Jobs in BHEL: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್​ನಲ್ಲಿ 575 ಅಪ್ರೆಂಟಿಸ್​ ಹುದ್ದೆ; ಬೇಗ ಅರ್ಜಿ ಸಲ್ಲಿಸಿ

ಈ ಹುದ್ದೆಗಳನ್ನು 2022- 23ನೇ ಸಾಲಿಗೆ ನೇಮಕ ಮಾಡಲಾಗುತ್ತಿದ್ದು, ಹುದ್ದೆ ಅವಧಿ ಒಂದು ವರ್ಷಗಳ ಕಾಲ ಆಗಿದೆ.

184 ಹುದ್ದೆಗೆ ಅರ್ಜಿ ಹಾಕಿ

184 ಹುದ್ದೆಗೆ ಅರ್ಜಿ ಹಾಕಿ

  • Share this:
    ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (Bharat Heavy Electricals Limited) ಬರೋಬ್ಬರಿ 575 ಅಪ್ರೆಂಟಿಸ್(Apprentice) ​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಟ್ರೇಡ್​, ಗ್ರಾಜುಯೆಟ್​ ಮತ್ತು ಟೆಕ್ನಿಕಲ್​ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ, ಪದವಿ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 5 ಆಗಿದೆ.

    ಈ ಹುದ್ದೆಗಳನ್ನು 2022- 23ನೇ ಸಾಲಿಗೆ ನೇಮಕ ಮಾಡಲಾಗುತ್ತಿದ್ದು, ಹುದ್ದೆ ಅವಧಿ ಒಂದು ವರ್ಷಗಳ ಕಾಲ ಆಗಿದೆ. ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
    ಹುದ್ದೆಯ ಹೆಸರು: ಅಪ್ರೆಂಟಿಸ್
    ಹುದ್ದೆಗಳ ಸಂಖ್ಯೆ: 575
    ಉದ್ಯೋಗ ಸ್ಥಳ: ತಿರುಚಿರಾಪಳ್ಳಿ - ತಮಿಳುನಾಡು
    ಸ್ಟೈಪೆಂಡ್: 7700-9000 ರೂ ಪ್ರತಿ ತಿಂಗಳು



























    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆಸ್ಟೈಫಂಡ್​
    ಟ್ರೇಡ್​ ಅಪ್ರೆಂಟಿಸ್390​ ಪಿಯುಸಿ, ಐಟಿಐ8000 ರೂ ಮಾಸಿಕ
    ಗ್ರಾಜುಯೇಟ್​ ಅಪ್ರೆಂಟಿಸ್95ಪದವಿ9000 ರೂ ಮಾಸಿಕ
    ಟೆಕ್ನಿಕಲ್​​ ಅಪ್ರೆಂಟಿಸ್90ಡಿಪ್ಲೊಮಾ7000 ರೂ ಮಾಸಿಕ

    ವಯೋಮಿತಿ: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 27 ವರ್ಷಗಳನ್ನು ಹೊಂದಿರಬೇಕು.

    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪ.ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು
    ವಿಕಲ ಚೇತನ ಅಭ್ಯರ್ಥಿಗಳು: 10 ವರ್ಷಗಳು

    ಇದನ್ನು ಓದಿ: ಉಡುಪಿ ಕೋರ್ಟ್​ನಲ್ಲಿದೆ ಟೈಪಿಸ್ಟ್​ ಹುದ್ದೆ; ತಿಂಗಳಿಗೆ 42000ದವರೆಗೆ ವೇತನ

    ಅರ್ಜಿ ಸಲ್ಲಿಕೆ:
    ಆನ್​ಲೈನ್​

    ಅರ್ಜಿ ಶುಲ್ಕ
    ವಿನಾಯಿತಿ ನೀಡಲಾಗಿದೆ

    ಆಯ್ಕೆ ಪ್ರಕ್ರಿಯೆ:
    ಮೆರಿಟ್ ಪಟ್ಟಿ, ಮೌಲ್ಯಮಾಪನ ಪರೀಕ್ಷೆ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 25 ಆಗಸ್ಟ್​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07 ಸೆಪ್ಟೆಂಬರ್ 2022

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಸೂಚನೆ ಪಿಡಿಎಫ್​ ಮತ್ತು ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: bhel.com

    ಇದನ್ನು ಓದಿ: ವಿಮಾನ ನಿಲ್ದಾಣ ಪ್ರಾಧಿಕಾರ ನೇಮಕಾತಿ; ಕರ್ನಾಟಕ ವೃಂದ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ನೀಡಿ. ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿದ ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ
    Published by:Seema R
    First published: