• Home
  • »
  • News
  • »
  • jobs
  • »
  • BOB Recruitment 2022: ಬ್ಯಾಂಕ್ ಆಫ್​ ಬರೋಡಾದಲ್ಲಿ ಡಿಗ್ರಿ ಪಾಸಾದವರಿಗೆ ಉದ್ಯೋಗ, ತಿಂಗಳಿಗೆ 18 ಸಾವಿರ ಸಂಬಳ

BOB Recruitment 2022: ಬ್ಯಾಂಕ್ ಆಫ್​ ಬರೋಡಾದಲ್ಲಿ ಡಿಗ್ರಿ ಪಾಸಾದವರಿಗೆ ಉದ್ಯೋಗ, ತಿಂಗಳಿಗೆ 18 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಸಕ್ತ ಅಭ್ಯರ್ಥಿಗಳು ನವೆಂಬರ್ 30, 2022 ಕ್ಕೆ ಮುನ್ನ ಅರ್ಜಿ ಸಲ್ಲಿಸಬಹುದು.

  • News18 Kannada
  • Last Updated :
  • Karnataka, India
  • Share this:

    ಬ್ಯಾಂಕ್ ಆಫ್ ಬರೋಡಾದಲ್ಲಿ(Bank of Baroda) 2 ಎಫ್​ಎಲ್​ಸಿ ಕೌನ್ಸಲರ್ (FLC Counsellor) ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹಾವೇರಿ(Haveri) ಮತ್ತು ದಾವಣಗೆರೆ(Davanagere) ಬ್ರಾಂಚ್​ಗಳಲ್ಲಿ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 30, 2022 ಕ್ಕೆ ಮುನ್ನ ಅರ್ಜಿ ಸಲ್ಲಿಸಬಹುದು.


    ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಬ್ಯಾಂಕ್ ಆಫ್​ ಬರೋಡಾ
    ಹುದ್ದೆಯ ಹೆಸರುಎಫ್​ಎಲ್​ಸಿ ಕೌನ್ಸಲರ್
    ಒಟ್ಟು ಹುದ್ದೆ2
    ವಿದ್ಯಾರ್ಹತೆಪದವಿ, ಸ್ನಾತಕೋತ್ತರ ಪದವಿ
    ವೇತನಮಾಸಿಕ ₹ 18,000
    ಸ್ಥಳಹಾವೇರಿ, ದಾವಣಗೆರೆ
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ10/10/2022
    ಅರ್ಜಿ ಸಲ್ಲಿಸಲು ಕೊನೆ ದಿನ30/11/2022


    ವಿದ್ಯಾರ್ಹತೆ:
    ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ, ಎಫ್​ಎಲ್​ಸಿ ಕೌನ್ಸಲರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.


    ಇದನ್ನೂ ಓದಿ: Bengaluru Jobs: ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ಬೆಂಗಳೂರು ಘಟಕದಲ್ಲಿ ಉದ್ಯೋಗ


    ವಯೋಮಿತಿ:
    ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ, ಎಫ್​ಎಲ್​ಸಿ ಕೌನ್ಸಲರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 64 ವರ್ಷ ಮೀರಿರಬಾರದು.


    ವಯೋಮಿತಿ ಸಡಿಲಿಕೆ:
    ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ ಇರುತ್ತದೆ.


    ಆಯ್ಕೆ ಪ್ರಕ್ರಿಯೆ:
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?
    ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
    ಬ್ಯಾಂಕ್ ಆಫ್​ ಬರೋಡಾ
    ಪ್ರಾದೇಶಿಕ ಕಚೇರಿ-ಉಡುಪಿ -2
    2ನೇ ಮಹಡಿ
    ಶಾಮಿಲಿ ಇನ್
    ಅಂಬಲಪಾಡಿ
    ಉಡುಪಿ-576103
    ಕರ್ನಾಟಕ


    ಇದನ್ನೂ ಓದಿ: NAAC Recruitment 2022: ಪಿಎಚ್​.ಡಿ ಮಾಡಿದವರಿಗೆ 2.17 ಲಕ್ಷ ಸಂಬಳದ ಉದ್ಯೋಗ, ಈಗಲೇ Apply ಮಾಡಿ


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 30/11/2022

    Published by:Latha CG
    First published: