BSF Recruitment 2021: ಗಡಿ ಭದ್ರತಾ ಪಡೆಯಲ್ಲಿ ವಿವಿಧ ಹುದ್ದೆಗಳು ಖಾಲಿ; ಸಂಬಳ ತಿಂಗಳಿಗೆ ₹ 2,15,900

ಆಫ್​ಲೈನ್​ ಮೂಲಕ ಅಂದರೆ ಪೋಸ್ಟ್​ ಮುಖಾಂತರ 27/01/2021ರಿಂದ 31/12/2021ರವರೆಗೆ ಅರ್ಜಿ ಹಾಕಬಹುದಾಗಿದೆ.

BSF

BSF

  • Share this:
BSF Recruitment 2021: ಗಡಿ ಭದ್ರತಾ ಪಡೆ(Border Security Force)ಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಬಿಎಸ್​ಎಫ್(BSF)​ನಲ್ಲಿ 53 ಎ,ಬಿ,ಸಿ,  ಗ್ರೂಪ್(A,B<C)​ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಸಂಬಂಧಿತ ಹುದ್ದೆಗಳಿಂದ ನಿವೃತ್ತಿ ಹೊಂದಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ. ಆಫ್​ಲೈನ್(Offline)​ ಮೂಲಕ ಅಂದರೆ ಪೋಸ್ಟ್​ ಮುಖಾಂತರ 27/01/2021ರಿಂದ 31/12/2021ರವರೆಗೆ ಅರ್ಜಿ ಹಾಕಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.













































ಸಂಸ್ಥೆ ಗಡಿ ಭದ್ರತಾ ಪಡೆ
ಜಾಹೀರಾತು ಸಂಖ್ಯೆ 1/04/2020(Vol-II)-Pers/BSF/4055
ಹುದ್ದೆಯ ಹೆಸರು ಗ್ರೂಪ್​ ಸಿ, ಗ್ರೂಪ್​ ಎ, ಗ್ರೂಪ್ ಬಿ
ಒಟ್ಟು ಹುದ್ದೆಗಳು 53
ವಿದ್ಯಾರ್ಹತೆ ಕೇಂದ್ರ/ರಾಜ್ಯ ಸರ್ಕಾರದ ಯಾವುದೇ ಇಲಾಖೆಯಿಂದ ನಿವೃತ್ತರಾಗಿರಬೇಕು
ಕೆಲಸದ ಸ್ಥಳ ಭಾರತದ ಯಾವುದೇ ಸ್ಥಳ
ಸಂಬಳ ಮಾಸಿಕ ₹25,500-2,15,900
ಅರ್ಜಿ ಸಲ್ಲಿಸುವ ಬಗೆ ಆಫ್​ಲೈನ್​(ಪೋಸ್ಟ್ ಮುಖಾಂತರ)
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 27/01/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/12/2021



ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/01/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/12/2021

ಇದನ್ನೂ ಓದಿ:Indian Navy Recruitment 2021: ಪಿಯುಸಿ ಪಾಸ್ ಆಗಿದ್ರೆ ಸಾಕು, ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳು ಖಾಲಿ ಇವೆ

ಹುದ್ದೆಯ ಮಾಹಿತಿ:

ಗಡಿ ಭದ್ರತಾ ಪಡೆಯಲ್ಲಿ ಯಾವ ಯಾವ ಹುದ್ದೆಗಳು ಖಾಲಿ ಇವೆ ಹಾಗೂ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ

ಕ್ಯಾಪ್ಟನ್/ಪೈಲಟ್-5
ಕಮ್ಯಾಂಡಂಟ್(ಪೈಲಟ್) -6
ಸ್ಯಾಮ್(SAM-ಇನ್ಸ್​ಪೆಕ್ಟರ್)-5
ಜ್ಯಾಮ್(JAM-ಎಸ್​ಐ)-11
ಎಎಮ್​(ಎಎಸ್​ಐ)-16
ಫ್ಲೈಟ್ ಗನ್ನರ್ (ಇನ್​ಸ್ಪೆಕ್ಟರ್)-5
ಫ್ಲೈಟ್ ಎಂಜಿನಿಯರ್(ಎಸ್​ಐ)-4
ಫ್ಲೈಟ್ ಗನ್ನರ್(ಎಸ್​ಐ)-4

ಅರ್ಹತೆ:

ಭಾರತ ಸರ್ಕಾರ/ ರಾಜ್ಯ ಸರ್ಕಾರ/ ಸಾರ್ವಜನಿಕ ವಲಯದ ವಿವಿಧ ಸಚಿವಾಲಯಗಳು/ ಇಲಾಖೆಗಳಿಂದ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಸಂಬಳ

ಕ್ಯಾಪ್ಟನ್/ಪೈಲಟ್- ₹ 1,23,100- ₹ 2,15,900
ಕಮ್ಯಾಂಡಂಟ್(ಪೈಲಟ್) - ₹78,800- ₹ 2,09,200
ಸ್ಯಾಮ್(SAM-ಇನ್ಸ್​ಪೆಕ್ಟರ್)-₹35,400- ₹ 1,12,400
ಜ್ಯಾಮ್(JAM-ಎಸ್​ಐ)-₹29,200- ₹ 92,300
ಎಎಮ್​(ಎಎಸ್​ಐ)-₹25,500-₹ 81,100
ಫ್ಲೈಟ್ ಗನ್ನರ್ (ಇನ್​ಸ್ಪೆಕ್ಟರ್)- ₹35,400-1,12,400
ಫ್ಲೈಟ್ ಎಂಜಿನಿಯರ್(ಎಸ್​ಐ)-₹29,200-₹92,300
ಫ್ಲೈಟ್ ಗನ್ನರ್(ಎಸ್​ಐ)-₹29,200-₹92,300

ಆಯ್ಕೆ ಪ್ರಕ್ರಿಯೆ:

  • ಶಾರ್ಟ್​ಲಿಸ್ಟಿಂಗ್

  • ಲಿಖಿತ ಪರೀಕ್ಷೆ

  • ದಾಖಲಾತಿ ಪರಿಶೀಲನೆ

  • ವೈಯಕ್ತಿಕ ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?
ಗಡಿ ಭದ್ರತಾ ಪಡೆಯಲ್ಲಿ ಉದ್ಯೋಗ ಮಾಡಲು ಬಯಸುವ ಅಭ್ಯರ್ಥಿಗಳು ಗ್ರೂಪ್​ ಎ,ಬಿ,ಸಿ ಹುದ್ದೆಗಳಿಗೆ ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ವಿಳಾಸ:

Block No. 10, Lodhi Rd,

CGO Complex, Pragati Vihar, New Delhi,

Delhi- 110003

 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: