BHEL Recruitment 2021: ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(Bharat Heavy Electronics Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಯಂಗ್ ಪ್ರೊಫೆಶನಲ್ (Young Professional) ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್(Online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ನವೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
BHEL ಕಂಪನಿಯು ಉದ್ಯೋಗಿಗಳಿಗೆ ಉತ್ತಮ ಸಂಬಳದ ಪ್ಯಾಕೇಜ್ನೊಂದಿಗೆ ಯುವ ವೃತ್ತಿಪರ ಹುದ್ದೆಗೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ. BHEL ತನ್ನ ಕಾರ್ಪೊರೇಟ್ ಕಚೇರಿಯಲ್ಲಿ ಕಾರ್ಪೋರೇಟ್ ಸ್ಟ್ರಾಟಜಿ ಮ್ಯಾನೇಜ್ಮೆಂಟ್ ಗ್ರೂಪ್ನ ಪ್ರದೇಶದಲ್ಲಿ ಯುವ ವೃತ್ತಿಪರ ಹುದ್ದೆಗೆ ಅರ್ಜಿದಾರರನ್ನು ಆಹ್ವಾನಿಸಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ |
ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ |
ಹುದ್ದೆಯ ಹೆಸರು |
ಯಂಗ್ ಪ್ರೊಫೆಶನಲ್ |
ಒಟ್ಟು ಹುದ್ದೆಗಳು |
10 |
ಅರ್ಜಿ ಸಲ್ಲಿಸುವ ವಿಧಾನ |
ಆನ್ಲೈನ್ |
ವಯೋಮಿತಿ |
ಗರಿಷ್ಠ 30 ವರ್ಷ |
ವಿದ್ಯಾರ್ಹತೆ |
ಸ್ನಾತಕೋತ್ತರ ಪದವಿ/ ಎಂಜಿನಿಯರಿಂಗ್ |
ವೇತನ |
ಮಾಸಿಕ ₹ 80,000 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ |
30/11/2021 |
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬಿಹೆಚ್ಇಲ್ನ ಅಧಿಕೃತ ವೆಬ್ಸೈಟ್ careers.bhel.in ಗೆ ಭೇಟಿ ನೀಡಬಹುದು.
ಇದನ್ನೂ ಓದಿ: BHEL Recruitment 2021: ತಿಂಗಳಿಗೆ ₹ 83,000 ಸಂಬಳ, MBBS ಪದವೀಧರರಿಗೆ BHELನಲ್ಲಿ ಉದ್ಯೋಗ
BHEL ನೇಮಕಾತಿ 2021: ಅರ್ಹತಾ ಮಾನದಂಡ
ವಯಸ್ಸಿನ ಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನವೆಂಬರ್ 1, 2021 ಕ್ಕೆ 30 ವರ್ಷ ಮೀರಿರಬಾರದು.
ಶೈಕ್ಷಣಿಕ ಅರ್ಹತೆ:
ಅರ್ಜಿದಾರರು ಸ್ನಾತಕೋತ್ತರ ಪದವಿ ಅಥವಾ 2 ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್ ಪೂರ್ಣಗೊಳಿಸಿರಬೇಕು. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಮಾಡಿದ ಪದವೀಧರರಿಗೆ ಆದ್ಯತೆ ನೀಡಲಾಗುತ್ತದೆ. ಅರ್ಜಿದಾರರು ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
BHEL ನೇಮಕಾತಿ 2021: ವೇತನ
ಯುವ ವೃತ್ತಿಪರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ₹ 80,000 ವೇತನವನ್ನು ನೀಡಲಾಗುತ್ತದೆ. ಜೊತೆಗೆ ಕಂಪನಿಯು ಒದಗಿಸುವ ಹಲವಾರು ಇತರ ಪ್ರಯೋಜನಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ:Karnataka High Court Recruitment 2021: ತಿಂಗಳಿಗೆ ₹ 63,070 ಸಂಬಳ; 21 ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಅಧಿಸೂಚನೆ ಪ್ರಕಟ
ಇತರೆ ಮಾಹಿತಿ:
ಸಂಬಳದ ಹೊರತಾಗಿ, ಅಭ್ಯರ್ಥಿಯು ಕುಟುಂಬದ (ಅಂದರೆ ಸ್ವಯಂ ಮತ್ತು ಸಂಗಾತಿಯ) ಮೆಡಿಕ್ಲೈಮ್ ಪಾಲಿಸಿಗಾಗಿ ರೂ 3500 + GST ವರೆಗಿನ ವಾರ್ಷಿಕ ಪ್ರೀಮಿಯಂ ಮರುಪಾವತಿಗೆ ಅರ್ಹರಾಗಿರುತ್ತಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ