BOB Recruitment 2021: ಪದವೀಧರರಿಗೆ ಬ್ಯಾಂಕ್ ಆಫ್​ ಬರೋಡಾದಲ್ಲಿ ಉದ್ಯೋಗ, ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಇ-ವೆಲ್ತ್​ ರಿಲೇಶನ್​ಶಿಪ್ ಮ್ಯಾನೇಜರ್, ಸೀನಿಯರ್ ರಿಲೇಶನ್​​ಶಿಪ್​ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.

BOB

BOB

  • Share this:
Bank of Baroda Recruitment 2021: ಬ್ಯಾಂಕ್ ಆಫ್​ ಬರೋಡಾ(Bank of Baroda) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 376 ಇ-ವೆಲ್ತ್​ ರಿಲೇಶನ್​ಶಿಪ್ ಮ್ಯಾನೇಜರ್(E-Wealth Relationship Manager), ಸೀನಿಯರ್ ರಿಲೇಶನ್​​ಶಿಪ್​ ಮ್ಯಾನೇಜರ್(Senior Relationship Manager) ಹುದ್ದೆಗಳು ಖಾಲಿ ಇದ್ದು, ಪದವೀಧರರು(Graduates) ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 9ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್​ ಆಫ್​ ಬರೋಡಾ(Bank of Baroda)ದ ಅಧಿಕೃತ ವೆಬ್​ಸೈಟ್​​ www.bankofbaroda.in ಗೆ ಭೇಟಿ ನೀಡಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.





































ಸಂಸ್ಥೆ ಬ್ಯಾಂಕ್ ಆಫ್ ಬರೋಡಾ
ಹುದ್ದೆಯ ಹೆಸರು ಇ-ವೆಲ್ತ್​ ರಿಲೇಶನ್​ಶಿಪ್ ಮ್ಯಾನೇಜರ್, ಸೀನಿಯರ್ ರಿಲೇಶನ್​​ಶಿಪ್​ ಮ್ಯಾನೇಜರ್
ಒಟ್ಟು ಹುದ್ದೆಗಳು 376
ವಿದ್ಯಾರ್ಹತೆ ಯಾವುದೇ ಪದವಿ
ಉದ್ಯೋಗದ ಸ್ಥಳ ಭಾರತದ ಯಾವುದೇ ಜಾಗ
ಅರ್ಜಿ ಸಲ್ಲಿಸುವ ವಿಧಾನ ಆನ್​ಲೈನ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 19/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 09/12/2021



ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09/12/2021

ಇದನ್ನೂ ಓದಿ: Bank of Baroda: ತಿಂಗಳಿಗೆ ₹ 89,890 ಸಂಬಳ; BE, B Tech ಅಭ್ಯರ್ಥಿಗಳಿಗೆ ಬ್ಯಾಂಕ್​ ಆಫ್​ ಬರೋಡಾದಲ್ಲಿ ಉದ್ಯೋಗ

ಹುದ್ದೆಯ ಮಾಹಿತಿ:

ಇ-ವೆಲ್ತ್​ ರಿಲೇಶನ್​ಶಿಪ್ ಮ್ಯಾನೇಜರ್- 50 ಹುದ್ದೆಗಳು
ಸೀನಿಯರ್ ರಿಲೇಶನ್​​ಶಿಪ್​ ಮ್ಯಾನೇಜರ್- 326 ಹುದ್ದೆಗಳು
ಒಟ್ಟು -376 ಹುದ್ದೆಗಳು

ವಿದ್ಯಾರ್ಹತೆ:

ಇ-ವೆಲ್ತ್​ ರಿಲೇಶನ್​ಶಿಪ್ ಮ್ಯಾನೇಜರ್, ಸೀನಿಯರ್ ರಿಲೇಶನ್​​ಶಿಪ್​ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ 1.5-2 ವರ್ಷ ಅನುಭವ ಇರಬೇಕು.

ಉದ್ಯೋಗದ ಸ್ಥಳ:

ಇ-ವೆಲ್ತ್​ ರಿಲೇಶನ್​ಶಿಪ್ ಮ್ಯಾನೇಜರ್, ಸೀನಿಯರ್ ರಿಲೇಶನ್​​ಶಿಪ್​ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ.

ವೇತನ:

ಇ-ವೆಲ್ತ್​ ರಿಲೇಶನ್​ಶಿಪ್ ಮ್ಯಾನೇಜರ್, ಸೀನಿಯರ್ ರಿಲೇಶನ್​​ಶಿಪ್​ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: CCL Recruitment 2021: 10th, 12th, ITI ಪಾಸಾದವರಿಗೆ ಸೆಂಟ್ರಲ್ ಕೋಲ್​ಫೀಲ್ಡ್ಸ್​​ನಲ್ಲಿ ಉದ್ಯೋಗ, ಈಗಲೇ ಅರ್ಜಿ ಸಲ್ಲಿಸಿ

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: