• Home
  • »
  • News
  • »
  • jobs
  • »
  • Bangalore Job Alert: ಬೌನ್ಸ್​ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ; ಇಲ್ಲಿದೆ ಸಂಪೂರ್ಣ ಮಾಹಿತಿ

Bangalore Job Alert: ಬೌನ್ಸ್​ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ; ಇಲ್ಲಿದೆ ಸಂಪೂರ್ಣ ಮಾಹಿತಿ

ಬೌನ್ಸ್​ ಸಂಸ್ಥೆ

ಬೌನ್ಸ್​ ಸಂಸ್ಥೆ

ಮ್ಯಾನೇಜರ್ ಹೋಮೋಲೋಗೇಶನ್, ಇಂಜಿನಿಯರ್​ ಸರ್ವಿಸ್​, ಇಂಜಿನಿಯರ್​ ಸೋರ್ಸಿಂಗ್​ ಹುದ್ದೆ ನೇಮಕಾತಿ ನಡೆಸಲಿದೆ.

  • Share this:

    ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಖಾಸಗಿ ಸಂಸ್ಥೆಯಲ್ಲಿ ಒಂದು ಬೌನ್ಸ್ (Bounce -Rental Bike Service)​ ಸಂಸ್ಥೆ. ಬಾಡಿಗೆ ಬೈಕ್​ ಸೇವೆ ಒದಗಿಸುತ್ತಿರುವ ಬೌನ್ಸ್​ ದೇಶದ ಅನೇಕ ರಾಜಧಾನಿಗಳಲ್ಲಿ ಪ್ರವರ್ಧಮಾನದ ಸಂಸ್ಥೆಯಾಗಿದೆ. ಗ್ರಾಹಕರ ಸ್ನೇಹಿಯಾಗಿರುವ (Customer Friendly) ಈ ಸಂಸ್ಥೆ, ಜನ ಮೆಚ್ಚುಗೆಯನ್ನು ಪಡೆದಿದೆ. ಅಷ್ಟೇ ಅಲ್ಲದೇ, ಅನೇಕ ಅಭ್ಯರ್ಥಿಗಳಿಗೆ ಉದ್ಯೋಗ (Job) ನೀಡುತ್ತಿರುವ ಉದಯೋನ್ಮಕ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಅನೇಕ ಜನರು ಈ ಖಾಸಗಿ ಸಂಸ್ಥೆಯಲ್ಲಿ ತಮ್ಮ ಕನಸಿನ ಕೆಲಸ ಕಂಡು ಕೊಳ್ಳುವಲ್ಲಿ ಸಹಾಯ ಮಾಡಿದೆ. ಈ ಸಂಸ್ಥೆ ಇದೀಗ ನೇಮಕಾತಿಗೆ ಮುಂದಾಗಿದೆ.


    ಬೌನ್ಸ್​ ಸಂಸ್ಥೆ ರಾಷ್ಟ್ರ ರಾಜಧಾನಿ ದೆಹಲಿಯ ಗುರುಗ್ರಾಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಮ್ಯಾನೇಜರ್ ಹೋಮೋಲೋಗೇಶನ್, ಇಂಜಿನಿಯರ್​ ಸರ್ವಿಸ್​, ಇಂಜಿನಿಯರ್​ ಸೋರ್ಸಿಂಗ್​ ಹುದ್ದೆ ನೇಮಕಾತಿ ನಡೆಸಲಿದೆ.   ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಕೆಳಗಿನಂತಿವೆ.


    ಸಂಸ್ಥೆ : ಬೌನ್ಸ್​ (Bounce)
    ಹುದ್ದೆಗಳು: ಮ್ಯಾನೇಜರ್ ಹೋಮೋಲೋಗೇಶನ್, ಇಂಜಿನಿಯರ್​ ಸರ್ವಿಸ್​, ಇಂಜಿನಿಯರ್​ ಸೋರ್ಸಿಂಗ್
    ಒಟ್ಟು ಹುದ್ದೆಗಳು: 5
    ಕಾರ್ಯ ನಿರ್ವಹಣೆ ಸ್ಥಳ: ಗುರುಗ್ರಾಮ
    ವೇತನ: ಕಂಪನಿ ನಿಯಮ ಅನುಸಾರ

    ಹುದ್ದೆಹುದ್ದೆ ಸಂಖ್ಯೆವಿಭಾಗಅನುಭವವಿದ್ಯಾರ್ಹತೆ
    ಮ್ಯಾನೇಜರ್ ಹೋಮೋಲೋಗೇಶನ್1ಆರ್​ ಅಂಡ್​ ಸಿ8ವರ್ಷಪದವಿ
    ಇಂಜಿನಿಯರ್​ ಸರ್ವಿಸ್ ​​1ಸೇಲ್ಸ್​ ಅಂಡ್​ ಡಿಪಾರ್ಟ್​ಮೆಂಟ್3-4 ವರ್ಷಬಿಇ
    ಇಂಜಿನಿಯರ್​ ಸೋರ್ಸಿಂಗ್2ಸೂರ್ಸಿಂಗ್​ ಮತ್ತು ಪ್ರೊಡಕ್ಷನ್4 ವರ್ಷಬಿಇ

    ಅರ್ಜಿ ಸಲ್ಲಿಕೆ ವಿಧಾನ (Apply Method)
    ಇಮೇಲ್​ ಮೂಲಕ


    ಇಮೇಲ್​ ವಿಳಾಸ: careers@bounceshare.com
    ಅಧಿಕೃತ ವೆಬ್‌ಸೈಟ್: bounceshare.com


    ವಿಶೇಷ ಸೂಚನೆ (Special Instructions)
    ಅಭ್ಯರ್ಥಿಗಳು ಕಂಪನಿ ಮತ್ತು ಹುದ್ದೆಯ ಜವಾಬ್ದಾರಿಗಳ ಕುರಿತು ಸಂಪೂರ್ಣವಾಗಿ ತಿಳಿಯಬೇಕು.
    ಗ್ರಾಹಕ ಯಶಸ್ಸಿನ ವ್ಯವಸ್ಥಾಪಕ, ಆಟೋ ಮೊಬೈಲ್​ ಅನುಭವ ತಿಳಿದಿರಬೇಕು.
    ಆಟೋಮೊಬೈಲ್ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.


    ಇದನ್ನು ಓದಿ: ಪದವಿ ಆದವರಿಗೆ ಬೌನ್ಸ್ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ; ಬೇಗ ಅರ್ಜಿ ಸಲ್ಲಿಸಿ


    ಅರ್ಜಿ ಸಲ್ಲಿಕೆ ವಿಧಾನ (How To Apply)


    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.


    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.

    Published by:Seema R
    First published: