Job in Bangalore: ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಹುಡುಕುತ್ತಿದ್ರೆ ಇಲ್ಲಿದೆ ಅದ್ಬುತ ಅವಕಾಶ; ಬೌನ್ಸ್​ ಸಂಸ್ಥೆಯಲ್ಲಿದೆ ಕೆಲಸ

ಖಾಸಗಿ ಸೇವೆಯಲ್ಲಿ ಕೆಲಸ ಹುಡುಕುತ್ತಿರುವ ಅನೇಕ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಆಗಿದ್ದು, ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

  • Share this:
    ದೇಶದ ಅನೇಕ ರಾಜ್ಯಗಳಲ್ಲಿ ಹಾಗೂ ನಗರಗಳಲ್ಲಿ ಜನಪ್ರಿಯವಾಗಿರುವ ಬೌನ್ಸ್​  (Bounce -Rental Bike Service) ಬಾಡಿಗೆ ಬೈಕ್​ ಸೇವೆ ಜನರಿಗೆ ಸಾರಿಗೆ ಸೇವೆಯಲ್ಲಿ ಅನೇಕ ಅನುಕೂಲ ಒದಗಿಸಿದೆ. ಅಂದುಕೊಂಡ ಜಾಗಕ್ಕೆ ಕಡಿಮೆ ದರ ಮತ್ತು ಅಲ್ಪಾವಧಿಯಲ್ಲಿ ತಲುಪುವ ಈ ಸೇವೆ ಎಲ್ಲೆಡೆ ಜನಪ್ರಿಯಗೊಂಡಿದೆ. ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿರುವ ಸಂಸ್ಥೆ ಇದೀಗ ಉದ್ಯೋಗಾಂಕ್ಷಿಗಳಿಗೆ (Job Seekers) ಸಿಹಿ ಸುದ್ದಿ ನೀಡಿದೆ. ದೇಶದ ಜನಪ್ರಿಯ ಸಂಸ್ಥೆಯಾಗಿ ಬೆಳೆದಿರುವ ಬೌನ್ಸ್​​ನಲ್ಲಿ ಇದೀಗ ವಿವಿಧ ಹುದ್ದೆಗಳ ನೇಮಕಾತಿಗೆ(Recruitment) ಸಂಸ್ಥೆ ಮುಂದಾಗಿದೆ. ಖಾಸಗಿ ಸೇವೆಯಲ್ಲಿ ಕೆಲಸ ಹುಡುಕುತ್ತಿರುವ ಅನೇಕ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ ಆಗಿದ್ದು, ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

    ಸಂಸ್ಥೆ ಈಗಾಗಲೇ ಅನೇಕ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿದ್ದು, ಅನೇಕ ಹುದ್ದೆಗಳ ಭರ್ತಿಗೆ ಮುಂದಾಗಿದೆ. ಅಭ್ಯರ್ಥಿಯ ವಿವಿಧ ವಿದ್ಯಾರ್ಹತೆಗೆ ಅನುಗುಣವಾದ ವಿವಿಧ ಹುದ್ದೆಗಳನ್ನು ಸಂಸ್ಥೆ ಸೃಷ್ಟಿಸಿದ್ದು, ಇದರಿಂದ ಅನೇಕ ಅಭ್ಯರ್ಥಿಗಳ ಜೀವನಕ್ಕೆ ನೆರವಾಗಿದೆ. ಇದೀಗ ಸಂಸ್ಥೆಯಲ್ಲಿ ಪದವಿ ಮತ್ತು ಡಿಪ್ಲೊಮಾ ಅಭ್ಯರ್ಥಿಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

    ಸಂಸ್ಥೆ : ಬೌನ್ಸ್​ (Bounce)
    ಹುದ್ದೆಗಳು: ಕ್ವಾಲಿಟಿ ಮ್ಯಾನೇಜರ್​, ನಿರ್ವಹಣಾ ಇಂಜಿನಿಯರ್​​
    ಒಟ್ಟು ಹುದ್ದೆಗಳು: 2
    ಕಾರ್ಯ ನಿರ್ವಹಣೆ ಸ್ಥಳ: ಬಿವಾಡಿ (ರಾಜಸ್ಥಾನ)
    ವೇತನ: ಕಂಪನಿ ನಿಯಮ ಅನುಸಾರ





















    ಹುದ್ದೆವಿಭಾಗವಿದ್ಯಾರ್ಹತೆಅನುಭವ
    ಕ್ವಾಲಿಟಿ ಮ್ಯಾನೇಜರ್​ ಕ್ಟಾಲಿಟಿಇಂಜಿನಿಯರಿಂಗ್​​9 ವರ್ಷ
    ನಿರ್ವಹಣಾ ಇಂಜಿನಿಯರ್​ನಿರ್ವಹಣೆಬಿಟೆಕ್​ ಅಥವಾ ಎಲೆಕ್ಟಿಕಲ್​ ಅಥವಾ ಮೆಕಾಟ್ರೋನಿಕ್ಸ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ1-3 ವರ್ಷ

    ಅರ್ಜಿ ಸಲ್ಲಿಕೆ ವಿಧಾನ (Apply Method)
    ಇಮೇಲ್​ ಮೂಲಕ

    ಇಮೇಲ್​ ವಿಳಾಸ: careers@bounceshare.com

    ಇದನ್ನು ಓದಿ: ಕೆನರಾ ಬ್ಯಾಂಕ್​ನಲ್ಲಿದೆ ಉದ್ಯೋಗಾವಕಾಶ; ಬೆಂಗಳೂರಿನಲ್ಲಿ ಕೆಲಸ

    ಪ್ರಮುಖ ಲಿಂಕ್‌ಗಳು (Job Links)
    ಕ್ವಾಲಿಟಿ ಮ್ಯಾನೇಜರ್ ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
    ನಿರ್ವಹಣಾ ಇಂಜಿನಿಯರ್ ಹುದ್ದೆ ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

    ವಿಶೇಷ ಸೂಚನೆ (Special Instructions)
    ಅಭ್ಯರ್ಥಿಗಳು ಕಂಪನಿ ಮತ್ತು ಹುದ್ದೆಯ ಜವಾಬ್ದಾರಿಗಳ ಕುರಿತು ಸಂಪೂರ್ಣವಾಗಿ ತಿಳಿಯಬೇಕು.
    ಗ್ರಾಹಕ ಯಶಸ್ಸಿನ , ನಿರ್ವಹಣೆ ಆಟೋ ಮೊಬೈಲ್​ ಅನುಭವ ತಿಳಿದಿರಬೇಕು.
    ಆಟೋಮೊಬೈಲ್ ಅನುಭವಕ್ಕೆ ಆದ್ಯತೆ ನೀಡಲಾಗಿದೆ.

    ಇದನ್ನು ಓದಿ: ಪಿಯುಸಿ ಆಗಿದ್ರೆ ಪೊಲೀಸ್​ ಕಾನ್ಸ್​ಟೇಬಲ್​ ಹುದ್ದೆಗೆ ಅರ್ಜಿ ಸಲ್ಲಿಸಿ; 1411 ಹುದ್ದೆಗೆ ಅರ್ಜಿ ಆಹ್ವಾನ

    ಅರ್ಜಿ ಸಲ್ಲಿಕೆ ವಿಧಾನ (How To Apply)

    ಕಂಪನಿಯ ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.
    Published by:Seema R
    First published: