• ಹೋಂ
  • »
  • ನ್ಯೂಸ್
  • »
  • Jobs
  • »
  • BSF Recruitment: ಗಡಿ ಭದ್ರತಾ ಪಡೆಯಲ್ಲಿ 281 ಹುದ್ದೆಗಳಿಗೆ ನೇಮಕಾತಿ

BSF Recruitment: ಗಡಿ ಭದ್ರತಾ ಪಡೆಯಲ್ಲಿ 281 ಹುದ್ದೆಗಳಿಗೆ ನೇಮಕಾತಿ

BSF

BSF

ಅರ್ಜಿ ಭರ್ತಿಗೆ ಕಡೆಯ ದಿನ ಜೂನ್​ 23 ಆಗಿದೆ. ಅರ್ಜಿಯನ್ನು ಆನ್​ಲೈನ್​ ಮೂಲಕವೇ ಭರ್ತಿ ಮಾಡಬೇಕಿದೆ.

  • Share this:

    ಗಡಿ ಭದ್ರತಾ ಪಡೆಯಲ್ಲಿ (Border Security Force)  281 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಆದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಎಸ್​ಐ (ಮಾಸ್ಟರ್), ಎಚ್​ಎಸ್​​ (ಮಾಸ್ಟರ್) ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಭರ್ತಿಗೆ ಕಡೆಯ ದಿನ ಜೂನ್​ 23 ಆಗಿದೆ. ಅರ್ಜಿಯನ್ನು ಆನ್​ಲೈನ್​ (Online) ಮೂಲಕವೇ ಭರ್ತಿ ಮಾಡಬೇಕಿದೆ.


    ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.


    ಸಂಸ್ಥೆಯ ಹೆಸರು: ಗಡಿ ಭದ್ರತಾ ಪಡೆ (BSF)
    ಹುದ್ದೆಗಳ ಸಂಖ್ಯೆ: 281
    ಉದ್ಯೋಗ ಸ್ಥಳ: ಭಾರತದಾದ್ಯಂತ
    ಪೋಸ್ಟ್ ಹೆಸರು: ಎಸ್​ಐ (ಮಾಸ್ಟರ್), ಎಚ್​ಸಿ (ಮಾಸ್ಟರ್)
    ವೇತನ: 21700-112400 ರೂ ಪ್ರತಿ ತಿಂಗಳು

    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯಸ್ಸಿನ ಮಿತಿವೇತನ
    ಎಸ್​ಐ (ಮಾಸ್ಟರ್)8ಪಿಯುಸಿ ಅಥವಾ 12ನೇ ತರಗತಿ22-28 ವರ್ಷ35400-112400 ರೂ ಮಾಸಿಕ
    ಎಸ್​ಐ (ಎಂಜಿನ್ ಡ್ರೈವರ್)6ಪಿಯುಸಿ ಅಥವಾ 12ನೇ ತರಗತಿ22-28 ವರ್ಷ35400-112400 ರೂ ಮಾಸಿಕ
    ಎಸ್​ಐ (ಕಾರ್ಯಾಗಾರ)2ಡಿಪ್ಲೋಮಾ, ಪದವಿ20-25 ವರ್ಷ35400-112400 ರೂ ಮಾಸಿಕ
    ಎಚ್​ಸಿ (ಮಾಸ್ಟರ್​) 52 ಎಸ್​ಎಸ್​ಎಲ್​ಸಿ 20-25 25500-81100/-52ಎಸ್​ಎಸ್​ಎಲ್​ಸಿ20-25 ವರ್ಷ 25500-81100 ರೂ ಮಾಸಿಕ
    ಎಚ್​ಸಿ (ಎಂಜಿನ್ ಡ್ರೈವರ್)64ಎಸ್​ಎಸ್​ಎಲ್​ಸಿ20-25 ವರ್ಷ 25500-81100 ರೂ ಮಾಸಿಕ
    ಎಚ್​ಸಿ (ವರ್ಕ್‌ಶಾಪ್) - ವ್ಯಾಪಾರ19ಎಸ್​ಎಸ್​ಎಲ್​ಸಿ20-25 ವರ್ಷ 25500-81100 ರೂ ಮಾಸಿಕ
    ಸಿಟಿ (ಸಿಬ್ಬಂದಿ)130ಎಸ್​ಎಸ್​ಎಲ್​ಸಿ20-25 ವರ್ಷ21700-69100 ರೂ ಮಾಸಿಕ

    ವಿದ್ಯಾರ್ಹತೆ
    ಅಂಗೀಕೃತ ವಿಶ್ವ ವಿದ್ಯಾಲಯ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಪದವಿ, ಡಿಪ್ಲೋಮಾ ಹಾಗೂ ಎಸ್​ಎಸ್​ಎಲ್​ಸಿ ಉತ್ರೀರ್ಣರಾಗಿರಬೇಕು.


    ವೇತನ
    ಸದರಿ ಹುದ್ದೆಗಳಿಗೆ ಸಂಬಂಧಿಸಿದಂತೆ ವೇತನ ನಿಗದಿ ಮಾಡಲಾಗಿದ್ದು, 21,700 ರಿಂದ 1,12400 ರೂವರೆಗೆ ವೇತನ ನಿಗದಿಸಲಾಗಿದೆ.


    ಇದನ್ನು ಓದಿ: ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ 61 ಹುದ್ದೆಗಳಿಗೆ ನೇಮಕಾತಿ


    ಅರ್ಜಿ ಶುಲ್ಕ
    ಪ. ಜಾ, ಪ. ಪಂ ಮತ್ತು ನಿವೃತ್ತ ಸೇವಾನೌಕರರಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ
    ಗ್ರೂಪ್ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ. 200 ರೂ
    ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರೂ. 100 ರೂ


    ಆಯ್ಕೆ ವಿಧಾನ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ


    ಅರ್ಜಿ ಸಲ್ಲಿಕೆ ವಿಧಾನ: ಆನ್​ಲೈನ್​


    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 23, 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್​ 23, 2022


    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: bsf.nic.in


    ಇದನ್ನು ಓದಿ: ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ 33 ಹುದ್ದೆಗೆ ಅರ್ಜಿ ಆಹ್ವಾನ


    ಅರ್ಜಿ ಸಲ್ಲಿಕೆ ವಿಧಾನ


    ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.


    -ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.


    -ಮೇಲಿನ ಲಿಂಕ್‌ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ. ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.


    -ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.


    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು