BEL Recruitment: ಐಟಿಐ, ಡಿಪ್ಲೊಮಾ ಆದವರಿಗೆ ಬಿಇಎಲ್​ನಲ್ಲಿದೆ ಕೆಲಸದ ಅವಕಾಶ; ಇಲ್ಲಿದೆ ಉದ್ಯೋಗ ಮಾಹಿತಿ

ಈ ಹುದ್ದೆಗಳು ಖಾಯಂ ನೇಮಕಾತಿ ಆಗಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

91 ಹುದ್ದೆಗೆ ಅರ್ಜಿ ಹಾಕಿ

91 ಹುದ್ದೆಗೆ ಅರ್ಜಿ ಹಾಕಿ

  • Share this:
    ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​​ನಲ್ಲಿ ( Bharat Electronics Limited) ಟ್ರೇನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಂಜಿನಿಯರಿಂಗ್ ಅಸಿಸ್ಟೆಂಟ್ (ಟ್ರೇನಿ), ಟೆಕ್ನಿಷಿಯನ್ (Engineering Assistant (Trainee), Technician)  ಹುದ್ದೆ ಸೇರಿದಂತೆ ಒಟ್ಟು 21 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯನ್ನು ಆನ್​ಲೈನ್​ ಮೂಲಕ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 23 ಆಗಿದೆ.

    ಈ ಹುದ್ದೆಗಳು ಖಾಯಂ ನೇಮಕಾತಿ ಆಗಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

    ಸಂಸ್ಥೆಯ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
    ಹುದ್ದೆಯ ಹೆಸರು: ಇಂಜಿನಿಯರಿಂಗ್ ಸಹಾಯಕ (ಟ್ರೇನಿ), ತಂತ್ರಜ್ಞ
    ಹುದ್ದೆಗಳ ಸಂಖ್ಯೆ: 21
    ಉದ್ಯೋಗ ಸ್ಥಳ: ಮಚಲಿಪಟ್ಟಣಂ - ಆಂಧ್ರ ಪ್ರದೇಶ
    ವೇತನ: 21500-90000 ರೂ ಪ್ರತಿ ತಿಂಗಳು





















    ಹುದ್ದೆಹುದ್ದೆ ಸಂಖ್ಯೆವಿದ್ಯಾರ್ಹತೆವೇತನ
    ಇಂಜಿನಿಯರಿಂಗ್ ಸಹಾಯಕ (ಟ್ರೇನಿ)4ಡಿಪ್ಲೊಮಾ24500-90000 ರೂ ಮಾಸಿಕ
    ತಂತ್ರಜ್ಞ 17 10th, ITI17ಐಟಿಐ21500-82000 ರೂ ಮಾಸಿಕ

    ವಯೋಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ 28 ವರ್ಷಗಳು ಮೀರಿರಬಾರದು.

    ಇದನ್ನು ಓದಿ: ಒಎನ್​ಜಿಸಿಯಲ್ಲಿದೆ ಉದ್ಯೋಗಾವಕಾಶ; ಇಲ್ಲಿದೆ ಹುದ್ದೆ ಸಂಪೂರ್ಣ ಮಾಹಿತಿ

    ವಯೋಮಿತಿ ಸಡಿಲಿಕೆ:
    ಒಬಿಸಿ ಅಭ್ಯರ್ಥಿಗಳು: 03 ವರ್ಷಗಳು
    ಪ.ಜಾ, ಪ.ವ ಅಭ್ಯರ್ಥಿಗಳು: 05 ವರ್ಷಗಳು
    ವಿಕಲಚೇತನ ಅಭ್ಯರ್ಥಿಗಳು: 10 ವರ್ಷಗಳು

    ಅರ್ಜಿ ಶುಲ್ಕ:
    ಪ.ಜಾ, ಪ.ಪಂ, ವಿಕಲಚೇತನ ಮತ್ತು ನಿವೃತ್ತ ಸೇವಾಧಿಕಾರಿ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
    ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು: 295 ರೂ.

    ಪಾವತಿ ವಿಧಾನ: ಆನ್‌ಲೈನ್

    ಆಯ್ಕೆ ಪ್ರಕ್ರಿಯೆ:
    ಲಿಖಿತ ಪರೀಕ್ಷೆ ಮತ್ತು ಸಂದರ್ಶನ

    ಇದನ್ನು ಓದಿ: ಭಾರತೀಯ ಸೇನೆಯಲ್ಲಿ 3068 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಎಸ್​ಎಸ್​ಎಲ್​ಸಿ ಆಗಿದ್ರೆ ಸಾಕು

    ಪ್ರಮುಖ ದಿನಾಂಕಗಳು:
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01 ಸೆಪ್ಟೆಂಬರ್​​ 2022
    ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23  ಸೆಪ್ಟೆಂಬರ್​​ 2022

    ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: bel-india.in

    ಅರ್ಜಿ ಸಲ್ಲಿಕೆ ಪ್ರಕ್ರಿಯೆ

    ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

    -ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

    - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್ ನೀಡಿ. ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

    -ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ, ಅದರ ಮಾಹಿತಿ ಅಪ್​ಲೋಡ್​ ಮಾಡಿ.

    -ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿದ ಬಳಿಕ ಸಲ್ಲಿಸು ಬಟನ್​ ಕ್ಲಿಕ್​ ಮಾಡಿ
    Published by:Seema R
    First published: