Bounce Recruitment: ಪದವಿ ಆದವರಿಗೆ ಬೌನ್ಸ್ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ; ಬೇಗ ಅರ್ಜಿ ಸಲ್ಲಿಸಿ

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಖಾಸಗಿ ಸೇವಾ ಸಂಸ್ಥೆಯಲ್ಲಿ ಉದ್ಯೋಗ ಮಾಡಬೇಕು ಎಂಬ ಕನಸಿರುವವರಿಗೆ ಇದೊಂದು ಉತ್ತಮ ಅವಕಾಶ ಆಗಿದೆ.

ಬೌನ್ಸ್ ಸಂಸ್ಥೆ

ಬೌನ್ಸ್ ಸಂಸ್ಥೆ

  • Share this:
    ಮೆಟ್ರೋಪಾಲಿಟನ್​ ಸೇರಿದಂತೆ ಎರಡನೇ ದರ್ಜೆ ನಗರಗಳಲ್ಲಿ ಬಾಡಿಗೆ ಬೌನ್ಸ್​ (Bounce)  ಸ್ಕೂಟರ್​ ಸೇವೆ ಸೌಲಭ್ಯ ಜನಪ್ರಿಯವಾಗಿದೆ. ಕಡಿಮೆ ಬೆಲೆ ನಿಗದಿತ ಸಮಯದಲ್ಲಿ ಗ್ರಾಹಕರು ಬ್ಯುಸಿ ಟ್ರಾಫಿಕ್​ನಲ್ಲೂ ಈ ಬೈಕ್​ ಸೇವೆಯನ್ನು ಬಳಸಿಕೊಂಡು ನಿಗದಿತ ಜಾಗಕ್ಕೆ ತಲುಪ ಬಹುದಾಗಿದೆ. ದೇಶಾದ್ಯಂತ ದೊಡ್ಡ ಕಂಪನಿಯಾಗಿ ಹೊರ ಹೊಮ್ಮಿರುವ ಈ ಬೌನ್ಸ್​ ಅನೇಕ ಜನರಿಗೆ ಉದ್ಯೋಗ (Job) ನೀಡುವಲ್ಲಿ ಕೂಡ ಪ್ರಮುಖ ಪಾತ್ರವಹಿಸಿದೆ. ಈ ಬೌನ್ಸ್​​ ಸಂಸ್ಥೆ ಇದೀಗ ಬೆಂಗಳೂರಿನಲ್ಲಿ ನೇಮಕಾತಿಗೆ (Bounce Job in Bangalore) ಮುಂದಾಗಿದೆ. ಬೆಂಗಳೂರಿನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಸಂಸ್ಥೆ ಅಧಿಸೂಚನೆ ಹೊರಡಿಸಿದೆ. ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

    ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ಖಾಸಗಿ ಸೇವಾ ಸಂಸ್ಥೆಯಲ್ಲಿ ಉದ್ಯೋಗ ಮಾಡಬೇಕು ಎಂಬ ಕನಸಿರುವವರಿಗೆ ಇದೊಂದು ಉತ್ತಮ ಅವಕಾಶ ಆಗಿದೆ. ಅನುಭವಸ್ಥ ಹಾಗೂ ಫ್ರೇಶರ್​ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಬೆಂಗಳೂರು ಕಂಪನಿಯಲ್ಲಿರುವ ಹುದ್ದೆಗಳು, ನೇಮಕಾತಿ ಪ್ರಕ್ರಿಯೆ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ವಿವರ ಈ ಕೆಳಗಿನಂತಿದೆ.

    ಸಂಸ್ಥೆ : ಬೌನ್ಸ್​ (Bounce)
    ಹುದ್ದೆಗಳು: ಆಪರೇಷನ್ ಎಕ್ಸಿಕ್ಯೂಟಿವ್, ಇಂಜಿನಿಯರ್​​, ಮ್ಯಾನೇಜರ್​ ಎಸ್​ಇಒ
    ಒಟ್ಟು ಹುದ್ದೆಗಳು: 5
    ಕಾರ್ಯ ನಿರ್ವಹಣೆ ಸ್ಥಳ: ಬೆಂಗಳೂರು
    ವೇತನ: ಕಂಪನಿ ನಿಯಮ ಅನುಸಾರ

































    ಹುದ್ದೆಗಳುವಿಭಾಗಅನುಭವವಿದ್ಯಾರ್ಹತೆ
    ಕಾರ್ಯನಿರ್ವಾಹಕ- ಬ್ಯಾಟರಿ ನಿಯಂತ್ರಣಇವಿ ಕೋರ್​​2 ರಿಂದ ಆರು ತಿಂಗಳ ಸೇವಾ ಅನುಭವಬಿಇ  ಪದವಿ
    ಮ್ಯಾನೇಜರ್ -ಸಬ್ಸಿಡಿಫೈನಾನ್ಸ್​​10 ವರ್ಷಕ್ಕಿಂತ ಹೆಚ್ಚಿನ ಸೇವಾ ಅನುಭವಯಾವುದೇ ವಿಷಯದಲ್ಲಿ ಪದವಿ
    ಕಾರ್ಯನಿರ್ವಾಹಕ - ವಿತರಕರ ನಿರ್ವಹಣೆಫೈನಾನ್ಸ್​​2 ರಿಂದ 5 ವರ್ಷ ಸೇವಾ ಅನುಭವಯಾವುದೇ ವಿಷಯದಲ್ಲಿ ಪದವಿ
    ಮ್ಯಾನೇಜರ್ ಎಸ್​ಇಒಮಾರ್ಕೆಟಿಂಗ್​​3 ವರ್ಷಗಳ ಸೇವಾ ಅನುಭವಯಾವುದೇ ವಿಷಯದಲ್ಲಿ ಪದವಿ

    ಅರ್ಜಿ ಸಲ್ಲಿಕೆ ವಿಧಾನ (Apply Method)
    ಇಮೇಲ್​ ಮೂಲಕ

    ಇಮೇಲ್​ ವಿಳಾಸ: careers@bounceshare.com

    ಪ್ರಮುಖ ಲಿಂಕ್‌ಗಳು (Job Links)
    ಕಾರ್ಯನಿರ್ವಾಹಕ ಹುದ್ದೆ ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
    ಕಾರ್ಯನಿರ್ವಾಹಕ- ಬ್ಯಾಟರಿ ನಿಯಂತ್ರಣ  ಹುದ್ದೆ ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
    ಮ್ಯಾನೇಜರ್ ಎಸ್​ಇಒ  ಹುದ್ದೆ ಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

    ಅಧಿಕೃತ ವೆಬ್‌ಸೈಟ್: bounceshare.com

    ಇದನ್ನು ಓದಿ: ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ 54 ಸಾವಿರ ರೂ ವೇತನ

    ವಿಶೇಷ ಸೂಚನೆ (Special Instructions)
    ಅಭ್ಯರ್ಥಿಗಳು ಕಂಪನಿ ಮತ್ತು ಹುದ್ದೆಯ ಜವಾಬ್ದಾರಿಗಳ ಕುರಿತು ಸಂಪೂರ್ಣವಾಗಿ ತಿಳಿಯಬೇಕು.
    ಗ್ರಾಹಕ ಯಶಸ್ಸಿನ ವ್ಯವಸ್ಥಾಪಕ, ಆಟೋ ಮೊಬೈಲ್​ ಅನುಭವ ತಿಳಿದಿರಬೇಕು.
    ಎಸ್​ಇಒ ಹುದ್ದೆಗೆ ಸೇವೆ ಸಲ್ಲಿಸುವವರು ತಾಂತ್ರಿಕ ಜ್ಞಾನದ ಜೊತೆಗೆ ಎಸ್​ಇಒ ಪರಿಜ್ಞಾನ ಹೊಂದಿರಬೇಕು
    ಕಾರ್ಯ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವವರು SaaS ಪರಿಸರದ ತಿಳುವಳಿಕೆ
    ಆಟೋಮೊಬೈಲ್ ಅನುಭವಕ್ಕೆ ಆದ್ಯತೆ ನೀಡಲಾಗಿದೆ.

    ಇದನ್ನು ಓದಿ: ನವೋದಯ ವಿದ್ಯಾಲಯ ಸಮಿತಿಯಲ್ಲಿ 1616 ಹುದ್ದೆಗಳ ನೇಮಕಾತಿ; ಬಿಎಡ್​ ಆದವರಿಗೆ ಅವಕಾಶ

    ಅರ್ಜಿ ಸಲ್ಲಿಕೆ ವಿಧಾನ (How To Apply)

    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
    Published by:Seema R
    First published: