BSF Group C Recruitment 2021: ಗಡಿ ಭದ್ರತಾ ಪಡೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 72 'C' ಗ್ರೂಪ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಬಿಎಸ್ಎಫ್ನ ಅಧಿಕೃತ ವೆಬ್ಸೈಟ್ rectt.bsf.gov.in ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿಗಳನ್ನು ಆನ್ಲೈನ್ ಮೋಡ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ. ಗೃಹ ಸಚಿವಾಲಯದ ಗಡಿ ಭದ್ರತಾ ಪಡೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಗಡಿ ಭದ್ರತಾ ಪಡೆ |
ಹುದ್ದೆಯ ಹೆಸರು |
C ಗ್ರೂಪ್ |
ಒಟ್ಟು ಹುದ್ದೆಗಳು |
72 |
ವಯೋಮಿತಿ |
18-25 ವರ್ಷ |
ವೇತನ |
ಮಾಸಿಕ ₹ 92,300 |
ವಿದ್ಯಾರ್ಹತೆ |
10ನೇ ತರಗತಿ ಪಾಸ್ |
ಅರ್ಜಿ ಸಲ್ಲಿಸುವ ವಿಧಾನ |
ಆನ್ಲೈನ್ |
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ rectt.bsf.gov.in ನಲ್ಲಿ ಹೊರಡಿಸಲಾದ ಪ್ರಕಟಣೆಯಿಂದ 45 ದಿನಗಳ ಒಳಗೆ ಕಾನ್ಸ್ಟೇಬಲ್ ಮತ್ತು ಇತರ ಪೋಸ್ಟ್ಗಳ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ:India Railway Recruitment 2021: SSLC, ITI ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗ
ಹುದ್ದೆಯ ಮಾಹಿತಿ:
- ಕಾನ್ಸ್ಟೇಬಲ್ - 2 ಪೋಸ್ಟ್ಗಳು
- ಕಾನ್ಸ್ಟೇಬಲ್ (ಜನರೇಟರ್ ಆಪರೇಟರ್) - 24 ಪೋಸ್ಟ್ಗಳು
- ಕಾನ್ಸ್ಟೇಬಲ್ (ಜನರೇಟರ್ ಮೆಕ್ಯಾನಿಕ್) - 28 ಪೋಸ್ಟ್ಗಳು
- ಕಾನ್ಸ್ಟೇಬಲ್ (ಲೈನ್ಮ್ಯಾನ್) - 11 ಪೋಸ್ಟ್ಗಳು
- ASI - 1 ಹುದ್ದೆ
- ಎಚ್ಸಿ - 6 ಪೋಸ್ಟ್ಗಳು
ವೇತನ:
ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ ₹ 21,700 ರಿಂದ 69,100 ರೂ.ಗಳವರೆಗೆ ವೇತನವನ್ನು ಪಡೆಯುತ್ತಾರೆ.
ಎಎಸ್ಐಗೆ ಆಯ್ಕೆಯಾದ ಅಭ್ಯರ್ಥಿಗಳು ₹ 29,200 ರಿಂದ ರೂ 92,300 ರ ನಡುವೆ ವೇತನವನ್ನು ಪಡೆಯುತ್ತಾರೆ.
ಎಚ್ಸಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ₹ 25,500 ರಿಂದ 81,100 ರ ನಡುವೆ ವೇತನವನ್ನು ಪಡೆಯುತ್ತಾರೆ.
ವಿದ್ಯಾರ್ಹತೆ:
ಅಧಿಸೂಚನೆಯ ಪ್ರಕಾರ, ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅವರು ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣಪತ್ರವನ್ನು ಸಹ ಹೊಂದಿರಬೇಕು.
ಇದನ್ನೂ ಓದಿ:AFMS Recruitment 2021: ಎಂಜಿನಿಯರಿಂಗ್, MBBS, PG ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ
ವಯೋಮಿತಿ
ಬಿಎಸ್ಎಫ್ನಲ್ಲಿ ಗ್ರೇಡ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು 18 ರಿಂದ 25 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ. ಆದರೆ, ಮೀಸಲು ವರ್ಗಕ್ಕೆ ಸೇರಿದವರಿಗೆ ಸಡಿಲಿಕೆ ನೀಡಲಾಗುವುದು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ