BMTC Recruitment: ಬಿಎಂಟಿಸಿಯಲ್ಲಿದೆ ಉದ್ಯೋಗ; ಬಿಇ ಆದವರಿಗೆ ಅವಕಾಶ

ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 8 ಕಡೆಯ ದಿನಾಂಕವಾಗಿದೆ.

BMTCಯಲ್ಲಿಹುದ್ದೆಗೆ ಅರ್ಜಿ ಸಲ್ಲಿಸಿ

BMTCಯಲ್ಲಿಹುದ್ದೆಗೆ ಅರ್ಜಿ ಸಲ್ಲಿಸಿ

  • Share this:
    ಬೆಂಗಳೂರು ಮಹಾನಗರ ಸಾರಿಗೆ ನಿಗಮದಲ್ಲಿ (Bangalore Metropolitan Transport Corporation) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸಾಫ್ಟ್‌ವೇರ್ ಇಂಜಿನಿಯರ್ (Software Engineer), ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (System Administrator) ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 8 ಕಡೆಯ ದಿನಾಂಕವಾಗಿದೆ.

    ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ಈ ತಾಂತ್ರಿಕ ಹುದ್ದೆ ನೇಮಕಾತಿ ನಡೆಯಲಿದೆ. ಈ ಹುದ್ದೆ ನೇಮಕಾತಿ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಕೆ ಕುರಿತ ಇನ್ನಿತರ ಮಾಹಿತಿ ಈ ಕೆಳಗಿನಂತಿದೆ.

    ಸಂಸ್ಥೆಯ ಹೆಸರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
    ಹುದ್ದೆಯ ಹೆಸರು: ಸಾಫ್ಟ್‌ವೇರ್ ಇಂಜಿನಿಯರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್
    ಹುದ್ದೆಗಳ ಸಂಖ್ಯೆ: ನಿರ್ದಿಷ್ಟಪಡಿಸಲಾಗಿಲ್ಲ
    ಉದ್ಯೋಗ ಸ್ಥಳ: ಬೆಂಗಳೂರು
    ಸಂಬಳ: ಬಿಎಂಟಿಸಿ ನಿಯಮಗಳ ಪ್ರಕಾರ



















    ಹುದ್ದೆವಿದ್ಯಾರ್ಹತೆ
    ಸಾಫ್ಟ್​​ವೇರ್​ ಇಂಜಿನಿಯರ್ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಎಸ್ಸಿ, ಬಿಇ, ಬಿಟೆಕ್​, ಎಂಸಿಎ, ಬಿಸಿಎ
    ಸಿಸ್ಟಮ್ ಅಡ್ಮಿನಿಸ್ಟ್ರೇಟರ್ಬಿಇ, ಬಿಟೆಕ್​, ಎಂಸಿಎ, ಬಿಸಿಎ ಅಥವಾ ಡಿಪ್ಲೊಮಾ
    ಸೀನಿಯರ್ ಸಾಫ್ಟ್‌ವೇರ್ಇಂಜಿನಿಯರ್ ಬಿಇ, ಬಿಟೆಕ್​ ಎಂಸಿಎ

    ಅನುಭವ
    ಸಾಫ್ಟ್​​ವೇರ್​ ಇಂಜಿನಿಯರ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳಿಗೆ ಫ್ರೆಶರ್​ಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
    ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎರಡು ವರ್ಷ ಸಂಬಂಧಿತ ಕ್ಷೇತ್ರದಲ್ಲಿ ಸೇವಾ ಅನುಭವ ಹೊಂದಿರಬೇಕು.

    ವಯಸ್ಸಿನ ಮಿತಿ: ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನೇಮಕಾತಿ ಅಧಿಸೂಚನೆಯ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

    ವಯಸ್ಸಿನ ಸಡಿಲಿಕೆ:
    ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿಯಮಾವಳಿಗಳ ಪ್ರಕಾರ

    ಇದನ್ನು ಓದಿ: ಪದವಿ ಆದವರಿಗೆ ಬೌನ್ಸ್ ಸಂಸ್ಥೆಯಲ್ಲಿದೆ ಉದ್ಯೋಗಾವಕಾಶ; ಬೇಗ ಅರ್ಜಿ ಸಲ್ಲಿಸಿ

    ಆಯ್ಕೆ ಪ್ರಕ್ರಿಯೆ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಅರ್ಜಿ ಸಲ್ಲಿಕೆ
    ಇ-ಮೇಲ್​​ ಮುಖಾಂತರ

    ಅರ್ಜಿ ಸಲ್ಲಿಸುವ ಇಮೇಲ್ ವಿಳಾಸ: systemsupervisor@mybmtc.com

    ಪ್ರಮುಖ ದಿನಾಂಕ
    ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: ಜೂನ್​ 23, 2022
    ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 08 ಜುಲೈ 2022

     ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: mybmtc.karnataka.gov.in

    ಇದನ್ನು ಓದಿ: ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ 54 ಸಾವಿರ ರೂ ವೇತನ

    ಅರ್ಜಿ ಸಲ್ಲಿಕೆ ವಿಧಾನ
    ನೇಮಕಾತಿ ಅಧಿಸೂಚನೆಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

    ನಿಗದಿತ ಅರ್ಜಿ ನಮೂನೆಯಲ್ಲಿ ಸ್ವಯಂ ದೃಢೀಕರಿಸಿದ ಅರ್ಜಿಗಳನ್ನು ಮೇಲ್ಕಂಡ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.

    -ಅರ್ಜಿಜೊತೆಗೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ ಮೇಲೆ ತಿಳಿಸಿದ ಇ ಮೇಲ್​​ ​ ವಿಳಾಸಕ್ಕೆ ಕಳುಹಿಸಬೇಕು.
    Published by:Seema R
    First published: