BMRCL Recruitment 2021: ನಿವೃತ್ತಿ ಆಗಿರೋ ಹಿರಿಯರಿಗೆ ಬೆಂಗಳೂರು ಮೆಟ್ರೋದಲ್ಲಿ ಕೆಲಸ, ಮಿನಿಮಮ್ 30,000 ಸಂಬಳ ಗ್ಯಾರಂಟಿ

ಆಫ್​ಲೈನ್​(ಪೋಸ್ಟ್-Offline/Post​) ಮೂಲಕ ಅರ್ಜಿ ಹಾಕಬೇಕು. ಉದ್ಯೋಗಾಂಕ್ಷಿ(Jobseekers)ಗಳು english.bmrc.co.in ಗೆ ಭೇಟಿ ನೀಡಿ ಹುದ್ದೆಯ ಅಧಿಸೂಚನೆ ಪ್ರಕಟಣೆಯನ್ನು ನೋಡಬಹುದಾಗಿದೆ.

BMRCL

BMRCL

  • Share this:
ಬೆಂಗಳೂರು ಮೆಟ್ರೋ ರೈಲು ನಿಗಮ ಮಂಡಳಿಯು(Bangalore Metro Rail Corporation Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. 37 ಸಹಾಯಕ ಸೆಕ್ಯುರಿಟಿ ಅಧಿಕಾರಿ(Assistant Security Officer) ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು(Eligible candidates) ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 18ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 17, 2021. ಆಫ್​ಲೈನ್​(ಪೋಸ್ಟ್-Offline/Post​) ಮೂಲಕ ಅರ್ಜಿ ಹಾಕಬೇಕು. ಉದ್ಯೋಗಾಂಕ್ಷಿ(Jobseekers)ಗಳು english.bmrc.co.in ಗೆ ಭೇಟಿ ನೀಡಿ ಹುದ್ದೆಯ ಅಧಿಸೂಚನೆ ಪ್ರಕಟಣೆಯನ್ನು ನೋಡಬಹುದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.













































ಸಂಸ್ಥೆ ಬೆಂಗಳೂರು ಮೆಟ್ರೋ ರೈಲು ಮಂಡಳಿ ನಿಗಮ
ಜಾಹೀರಾತು ಸಂಖ್ಯೆ BMRCL/0234/ HR/2021
ಹುದ್ದೆಯ ಹೆಸರು ಸಹಾಯಕ ಭದ್ರತಾ ಅಧಿಕಾರಿ
ಒಟ್ಟು ಹುದ್ದೆಗಳು 37
ಸ್ಥಳ ಬೆಂಗಳೂರು
ವಯೋಮಿತಿ 62 ವರ್ಷ
ಸಂಬಳ ಮಾಸಿಕ ₹30,000
ಅರ್ಜಿ ಸಲ್ಲಿಸುವ ಬಗೆ ಆಫ್​ಲೈನ್​(ಪೋಸ್ಟ್)
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 18/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/11/2021



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/10/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17/11/2021

ಆಯ್ಕೆ ಪ್ರಕ್ರಿಯೆ:
ಸಂದರ್ಶನ- ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಅಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇಲ್ಲ.

ಇದನ್ನೂ ಓದಿ:ESIC Recruitment 2021: ಇಎಸ್​ಐಸಿ ಬೆಂಗಳೂರು ನೇಮಕಾತಿ; ಮಾಸಿಕ ವೇತನ ₹76,000, ನೇರ ಸಂದರ್ಶನ

ಅರ್ಹತೆ:
ಮೆಟ್ರೋ ನಿಲ್ದಾಣಗಳು ಮತ್ತು ಡಿಪೋಗಳಲ್ಲಿ ಭದ್ರತೆ ಮತ್ತು ಇತರೆ ಸಂಬಂಧಿತ ಕೆಲಸಗಳನ್ನು ನೋಡಿಕೊಳ್ಳಲು BMRCL ನ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದಲ್ಲಿ ಸಹಾಯಕ ಭದ್ರತಾ ಅಧಿಕಾರಿ(Assistant Security Officer)ಯಾಗಿ ಕಾರ್ಯನಿರ್ವಹಿಸಲು ಈ ಅರ್ಹತೆಗಳನ್ನು ಹೊಂದಿರಬೇಕು.

  • ಸೆಕ್ಯುರಿಟಿ ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಿವೃತ್ತ ಸಿಬ್ಬಂದಿಯಾಗಿರಬೇಕು.

  • ಕರ್ನಾಟಕ ಸರ್ಕಾರದಲ್ಲಿ ಪೊಲೀಸ್​ ಸಭ್​ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರಬೇಕು.

  • ಸೈನ್ಯ, ವಾಯುಪಡೆ ಮತ್ತು ಸೆಂಟ್ರಲ್ ಪೊಲೀಸ್ ಸಶಸ್ತ್ರ ಪಡೆಗಳಲ್ಲಿ ನಿವೃತ್ತ ಪೊಲೀಸ್ ಸಬ್​ ಇನ್ಸ್​​ಪೆಕ್ಟರ್​, ಸುಬೇದಾರ್ ಆಗಿರಬೇಕು.


ಅರ್ಜಿ ಸಲ್ಲಿಸುವುದು ಹೇಗೆ?

ಬಿಎಂಆರ್​ಸಿಎಲ್​ನಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಸೆಕ್ಯುರಿಟಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಆಫ್​ಲೈನ್​/ಪೋಸ್ಟ್​ ಮೂಲಕ ಅರ್ಜಿ ಹಾಕಬೇಕು. ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ಲಕೋಟೆ(ಎನ್ವಲಪ್)ಯಲ್ಲಿ ‘‘ಸಹಾಯಕ ಭದ್ರತಾ ಅಧಿಕಾರಿಯ ಹುದ್ದೆಗೆ ಅರ್ಜಿ‘‘ ಎಂದು ನಮೂದಿಸಿ ಕಳುಹಿಸಬೇಕು. ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 17/11/2021 ರ ಸಂಜೆ 4 ಗಂಟೆ.

General Manager (HR),
Bangalore Metro Rail Corporation Limited,
III Floor,
BMTC Complex,
K.H. Road,
Shanthinagar,
Bangalore- 560027

ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

 
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: