District Court Recruitment: ಬೀದರ್​ ಜಿಲ್ಲಾ ನ್ಯಾಯಾಲಯದಲ್ಲಿ 32 ಹುದ್ದೆಗಳಿಗೆ ನೇಮಕಾತಿ; ಪಿಯುಸಿ ಆದವರಿಗೆ ಅವಕಾಶ

ಟೈಪಿಸ್ಟ್ (Typist)​,  ಆದೇಶ ಜಾರಿಕಾರರು (Process Server) ಹಾಗೂ ಜವಾನ (Peon) ಹುದ್ದೆಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಬೀದರ್​ ಜಿಲ್ಲಾ ಕೋರ್ಟ್​ನಲ್ಲಿ (Bidar District Court) ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಟೈಪಿಸ್ಟ್ (Typist)​,  ಆದೇಶ ಜಾರಿಕಾರರು (Process Server) ಹಾಗೂ ಜವಾನ (Peon) ಹುದ್ದೆಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಆನ್​ಲೈನ್ (Online)​ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 12 ಆಗಿದೆ.

    ಸಂಸ್ಥೆಯ ಹೆಸರು: ಬೀದರ್ ಜಿಲ್ಲಾ ನ್ಯಾಯಾಲಯ
    ಹುದ್ದೆಯ ಹೆಸರು: ಪ್ಯೂನ್, ಪ್ರೊಸೆಸ್ ಸರ್ವರ್, ಟೈಪಿಸ್ಟ್-ಕಾಪಿಸ್ಟ್
    ಹುದ್ದೆಗಳ ಸಂಖ್ಯೆ: 32
    ಉದ್ಯೋಗ ಸ್ಥಳ: ಬೀದರ್

    ಹುದ್ದೆ ವಿವರ: 



























    ಹುದ್ದೆಗಳುಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಟೈಪಿಸ್ಟ್-ಕಾಪಿಸ್ಟ್3ಪಿಯುಸಿ21400-42000 ರೂ ಮಾಸಿಕ
    ಪ್ರೊಸೆಸ್ ಸರ್ವರ್14ಎಸ್​​ಎಸ್​ಎಲ್​ಸಿ, ಡ್ರೈವಿಂಗ್ ಲೈಸೆನ್ಸ್  19950-37900 ರೂ ಮಾಸಿಕ
    ಪ್ಯೂನ್1510 ನೇ ತರಗತಿ ಪಾಸ್17000-28950 ರೂ ಮಾಸಿಕ

    ವಯಸ್ಸಿನ ಮಿತಿ (Age Limit): ಬೀದರ್ ಇಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯುಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

    ಇದನ್ನು ಓದಿ: ಬೆಂಗಳೂರು ಕಾಫಿ ಬೋರ್ಡ್​ನಲ್ಲಿದೆ ಕೆಲಸ; ಡಿಗ್ರಿ ಆಗಿದ್ರೆ ಅರ್ಜಿ ಸಲ್ಲಿಸಿ

    ವಯಸ್ಸಿನ ಸಡಿಲಿಕೆ (Age Exception):
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಪ್ರವರ್ಗ 1 ಅಭ್ಯರ್ಥಿಗಳು: 05 ವರ್ಷಗಳು
    ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 03 ವರ್ಷಗಳು

    ಅರ್ಜಿ ಶುಲ್ಕ (Application Fees):
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಹಾಗೂ ಪ್ರವರ್ಗ 1 ಅಭ್ಯರ್ಥಿಗಳು: 100 ರೂ
    ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳು: 200 ರೂ

    ಪಾವತಿ ವಿಧಾನ (Paymate Method): ಆನ್‌ಲೈನ್ ಅಥವಾ ಚಲನ್

    ಆಯ್ಕೆ ಪ್ರಕ್ರಿಯೆ (Selection Prcess):
    ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು (Important Dates):
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜೂನ್​ 13, 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12 ಜುಲೈ 2022
    ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 14 ಜುಲೈ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು (Notification Links)
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: districts.ecourts.gov.in

    ಇದನ್ನು ಓದಿ: ಕೈಗಾ ಅಣು​ ಸ್ಥಾವರದಲ್ಲಿ ಟ್ರೇಡ್​ ಅಪ್ರೆಂಟಿಸ್​ಗಳ ನೇಮಕಾತಿ; ಐಟಿಐ ಆದವರಿಗೆ ಅವಕಾಶ

    ಅರ್ಜಿ ಸಲ್ಲಿಕೆ ವಿಧಾನ (How To apply)

    -ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    - ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ.

    ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ
    Published by:Seema R
    First published: