BHEL Recruitment 2022: ಬಿಎಚ್​ಇಎಲ್​ನಲ್ಲಿ 150 ಟ್ರೈನಿ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ 1,80 ಸಾವಿರ ರೂ ವೇತನ

BHEL Recruitment 2022: ಒಟ್ಟು 150 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 4 ಆಗಿದೆ.

 ಹುದ್ದೆಗೆ ಅರ್ಜಿ ಹಾಕಿ

ಹುದ್ದೆಗೆ ಅರ್ಜಿ ಹಾಕಿ

  • Share this:
    ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್​ನಲ್ಲಿ (Bharat Heavy Electricals Limited) ಇಂಜಿನಿಯರ್​ ಮತ್ತು ಎಕ್ಸಿಕ್ಯೂಟಿವ್​ ಟ್ರೈನಿ (Engineer and Executive Trainee) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 150 ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 4 ಆಗಿದೆ.

    ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
    ಹುದ್ದೆಯ ಹೆಸರು: ಇಂಜಿನಿಯರ್/ಎಕ್ಸಿಕ್ಯೂಟಿವ್ ಟ್ರೈನಿ
    ಹುದ್ದೆಗಳ ಸಂಖ್ಯೆ: 150
    ಉದ್ಯೋಗ ಸ್ಥಳ: ಅಖಿಲ ಭಾರತ
    ವೇತನ: 50000-180000 ರೂ. ಪ್ರತಿ ತಿಂಗಳು

























































    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವಯೋಮಿತಿ
    ಇಂಜಿನಿಯರ್ ಟ್ರೈನಿ (ಸಿವಿಲ್)40ಬಿಇ ಪದವಿಕನಿಷ್ಟ 27- ಗರಿಷ್ಟ 29ವರ್ಷ
    ಇಂಜಿನಿಯರ್ ಟ್ರೈನಿ (ಮೆಕ್ಯಾನಿಕಲ್)30ಬಿಇ ಪದವಿಕನಿಷ್ಟ 27- ಗರಿಷ್ಟ 29ವರ್ಷ
    ಇಂಜಿನಿಯರ್ ಟ್ರೈನಿ (ಐಟಿ/ ಕಂಪ್ಯೂಟರ್ ಸೈನ್ಸ್)20ಬಿಇ ಪದವಿಕನಿಷ್ಟ 27- ಗರಿಷ್ಟ 29ವರ್ಷ
    ಇಂಜಿನಿಯರ್ ಟ್ರೈನಿ (ಎಲೆಕ್ಟ್ರಿಕಲ್)15ಬಿಇ ಪದವಿಕನಿಷ್ಟ 27- ಗರಿಷ್ಟ 29ವರ್ಷ
    ಇಂಜಿನಿಯರ್ ಟ್ರೈನಿ (ಕೆಮಿಕಲ್​)10ಬಿಇ ಪದವಿಕನಿಷ್ಟ 27- ಗರಿಷ್ಟ 29ವರ್ಷ
    ಇಂಜಿನಿಯರ್ ಟ್ರೈನಿ (ಲೋಹಶಾಸ್ತ್ರ)5ಬಿಇ ಪದವಿಕನಿಷ್ಟ 27- ಗರಿಷ್ಟ 29ವರ್ಷ
    ಎಕ್ಸಿಕ್ಯೂಟಿವ್ ಟ್ರೈನಿ (ಹಣಕಾಸು)20ಬಿಕಾಂ, ಸಿಎಗರಿಷ್ಟ 29 ವರ್ಷ
    ಎಕ್ಸಿಕ್ಯೂಟಿವ್ ಟ್ರೈನಿ (ಎಚ್​ಆರ್​​)10ಬಿಕಾಂ, ಸಿಎಗರಿಷ್ಟ 29 ವರ್ಷ

    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪ.ಜಾ, ಪ.ಪಂ ಅಭ್ಯರ್ಥಿಗಳು: 05 ವರ್ಷಗಳು
    ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

    ಇದನ್ನು ಓದಿ: ಕೇಂದ್ರ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಅವಕಾಶ; ಎಸ್​ಎಸ್​ಸಿ ಸಿಜಿಲ್​ ಅಧಿಸೂಚನೆ ಬಿಡುಗಡೆ

    ಅರ್ಜಿ ಶುಲ್ಕ:
    ಪ.ಜಾ, ಪ.ಪಂ, ವಿಕಲಚೇತನ ಮತ್ತು ನಿವೃತ್ತ ಸೇವಾಧಿಕಾರಿ ಅಭ್ಯರ್ಥಿಗಳು: 300 ರೂ
    ಒಬಿಸಿ, ಸಾಮಾನ್ಯ ಅಭ್ಯರ್ಥಿಗಳು: 800 ರೂ.

    ಪಾವತಿ ವಿಧಾನ: ಆನ್‌ಲೈನ್

    ಆಯ್ಕೆ ಪ್ರಕ್ರಿಯೆ:
    ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 13 ಸೆಪ್ಟೆಂಬರ್​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04 ಅಕ್ಟೋಬರ್ 2022
    ಪರೀಕ್ಷೆಯ ದಿನಾಂಕ: 31ನೇ ಅಕ್ಟೋಬರ್, 01ನೇ ಮತ್ತು 02ನೇ ನವೆಂಬರ್ 2022

    ಇದನ್ನು ಓದಿ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ; ಇಲ್ಲಿದೆ ಹುದ್ದೆ ವಿವರ

    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: bhel.com

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ

    - ಅರ್ಜಿಯಲ್ಲಿ ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಸೇರಿದಂತೆ ಇನ್ನಿತರ ಅಗತ್ಯ ದಾಖಲೆಗಳ ಮಾಹಿತಿ ಭರ್ತಿ ಮಾಡಿ.

    -ನಿಮ್ಮ ವರ್ಗಕ್ಕೆ ಅನುಸಾರವಾಗಿ ಅರ್ಜಿ ಶುಲ್ಕ ಪಾವತಿಸಿ, ಅದರ ಮಾಹಿತಿ ಅಪ್​ಡೇಟ್​ ಮಾಡಿ

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ
    Published by:Seema R
    First published: