Bengaluru Metro Jobs: ತಿಂಗಳಿಗೆ ₹ 60,000 ಸಂಬಳ, ಬೆಂಗಳೂರು ಮೆಟ್ರೋದಲ್ಲಿ 50 ಹುದ್ದೆಗಳು ಖಾಲಿ

ಟ್ರೇನ್​ ಆಪರೇಟರ್​, ಸ್ಟೇಷನ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ಬೋರ್ಡ್​​​​ನಿಂದ ಕಡ್ಡಾಯವಾಗಿ 10ನೇ ತರಗತಿ ಮತ್ತು ಡಿಪ್ಲೋಮಾ ಪಾಸಾಗಿರಬೇಕು.

ಬೆಂಗಳೂರು ಮೆಟ್ರೋ

ಬೆಂಗಳೂರು ಮೆಟ್ರೋ

  • Share this:
BMRCL Recruitment 2022: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(Bengaluru Metro Rail Corporation Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 50 ಟ್ರೇನ್​ ಆಪರೇಟರ್​, ಸ್ಟೇಷನ್ ಕಂಟ್ರೋಲರ್ ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ, ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​​​ಲೈನ್​(Online) ಮೂಲಕ ಅರ್ಜಿ ಸಲ್ಲಿಸಬೇಕು. ಜನವರಿ 15, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್​ಸೈಟ್​ bmrc.co.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.







































ಸಂಸ್ಥೆಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
ಹುದ್ದೆಯ ಹೆಸರುಟ್ರೇನ್​ ಆಪರೇಟರ್​, ಸ್ಟೇಷನ್ ಕಂಟ್ರೋಲರ್
ಒಟ್ಟು  ಹುದ್ದೆಗಳು 50
ವಿದ್ಯಾರ್ಹತೆ10ನೇ ತರಗತಿ, ಡಿಪ್ಲೋಮಾ
ಉದ್ಯೋಗದ ಸ್ಥಳಬೆಂಗಳೂರು
ವೇತನಮಾಸಿಕ ₹ 33,040-63,490
ಅರ್ಜಿ ಸಲ್ಲಿಕೆ ವಿಧಾನಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 15/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15/01/2022

ಇದನ್ನೂ ಓದಿ: ECIL Recruitment 2022: ತಿಂಗಳಿಗೆ ₹ 20,000 ಸಂಬಳ, ಡಿಪ್ಲೋಮಾ ಆದವರಿಗೆ ಉದ್ಯೋಗಾವಕಾಶ  

ವಿದ್ಯಾರ್ಹತೆ:
ಟ್ರೇನ್​ ಆಪರೇಟರ್​, ಸ್ಟೇಷನ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ/ಬೋರ್ಡ್​​​​ನಿಂದ ಕಡ್ಡಾಯವಾಗಿ 10ನೇ ತರಗತಿ ಮತ್ತು ಡಿಪ್ಲೋಮಾ ಪಾಸಾಗಿರಬೇಕು.

ಅರ್ಜಿ ಶುಲ್ಕ:
ಇದು ನಿವೃತ್ತ ಮಿಲಿಟರಿ ಸಿಬ್ಬಂದಿಗೆ ಆಯೋಜಿಸಲಾಗಿರುವ ವಿಶೇಷ ನೇಮಕಾತಿಯಾಗಿದ್ದು, ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/12/2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/01/2022

ಇದನ್ನೂ ಓದಿ: HAL Recruitment 2022: ಬೆಂಗಳೂರು HALನಲ್ಲಿ ಪ್ರಿನ್ಸಿಪಾಲ್​ ಹುದ್ದೆ ಖಾಲಿ, ಮಾಸಿಕ ವೇತನ ₹ 78,000


ವಯೋಮಿತಿ:

ಟ್ರೇನ್​ ಆಪರೇಟರ್​, ಸ್ಟೇಷನ್ ಕಂಟ್ರೋಲರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 45 ವರ್ಷ ಮೀರಿರಬಾರದು.

ಉದ್ಯೋಗದ ಸ್ಥಳ:
ಟ್ರೇನ್​ ಆಪರೇಟರ್​, ಸ್ಟೇಷನ್ ಕಂಟ್ರೋಲರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:
ಟ್ರೇನ್​ ಆಪರೇಟರ್​, ಸ್ಟೇಷನ್ ಕಂಟ್ರೋಲರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 33,040-63,490 ವೇತನ ನೀಡಲಾಗುತ್ತದೆ.

ಬೇರೆ ಬೇರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಶಾರ್ಟ್​​ಲಿಸ್ಟಿಂಗ್​
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
Published by:Latha CG
First published: