• Home
  • »
  • News
  • »
  • jobs
  • »
  • BSNL Recruitment 2022: ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಪ್ಲೋಮಾ ಆದವರು Apply ಮಾಡಿ

BSNL Recruitment 2022: ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಪ್ಲೋಮಾ ಆದವರು Apply ಮಾಡಿ

BSNL

BSNL

BSNL Recruitment 2022: ಫೆಬ್ರವರಿ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಮಾರ್ಚ್​​ 9, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • Share this:

ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್(Bharat Sanchar Nigam Limited-BSNL)​​ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 24 ಟೆಕ್ನಿಕಲ್​​ ಅಪ್ರೆಂಟಿಸ್(Technical Apprentice) ಹುದ್ದೆಗಳು ಖಾಲಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಫೆಬ್ರವರಿ 23ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಮಾರ್ಚ್​​ 9, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬಿಎಸ್​ಎನ್​ಎಲ್(BSNL)​ನ ಅಧಿಕೃತ ವೆಬ್​ಸೈಟ್​​ bsnl.co.in ಗೆ ಭೇಟಿ ನೀಡಬಹುದು.


ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್​
ಹುದ್ದೆಯ ಹೆಸರುಟೆಕ್ನಿಕಲ್​ ಅಪ್ರೆಂಟಿಸ್
ಒಟ್ಟು ಹುದ್ದೆಗಳು 24
ವಿದ್ಯಾರ್ಹತೆಡಿಪ್ಲೋಮಾ, ಐಟಿಐ
ಉದ್ಯೋಗದ ಸ್ಥಳಪಂಜಾಬ್
ವೇತನ​​ ಮಾಸಿಕ ₹ 8,000
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ23/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ09/03/2022

ಹುದ್ದೆಯ ಮಾಹಿತಿ:
ಅಮೃತಸರ- 03
ಚಂಡೀಗರ್-04
ಫಿರೋಜ್​ಪುರ-03
ಹೊಶಿಯಾರ್​ಪುರ್-03
ಜಲಂಧರ್-04
ಲೂಧಿಯಾನ-03
ಪಾಟಿಯಾಲ-04
ಒಟ್ಟು 24 ಹುದ್ದೆಗಳು


ಇದನ್ನೂ ಓದಿ:KPSC ನೇಮಕಾತಿ: 188 ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ತಿಂಗಳಿಗೆ ₹ 84,000 ಸಂಬಳ


ವಿದ್ಯಾರ್ಹತೆ:
ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್​​ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್​​/ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಡಿಪ್ಲೋಮಾ, ಐಟಿಐ ಪೂರ್ಣಗೊಳಿಸಿರಬೇಕು.


ವಯೋಮಿತಿ:
ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್​​ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 25 ವರ್ಷ ಮೀರಿರಬಾರದು.


 ಉದ್ಯೋಗದ ಸ್ಥಳ:
ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್​​ ಅಪ್ರೆಂಟಿಸ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪಂಜಾಬ್​​ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.


ಇದನ್ನೂ ಓದಿ: Job Alert: ತಿಂಗಳಿಗೆ ₹ 62,000 ಸಂಬಳ, ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಲ್ಲಿ ಡಿಪ್ಲೋಮಾ ಆದವರಿಗೆ ಉದ್ಯೋಗ


ವೇತನ:
ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಟೆಕ್ನಿಕಲ್​​ ಅಪ್ರೆಂಟಿಸ್​ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 8,000 ವೇತನ ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ


ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.


ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09/03/2022

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು