• ಹೋಂ
  • »
  • ನ್ಯೂಸ್
  • »
  • Jobs
  • »
  • BMRCL Recruitment: ಎಂಜಿನಿಯರಿಂಗ್​​ ಪದವೀಧರರಿಗೆ ಉದ್ಯೋಗಾವಕಾಶ; ಯಾವುದೇ ಲಿಖಿತ ಪರೀಕ್ಷೆ ಇಲ್ಲ

BMRCL Recruitment: ಎಂಜಿನಿಯರಿಂಗ್​​ ಪದವೀಧರರಿಗೆ ಉದ್ಯೋಗಾವಕಾಶ; ಯಾವುದೇ ಲಿಖಿತ ಪರೀಕ್ಷೆ ಇಲ್ಲ

ಅರ್ಜಿ ಹಾಕಿ

ಅರ್ಜಿ ಹಾಕಿ

ಬೆಂಗಳೂರು ಮೆಟ್ರೊ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್​ನಲ್ಲಿ ಕರೆಯಲಾದ ಹುದ್ದೆ ಕುರಿತ ವಿವರವಾದ ಮಾಹಿತಿ.

  • Share this:

ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್(BMRCL Jobs)ನಲ್ಲಿ 35 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮುಖ್ಯ ಎಂಜಿನಿಯರ್ (Chief Engineer), ಉಪ ಮುಖ್ಯ ಎಂಜಿನಿಯರ್ ಹುದ್ದೆಗಳು ಖಾಲಿಯಿದ್ದು, ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಬೆಂಗಳೂರಿನಲ್ಲಿ ವೃತ್ತಿ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಜೂನ್​ 10 ಕಡೆಯ ದಿನವಾಗಿದೆ. ಅರ್ಜಿಯನ್ನು ಆನ್​ಲೈನ್​​ ಮತ್ತು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದೆ.


ಬೆಂಗಳೂರು ಮೆಟ್ರೊ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್​ನಲ್ಲಿ ಕರೆಯಲಾದ ಹುದ್ದೆ ಕುರಿತ ವಿವರವಾದ ಮಾಹಿತಿ

ಹುದ್ದೆಯ ಹೆಸರುಖಾಲಿಯಿರುವ ಹುದ್ದೆಗಳ ಸಂಖ್ಯೆವಿದ್ಯಾರ್ಹತೆವೇತನ
ಮುಖ್ಯ ಎಂಜಿನಿಯರ್​2ಕಂಪ್ಯೂಟರ್/ ಎಲೆಕ್ಟ್ರಾನಿಕ್ಸ್‌ನಲ್ಲಿ B.Sc, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್/ಕಂಪ್ಯೂಟರ್ ಸೈನ್ಸ್/ ಐಟಿ/ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್‌ನಲ್ಲಿ ಬಿಇ ಅಥವಾ ಬಿಟೆಕ್​​1,65,000 ರೂ
ಉಪ ಮುಖ್ಯ ಎಂಜಿನಿಯರ್​9ಡಿಪ್ಲೋಮೊ ಬಿಇ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್/ಕಂಪ್ಯೂಟರ್ ಸೈನ್ಸ್/ ಐಟಿ/ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್‌/ಪ್ರೊಡಕ್ಷನ್​ ಎಂಜಿನಿಯರ್​, ಬಿಎಸ್​ಸಿ ಇನ್​​ ಕಂಪ್ಯೂಟರ್​/ ಎಲೆಕ್ಟ್ರಾನಿಕ್ಸ್​​1,40,000 ರೂ
ಕಾರ್ಯಕಾರಿ ಎಂಜಿನಿಯರ್​/ ಮ್ಯಾನೇಜರ್12ಡಿಪ್ಲೋಮೊ ಬಿಇ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್/ಕಂಪ್ಯೂಟರ್ ಸೈನ್ಸ್/ ಐಟಿ/ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್‌/ಪ್ರೊಡಕ್ಷನ್​ ಎಂಜಿನಿಯರ್​, ಬಿಎಸ್​ಸಿ ಇನ್​​ ಕಂಪ್ಯೂಟರ್​/ ಎಲೆಕ್ಟ್ರಾನಿಕ್ಸ್​​85, 000 ರೂ
ಅಸಿಸ್ಟಂಟ್​ ಕಾರ್ಯಕಾರಿ ಎಂಜಿನಿಯರ್12ಡಿಪ್ಲೋಮೊ ಬಿಇ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್/ಕಂಪ್ಯೂಟರ್ ಸೈನ್ಸ್/ ಐಟಿ/ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್‌/ಪ್ರೊಡಕ್ಷನ್​ ಎಂಜಿನಿಯರ್​, ಬಿಎಸ್​ಸಿ ಇನ್​​ ಕಂಪ್ಯೂಟರ್​/ ಎಲೆಕ್ಟ್ರಾನಿಕ್ಸ್​​65, 000 ರೂ

ವಯೋಮಿತಿ ಸಡಿಲಿಕೆ:
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿಯಮಗಳ ಪ್ರಕಾರ


ಇದನ್ನು ಓದಿ: ದಾವಣಗೆರೆ ಡಿಸಿಸಿ ಬ್ಯಾಂಕ್​​ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ; ಇಂದೇ ಅರ್ಜಿ ಸಲ್ಲಿಸಿ


ಆಯ್ಕೆ ವಿಧಾನ
ಸಂದರ್ಶನ


ಅರ್ಜಿ ಸಲ್ಲಿಕೆ ವಿಧಾನ
ಆನ್​ಲೈನ್​ ಹಾಗೂ ಆಫ್​ ಲೈನ್​


ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು english.bmrc.co.in ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನಂತರ ಆನ್‌ಲೈನ್ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು ಕೆಳಗಂಡ ವಿಳಾಸಕ್ಕೆ ಸಲ್ಲಿಸಬೇಕು


ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಕಳುಹಿಸಬೇಕಾಗುತ್ತದೆ. ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, K.H. ರಸ್ತೆ, ಶಾಂತಿನಗರ, ಬೆಂಗಳೂರು - 560027


ಇದನ್ನು ಓದಿ: 238 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಐಟಿಐ ಆಗಿದ್ರೆ ಸಾಕು


ಈ ಅರ್ಜಿಯನ್ನು ಅಭ್ಯರ್ಥಿಗಳು ಮೇಲ್ಕಂಡ ವಿಳಾಸಕ್ಕೆ ಜೂನ್​ 10ರೊಳಗೆ ಸಲ್ಲಿಸಬೇಕಿದೆ


ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಏಪ್ರಿಲ್​ 25, 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಅರ್ಜಿಗಳ ಹಾರ್ಡ್ ಪ್ರತಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 10 ಜೂನ್​ 2022


ಬಿಎಂಆರ್​ಸಿಎಲ್​ ಅಧಿಸೂಚನೆ ಪ್ರಮುಖ ಲಿಂಕ್‌ಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: english.bmrc.co.in

top videos
    First published: