• Home
  • »
  • News
  • »
  • jobs
  • »
  • BESCOM: ಬೆಸ್ಕಾಂನಲ್ಲಿ ಖಾಲಿ ಇರುವ 400 ಅಪ್ರೆಂಟಿಸ್ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ, ಇವತ್ತೇ ಕೊನೆ ದಿನ

BESCOM: ಬೆಸ್ಕಾಂನಲ್ಲಿ ಖಾಲಿ ಇರುವ 400 ಅಪ್ರೆಂಟಿಸ್ ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ, ಇವತ್ತೇ ಕೊನೆ ದಿನ

ಬೆಸ್ಕಾಂ

ಬೆಸ್ಕಾಂ

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

  • Share this:

    BESCOM recruitment 2022: ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ- ಬೆಸ್ಕಾಂ(Bangalore Electricity Supply Company Limited)ನಲ್ಲಿ ಖಾಲಿ ಇರುವ 400 ಅಪ್ರೆಂಟಿಸ್(Apprentice) ಹುದ್ದೆಗಳಿಗೆ ​ಅರ್ಜಿ ಸಲ್ಲಿಸಲು ಇವತ್ತು ಕೊನೆಯ ದಿನವಾಗಿದೆ. ಹೀಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು(Candidates) ಈ ಕೂಡಲೇ ಆನ್​​ಲೈನ್​ ಮೂಲಕ ಅರ್ಜಿ ಹಾಕಿ. ಕರ್ನಾಟಕ ಸರ್ಕಾರದ ಉದ್ಯೋಗ(Job) ಮಾಡ ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.


    ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

    ಸಂಸ್ಥೆಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ
    ಹುದ್ದೆಯ ಹೆಸರುಅಪ್ರೆಂಟಿಸ್
    ಒಟ್ಟು ಹುದ್ದೆ400
    ವೇತನಮಾಸಿಕ 9,000
    ವಿದ್ಯಾರ್ಹತೆಡಿಪ್ಲೋಮಾ, ಬಿಇ/ಬಿ.ಟೆಕ್
    ಸ್ಥಳಬೆಂಗಳೂರು
    ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
    ಅರ್ಜಿ ಸಲ್ಲಿಸಲು ಕೊನೆ ದಿನ07/11/2022


    ಹುದ್ದೆಯ ಮಾಹಿತಿ:
    ಗ್ರಾಜುಯೇಟ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್)- 143
    ಗ್ರಾಜುಯೇಟ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್)-116
    ಗ್ರಾಜುಯೇಟ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್​ & ಎಂಜಿನಿಯರಿಂಗ್)-36
    ಗ್ರಾಜುಯೇಟ್ ಅಪ್ರೆಂಟಿಸ್ (ಇನ್ಫರ್ಮೇಶನ್ ಸೈನ್ಸ್​ & ಎಂಜಿನಿಯರಿಂಗ್)-20
    ಗ್ರಾಜುಯೇಟ್ ಅಪ್ರೆಂಟಿಸ್ (ಸಿವಿಲ್ ಎಂಜಿನಿಯರಿಂಗ್)-5
    ಗ್ರಾಜುಯೇಟ್ ಅಪ್ರೆಂಟಿಸ್ (ಇನ್​ಸ್ಟ್ರುಮೆಂಟೇಶನ್ ಟೆಕ್ನಾಲಜಿ ಎಂಜಿನಿಯರಿಂಗ್)-5
    ಟೆಕ್ನಿಷಿಯನ್ ಅಪ್ರೆಂಟಿಸ್(ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್)-55
    ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್)-10
    ಟೆಕ್ನಿಷಿಯನ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್​ & ಎಂಜಿನಿಯರಿಂಗ್)-10
    ಒಟ್ಟು 400 ಹುದ್ದೆಗಳು


    ಇದನ್ನೂ ಓದಿ: Karnataka Jobs: ಸೈನಿಕ ಕಲ್ಯಾಣ ಇಲಾಖೆ ನೇಮಕಾತಿ- 13 SDA ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇವತ್ತೇ ಕೊನೆ ದಿನ


    ಅರ್ಹತಾ ಮಾನದಂಡಗಳೇನು?
    ಬೆಸ್ಕಾಂನಲ್ಲಿ ಖಾಲಿ ಇರುವ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲವೊಂದು ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು. ಅವುಗಳು ಈ ಕೆಳಕಂಡಂತಿವೆ.


    ವಿದ್ಯಾರ್ಹತೆ:
    ಬೆಸ್ಕಾಂನಲ್ಲಿ ಖಾಲಿ ಇರುವ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಮಂಡಳಿಯಿಂದ ಕಡ್ಡಾಯವಾಗಿ ಬಿಇ/ ಬಿ.ಟೆಕ್​ ಪೂರ್ಣಗೊಳಿಸಿರಬೇಕು.


    ಗ್ರಾಜುಯೇಟ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್)- ಬಿಇ/ ಬಿ.ಟೆಕ್​
    ಗ್ರಾಜುಯೇಟ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್)-ಬಿಇ/ ಬಿ.ಟೆಕ್​
    ಗ್ರಾಜುಯೇಟ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್​ & ಎಂಜಿನಿಯರಿಂಗ್)- ಬಿಇ/ ಬಿ.ಟೆಕ್​
    ಗ್ರಾಜುಯೇಟ್ ಅಪ್ರೆಂಟಿಸ್ (ಇನ್ಫರ್ಮೇಶನ್ ಸೈನ್ಸ್​ & ಎಂಜಿನಿಯರಿಂಗ್)-ಬಿಇ/ ಬಿ.ಟೆಕ್​
    ಗ್ರಾಜುಯೇಟ್ ಅಪ್ರೆಂಟಿಸ್ (ಸಿವಿಲ್ ಎಂಜಿನಿಯರಿಂಗ್)- ಬಿಇ/ ಬಿ.ಟೆಕ್​
    ಗ್ರಾಜುಯೇಟ್ ಅಪ್ರೆಂಟಿಸ್ (ಇನ್​ಸ್ಟ್ರುಮೆಂಟೇಶನ್ ಟೆಕ್ನಾಲಜಿ ಎಂಜಿನಿಯರಿಂಗ್)- ಬಿಇ/ ಬಿ.ಟೆಕ್​
    ಟೆಕ್ನಿಷಿಯನ್ ಅಪ್ರೆಂಟಿಸ್(ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್)- ಡಿಪ್ಲೋಮಾ
    ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್)-ಡಿಪ್ಲೋಮಾ
    ಟೆಕ್ನಿಷಿಯನ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್​ & ಎಂಜಿನಿಯರಿಂಗ್)-ಡಿಪ್ಲೋಮಾ


    ವಯೋಮಿತಿ:
    ಬೆಸ್ಕಾಂನಲ್ಲಿ ಖಾಲಿ ಇರುವ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ತುಂಬಿರಬೇಕು.


    ವಯೋಮಿತಿ ಸಡಿಲಿಕೆ:
    ಬೆಸ್ಕಾಂನಲ್ಲಿ ಖಾಲಿ ಇರುವ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


    ವೇತನ:
    ಗ್ರಾಜುಯೇಟ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್)- ಮಾಸಿಕ ₹ 9008
    ಗ್ರಾಜುಯೇಟ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್)-ಮಾಸಿಕ ₹ 9008
    ಗ್ರಾಜುಯೇಟ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್​ & ಎಂಜಿನಿಯರಿಂಗ್)- ಮಾಸಿಕ ₹ 9008
    ಗ್ರಾಜುಯೇಟ್ ಅಪ್ರೆಂಟಿಸ್ (ಇನ್ಫರ್ಮೇಶನ್ ಸೈನ್ಸ್​ & ಎಂಜಿನಿಯರಿಂಗ್)- ಮಾಸಿಕ ₹ 9008
    ಗ್ರಾಜುಯೇಟ್ ಅಪ್ರೆಂಟಿಸ್ (ಸಿವಿಲ್ ಎಂಜಿನಿಯರಿಂಗ್)- ಮಾಸಿಕ ₹ 9008
    ಗ್ರಾಜುಯೇಟ್ ಅಪ್ರೆಂಟಿಸ್ (ಇನ್​ಸ್ಟ್ರುಮೆಂಟೇಶನ್ ಟೆಕ್ನಾಲಜಿ ಎಂಜಿನಿಯರಿಂಗ್)- ಮಾಸಿಕ ₹ 9008
    ಟೆಕ್ನಿಷಿಯನ್ ಅಪ್ರೆಂಟಿಸ್(ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್​ ಎಂಜಿನಿಯರಿಂಗ್)- ಮಾಸಿಕ ₹ 8000
    ಟೆಕ್ನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್)-ಮಾಸಿಕ ₹ 8000
    ಟೆಕ್ನಿಷಿಯನ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್​ & ಎಂಜಿನಿಯರಿಂಗ್)- ಮಾಸಿಕ ₹ 8000


    ಅರ್ಜಿ ಶುಲ್ಕ:
    ಯಾವುದೇ ಅರ್ಜಿ ಶುಲ್ಕ ಇಲ್ಲ.


    ಇದನ್ನೂ ಓದಿ: Capgemini ಕಂಪನಿಯಲ್ಲಿ ಕೆಲಸ ಮಾಡುವ ಕನಸಿದೆಯಾ? ಇಲ್ಲಿ ಅರ್ಜಿ ಸಲ್ಲಿಸಿ


    ಆಯ್ಕೆ ಪ್ರಕ್ರಿಯೆ:
    ಮೆರಿಟ್​ ಲಿಸ್ಟ್​
    ಸಂದರ್ಶನ


    ಅರ್ಜಿ ಸಲ್ಲಿಸುವುದು ಹೇಗೆ?


    ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ bescom.org ಗೆ ಭೇಟಿ ನೀಡಬಹುದು.


    ಪ್ರಮುಖ ದಿನಾಂಕಗಳು:
    ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/10/2022
    ಅರ್ಜಿ ಸಲ್ಲಿಸಲು ಕೊನೆ ದಿನ: 07/11/2022
    ನೋಂದಣಿಗೆ ಕೊನೆ ದಿನ: ಅಕ್ಟೋಬರ್ 31, 2022
    ಶಾರ್ಟ್​​ಲಿಸ್ಟ್​ ಅಭ್ಯರ್ಥಿಗಳ ಪಟ್ಟಿ ಪ್ರಕಟಣಾ ದಿನಾಂಕ: 14/11/2022
    ಶಾರ್ಟ್​​ಲಿಸ್ಟ್​ ಆದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ದಿನಾಂಕ: ನವೆಂಬರ್ 21- ನವೆಂಬರ್ 23 (ಸಮಯ-ಬೆಳಗ್ಗೆ 11 ರಿಂದ ಸಂಜೆ 4)


    ಸ್ಥಳ:
    ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ
    ಹೆಚ್​​ಆರ್​ಡಿ ಸೆಂಟರ್,
    ಮೊದಲನೇ ಮಹಡಿ,
    ಕ್ರೆಸೆಂಟ್ ರಸ್ತೆ
    ಮಲ್ಲಿಗೆ ನರ್ಸಿಂಗ್ ಹೋಂ ಹತ್ತಿರ
    ರೇಸ್​ ಕೋರ್ಸ್​
    ಬೆಂಗಳೂರು-560001

    Published by:Latha CG
    First published: