• Home
  • »
  • News
  • »
  • jobs
  • »
  • BSNL Recruitment 2022: ಡಿಪ್ಲೋಮಾ ಪಾಸಾಗಿದ್ರೆ BSNLನಲ್ಲಿದೆ ಉದ್ಯೋಗ, ಇಲ್ಲಿ ಅಪ್ಲೈ ಮಾಡಿ

BSNL Recruitment 2022: ಡಿಪ್ಲೋಮಾ ಪಾಸಾಗಿದ್ರೆ BSNLನಲ್ಲಿದೆ ಉದ್ಯೋಗ, ಇಲ್ಲಿ ಅಪ್ಲೈ ಮಾಡಿ

ಬಿಎಸ್​​ಎನ್​ಎಲ್

ಬಿಎಸ್​​ಎನ್​ಎಲ್

ನವೆಂಬರ್ 1 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 15, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • News18 Kannada
  • Last Updated :
  • New Delhi, India
  • Share this:

    ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್(Bharat Sanchar Nigam Limited-BSNL)​​ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 34 ಅಪ್ರೆಂಟಿಸ್(Apprentice) ಹುದ್ದೆಗಳು ಖಾಲಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 1 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 15, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬಿಎಸ್​ಎನ್​ಎಲ್(BSNL)​ನ ಅಧಿಕೃತ ವೆಬ್​ಸೈಟ್​​ bsnl.co.in ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತ್​ ಸಂಚಾರ್ ನಿಗಮ್ ಲಿಮಿಟೆಡ್
    ಹುದ್ದೆಅಪ್ರೆಂಟಿಸ್
    ಒಟ್ಟು ಹುದ್ದೆ34
    ವಿದ್ಯಾರ್ಹತೆಡಿಪ್ಲೋಮಾ, ಎಂಜಿನಿಯರಿಂಗ್
    ವೇತನನಿಯಮಾನುಸಾರ
    ಸ್ಥಳಭಾರತದಲ್ಲಿ ಎಲ್ಲಿ ಬೇಕಾದರೂ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ01/11/2022
    ಅರ್ಜಿ ಸಲ್ಲಿಸಲು ಕೊನೆ ದಿನ15/11/2022


    ವಯೋಮಿತಿ:
    ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 29, 2022ಕ್ಕೆ ಗರಿಷ್ಠ 25 ವರ್ಷ ಮೀರಿರಬಾರದು.


    ಇದನ್ನೂ ಓದಿ: JOB ALERT: ಮೊಬೈಲ್​ ಅಪ್ಲಿಕೇಶನ್ ಡೆವಲಪರ್, ಬ್ಯುಸಿನೆಸ್ ಅನಾಲಿಸ್ಟ್ ಆಗಬೇಕೆ? ಇಲ್ಲಿದೆ ಅವಕಾಶ- ಸಂಬಳ ₹ 2.50 ಲಕ್ಷ


    ವಯೋಮಿತಿ ಸಡಿಲಿಕೆ:
    ಭಾರತ ಸರ್ಕಾರದ ನಿಯಮಾನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ವಿದ್ಯಾರ್ಹತೆ:
    ಭಾರತ್​ ಸಂಚಾರ್ ನಿಗಮ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಡಿಪ್ಲೊಮಾ, ತಾಂತ್ರಿಕ / ತಾಂತ್ರಿಕೇತರ ಪದವಿ ಪಡೆದಿರಬೇಕು.


    ಸಂಬಂಧಿತ ವಿಭಾಗದಲ್ಲಿ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.


    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ
    ಸಂದರ್ಶನ


    ಇದನ್ನೂ ಓದಿ: Government Job: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿದೆ ಬಂಪರ್ ಉದ್ಯೋಗ, ಈಗಲೇ Apply ಮಾಡಿ


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/11/2022
    ಅರ್ಜಿ ಸಲ್ಲಿಸಲು ಕೊನೆ ದಿನ: 15/11/2022

    Published by:Latha CG
    First published: