• Home
  • »
  • News
  • »
  • jobs
  • »
  • BHEL Recruitment 2022: ತಿಂಗಳಿಗೆ 78,000 ಸಂಬಳ, ಎಂಜಿನಿಯರಿಂಗ್ ಆಗಿದ್ರೆ ಅರ್ಜಿ ಹಾಕಿ

BHEL Recruitment 2022: ತಿಂಗಳಿಗೆ 78,000 ಸಂಬಳ, ಎಂಜಿನಿಯರಿಂಗ್ ಆಗಿದ್ರೆ ಅರ್ಜಿ ಹಾಕಿ

BHEL

BHEL

ಅಕ್ಟೋಬರ್ 25ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

  • Share this:

    BHEL Recruitment 2022: ಭಾರತ್ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Heavy Electronics Limited)​​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 30 ಪ್ರಾಜೆಕ್ಟ್​ ಎಂಜಿನಿಯರ್, ಪ್ರಾಜೆಕ್ಟ್​ ಸೂಪರ್​ವೈಸರ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ(Apply) ಸಲ್ಲಿಸಬಹುದಾಗಿದೆ. ಅಕ್ಟೋಬರ್ 25ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ನವೆಂಬರ್ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ BHELನ ಅಧಿಕೃತ ವೆಬ್​ಸೈಟ್​​ www.bhel.com ಗೆ ಭೇಟಿ ನೀಡಬಹುದು.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಭಾರತ್ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
    ಹುದ್ದೆಯ ಹೆಸರುಪ್ರಾಜೆಕ್ಟ್​ ಎಂಜಿನಿಯರ್, ಪ್ರಾಜೆಕ್ಟ್​ ಸೂಪರ್​ವೈಸರ್
    ಒಟ್ಟು ಹುದ್ದೆಗಳು30
    ವಿದ್ಯಾರ್ಹತೆಬಿಇ, ಬಿ.ಟೆಕ್​, ಡಿಪ್ಲೋಮಾ
    ವೇತನಮಾಸಿಕ ₹ 43,550- 78,000
    ಸ್ಥಳಭಾರತ
    ಅರ್ಜಿ ಸಲ್ಲಿಕೆ ಬಗೆಆಫ್​ಲೈನ್​
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ25/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15/11/2022

    ಅರ್ಜಿ ಶುಲ್ಕ:
    ಒಬಿಸಿ, ಜನರಲ್, EWS ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ
    ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.


    ಹುದ್ದೆಯ ಮಾಹಿತಿ:
    ಪ್ರಾಜೆಕ್ಟ್​ ಎಂಜಿನಿಯರ್-14
    ಪ್ರಾಜೆಕ್ಟ್​ ಸೂಪರ್​ವೈಸರ್- 16
    ಒಟ್ಟು 30 ಹುದ್ದೆಗಳು


    ಇದನ್ನೂ ಓದಿ: UPSC ನೇಮಕಾತಿ: 15 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಪಾಸಾಗಿದ್ರೆ ಸಾಕು


    ವಿದ್ಯಾರ್ಹತೆ:
    ಪ್ರಾಜೆಕ್ಟ್​ ಎಂಜಿನಿಯರ್- ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಶೇ.60 ರಷ್ಟು ಅಂಕಗಳೊಂದಿಗೆ(SC/ST ಅಭ್ಯರ್ಥಿಗಳಿಗೆ ಶೇ.50 ಅಂಕ) ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಕಡ್ಡಾಯವಾಗಿ ಬಿಇ/ಬಿ.ಟೆಕ್​ ಪೂರ್ಣಗೊಳಿಸಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಅನುಭವವಿರಬೇಕು.


    ಪ್ರಾಜೆಕ್ಟ್​ ಸೂಪರ್​ವೈಸರ್- ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಶೇ.60 ರಷ್ಟು ಅಂಕಗಳೊಂದಿಗೆ(SC/ST ಅಭ್ಯರ್ಥಿಗಳಿಗೆ ಶೇ.50 ಅಂಕ) ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಕಡ್ಡಾಯವಾಗಿ ಡಿಪ್ಲೋಮಾ​ ಪೂರ್ಣಗೊಳಿಸಿರಬೇಕು. ಜೊತೆಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಅನುಭವವಿರಬೇಕು.


    ವಯೋಮಿತಿ:
    ನವೆಂಬರ್ 1, 2022 ಕ್ಕೆ ಅಭ್ಯರ್ಥಿಗಳ ವಯಸ್ಸು 32 ವರ್ಷ ಮೀರಿರಬಾರದು.


    ಉದ್ಯೋಗದ ಸ್ಥಳ:
    ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಪ್ರಾಜೆಕ್ಟ್​ ಸೂಪರ್​​ವೈಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.


    ವೇತನ:
    ಪ್ರಾಜೆಕ್ಟ್​ ಎಂಜಿನಿಯರ್ ಮತ್ತು ಪ್ರಾಜೆಕ್ಟ್​ ಸೂಪರ್​​ವೈಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 43,550- 78,000 ವೇತನ ಕೊಡಲಾಗುತ್ತದೆ.


    ಇದನ್ನೂ ಓದಿ:NIMR Jobs: ತಿಂಗಳಿಗೆ 46 ಸಾವಿರ ವೇತನ! ಸಂದರ್ಶನಕ್ಕೆ ಎರಡೇ ದಿನ ಬಾಕಿ


    ಆಯ್ಕೆ ಪ್ರಕ್ರಿಯೆ:
    ಶಾರ್ಟ್​​ಲಿಸ್ಟಿಂಗ್
    ಲಿಖಿತ ಪರೀಕ್ಷೆ
    ದಾಖಲಾತಿ ಪರಿಶೀಲನೆ
    ವೈಯಕ್ತಿಕ ಸಂದರ್ಶನ


    ಪ್ರಮುಖ ದಿನಾಂಕಗಳು
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/10/2022
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/11/2022

    Published by:Latha CG
    First published: