• Home
  • »
  • News
  • »
  • jobs
  • »
  • BCB Bank Recruitment: ಭಾರತ್​ ಸಹಕಾರಿ ಬ್ಯಾಂಕ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

BCB Bank Recruitment: ಭಾರತ್​ ಸಹಕಾರಿ ಬ್ಯಾಂಕ್​ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತ್​ ಸಹಕಾರಿ ಬ್ಯಾಂಕ್

ಭಾರತ್​ ಸಹಕಾರಿ ಬ್ಯಾಂಕ್

ಭಾರತ್​ ಸಹಕಾರಿ ಬ್ಯಾಂಕ್​ ನೇಮಕಾತಿ ಪ್ರಕ್ರಿಯೆ, ಹುದ್ದೆಗಳ ಸಂಖ್ಯೆ, ವೇತನ ಸೇರಿದಂತೆ ಇನ್ನಿತರ ಮಾಹಿತಿಗಳು ಈ ಕೆಳಗಿನಂತೆ ಇದೆ.

  • Share this:

    ಬೆಂಗಳೂರಿನ ಜಯನಗರದ ಭಾರತ್​ ಸಹಕಾರಿ ಬ್ಯಾಂಕ್​ನಲ್ಲಿ (Bharat Cooperative Bank) ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅಕೌಂಟೆಂಟ್​ ನಿಂದ ಅಟೆಂಡೆಂಟ್​ವರೆಗೆ ಒಟ್ಟು 18 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪದವಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 15 ಆಗಿದೆ. ಅರ್ಜಿಯನ್ನು ಆಫ್​ಲೈನ್​ (Offline) ಮೂಲಕ ಮಾತ್ರ ಸಲ್ಲಿಸಬಹುದಾಗಿದೆ.


    ಭಾರತ್​ ಸಹಕಾರಿ ಬ್ಯಾಂಕ್​ ನೇಮಕಾತಿ ಪ್ರಕ್ರಿಯೆ, ಹುದ್ದೆಗಳ ಸಂಖ್ಯೆ, ವೇತನ ಸೇರಿದಂತೆ ಇನ್ನಿತರ ಮಾಹಿತಿಗಳು ಈ ಕೆಳಗಿನಂತೆ ಇದೆ.


    ಸಂಸ್ಥೆಯ ಹೆಸರು: ಭಾರತ್ ಸಹಕಾರಿ ಬ್ಯಾಂಕ್ (BCB ಬ್ಯಾಂಕ್)
    ಹುದ್ದೆಗಳ ಸಂಖ್ಯೆ: 18
    ಉದ್ಯೋಗ ಸ್ಥಳ: ಕರ್ನಾಟಕ
    ಹುದ್ದೆಯ ಹೆಸರು: ಅಟೆಂಡೆಂಟ್, ಅಕೌಂಟೆಂಟ್
    ವೇತನ: ರೂ. 12,500 – 56,500/- ಪ್ರತಿ ತಿಂಗಳು

    ಹುದ್ದೆಹುದ್ದೆ ಸಂಖ್ಯೆವೇತನವಿದ್ಯಾರ್ಹತೆ
    ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ140,050 – 56,550 ರೂ ಮಾಸಿಕಪದವಿ
    ಕಂಪ್ಯೂಟರ್ ಮ್ಯಾನೇಜರ್128,100 – 50,100 ರೂ ಮಾಸಿಕಎಂಸಿಎ, ಕಂಪ್ಯೂಟರ್​ ಸೈನ್ಸ್​ ಪದವಿ
    ವ್ಯವಸ್ಥಾಪಕರು3 28,100 – 50,100 ರೂ ಮಾಸಿಕಪದವಿ
    ಲೆಕ್ಕಪರಿಶೋಧಕ224,000 – 45,300 ರೂ ಮಾಸಿಕಬ್ಯುಸಿನೆಸ್​ ಮ್ಯಾನೇಜ್​​ಮೆಂಟ್​​ನಲ್ಲಿ ಪದವಿ
    ಸಹಾಯಕ ಲೆಕ್ಕಾಧಿಕಾರಿ221,600 – 40,050 ರೂ ಮಾಸಿಕವಾಣಿಜ್ಯ ನಿರ್ವಹಣೆಯಲ್ಲಿ ಪದವಿ
    ದ್ವಿತೀಯ ದರ್ಜೆ ಸಹಾಯಕ217,650 – 32,000 ರೂ ಮಾಸಿಕಪಿಯುಸಿ
    ಪರಿಚಾರಕ612,500 – 24,000 ರೂ ಮಾಸಿಕಎಸ್​ಎಸ್​ಎಲ್​ಸಿ

    ವಯೋಮಿತಿ:  ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು  ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.


    ವಯಸ್ಸಿನ ಸಡಿಲಿಕೆ:
    ಹಿಂದುಳಿದ ವರ್ಗಗಳು (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳು: 3 ವರ್ಷಗಳು
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಅಭ್ಯರ್ಥಿಗಳು: 5 ವರ್ಷಗಳು


    ಆಯ್ಕೆ ವಿಧಾನ
    ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ


    ಅರ್ಜಿ ಶುಲ್ಕ
    ಸಾಮಾನ್ಯ ಮತ್ತು ಹೊಂದುಳಿದ ಅಭ್ಯರ್ಥಿಗಳಿಗೆ 1000 ರೂ
    ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂ


    ಇದನ್ನು ಓದಿ: M.A, M.Ed ಆದವರಿಗೆ ಉದ್ಯೋಗ ಅವಕಾಶ; ಮೈಸೂರಿನಲ್ಲಿದೆ ಕೆಲಸ


    ಸೂಚನೆ ಅರ್ಜಿ ಶುಲ್ಕವನ್ನು ದಿ ಭಾರತ್​ ಕೋ ಆಪರೇಟಿವ್​ ಬ್ಯಾಂಕ್​ ಲಿ. ಇವರ ಹೆಸರಿಗೆ ಡಿಡಿ/ ಪೇ ಆರ್ಡರ್ಸ್​/ ಪೋಸ್ಟಲ್​ ಆರ್ಡರ್ಸ್​ ಮೂಲಕ ಪಾವತಿ ಮಾಡಬೇಕು.


    ಅರ್ಜಿ ಸಲ್ಲಿಕೆ ವಿಧಾನ: ಆಫ್​ಲೈನ್​


    ಅರ್ಜಿ ಸಲ್ಲಿಕೆ ವಿಳಾಸ


    ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಜೂನ್​ 15ರೊಳೆಗೆ ಈ ಕೆಳಕಂಡ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬೇಕು.


    ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ನಂ. 30, 15 ನೇ ಕ್ರಾಸ್, 3 ನೇ ಬ್ಲಾಕ್, ಜಯನಗರ, ಬೆಂಗಳೂರು - 560011.


    ಇದನ್ನು ಓದಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ; ಸ್ನಾತಕೋತ್ತರ ಪದವೀಧರರಿಗೆ ಅವಕಾಶ


    ಪ್ರಮುಖ ದಿನಾಂಕ :
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮೇ 25, 2022
    ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್​ 15, 2022


    ಅಧಿಸೂಚನೆ ಪ್ರಮುಖ ಲಿಂಕ್‌ಗಳು
    ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ
    ಅಧಿಕೃತ ವೆಬ್‌ಸೈಟ್: bcbbank.co


    ಸೂಚನೆ


    ಅರ್ಜಿಯನ್ನು ಸಹಿಯ ಜೊತೆ ಸ್ವಯಂ ದೃಢೀ ಕರಣದೊಂದಿಗೆ ಮೇಲ್ಕಂಡ ವಿಳಾಸಕ್ಕೆ ಸಲ್ಲಿಸಬೇಕು
    3 ಪಾಸ್​ಪೋರ್ಟ್​ ಫೋಟೋ,
    ಶೈಕ್ಷಣಿಕ ಪ್ರಮಾಣ ಪತ್ರಗಳ ಅಂಕ ಪಟ್ಟಿಗಳು
    ವಯಸ್ಸುನ ದೃಢೀರಣ ಕುರಿತು ಎಸ್​ಎಸ್​ಎಲ್​ಸಿ ಅಂಕಪಟ್ಟಿ
    ಸೇವಾ ಅನುಭವ ಪ್ರಮಾಣ ಪತ್ರ
    ಮೀಸಲಾತಿ ಸಂಬಂಧ ಜಾತಿ ಪ್ರಮಾಣ ಪತ್ರ

    Published by:Seema R
    First published: