BHEL Recruitment 2021: ತಿಂಗಳಿಗೆ ₹ 83,000 ಸಂಬಳ, MBBS​ ಪದವೀಧರರಿಗೆ BHELನಲ್ಲಿ ಉದ್ಯೋಗ

ನವೆಂಬರ್ 5ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

BHEL

BHEL

  • Share this:
BHEL Recruitment 2021: ಭಾರತ್ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Heavy Electronics Limited)​​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 28 ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್(General Duty Medical Officer) ಹುದ್ದೆಗಳು ಖಾಲಿ ಇದ್ದು, ಎಂಬಿಬಿಎಸ್(MBBS)​ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 5ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆನ್​ಲೈನ್(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ, ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.













































ಸಂಸ್ಥೆಭಾರತ್​ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​
ಜಾಹೀರಾತು ಸಂಖ್ಯೆHWR 04/2021
ಹುದ್ದೆಯ ಹೆಸರುಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್
ಒಟ್ಟು ಹುದ್ದೆಗಳು28
ವಿದ್ಯಾರ್ಹತೆಎಂಬಿಬಿಎಸ್​, ಅನುಭವಸ್ಥ
ಉದ್ಯೋಗದ ಸ್ಥಳಭೋಪಾಲ್, ಚೆನ್ನೈ, ಹರಿದ್ವಾರ್, ಹೈದ್ರಾಬಾದ್, ಜಗ್ದೀಶ್​ಪುರ್, ಝಾನ್ಸಿ, ನವದೆಹಲಿ, ರಾಣಿಪೇಟ್, ರುದ್ರಾಪುರ, ತಿರುಚಿನಾಪಳ್ಳಿ, ವಿಶಾಖಪಟ್ಟಣಂ
ವೇತನಮಾಸಿಕ ₹ 83,000
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ05/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ25/11/2021



ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 05/11/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25/11/2021

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತ್​ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ನ ಅಧಿಕೃತ ವೆಬ್​ಸೈಟ್​ www.bhel.com ಗೆ ಭೇಟಿ ನೀಡಬಹುದು.



ಇದನ್ನೂ ಓದಿ:BSNL Recruitment 2021: ಡಿಪ್ಲೋಮಾ ಆದವರಿಗೆ ಬಿಎಸ್​ಎನ್​ಎಲ್​ ಕಂಪನಿಯಲ್ಲಿ ಉದ್ಯೋಗಾವಕಾಶ



ಅರ್ಜಿ ಶುಲ್ಕ:

ಅಭ್ಯರ್ಥಿಗಳು 300 ರೂ.ಗಳನ್ನು ಅರ್ಜಿ ಶುಲ್ಕವನ್ನಾಗಿ ಪಾವತಿಸಬೇಕು. ಈ ಹಣವನ್ನು ಹಿಂದಿರುಗಿಸಲಾಗುವುದಿಲ್ಲ.

ಹುದ್ದೆಯ ಮಾಹಿತಿ:

ಎಚ್​​ಇಇಪಿ, ಹರಿದ್ವಾರ್​- 05
ಹೆಚ್​ಇಪಿ, ಭೋಪಾಲ್​- 05
ಹೆಚ್​​ಪಿಬಿಪಿ, ತಿರ್ಚಿ-4
ಹೆಚ್​​ಪಿಇಪಿ-5
ಟಿಪಿ, ಝಾನ್ಸಿ-2
ಬಿಎಪಿ, ರಾಣಿಪೇಟ್​-1
ಪಿಸಿ, ಚೆನ್ನೈ-1
ಸಿಎಫ್​ಪಿ-ರುದ್ರಾಪುರ-1
ಹೆಚ್​ಪಿವಿಪಿ, ವಿಜಾಗ್​-1
ಎಫ್​ಎಸ್​ಐಪಿ, ಜಗ್ದೀಶ್​ಪುರ- 1
ಕಾರ್ಪೊರೇಷನ್ ಆಫೀಸ್, ನವದೆಹಲಿ-2

ಒಟ್ಟು 28 ಹುದ್ದೆಗಳು



ವಿದ್ಯಾರ್ಹತೆ:

ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಡಿಕಲ್ ಕೌನ್ಸಿಲ್ ಆಫ್​ ಇಂಡಿಯಾದಿಂದ ಗುರುತಿಸಲ್ಪಟ್ಟ ಸಂಸ್ಥೆಯಿಂದ ಕಡ್ಡಾಯವಾಗಿ ಎಂಬಿಬಿಎಸ್​ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 37 ವರ್ಷ ಮೀರಿರಬಾರದು.

ಇದನ್ನೂ ಓದಿ:TCIL Recruitment 2021: 5ನೇ ತರಗತಿ ಪಾಸಾದವರಿಗೆ ತಿಂಗಳಿಗೆ ₹ 19,000 ಸಂಬಳ, ಟಿಸಿಐಎಲ್​ನಲ್ಲಿ ವಿವಿಧ ಹುದ್ದೆಗಳು ಖಾಲಿ

ಉದ್ಯೋಗದ ಸ್ಥಳ:

ಭೋಪಾಲ್, ಚೆನ್ನೈ, ಹರಿದ್ವಾರ್, ಹೈದ್ರಾಬಾದ್, ಜಗ್ದೀಶ್​ಪುರ್, ಝಾನ್ಸಿ, ನವದೆಹಲಿ, ರಾಣಿಪೇಟ್, ರುದ್ರಾಪುರ, ತಿರುಚಿನಾಪಳ್ಳಿ, ವಿಶಾಖಪಟ್ಟಣಂ- ಪೋಸ್ಟಿಂಗ್ ಹಾಕಲಾಗುತ್ತದೆ.

ವೇತನ:

ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 83,000 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ


ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಯಲ್ಲಿ ಕೆಲಸ ಹುಡುಕುತ್ತಿದ್ದೀರಾ? ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Published by:Latha CG
First published: