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಇಂಟರ್ನಲ್ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ careers@cdot.in ಗೆ ನವೆಂಬರ್ 27ಕ್ಕೆ ಮುನ್ನ ಕಳುಹಿಸಬೇಕು.


    ಇದನ್ನೂ ಓದಿ: FACT Recruitment 2022: ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಸಿಕ ವೇತನ 32 ಸಾವಿರ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27/11/2022

    Published by:Latha CG
    First published: