BSF Recruitment 2022: SSLC, ITI ಪಾಸಾದವರಿಗೆ ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ, ಮಾಸಿಕ ವೇತನ ₹ 69,000

2788 ಕಾನ್ಸ್​ಟೇಬಲ್(ಟ್ರೇಡ್ಸ್​ಮ್ಯಾನ್) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.  ಫೆಬ್ರವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

BSF

BSF

  • Share this:
BSF Recruitment 2022: ಕೇಂದ್ರ ಸರ್ಕಾರದ ಉದ್ಯೋಗ ಅರಸುತ್ತಿರುವವರಿಗೆ ಒಂದು ಸಿಹಿಸುದ್ದಿ ಇದೆ. ಗಡಿ ಭದ್ರತಾ ಪಡೆ(Border Security Force)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿಎಸ್​ಎಫ್(BSF)​ನಲ್ಲಿ 2788 ಕಾನ್ಸ್​ಟೇಬಲ್(ಟ್ರೇಡ್ಸ್​ಮ್ಯಾನ್) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.  ಫೆಬ್ರವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.







































ಸಂಸ್ಥೆ ಗಡಿ ಭದ್ರತಾ ಪಡೆ
ಹುದ್ದೆಯ ಹೆಸರು ಕಾನ್ಸ್​ಟೇಬಲ್(ಟ್ರೇಡ್ಸ್​ಮ್ಯಾನ್)
ಒಟ್ಟು ಹುದ್ದೆಗಳು2788
ವಿದ್ಯಾರ್ಹತೆಎಸ್​ಎಸ್​ಎಲ್​ಸಿ, ಐಟಿಐ, ಡಿಪ್ಲೋಮಾ
ಕೆಲಸದ ಸ್ಥಳಭಾರತದ ಯಾವುದೇ ಸ್ಥಳ
ಸಂಬಳ ಮಾಸಿಕ ₹ 21,700-69,100
ಅರ್ಜಿ ಸಲ್ಲಿಸುವ ಬಗೆಆನ್​ಲೈನ್
​ಅರ್ಜಿ ಸಲ್ಲಿಕೆ ಆರಂಭ ದಿನಾಂಕ 15/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ28/02/2022

ವಿದ್ಯಾರ್ಹತೆ:
ಗಡಿ ಭದ್ರತಾ ಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಕಾನ್ಸ್​ಟೇಬಲ್(ಟ್ರೇಡ್ಸ್​ಮ್ಯಾನ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಕಡ್ಡಾಯವಾಗಿ 10ನೇ ತರಗತಿ, ಐಟಿಐ, ಡಿಪ್ಲೋಮಾ ಪಾಸಾಗಿರಬೇಕು.

ಇದನ್ನೂ ಓದಿ: JOBS: ಧಾರವಾಡ ಕೃಷಿ ವಿಜ್ಞಾನ ಯೂನಿವರ್ಸಿಟಿಯಲ್ಲಿ ವಿವಿಧ ಹುದ್ದೆಗಳು ಖಾಲಿ, ಮಾಸಿಕ ವೇತನ ₹ 31,000

ಅನುಭವ:
ಅಭ್ಯರ್ಥಿಗಳು ಆಯಾ ಟ್ರೇಡ್‌ಗಳಲ್ಲಿ ಎರಡು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.

ಅಭ್ಯರ್ಥಿಗಳು ವೃತ್ತಿ ಶಿಕ್ಷಣ ಸಂಸ್ಥೆಯ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಹೊಂದಿರಬೇಕು.

ಜೊತೆಗೆ ಟ್ರೇಡ್​​ನಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು.

ವಯಸ್ಸಿನ ಮಿತಿ:

ಗಡಿ ಭದ್ರತಾ ಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಯ ವಯಸ್ಸು ಆಗಸ್ಟ್​ 1, 2021ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 23 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಗಡಿ ಭದ್ರತಾ ಪಡೆಯ ನಿಯಮಗಳ ಪ್ರಕಾರ, ಆಯಾಯ ವರ್ಗಕ್ಕೆ ಅನುಸಾರವಾಗಿ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಗಡಿ ಭದ್ರತಾ ಪಡೆಯ ನೇಮಕಾತಿ ಅಧಿಸೂಚನೆ ಪ್ರಕಾರ, ಕಾನ್ಸ್​ಟೇಬಲ್(ಟ್ರೇಡ್ಸ್​ಮ್ಯಾನ್) ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 21,700-69,100 ವೇತನ ನೀಡಲಾಗುತ್ತದೆ.

ಇದನ್ನೂ ಓದಿ: CIMAP Recruitment 2022: ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹ 31,000 ಸಂಬಳ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28/02/2022

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ದೈಹಿಕ ಗುಣಮಟ್ಟ ಪರೀಕ್ಷೆ
ದೈಹಿಕ ದಕ್ಷತೆ ಪರೀಕ್ಷೆ
ಟ್ರೇಡ್ ಪರೀಕ್ಷೆ
ಲಿಖಿತ ಪರೀಕ್ಷೆ
ಸಂದರ್ಶನ
Published by:Latha CG
First published: